ಪಿಎಂ ಕಿಸಾನ್ 11ನೇ ಕಂತಿನ ಜಮೆಗೆ ಅನುಮೋದನೆ ಸಿಕ್ಕಿದೆಯೇ

Written by By: janajagran

Updated on:

pm kisan approval status ಪಿಎಂ ಕಿಸಾನ್ 11ನೇ ಕಂತಿನ ಹಣ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಏಪ್ರೀಲ್ ಮೊದಲ ವಾರದಲ್ಲಿ ರೈತರ ಖಾತೆಗೆ ಜಮೆಯಾಗುವ ಸಾಧ್ಯತೆಯಿದೆ. ಆದರೆ 10ನೇ ಕಂತಿನ ಹಣ ಜಮೆಯಾಗದ ರೈತರ ಖಾತೆಗೆ 11ನೇ ಕಂತಿನ ಹಣ ಜಮೆಯಾಗುವುದೋ ಇಲ್ಲವೋ ಎಂಬ ಅನುಮಾನ ರೈತರಿಗೆ ಕಾಡುತ್ತಿದೆ.

PM Kisan ಯೋಜನೆ 11ನೇ ಕಂತಿನ ಹಣ ಜಮೆಯಾಗಲು ಇಕೆವೈಸಿ ಮಾಡಿಸುವುದು ಕಡ್ಡಾಯವೆಂದು ಪಿಎಂ ಕಿಸಾನ್ ಯೋಜನೆಯ ವೆಬ್ಸೈಟ್ ನಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಕೃಷಿ ಇಲಾಖೆಯಿಂದಲೂ ಇಕೆವೈಸಿ ಮಾಡಿಸುವುದು ಕಡ್ಡಾವೆಂದು ಪತ್ರಿಕೆಯಲ್ಲಿ ಪ್ರಕಟಣೆ ನೀಡಲಾಗಿದೆ. ಇದರಿಂದಾಗಿ ಅನೇಕ ರೈತರು ಈಗಾಗಲೇ ಇಕೆವೈಸಿ ಮಾಡಿಸಿಕೊಂಡಿದ್ದಾರೆ. ಆದರೆ 10ನೇ ಕಂತಿನ ಹಣ ಜಮೆಯಾಗದ ರೈತರ ಖಾತೆಗೆ ಈಗ ಹನ್ನಂದನೇ ಕಂತಿನ ಹಣ ಜಮೆಯಾಗುತ್ತೋ ಇಲ್ಲವೋ ಎಂಬ ಸಂಶಯ ಕಾಡುತ್ತಿದೆ. ಏಕೆಂದರೆ 10ನೇ ಕಂತಿನ ಹಣ ಜಮೆಯಾಗದ ರೈತರು ಸ್ಟೇಟಸ್ ಚೆಕ್ ಮಾಡಲು ಹೋದರೆ ಹನ್ನೊಂದನೇ ಕಂತಿನ ಹಣ ಜಮೆಗೆ ರಾಜ್ಯ ಸರ್ಕಾರದಿಂದ ಅಪ್ರೂವಲ್ ಸಂದೇಶ ಬರುತ್ತಿಲ್ಲ.

ಹತ್ತನೇ ಕಂತಿನ ಹಣ ಜಮೆಯಾದ ರೈತರ ಸ್ಟೇಟಸ್ ನಲ್ಲಿ ರಾಜ್ಯಸರ್ಕಾರದಿಂದ waiting for state approval  ಎಂದು ಕಾಣುತ್ತಿದೆ. ಇದರ ಅರ್ಥ ಇನ್ನು ನಾಲ್ಕೈದು ದಿನಗಳಲ್ಲಿ ರಾಜ್ಯ ಸರ್ಕಾರದಿಂದ ಅಪ್ರೂವಲ್ ಆಗುತ್ತದೆ. ಹನ್ನಂದನೇ ಕಂತಿನ ಹಣ ಈ ರೈತರ ಖಾತೆಗೆ ಜಮೆಯಾಗುವ ಎಲ್ಲಾ ಸಾಧ್ಯತೆಯಿದೆ. ಆದರೆ ಹತ್ತನೇಕಂತಿನ ಹಣ ಜಮೆಯಾಗದ ರೈತರು ಸ್ಟೇಟಸ್ ಚೆಕ್ ಮಾಡಿದರೆ ಅಲ್ಲಿ ಯಾವುದೇ ಸಂದೇಶ ಕಾಣುತ್ತಿಲ್ಲ. ಇದರಿಂದಾಗಿ ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಹಣ ಜಮೆಯಾಗುತ್ತೋ ಇಲ್ಲವೋ ಎಂಬ ಸಂಶಯ ಕಾಡುತ್ತಿದೆ.

pm kisan approval status ಪಿಎಂ ಕಿಸಾನ್ ಅಪ್ರೂವಲ್

ಪಿಎಂ ಕಿಸಾನ್ ಯೋಜನೆ 11ನೇಕಂತಿನ ಹಣ ಜಮೆಯಾಗಲು ರಾಜ್ಯ ಸರ್ಕಾರಕ್ಕೆ ಅಪ್ರೂವಲ್ ಕಳಿಸಲಾಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಲು ಈ

 https://pmkisan.gov.in/BeneficiaryStatus.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಮೂದಿಸಬೇಕು. ನಂತರ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆಯ ಎಷ್ಟು ಕಂತಿನ ಹಣ ಜಮೆಯಾಗಿದೆ. ಮುಂದಿನ ಕಂತಿನ ಸ್ಟೇಟಸ್ ಕಾಣುತ್ತದೆ. ಒಂದುವೇಳೆ ನೀವು ಇಲ್ಲಿಯವರೆಗೆ 10 ಕಂತಿನ ಹಣ ಪಡೆದಿದ್ದರೆ ಹನ್ನೊಂದನೆ ಕಂತಿನ ಹಣದ ಸ್ಟೇಟಸ್ ಚೆಕ್ ಮಾಡಬಹುದು.

ಕೆಲ ರೈತರು ತಡವಾಗಿ ಪಿಎಂ ಕಿಸಾನ್ ಯೋಜನೆಯ ಫಲಾನುಭಿಗೆ ಅರ್ಜಿ ಸಲ್ಲಿಸಿದ್ದರಿಂದ ಕೆಲವರು ಏಳು ಇನ್ನೂ ಕೆಲವರು ಎಂಟನೇ ಕಂತಿನ ಹಣ ಪಡೆದಿರುತ್ತಾರೆ.  ಒಂದು ವೇಳೆ ನೀವು ಒಂಬತ್ತನೇ ಕಂತಿನ ಹಣ ಈಗಾಗಲೇ ಪಡೆದಿದ್ದರೆ 11ನೇ ಕಂತಿನ ಹಣದ ಸ್ಟೇಟಸ್ ನೋಡಬಹುದು.

ಮುಂದಿನ ತಿಂಗಳು ಮೊದಲ ವಾರದಲ್ಲಿ 11ನೇ ಕಂತಿನ ಹಣ ಜಮೆಯಾಗುವ ಸಾಧ್ಯತೆಯಿರುವುದರಿಂದ ರೈತರು ಈಗಲೇತಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು. ಒಂದುವೇಳೆ ಇಕೆವೈಸಿ ಮಾಡಿಸುವಾಗ ಸಮಸ್ಯೆಯಾಗಿದ್ದರೆ ಅಂದರೆ ಇಕೆವೈಸಿ ಮಾಡಿಸುವಾಗ ತಾಂತ್ರಿಕ ದೋಷದಿಂದಾಗಿ ತಪ್ಪಾಗಿದ್ದರೆಕೂಡಲೇ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಿ.ಎಸ್.ಸಿ ಕೇಂದ್ರಗಳಿಗೆ ಹೋಗಿ ಇಕೆವೈಸಿ ಸರಿ ಮಾಡಿಸಿಕೊಳ್ಳಬಹುದು.

ಇದನ್ನೂ ಓದಿ : ಜಮೀನುಗಳ ಸರ್ವೆ ನಂಬರ್ ಸಹಿತ ಬಂಡಿದಾರಿ, ಹಳ್ಳಕೊಳ್ಳಗಳ ಮ್ಯಾಪ್ ಬೇಕೆ? ಇಲ್ಲಿದೆ ಮಾಹಿತಿ

ಇಕೆವೈಸಿ ಮಾಡಿಸದೆ ಉಳಿದಿರುವ ರೈತರಿಗೆ ಇನ್ನೂ ಕಾಲಾವಕಾಶವಿದೆ. ಇದೇ ತಿಂಗಳು ಮಾರ್ಚ್ 31 ರೊಳಗೆ ನಿಮ್ಮ ಹತ್ತಿರದ ಸಿಎಸ್ಸಿ ಕೇಂದ್ರಕ್ಕೆ ಹೋಗಿ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ನೊಂದಿಗೆ ಇಕೆವೈಸಿ ಮಾಡಿಸಿಕೊಳ್ಳಬಹುದು. ಕೊನೆಯ ದಿನಾಂಕದವರೆಗೆ ಕಾಯದೆ ಕೂಡಲೇ ಮಾಡಿಸಿಕೊಳ್ಳಿ. ಏಕೆಂದರೆ ಕೊನೆಯ ದಿನಾಂಕದ ಸಮಯದಲ್ಲಿ ನೆಟವರ್ಕ್ ಅಥವಾ ಇನ್ನೇನೋ ಸಮಸ್ಯೆಯುಂಟಾಗಿ ಮಾಡಿಸಲಿಕ್ಕಾಗದೆ 11ನೇ ಕಂತಿನ ಹಣ ಪಡೆಯುವಲ್ಲಿ ವಂಚಿತರಾಗುವ ಸಾಧ್ಯತೆಯಿರುತ್ತದೆ.

Leave a Comment