ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಈಗ ಮೊಬೈಲ್ ನಲ್ಲೇ  ಪಡೆಯಬಹುದು. ಹೌದು, ರೈತರ ಬಳಿಯಿರುವ ಮೊಬೈಲ್ ನಲ್ಲೇ ಜಮೀನಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪಡೆಯಬಹುದು.

ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಈಗ ಕಚೇರಿಗಳಿಗೆ ಹೋಗಬೇಕಿಲ್ಲ. ನಾಡಕಚೇರಿ, ತಹಶೀಲ್ದಾರ್ ಕಚೇರಿಗಳ ಬಳಿ ಸರದಿಯಲ್ಲಿ ನಿಲ್ಲಬೇಕಿಲ್ಲ. ನಿಮ್ಮ ದಾಖಲೆ ಚೆಕ್ ಮಾಡಲು ಅಧಿಕಾರಿಗಳ ಬಳಿಯೂ ಕೈಕಟ್ಟಿ ನಿಲ್ಲಬೇಕಿಲ್ಲ. ನಿಮ್ಮ ಬಳಿಯಿರುವ ಫೋನ್ ನಲ್ಲೇ ಮನೆಯಲ್ಲಿಯೇ ಕುಳಿತು ಜಮೀನಿಗೆ ಸಂಬಂಧಿಸಿದ ಎಲ್ಲಾ ದಾಖಲೆ ಪಡೆಬಹುದು. ಹೌದು, ಪಹಣಿ, (ಆರ್.ಟಿ.ಸಿ), ಹಳೆ ಪಹಣಿಗಳು, ಮುಟೇಶನ್, ಮುಟೇಶನ್ ಸ್ಟೇಟಸ್, ಖಾತಾ ಜಮೀನಿ ಆಕಾರ್ ಬಂದ್, ಮೋಜಿನಿ ಸ್ಟೇಟಸ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಮನೆಯಲ್ಲಿಯೇ ಚೆಕ್ ಮಾಡಬಹುದು.

ಜಮೀನಿಗೆ ಸಂಬಂಧಿಸಿದ ಎಲ್ಲಾ ದಾಖಲೆ ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡಬೇಕು?

ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆ ಪಡೆಯಲು ಈ

https://landrecords.karnataka.gov.in/Service2/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಯಾವ ದಾಖಲೆ ನೀವು ಮೊಬೈಲ್ ನಲ್ಲಿ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಅದರ ಬಗ್ಗೆ ಆಯ್ಕೆಗಳು ಕಾಣುತ್ತವೆ. ಅಲ್ಲಿ ತೆರೆದುಕೊಳ್ಳುವ ಭೂಮಿ ಆನ್ಲೈನ್ ಲ್ಯಾಂಡ್ ರಿಕಾರ್ಡ್ಸ್ ನಲ್ಲಿ current year RTC, old Year RTC, Mutation (MR), Mutation status, Khata extract, Survey Documents, Akarband  ಹೀಗೆ ನಿಮಗೆ ಆಯ್ಕೆಗಳು ಕಾಣಸಿಗುತ್ತವೆ. ಯಾವ ದಾಖಲೆ ನೀವು ಮೊಬೈಲ್ ನಲ್ಲೇ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

ಉದಾಹರಣೆಗೆ ನೀವು ಈಗಿನ ಪಹಣಿ (current year) ಮೊಬೈಲ್ ನಲ್ಲೇ ಚೆಕ್ ಮಾಡಬೇಕಾದರೆ  ನಿಮ್ಮ District ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ Taluk ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ Hobli ಆಯ್ಕೆ ಮಾಡಿಕೊಳ್ಳಬೇಕು. ಇದಾದಮೇಲೆ ನೀವು ನಿಮ್ಮ  Village ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಯಾವ ಜಮೀನಿನ Survey Number ಪಹಣಿ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ಸರ್ವೆ ನಂಬರ್ ಹಾಕಬೇಕು. ನಂತರ  Go ಮೇಲೆ ಕ್ಲಿಕ್ ಮಾಡಬೇಕು.   Surnoc, ನಲ್ಲಿ ಸ್ಟಾರ್ (*) ಆಯ್ಕೆ ಮಾಡಿಕೊಳ್ಳಬೇಕು.  Hissa No (*) ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. Period ನಲ್ಲಿ 2021to till date (2022-2023) ಆಯ್ಕೆ ಮಾಡಿಕೊಳ್ಳಬೇಕು. Year ನಲ್ಲಿ 2022-2023 ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ  Fetch details ಮೇಲೆ ಕ್ಲಿಕ್ ಮಾಡಬೇಕು.  ಆಗ ನೀವು ನಮೂದಿಸಿದ ಸರ್ವೆ ನಂಬರಿನಲ್ಲಿ ಜಮೀನಿನ ಮಾಲಿಕರ ಹೆಸರು ಹಾಗೂ ತಂದೆಯ ಹೆಸರು ಕಾಣುತ್ತದೆ.  ಅದರ ಕೆಳಗಡೆ ಕಾಣುವ view ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ ಒಂದೇ ನಿಮಿಷದಲ್ಲಿ ನಿಮ್ಮ ಜಮೀನಿನ ಮ್ಯಾಪ್ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿ: ಇಲ್ಲಿದೆ ಮಾಹಿತಿ

ನೀವು ನಮೂದಿಸಿದ ಸರ್ವೆ ನಂಬರಿನಲ್ಲಿ ಎಷ್ಟು ಎಕರೆ ಜಮೀನು ಬರುತ್ತದೆ. ಹಾಗೂ ನೀವು ನಮೂದಿಸಿದ ಸರ್ವೆ ನಂಬರಿನಲ್ಲಿ ಯಾವ ಜಮೀನಿನ ಮಾಲಿಕರ ಹೆಸರಿಗೆ ಎಷ್ಟು ಎಕರೆ ಜಮೀನಿದೆ? ಅವರು ಪ್ರಸಕ್ತ ವರ್ಷ ಯಾವ ಬೆಳೆ ಬಿತ್ತಿರುವುದನ್ನು ತೋರಿಸಲಾಗಿದೆ? ಒಂದುವೇಳೆ ಯಾರಾದರೂ ಬೆಳೆ ಸಾಲ ಪಡೆದಿದ್ದರೆ ಯಾವ ಬ್ಯಾಂಕಿನಿಂದ ಎಷ್ಟು ಸಾಲ ಪಡೆಯಲಾಗಿದೆ? ಜಮೀನು ಮುಟೇಶನ್ ಆಗಿದ್ದರೆ ಯಾವ ವರ್ಷದಲ್ಲಿ ಮುಟೇಶನ್ ಆಗಿದೆ ಸೇರಿದಂತೆ ಇನ್ನಿತರ ಮಾಹಿತಿಗಳು ರೈತರಿಗೆ ಸಿಗುತ್ತದೆ.

Leave a Reply

Your email address will not be published. Required fields are marked *