ರಾಜ್ಯದಲ್ಲಿ ಈಗಾಗಲೇ ಮುಂಗಾರು ಆರಂಭವಾಗಿರುವುದರಿಂದ ತೋಟಗಾರಿಕೆ ಇಲಾಖೆಯ ವತಿಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ಸಸಿ, ಕಸಿ ಮಾಡಿದ ಸಸಿಗಳನ್ನು ವಿತರಿಲು ಅರ್ಜಿ ಅಹ್ವಾನಿಸಲಾಗಿದೆ.
ಧಾರವಾಡ, ಮೈಸೂರು ಹಾಗೂ ಇತರ ಜಿಲ್ಲೆಯಲ್ಲಿ ತೋಟಗಾರಿಕೆಇಲಾಖೆಯ ಅಧೀನ ವಿವಿದ ತೋಟಗಾರಿಕೆ ಕ್ಷೇತ್ರ, ನರ್ಸರಿಗಳಲ್ಲಿ 1.5 ಲಕ್ಷ ಹಣ್ಣಿನ, ಹೂವಿನ ಹಾಗೂ ಅಲಂಕಾರಿಕ ಸಸಿ ಮತ್ತು ಕಸಿ ಮಾಡಿದ ಸಸಿಗಳ್ನು ಸರ್ಕಾರ ನಿಗದಿಪಡಿಸಿರುವ ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯವಿದೆ.
ಆಸಕ್ತ ರೈತರು ಕ್ಷೇತ್ರದ ಸಿಬ್ಬಂದಿ ಸಂಪರ್ಕಿಸಿ ಇದರ ಲಾಭ ಪಡೆದುಕೊಳ್ಳಬಹುದು. ಧಾರವಾಡ ತಾಲೂಕು, ಜಿಲ್ಲಾ ನರ್ಸರಿ 9986526066, 8951476035, ಧಾರವಾಡ ತಾಲೂಕು ಕಣವಿ ಹೊನ್ನಾಪೂರ ತೋಟಗಾರಿಕೆ ಕ್ಷೇತ್ರ 8867887191, 9880249047, ಕುಂದಗೋಳ ತಾಲೂಕು, ಜಿಗಳೂರು ತೋಟಗಾರಿಕೆ ಕ್ಷೇತ್ರ, ಜಿಗಳೂರು 8970812270, 9353032344, ಕಲಘಟಗಿ ತಾಲೂಕು, ದಾಸ್ತಿಕೊಪ್ಪ ತೋಟಗಾರಿಕೆ ಕ್ಷೇತ್ರ 9611506210, ನವಲಗುದ ತಾಲೂಕು, ನವಲಗುಂದ ಕಚೇರಿ ನರ್ಸರಿ 7019017214 ಗೆ ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ರಿಯಾಯಿತಿ ದರದಲ್ಲಿ ತೆಂಗಿನ ಸಸಿ ಮಾರಾಟ
2022-23ನೇ ಸಾಲಿನಲ್ಲಿ ಮೈಸೂರು ತೋಟಗಾರಿಕೆ ಇಲಾಖೆಯ ವತಿಯಿಂದ ತೆಂಗಿನ ಸರಿ ಮಾರಟಕ್ಕೆ ಲಭ್ಯವಿದೆ. ಪ್ರತಿ ಗಿಡಕ್ಕೆ 75 ರೂಪಾಯಿ ದರ ನಿಗದಿಯಾಗಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್ ಕಾರ್ಡ್ ಹೊಂದಿರುವ ರೈತರಿಗೆ ಒಂದು ಎಕರೆಗೆ ತೋಟ ಪ್ರದೇಶ ಅಭಿವೃದ್ಧಿಪಡಿಸಲು ಕೂಲಿ ವೆಚ್ಚ 20627 ರೂಪಾಯಿ ನೀಡಲು ಅವಕಾಶವಿದೆ. ರೈತರು ಇದರ ಲಾಭ ಪಡೆದುಕೊಳ್ಳಬಹುದು.
ಇದನ್ನೂ ಓದಿ: ನಿಮ್ಮ ಜಮೀನಿನ ಸರ್ವೆ ನಂಬರ್ ನಲ್ಲಿ ಯಾರ ಯಾರ ಹೆಸರಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ
ಹೆಚ್ಚಿನ ಮಾಹಿತಿಗಾಗಿ ಮೈಸೂರು ತಾಲೂಕಿನ ಹೋಬಳಿ ಅಧಿಕಾರಿ ಹೆಬ್ಬಾಳು ತೋಟಗಾರಿಕೆ ಸಹಾಯಕ ನಿರ್ದೇಶಕರು. ಮೊಬೈಲ್ ನಂಬರ್ 87470 85225, ಕಸಬಾ ಸಹಾಯಕ ತೋಟಗಾರಿಕೆ ಅಧಿಕಾರಿ ಮೊ. 99013 87284, ವರುಣ ಸಹಾಯಕ ತೋಟಗಾರಿಕೆ ಅಧಿಕಾರಿ ಮೊಬೈಲ್ ನಂಬರ್ 95356 58502, ಜಯಪುರ ಸಹಾಯಕ ತೋಟಗಾರಿಕೆ ಅಧಿಕಾರಿ ಮೊಬೈಲ್ ನಂಬರ್ 9686766291, ಇಲವಾಲ ಸಹಾಯಕ ತೋಟಗಾರಿಕೆ ಅಧಿಕಾರಿ ಮೊಬೈಲ್ ನಂಬರ್ 70267 19516 ಗೆ ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೋಟಗಾರಿಕೆ ಇಲಾಖೆಗಳಲ್ಲಿ ಲಭ್ಯವಿರುವ ಸಸಿಗಳ ಮಾಹಿತಿ ಬೇಕೆ?
ರೈತರು ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿಯೇ ವಿವಿಧ ಜಿಲ್ಲೆಗಳ ತೋಟಗಾರಿಕೆ ಇಲಾಖೆಯಡಿ ಲಭ್ಯವಿರುವ ಒಟ್ಟಾರೆ ಕಸಿ/ಸಸಿಗಳ ವಿವರವನ್ನು ಪಡೆಯಬಹುದು.
ಹೌದು, ರೈತರು ಮನೆಯಲ್ಲಿಯೇ ಕುಳಿತು ತೋಟಗಾರಿಕೆ ಇಲಾಖೆಯಲ್ಲಿ ಲಭ್ಯವಿರುವ ಸಸಿಗಳ ಮಾಹಿತಿ ಪಡೆಯಲು ಈ
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ಪಿಡಿಎಫ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ಆಯಾ ಜಿಲ್ಲೆಗಳಲ್ಲಿ ಮಾವು ಸಪೋಟ, ಸೀಬೆ, ನೇರಳೆ, ನಿಂಬೆ, ತೆಂಗು, ಪಪ್ಪಾಯ, ಕಾಳುಮೆಣಸು, ಅಡಿಕೆ, ಗೋಡಂಬಿ, ನುಗ್ಗೆ ಹಾಗೂ ಕರಿಬೇವು ಸಸಿಗಳೆಷ್ಟು ಲಭ್ಯವಿದೆ ಎಂಬ ಮಾಹಿತಿ ಕಾಣುತ್ತದೆ.
ಪಿಡಿಎಫ್ ಫೈಲ್ ನ ಎರಡನೇ ಪೇಜ್ ನಲ್ಲಿ ತೋಟಗಾರಿಕೆ ಇಲಾಖೆಯ ಜಿಲ್ಲಾವಾರು ಮೊಬಲ್ ನಂಬರ್ ಸಹ ಇದೆ. ಅಲಂಕಾರಿಕ ಸಸಿಗಳ ಎಷ್ಟು ಲಭ್ಯವಿದೆ ಎಂಬ ಮಾಹಿತಿ ಇರುತ್ತದೆ. ಇದರ ಆಧಾರದ ಮೇಲೆ ರೈತರು ತೋಟಗಾರಿಕೆ ಇಲಾಖೆಯ ಮೊಬೈಲ್ ನಂಬರಿಗೆ ಕರೆ ಮಾಡಿ ಸಸಿಗಳನ್ನು ಪಡೆದುಕೊಳ್ಳಬಹುದು.
ಅಲಂಕಾರಿಕ ಸೀತಾಫಲ, ಮಲ್ಲಿಗೆ, ಅಂಜೂರ, ಬೆಟ್ಟದ ನೆಲ್ಲಿ, ದಾಳಿಂಬೆ, ಅಲಂಕಾರಿಕ ಗಿಡಗಳು, ಶ್ರೀಗಂಧ, ಅಲಂಕಾರಿ ಗಿಡಗಳು ಸೇರಿದಂತೆ ಇನ್ನಿತರ ಹೂವಿನ ಕುಂಡಗಳು ಲಭ್ಯವಿರುತ್ತದೆ. ರೈತರು ತಮಗೆ ಬೇಕಾದ ಸಸಿಗಳನ್ನು ಆಯಾ ಜಿಲ್ಲೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ಎಷ್ಟು ಸಸಿಗಳು ಲಭ್ಯವಿದೆ ಎಂಬ ಮಾಹಿತಿ ಪಡೆದು ಸಸಿಗಳನ್ನು ರಿಯಾಯಿತಿ ದರದಲ್ಲಿ ಪಡೆಯಬಹುದು.