ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸಿದ ಪೋಲಾರ್ಡ್

Written by By: janajagran

Updated on:

ಒಂದೇ ಓವರ್‌ನಲ್ಲಿ ಬರೋಬ್ಬರಿ ಆರು ಸಿಕ್ಸರ್ ಜಜ್ಜಿ ವಿಶ್ವದಾಖಲೆ ನಿರ್ಮಿಸಿದ್ದಾರೆ (Kieron pollard hits 6 sixes in an over against srilanka )ವೆಸ್ಟ್ ಇಂಡೀಸ್ ದೈತ್ಯ ಆಟಗಾರ, ಸ್ಫೋಟಕ ಬ್ಯಾಟ್ಸ್ ಮನ್ ಕಿರನ್ ಪೋಲಾರ್ಡ್.

ಹೌದು ಶ್ರೀಲಂಕಾ ವಿರುದ್ಧ ನಡೆದ 20-20 ಕ್ರಿಕೇಟ್ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಬಾರಿಸಿ ವಿಶ್ವದಾಖಲೆ (world record) ನಿರ್ಮಿಸಿದ್ದಾರೆ. ಶ್ರೀಲಂಕಾದ ಅಕಿಲಾ ಧನಂಜಯರವರ ಓವರ್‌ನಲ್ಲಿ ಪೌಲೋರ್ಡ್ ಆರು ಮನಮೋಹಕ ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ಇದರೊಂದಿಗೆ ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕ್ಟ್ ನಲ್ಲಿ ಭಾರತದ ಸಿಕ್ಸರ್ ಕಿಂಗ್ ಯುವರಾಜ ಸಿಂಗ್ (Yuvraj Sing) ಸಾಧನೆಯನ್ನು ಸರಿಗಟ್ಟಿದ್ದಾರೆ. ಅಂತಾರಾಷ್ಟ್ರೀಯ ಕ್ರೀಕೇಟ್ ನಲ್ಲಿ ಮೂರನೇ ಆಟಗಾರರಾದರು.  ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹರ್ಷಲ್‌ ಗಿಬ್ಸ್‌ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್‌ ಆಗಿದ್ದಾರೆ. 2007ರ ಅಂತಾರಾಷ್ಟ್ರೀಯ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ ನೇದರ್ಲೆಂಡ್ಸ್ ವಿರುದ್ಧ ಹರ್ಷಲ್ ಗಿಬ್ಸ್ (Harschalle Gibbs) ಈ ಮೈಲುಗಲ್ಲು ಸ್ಥಾಪಿಸಿದ್ದರು.

ಕೈರಾನ್‌ ಪೊಲಾರ್ಡ್‌ಗೂ ಮೊದಲು ಭಾರತ ತಂಡದ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಸಾಧನೆ ಮಾಡಿದ ಏಕೈಕ ಬ್ಯಾಟ್ಸ್‌ಮನ್‌ ಆಗಿದ್ದರು. 2007ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್‌ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ವೇಗಿ ಸ್ಟುವರ್ಟ್ ಬ್ರಾಡ್‌ಗೆ ಯುವಿ ಆರು ಭರ್ಜರಿ ಸಿಕ್ಸರ್‌ ಸಿಡಿಸಿದ್ದರು.

ಒವರ್‌ನ ಎಲ್ಲಾ ಎಸೆತಗಳಿಗೂ ಸಿಕ್ಸರ್‌ ಸಿಡಿಸಿದ ಬಳಿಕ ಡ್ರೆಸ್ಸಿಂಗ್‌ ರೂಂ ಕಡೆ ಮುಖ ಮಾಡಿ ವಿಶಿಷ್ಠ ರೀತಿಯಲ್ಲಿ ಪೊಲಾರ್ಡ್ ಸಂಭ್ರಮಿಸಿದರು. ಅಂತಾರಾಷ್ಟ್ರೀಯ ಕ್ರಿಕೇಟ್ ನಲ್ಲಿ ಈ ದಾಖಲೆ ಬರೆದ ವಿಶ್ವದ ಮೂರನೇ ಬ್ಯಾಟ್ಸ್ ಮನ್ ಎಂಬ ಕೀರ್ತಿಗೆ ವೆಸ್ಟ್ ಇಂಡಿಸ್ ಆಟಗಾರ ಕಿರನ್ ಪೋಲಾರ್ಡ್ ಪಾತ್ರರಾದರು. ಇದರೊಂದಿಗೆ ಟಿ-20 ಅಂತಾರಾಷ್ಟ್ರೀಯ ಕ್ರೀಕೇಟ್ ನಲ್ಲಿ ಈ ಸಾಧನೆ ಮಾಡಿದ ವೆಸ್ಟ್ ಇಂಡಿಸ್ ನ ಮೊದಲ ಬ್ಯಾಟ್ಸ್ ಮನ್ ಎಂಬ ಹಿರಮೆಗೂ ಪಾತ್ರರಾದರು.

 ಓಂದೇ ಓವರ್‌ನಲ್ಲಿ ಸಿಕ್ಸರ್ ಬಾರಿಸಿದ ಆಟಗಾರರಿವರು (six sixes smashed in an over players)

  1. ಯುವರಾಜ ಸಿಂಗ್ ಇಂಗ್ಲೆಂಡ್ ಪಂದ್ಯದ ವಿರುದ್ಧ (2007 ರಲ್ಲಿ)
  2. ಹರ್ಷಲ್ ಗಿಬ್ಸ್ ನೆದರ್ ಲ್ಯಾಂಡ್ ವಿರುದ್ಧ (2017 ರಲ್ಲಿ)
  3. ಕಿರೋನ್ ಪೋಲಾರ್ಡ್ ಶ್ರೀಲಂಕಾ ವಿರುದ್ಧ (2021 ರಲ್ಲಿ)

ಫರ್ಟ್ಸ್ ಕ್ಲಾಸ್ ಮ್ಯಾಚ್ನನಲ್ಲಿ ಗ್ಯಾರಿಫೀಲ್ಡ್ ಸೋಬರ್ಸ್ ಓಂದೇ ಓವರ್ನಲ್ಲಿ ಆರು ಸಿಕ್ಸರ್ ಬಾರಿಸಿದ ಮೊದಲ ಆಟಗಾರರಾಗಿದ್ದಾರೆ. ಅವರು 1969 ರಲ್ಲಿ ಆಗಸ್ಟ್ 31 ರಂದು  ಮಾಲ್ಕೋಮ್ ನಾಶ್ ನಾಥಿಂಗ್ ಹ್ಯಾಮ್ಸನ್  ಓವರಿನಲ್ಲಿ  ಆರು ಸಿಕ್ಸರ್ ಬಾರಿ ದಾಖಲೆ ನಿರ್ಮಿಸಿದ್ದಾರೆ.

ನಿಮಗೆ ಗೊತ್ತೆ ಯಾರನ್ನು ಸಿಕ್ಸರ್ ಕಿಂಗ್ (sixer king) ಎಂದು ಕರೆಯುತ್ತಾರೆ… ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧ  ಟಿ-ಟ್ವೆಂಟಿ ಪಂದ್ಯದಲ್ಲಿ ಆರು ಸಿಕ್ಸರ್ ಬಾರಿಸಿದ ನಂತರ ಅವರು ಭಾರತದಲ್ಲಿ ಸಿಕ್ಸರ್ ಕಿಂಗ್ ಎಂದೇ ಹೆಸರಾಗಿದ್ದಾರೆ.

ಐಪಿಎಲ್ ನಲ್ಲಿ ಅತೀ ಹೆಚ್ಚು ದೂರ ಸಿಕ್ಸರ್ ಬಾರಿಸಿದ ಆಟಗಾರ ಯಾರು ನಿಮಗೆ ಗೊತ್ತೇ. ವೆಸ್ಟ್ ಇಂಡಿಸ್ನ ದೈತ್ಯ ಆಟಗಾರ ಕ್ರಿಸ್ ಗೇಲ್ (Chris gayle) 119 ಮೀಟರ್ ದೂರದವರೆಗೆ ಸಿಕ್ಸರ್ ಬಾರಿ ದಾಖಲೆ ನಿರ್ಮಿಸಿದ್ದಾರೆ. ನಂತರ ಬೆನ್ ಕಟಿಂಗ್ (117), ಗೇಲ್ ಮತ್ತು ಧೋನಿ (112) ಮೀಟರ್ ಅಂತರದವರೆಗೆ ದಾಖಲೆಯಿದೆ.

ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ ಆಟಗಾರಿರವರು (most Sixer players Name)

ಕ್ರಿಸ್ ಗೇಲ್ (326), ಎ.ಬಿ. ಡಿವಿಲ್ಲೇರ್ (214), ಎಂ.ಎಸ್. ಧೋನಿ 213 ಸಿಕ್ಸರ್ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ.

Leave a Comment