ಕೇಂದ್ರ ಸರ್ಕಾರವು ಜಾರಿಗೆ ತಂದ ಹಲವಾರು ಯೋಜನೆಗಳಲ್ಲಿ ಪ್ರಧಾನಮಂತ್ರಿ ಮುದ್ರಾ ಯೋಜನೆಯೂ ಒಂದಾಗಿದೆ. ಈ ಯೋಜನೆಯಡಿಯಲ್ಲಿ 10 ಲಕ್ಷ ರೂಪಾಯಿಯವರೆಗೆ ಸಾಲ ಸೌಲಭ್ಯ ಸಿಗಲಿದೆ.

ಏನಿದು ಪ್ರಧಾನಮಂತ್ರಿ ಮುದ್ರಾ ಯೋಜನೆ?

ಪ್ರಧಾನಮಂತ್ರಿ ಮುದ್ರಾ ಯೋಜನೆಯಯನ್ನು ಕೃಷಿಯೇತರ ಮತ್ತು ಕಾರ್ಪೋರೇಟ್ ಅಲ್ಲದ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ 10 ಲಕ್ಷ ರೂಪಾಯಿಯವರೆಗೆ ಸಾಲ ಸೌಲಭ್ಯ ನೀಡಲು ಪ್ರಧಾನಮಂತ್ರಿ ಮುದ್ರಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಉದ್ಯಮಗಳು ಮುದ್ರಾ (ಮೈಕ್ರೋ ಯೂನಿಟ್ಸ್ ಡೆವಲಪಮೆಂಟ್ ಆ್ಯಂಡ್ ರಿಫೈನಾನ್ಸ್ ಓಜೆನ್ಸಿ ಲಿಮಿಟಿಡ್) ಯೋಜನೆಯಡಿಯಲ್ಲಿ 50 ಸಾವಿರ ರೂಪಾಯಿಯಿಂದ 10 ಲಕ್ಷ ರೂಪಾಯಿಯವರೆಗೆ ಸಾಲ ಪಡೆಯಬಹುದು. ಈ ಯೋಜನೆಯಲ್ಲಿ ಕೇಂದ್ರ ಸರ್ಕಾರವು 2015 ರಲ್ಲಿಆರಂಭಿಸಿದೆ.

ಮುದ್ರಾ ಯೋಜನೆಯಡಿಯಲ್ಲಿ ಸಾಲ ಪಡೆಯುವುದು ಹೇಗೆ?

ಸ್ವಂತ ಉದ್ಯಮ ಆರಂಭಿಸಲು ಬಯಸುವ ಯಾವುದೇ ಭಾರತೀಯ ಪ್ರಜೆ ಪಿಎಂಎಂವೈ ಯೋಜನೆಯಡಿ 10 ಲಕ್ಷ ರೂಪಾಯಿಯವರೆಗೆ ಸಾಲ ಪಡೆಯಬಹುದು. ಸಾಲ ಪಡೆಯಲು ಬ್ಯಾಂಕುಗಳಲ್ಲಿ ಅರ್ಜಿ ಸಲ್ಲಿಸಬೇಕು. ಸ್ವಂತ ಉದ್ಯಮ ಆರಂಭಿಸುತ್ತಿದ್ದರೆ ಮಾಲಿಕತ್ವ ಅಥವಾ ಬಾಡಿಗೆ ದಾಖಲೆಗಳು, ಕೆಲಸಕ್ಕೆ ಸಂಬಂಧಿಸಿದ ಮಾಹಿತಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಸಲ್ಲಿಸಬೇಕು. ಮುದ್ರಾ ಸಾಲ ಯೋಜನೆಯಡಿಯಲ್ಲಿ ಸಾಲ ಪಡೆಯಲು ಮೊದಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು.

ಮುದ್ರಾ ಯೋಜನೆಯಡಯಿಲ್ಲಿ ಮೂರು ರೀತಿಯ ಸಾಲ ಸೌಲಭ್ಯ ಸಿಗಲಿದೆ

ಮುದ್ರಾಯೋಜನೆಯಡಿಯಲ್ಲಿ ಸ್ವಂತ ಉದ್ಯಮ ಆರಂಭಿಸಲಿಚ್ಚಿಸುವವರು ಮೂರು ಬಗೆಯಲ್ಲಿ ಸಾಲ ಪಡೆಯಬಹುದು. ಹೌದು, ಶಿಶುಸಾಲ, ಕಿಶೋರ ಸಾಲ ಹಾಗೂ ತರುಣ್ ಸಾಲ ಹೀಗೆ ಮೂರು ಪ್ರಕಾರಗಳಿವೆ.

ಇದನ್ನೂ ಓದಿಜಮೀನಿನ ಓರಿಜಿನಲ್ ಸರ್ವೆ ಟಿಪ್ಪಣಿ ಪುಸ್ತಕ ಮೊಬೈಲಿನಲ್ಲಿ ಒಂದೇ ನಿಮಿಷದಲ್ಲಿ ಡೌನ್ಲೋಡ್ ಮಾಡಿ

ಶಿಶು ಸಾಲ – ಶಿಶು ಸಾಲ ಯೋಜನೆಯಡಿಯಲ್ಲಿ 50 ಸಾವಿರ ರೂಪಾಯಿಯವರೆಗೆ ಸಾಲ ಪಡೆಯಬಹುದು.

ಕಿಶೋರ ಸಾಲ– ಕಿಶೋರ ಸಾಲ ಯೋಜನೆಯಡಿಯಲ್ಲಿ 50 ಸಾವಿರ ರೂಪಾಯಿಯಿಂದ 5 ಲಕ್ಷ ರೂಪಾಯಿಯವರೆಗೆ ಸಾಲ ಪಡೆಯಬಹುದು.

ತರುಣ್ ಸಾಲ– ತರುಣ್ ಸಾಲ ಯೋಜನೆಯಡಿಯಲ್ಲಿ 5 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿಯವರೆಗೆ ಸಾಲ ಪಡೆಯಬಹುದು.

ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆ ಬೇಕು?

ಮುದ್ರಾ ಸಾಲ ಯೋಜನೆಯಡಿಯಲ್ಲಿ ಸಾಲ ಪಡೆಯಲಿಚ್ಚಿರುವವರ ಬಳಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಇರಬೇಕು.ಇತ್ತೀಚಿನ ಎರಡು ಪಾಸ್ಪೋರ್ಟ್ ಸೈಜಿನ ಭಾವಚಿತ್ರ ಇರಬೇಕು.  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಲಗತ್ತಿಸಬೇಕು. ನೀವು ಎಲ್ಲಿ ಮತ್ತು ಯಾವ ಉದ್ಯಮವನ್ನು ಪ್ರಾರಂಭಿಸಲು ಬಯಸುತ್ತೀರಿ ಎಂಬುದನ್ನು ಅರ್ಜಿಯಲ್ಲಿ ನಮೂದಿಸಬೇಕು.

ಆನ್ನೈಲ್ ನಲ್ಲಿ ನೋಂದಣಿ ಮಾಡುವುದು ಹೇಗೆ?

ಆನ್ಲೈನ್ ನಲ್ಲಿ ನೋಂದಣಿ ಮಾಡಲು ಈ

https://www.udyamimitra.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಉದ್ಯಮಮಿತ್ರ ಪೇಜ್ ತೆರದುಕೊಳ್ಳುತ್ತದೆ.  ಅಲ್ಲಿ Apply  Now ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಮೂರು ಆಯ್ಕೆಗಳಿರುತ್ತವೆ. ನೀವು Self Employment Professional ಆಯ್ಕೆ ಮಾಡಿಕೊಂಡು ಸ್ವಂತ ಉದ್ಯಮಕ್ಕೆ ಅರ್ಜಿ ಸಲ್ಲಿಸಬಹುದು. ಅಲ್ಲಿ ನಿಮ್ಮ ಹೆಸರು, ಇಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ನಮೂದಿಸಬೇಕು. ನಂತರ ಜನರೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ನಂತರ ಅಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಬೇಕು.

ಯಾವ ಬ್ಯಾಂಕುಗಳಿಂದ ಸಾಲ ಪಡೆಯಬಹುದು?

ಸರ್ಕಾರಿ ಬ್ಯಾಂಕು, ಖಾಸಗಿ ಬ್ಯಾಂಕು, ಗ್ರಾಮೀಣ ಬ್ಯಾಂಕುಗಳಿಂದಲೂ ಮುದ್ರಾ ಯೋಜನೆಯಡಿಯಲ್ಲಿ ಸಾಲ ಸಿಗುತ್ತದೆ. ಮುದ್ರಾ ಸಾಲದ ಮೇಲೆ ಕನಿಷ್ಠ ಬಡ್ಡಿದರ ಇರುತ್ತದೆ.

ಹೆಚ್ಚಿನ ಮಾಹಿತಿಗಾರಿ ನಿಮ್ಮ ಹತ್ತಿರದ ಬ್ಯಾಂಕಿನ ಮ್ಯಾನೇಜರಿಗೆ ಭೇಟಿ ಯೋಗಿ ಮುದ್ರಾ ಯೋಜನೆಯ ಅರ್ಜಿ ಹಾಗೂ ದಾಖಲೆಗಳ ಕುರಿತು ವಿಚಾರಿಸಬಹುದು.

Leave a Reply

Your email address will not be published. Required fields are marked *