ಮುಂಗಾರು ಮಳೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಮಾವು, ಸೀಬೆ, ತೆಂಗು, ನಿಂಬೆ, ಕರಿಬೇವು ಮತ್ತು ವಿವಿಧ ಅಲಂಕಾರಿಕ ಸಸಿಗಳನ್ನು ಕಲಬುರಗಿ ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಇಲಾಖೆ ನಿಗದಿಪಡಿಸಿದ ದರದಲ್ಲಿ ಮಾರಾಟ (Horticulture seedling crop are available ) ಮಾಡಲಾಗುತ್ತಿದೆ. ಆಸಕ್ತ ರೈತರು ಇದರ ಸದುಪಯೋಗ ಪಡೆಯಬೇಕೆಂದು ಕಲಬುರಗಿ (ಜಿ.ಪಂ.) ತೋಟಗಾರಿಕೆ ಉಪನಿರ್ದೇಶಕರಾದ ಪ್ರಭುರಾಜ್ ಹೆಚ್.ಎಸ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಣ್ಣು ಹಾಗೂ ಇತರೆ ಬೆಳೆಯನ್ನು ಬೆಳೆಯಲಿಚ್ಛಿಸುವ ಜಿಲ್ಲೆಯ ರೈತರು ವಿವಿಧ ಸಸಿಗಳನ್ನು ಖರೀದಿಸಲು ತಾಲೂಕುವಾರು ಸಂಬAಧಪಟ್ಟ ಕ್ಷೇತ್ರಗಳನ್ನು ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ಕೆಸರಟಗಿ ತೋಟಗಾರಿಕೆ ಕ್ಷೇತ್ರದ 7353694199, ಬಡೇಪೂರ ತೋಟಗಾರಿಕೆ ಕ್ಷೇತ್ರದ ಮೊಬೈಲ್ ಸಂಖ್ಯೆ 9591482423, ಕಲಬುರಗಿ ಐವಾನ್ ಶಾಹಿ ನರ್ಸರಿ ಮೊಬೈಲ್ ಸಂಖ್ಯೆ 9972138920, ಸೇಡಂ ನರ್ಸರಿ ಕಚೇರಿ ಮೊಬೈಲ್ ಸಂಖ್ಯೆ 9663489542, ಚಂದ್ರಂಪಳ್ಳಿ ತೋಟಗಾರಿಕೆ ಕ್ಷೇತ್ರದ ಮೊಬೈಲ್ ಸಂಖ್ಯೆ 9008556488, ಹಳ್ಳಿಸಲಗರ ತೋಟಗಾರಿಕೆ ಕ್ಷೇತ್ರದ ಮೊಬೈಲ್ ಸಂಖ್ಯೆ 9108382507, ಮಾಲಗತ್ತಿ ತೋಟಗಾರಿಕೆ ಕ್ಷೇತ್ರದ ಮೊಬೈಲ್ ಸಂಖ್ಯೆ 9060394179, ಚಿತ್ತಾಪೂರ ನರ್ಸರಿ ಕಚೇರಿ ಮೊಬೈಲ್ ಸಂಖ್ಯೆ 9844907534, ಗೋಳಾ (ಕೆ) ತೋಟಗಾರಿಕೆ ಕ್ಷೇತ್ರ ಮೊಬೈಲ್ ಸಂಖ್ಯೆ 8884931830 ಹಾಗೂ ಗುಡೂರ್ ತೋಟಗಾರಿಕೆ ಕ್ಷೇತ್ರ ಮೊಬೈಲ್ ಸಂಖ್ಯೆ 9731222275ಗೆ ಸಂಪರ್ಕಿಸಲು ಕೋರಲಾಗಿದೆ.
ರೈತರು ತಮ್ಮ ಯೋಗ್ಯವಲ್ಲದ ಬರಡು ಭೂಮಿಯಲ್ಲಿಯೂ ತೋಟದ ಬೆಳೆಗಳನ್ನು ಬೆಳೆದು ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಬಹುದು. ತೋಟಗಾರಿಕೆ ತಳಿಗಳನ್ನು ಆಯ್ಕೆ ಮಾಡುವಾಗ ಆಯಾ ವಲಯಕ್ಕೆ ಸೂಕ್ತವಾದ ತಳಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಸಸಿಗಳನ್ನು ಖರೀದಿಸುವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ನಿಮ್ಮ ಜಮೀನಿನ ಬಗ್ಗೆ ವಿವರಿಸಿದರೆ ಸಾಕು ಅವರು ಸೂಕ್ತವಾದ ತಳಿಯನ್ನು ನಿಮಗೆ ಸಲಹೆ ನೀಡುತ್ತಾರೆ.
ಮಾರುಕಟ್ಟೆಯಲ್ಲಿ ಯಾವ ಹಣ್ಣುಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಮತ್ತು ಯಾವ ಕಾಲದಲ್ಲಿ ಇಳುವರಿ ಕೊಡುತ್ತದೆ ಎಂಬುದೆಲ್ಲಾ ಮಾಹಿತಿ ಇಟ್ಟುಕೊಂಡರೆ ಉತ್ತಮ.
ತೋಟಗಾರಿಕೆ ಇಲಾಖೆಯ ನರ್ಸರಿಗಳು,/ಕೃಷಿ/ ವಿಶ್ವವಿದ್ಯಾಲಯಗಳು,/ಕೃಷಿ ತೋಟಗಾರಿಕೆ ಸಂಸೋಧನಾ ಕೇಂದ್ರಗಳಲ್ಲಿ ರೈತರಿಗೆ ಕಡಿಮೆ ದರದಲ್ಲಿ ಉತ್ತಮ ತಳಿಗಳನ್ನು ವಿತರಿಸಲಾಗುತ್ತದೆ. ರೈತರು ಈ ಸಸಿಗಳನ್ನು ಪಡೆದುಕೊಳ್ಳಬೇಕೆಂದು ಕೋರಲಾಗಿದೆ.