ಇದೇ ತಿಂಗಳು ಪೆಬ್ರವರಿ 21 ರಂದು ತುಮಕೂಲು ಜಿಲ್ಲೆಯ ತುರವೇಕೆರೆ ತಾಲೂಕಿನನಲ್ಲಿ ಹಳ್ಳಿಕಾರ್ ತಳಿಗ ಹೋರಿಗಳ ಬಹಿರಂಗ ಹರಾಜು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೌದು, ತುರವೇಕೆರೆ ತಾಲೂಕಿನ ಕುಣಿಕೇನಹಳ್ಳಿ ಹಳ್ಳಿಕಾರ್ ತಳಿ ಸಂವರ್ಧನಾ ಕ್ಷೇತ್ರದಲ್ಲಿ 30 ಜೋಡಿ ಹಳ್ಳಿಕಾರ್ ಹೋರಿ ಕರುಗಳು ಹಾಗೂ 8 ಹಳ್ಳಿಕಾರ್ ಒಂಟಿ ಹೋರಿ ಕರುಗಳನ್ನು ಫೆಬ್ರವರಿ 21 ರಂದು ಬೆಳಗ್ಗೆ 9.30 ಗಂಟೆಗೆ ಬಹಿರಂಗ ಹರಾಜು ಪ್ರಕ್ರಿ.ಯೆ ನಡೆಯಲಿದೆ. ಈ ಕುರಿತು ಹಳ್ಳಿಕಾರ್ ತಳಿ ಸಂವರ್ಧನಾ ಕ್ಷೇತ್ರದದ ಉಪ ನಿರ್ದೇಶಕರಾದ ಡಾ. ಲಿಂಗರಾಜ ದೊಡ್ಡಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ರೈತರು 9448314996 ಗೆ ಸಂಪರ್ಕಿಸಲು ಕೋರಲಾಗಿದೆ.
ಹಳ್ಳಿಕಾರ್ ತಳಿ ಸಂಶೋಧನಾ ಕೇಂದ್ರದ ಚಟುವಟಿಕೆಗಳು
ಹಳ್ಳಿಕಾರ್ ಶುದ್ಧ ತಳಿಯ ಸಂರಕ್ಷಣೆ ಮಾಡಲಾಗುವುದು. ಹಳ್ಳಿಕಾರ್ ತಳಿ ರಾಸುಗಳನ್ನು ಇಲ್ಲಿ ಸಾಕಾಣಿಕೆ ಮಾಡಲಾಗುವುದು. ಸಂತಾನ ಉತ್ಪತ್ತಿಗೆ ಯೋಗ್ಯವಾದ ಹಳ್ಳಿಕಾರ್ ಹೋರಿ ಕರುಗಳ ಉತ್ಪಾದನೆಗೆ ಒತ್ತು ಕೊಡಲಾಗುವುದು.
ಇದನ್ನೂ ಓದಿ : ರೇಷನ್ ಕಾರ್ಡ್ ಪಟ್ಟಿಯಲ್ಲಿ ಯಾರ ಹೆಸರಿದೆ? ಯಾರ ಹೆಸರಿಲ್ಲ: ಮೊಬೈಲ್ ನಲ್ಲೇ ಚೆಕ್ ಮಾಡಿ
ರೈತರಿಗೆ ಹಳ್ಳಿಕಾರ್ ತಳಿ ಹೋರಿಗಳ ಪಶುಪಾಲನೆ ಕುರಿತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಇದರೊಂದಿಗೆ ಕ್ಷೇತ್ರದ ಅವಶ್ಯಕತೆಗೆ ಹಸಿ ಮತ್ತು ಒಣ ಮೇವು ಉತ್ತಾದನೆ ಮಾಡಲಾಗುವುದು. ಮೇವಿನ ಬೀಜ ಉತ್ಪಾದನೆ ಮಾಡಲಾಗುವುದು.
ಏನಿದು ಹಳ್ಳಿಕಾರ್ ತಳಿ (what is Hallikar breed)
ಭಾರತದ ಗೋ ಪರಂಪರೆಯಲ್ಲಿ ವಿನಾಶದ ಅಂಚಿನಲ್ಲಿರುವ ತಳಿಗಳಲ್ಲಿ ಹಳ್ಳಿಕಾರ್ ತಳಿಯೂ ಒಂದಾಗಿದೆ. ಈ ತಳಿಯ ಉಪಾಸಕರು ಯದುವಂಶ ಪಂಗಡಕ್ಕೆ ಸೇರಿದ ಯದುವಂಶಿ ಹಳ್ಳಿಕಾರ್ ಸಮುದಾಯ. ಹಾಗಾಗಿ ಈ ಸಮುದಾಯ ಹೆಸರಿನಿಂದಲೇ ಹಳ್ಳಿಕಾರ್ ತಳಿ ಎಂದು ಕರೆಯಲಾಗುವುದು.
ಹಳ್ಳಿಕಾರ್ ತಳಿಯ ವಿಶೇಷತೆ (Hallikar breed speciality)
ಹಳ್ಳಿಕಾರ್ ತಳಿಯು ಅಪ್ಪಟ ಕೆಲಸಗಾರ ತಳಿಯಾಗಿ ಗುರುತಿಸಿಕೊಂಡಿದೆ. ಸತತ 24 ಗಂಟೆ 10 ರಿಂದ 14 ಟನ್ ಭಾರ ಎಳೆಯುವ ಸಾಮರ್ಥ್ಯ ಹೊಂದಿದೆ. ಅದ್ಭುತ ವೇಗ ಹೊಂದಿರುವ ಅವಪೂರದ ತಳಿ ಇದಾಗಿದೆ. ದಿನದಲ್ಲಿ 40-50 ಮೈಲಿ ದೂರ ವಿಶ್ರಾಂತಿವಿಲ್ಲದೆ ಕ್ರಮಸಿಬಲ್ಲ ಸಾಮರ್ಥ್ಯ ಹೊಂದಿದೆ. ಹಳ್ಳಿಕಾರ್ ದನಗಳನ್ನು ಹೊಂದಿರುವ ರೈತರು ಈ ತಳಿಗೆ ವಿಶೇಷ ನಾಮಕರಣ ಮಾಡಿ ಮುದ್ದಿನಂತೆ ಸಾಕುವರು. ಮನೆಯ ಮಗನಂತೆ ಈ ವಿಶೇಷ ಪ್ರಾತಿನಿಧ್ಯ ನೀಡುವರು.
ಹಳ್ಳಿಕಾರ್ ತಳಿಯು ಬೂದು ಬಣ್ಣಹೊಂದಿರುತ್ತದೆ. ಹಿಂದಕ್ಕೆ ಬಾಗಿದಂತಿರುವ ಕೋಡುಗಳು. ಕಡಿಮೆ ಆಹಾರ ಸೇವನೆ. ಇದರ ತೂಕ ಸರಿಸುಮಾರು 540 ಕೆಜಿ.
ಈ ತಳಿಯ ಮೂಲ
ಹಳ್ಳಿಕಾರ್ ತಳಿಯ ಮೂಲ ಕರ್ನಾಟಕದ ಹಳೇ ಮೈಸೂರು ಪ್ರಾಂತ್ಯ. ಈಗ ಮೈಸೂರು, ಮಂಡ್ಯ, ತುಮಕೂರು, ಹಾಸನ, ಬೆಂಗಳೂರು, ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಪ್ರದೇಶಗಳನ್ನು ಹಳ್ಳಿಕಾಲ್ ತಳಿಯ ಬೆಲ್ಟ್ ಎಂದು ಗುರುತಿಸಲಾಗುವುದು.
ರಾಜ್ಯದಲ್ಲಿ ರಾಜ್ಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಬೆಂಗಳೂರಿನ ಹೆಸರುಘಟ್ಟದಲ್ಲಿದೆ.
ಇದನ್ನೂ ಓದಿ : ನಿಮ್ಮ ಜಮೀನಿನ ಎಲ್ಲಾ ದಾಖಲೆಗಳು ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ -ಇಲ್ಲಿದೆ ಸಂಪೂರ್ಣ ಮಾಹಿತಿ
ಖಿಲ್ಲಾರಿ ತಳಿ ಸಂವರ್ಧನಾ ಕ್ಷೇತ್ರ ಹಾವೇರಿ ಜಿಲ್ಲೆಯ ಶಿಗ್ಗಾಂ ತಾಲೂಕಿನಲ್ಲಿದೆ. ಅದೇ ರೀತಿ ಅಮೃತ್ ಮಹಲ್ ತಳಿ ಸಂವರ್ಧನಾ ಕ್ಷೇತ್ರ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದಲ್ಲಿದೆ.
ಪಶುಪಾಲನೆ ಸಹಾಯವಾಣಿ (Free helpline)
ರೈತರಿಗೆ ದಿನದ 24 ಗಂಟೆಗಳ ಕಾಲ ಪಶುಪಾಲನೆ ಕುರಿತು ಉಚಿತವಾಗಿ ಮಾಹಿತಿ ನೀಡಲು ಉಚಿತ ಸಹಾಯವಾಣಿಯನ್ನು ಆರಂಭಿಸಲಾಗಿದೆ. ರೈತರು 8277 100 200 ಗೆ ಕರೆ ಮಾಡಿದರೆ ಸಾಕು, ಪಶುಪಾಲನೆ ಕುರಿತು ದಿನದ 24*7 ಉಚಿತ ಮಾಹಿತಿ ನೀಡಲಾಗುವುದು. ಇದು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿಯಾಗಿದೆ.