Gruha jyothi Free light ಬಾಡಿಗೆ ಮನೆ ಬದಲಿಸಿದವರು ಇಲ್ಲಿಅರ್ಜಿ ಹಾಕಿ

Written by Ramlinganna

Published on:

Gruha jyothi Free light ಯೋಜನೆಯ ಫಲಾನುಭವಿ ಬಾಡಿಗೆದಾರರು ತಮ್ಮ ಮನೆಯ ಬದಲಿಸಿದರೂ ಈ ಯೋಜನೆಯನ್ನು ಮುಂದುವರಿಸಲು ಇಂಧನ ಇಲಾಖೆ ಡಿ- ಲಿಂಕ್ ಸೌಲಭ್ಯವನ್ನು ಕಲ್ಪಿಸಿದೆ. ಹೌದು, ಗೃಹಜ್ಯೋತಿ ಯೋಜನೆಯಡಿಯಲ್ಲಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

ಮನೆ ಬದಲಿಸಿದ ಬಾಡಿಗೆದಾರರು ತಕ್ಷಣ ಹಳೆ ಮನೆಯ ವಿಳಾಸದ ವಿದ್ಯುತ್ ಸಂಪರ್ಕವನ್ನು ರದ್ದುಪಡಿಸಿ ಡಿ ಲಿಂಕ್ ಆಯ್ಕೆ ಮಾಡಿಕೊಂಡು ಹೊಸ ಮನೆಯ ವಿಳಾಸಕ್ಕೆ ಗೃಹ ಜ್ಯೋತಿ  ಪ್ರಯೋಜನ ಪಡೆಯಬಹುದು.

ಗೃಹ ಯೋಜನೆ ಜಾರಿಗೆ ಬಂದ ನಂತರ ಕೆಲವು ಸಮಸ್ಯೆಗಳು ಎದುರಾಗಿದ್ದರು. ಬಾಡಿಗೆ ಮನೆಯದ್ದವರು ಬೇರೆ ಬೇರೆ ಕಾರಣಗಳಿಗೆ ಮನೆ ಬದಲಿಸಿದ ಸಂದರ್ಭದಲ್ಲಿ ಹೊಸ ಮನೆ ಆರ್.ಆರ್. ಸಂಖ್ಯೆಗೆ ತಮ್ಮ ಆಧಾರ್ ಜೋಡಣೆ ಮಾಡಿ ಗೃಹ ಜ್ಯೋತಿ ಯೋಜನೆಯ ಸೌಲಭ್ಯ ಪಡೆಯಲು ಸಾಧ್ಯ ಆಗುತ್ತಿರಲಿಲ್ಲ. ಅಲ್ಲದೆ, ಈ ಹಿಂದೆ ಇದ್ದ ಮನೆಯ ವಿದ್ಯುತ್ ಸಂಪರ್ಕಕ್ಕೆ ಜೋಡಣೆಯಾಗಿದ್ದ ಆಧಾರ್ ಸಂಖ್ಯೆಯನ್ನು ರದ್ದುಪಡಿಸಲು ಕೂಡ ಆಗುತ್ತಿರಲಿಲ್ಲ.ಇದೀಗ ಈ ಸಮಸ್ಯೆ ಪರಿಹಾರಗೊಂಡಿದೆ. ಹೊಸ ಬಾಡಿಗೆ ಮನೆಯ ಆರ್.ಆರ್. ಸಂಖ್ಯೆಯನ್ನು ಸುಲಭವಾಗಿ ನೋಂದಣಿ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಲಾಗಿದೆ. ಸೇವಾ ಸಿಂಧು ಪೋರ್ಟಲ್ ನಲ್ಲಿ ಈ ಬದಲಾವಣೆ ಮಾಡಿಕೊಳ್ಳಬಹುದು.

ಇದನ್ನೂ ಓದಿ Baragala parihara ನನ್ನ ಖಾತೆಗೆ ಜಮೆ: ನಿಮಗೆಷ್ಟು ಜಮೆ? ಚೆಕ್ ಮಾಡಿ

Gruha jyothi Free light ಯೋಜನೆಯ ಫಲಾನುಭವಿಗಳು ಮನೆ ಬದಲಾಯಿಸಿದಾಗ ತಮ್ಮ ಖಾತೆಗಳನ್ನುಡಿ ಲಿಂಕ್ ಮಾಡಲು ಮತ್ತು ವಿಳಾಸ ಬದಲಾವಣೆ ಮತ್ತು ಸ್ಥಳಾಂತರದನಂತರ ಮರು ಲಿಂಕ್ ಅವಕಾಶ ಕಲ್ಪಿಸುವ ಪ್ರಕ್ರಿಯೆ ಆರಂಭಿಸುವಂತೆ ವಿದ್ಯುತ್ ಸರಬರಾಜು ನಿಗಮಗಳಿಗೆ (ಎಸ್ಕಾಂ) ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ಗೃಹಜ್ಯೋತಿಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಅರ್ಜಿ ಸ್ವೀಕೃತವಾಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಲು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಿದ ಫಲಾನುಭವಿಗಳು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Gruha jyothi Free light ಸ್ಟೇಟಸ್ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸಿದವರು ತಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಲು ಈ

https://sevasindhu.karnataka.gov.in/StatucTrack/Track_Status

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಗೃಹ ಜ್ಯೋತಿ ಸ್ಟೇಟಸ್ ಚೆಕ್ ಮಾಡುವ Track you status Application ಪೇಜ್ ಓಪನ್ ಆಗುತ್ತದೆ.  ಅಲ್ಲಿ ನೀವು Select Escom name ನಲ್ಲಿ ನೀವು ಯಾವ ವಿಭಾಗದವರು ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಕಲಬುರಗಿ ವಿಭಾಗದವರಾಗಿದ್ದರೆ ನೀವು ಕಲಬುರಗಿ ವಿಭಾಗದವರಾಗಿದ್ದರೆ Gescom  ಮೈಸೂರು ವಿಭಾಗದವರಾಗಿದ್ದರೆ Mescome ಹುಬ್ಬಳ್ಳಿ ವಿಭಾಗದವರಾಗಿದ್ದರೆ Hescome ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಲೈಟ್ ಬಿಲ್ ನಲ್ಲಿರುವ ಅಕೌಂಟ್ ಐಡಿಯನ್ನು ನಮೂದಿಸಿ check status ಮೇಲೆ ಕ್ಲಿಕ್ ಮಾಡಬೇಕು. ಇನ್ನೊಂದು ಪೇಜ್ ಓಪನ್ ಆಗುತ್ತದೆ. ನಿಮ್ಮ ಅರ್ಜಿ ಸ್ವೀಕೃತವಾಗಿದ್ದರೆ ಯಾವ ದಿನಾಂಕದಂದು ಸ್ವೀಕೃತವಾಗಿದೆ. ಸ್ಟೇಟಸ್ ಎದುರುಗಡೆ ನಿಮ್ಮ ಅರ್ಜಿ ಗೃಹಜ್ಯೋತಿ ಯೋಜನೆಗೆ ಸ್ವೀಕೃತವಾಗಿದೆ  Your Application for Gruhajyoti scheme is received and sent to esome for processing  ಎಂಬ ಮೆಸೆಜ್ ಕಾಣಿಸುತ್ತದೆ.

ಬಾಡಿಗೆ ಮನೆಯಲ್ಲಿರುವವರು ಮನೆ ಬದಲಿಸಿದ್ದರೆ ಕೂಡಲೇ ನಿಮ್ಮ ಹತ್ತಿರ ಜೆಸ್ಕಾಂ ಕಚೇರಿಗೆ ಹೋಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅಲ್ಲಿ ನೀವು ಪ್ರಸಕ್ತ ಯಾವ ಮನೆಯಲ್ಲಿ ಬಾಡಿಗೆಯಿದ್ದೀರೋ ಆ ಮನೆಯ ವಿದ್ಯುತ್ ಮೀಟರ್ ಐಡಿ ನಂಬರ್ ಸಲ್ಲಿಸಬೇಕು. ಇದರೊಂದಿಗೆ ನಿಮ್ಮಆಧಾರ್ ಕಾರ್ಡ್ ನಂಬರ್ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು.

Gruha jyothi Free light ಯೋಜನೆಗೆ ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆ ಬೇಕು?

ಗೃಹಜ್ಯೋತಿಗೆ ಅರ್ಜಿ ಸಲ್ಲಿಸಲು ಮನೆಯ ಒಡತಿಯ ಅಂದರೆ ಪತ್ನಿಯ ಆಧಾರ್ ಕಾರ್ಡ್ ನಂಬರ್ ಬೇಕಾಗುತ್ತದೆ. ಇದರೊಂದಿಗೆ ವಿದ್ಯುತ್ ಬಿಲ್ ನ ಐಡಿ ನಂಬರ್ ಹಾಗೂ ಮೊಬೈಲ್ ನಂಬರ್ ಬೇಕಾಗುತ್ತದೆ.

ಹೊಸದಾಗಿ ಅರ್ಜಿ ಸಲ್ಲಿಸುವವರು ಏನು ಮಾಡಬೇಕು?

ಗೃಹಜ್ಯೋತಿಗೆ ಅರ್ಜಿ ಸಲ್ಲಿಸುವಾಗ ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಬೇಕು. ನಂತರ ಗೆಟ್ ಡಿಟೇಲ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಹೆಸರು ಕಾಣಿಸುತ್ತದೆ. ಸೆಲೆಕ್ಟ್ ಎಸ್ಕಾಂ ನಲ್ಲಿ ನಿಮ್ಮ ವಿಭಾಗ ಆಯ್ಕೆ ಮಾಡಿಕೊಂಡು ಅಕೌಂಟ್ ಐಡಿ ನಮೂದಿಸಬೇಕು. ನಿಮ್ಮ ವಿಳಾಸ ನಮೂದಿಸಬೇಕು.

ನೀವು ಮನೆಯ ಮಾಲಿಕರು, ಕುಟುಂಬ ಸದಸ್ಯರೋ ಅಥವಾ ಬಾಡಿಗೆದಾರರೋ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ನಿಮ್ಮ ಮೊಬೈಲ್ ನಂಬರ್ ಹಾಕಬೇಕು. ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಓಟಿಪಿ ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮಮೊಬೈಲ್ ಅರ್ಜಿ ಗೃಹ ಜ್ಯೋತಿಗೆ ಸ್ವೀಕೃತವಾಗುತ್ತದೆ.

Leave a Comment