ರೈತರು ತಮ್ಮ ಜಮೀನಿನ ಸರ್ವೆ ನಂಬರ್ ನಲ್ಲಿ ಯಾರ ಯಾರ ಹೆಸರಿದೆ ಎಂಬದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಇದಕ್ಕಾಗಿ ಯಾರ ಸಹಾಯವೂ ಬೇಕಿಲ್ಲ. ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಕ್ಷಣಾರ್ಧದಲ್ಲಿ ತಮ್ಮ ಜಮೀನಿನ ಸರ್ವೆ ನಂಬರಿನಲ್ಲಿ ಯಾರ ಯಾರ ಹೆಸರಿದೆ, ಆ ಜಮೀನಿನ ಖಾತಾ ಸಂಖ್ಯೆ ಹಾಗೂ ಒಂದೇ ಸರ್ವೆ ನಂಬರಿನಲ್ಲಿ ಹೆಸರಿರುವವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬಿತ್ಯಾದಿ ಮಾಹಿತಿಗಳನ್ನು ಮೊಬೈಲ್ ನಲ್ಲೇ ನೋಡಬಹುದು.
ರೈತರಿಗೆ ತಮ್ಮ ಜಮೀನಿನ ಸಂಪೂರ್ಣ ಮಾಹಿತಿ ನೋಡಲು ಪಹಣಿ ನೋಡುತ್ತಾರೆ. ಆದರೆ ಪಹಣಿ ಯಾವ ಸರ್ವೆ ನಂಬರಿನಲ್ಲಿದೆ ಹಾಗೂ ಅಕ್ಕಪಕ್ಕದ ಜಮೀನು ಮಾಲಿಕರ ಯಾರ ಯಾರ ಹೆಸರಿದೆ ಎಂಬುದನ್ನು ಚೆಕ್ ಮಾಡಬಹುದು ಅದು ಹೇಗೇ ಅಂದುಕೊಂಡಿದ್ದೀರಾ… ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಒಂದು ಸರ್ವೆ ನಂಬರಿಲ್ಲಿ ಯಾರ ಯಾರ ಹೆಸರಿದೆ ಚೆಕ್ ಹೇಗೆ ಮಾಡುವುದು?
ರೈತರು ತಮ್ಮ ಜಮೀನಿನ ಸರ್ವೆ ನಂಬರಿನಲ್ಲಿ ಅಕ್ಕಪಕ್ಕದ ಯಾರ ಯಾ ಹೆಸರಿದೆ ಚೆಕ್ ಮಾಡಲು ಈ
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸರ್ಕಾರದ ಮಾಹಿತಿ ಕಣಜ ವೆಬ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಆರ್.ಟಿ.ಸಿ ಮಾಹಿತಿ ವೀಕ್ಷಿಸಿ ಕೆಳಗಡೆ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು.ನಂತರ ತಾಲೂಕು, ಹೋಬಳಿ ಗ್ರಾಮವನ್ನು ಆಯ್ಕೆ ಮಾಡಿಕೊಂಡ ನಂತರ ಸಮೀಕ್ಷೆ ಸಂಖ್ಯೆ ಕೆಳಗಡೆ ಸರ್ವೆ ನಂಬರ್ ಹಾಕಬೇಕು. ನಂತರ ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಮತ್ತೆ ಹಿಸ್ಸಾ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ಆಮೇಲೆ ಆರ್.ಟಿಸಿ ಮಾಹಿತಿ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಪಹಣಿ ಮಾಹಿತಿ ಇರುತ್ತದೆ. ಯಾವ ದಿನಾಂಕದವರೆಗೆ ಈ ಮಾಹಿತಿ ಮಾನ್ಯವಾಗಿದೆ ಎಂಬುದು ದಿನಾಂಕ ಕಾಣುತ್ತದೆ. ತಾಲೂಕು, ಹೋಬಳಿ, ಸಮೀಕ್ಷೆ ಸಂಖ್ಯೆ ಅಂದರೆ ಸರ್ವೆ ನಂಬ್, ಖರಾಬ್ ಭೂಮಿ ಎಷ್ಟಿದೆ. ಒಂದು ಸರ್ವೆ ನಂಬರಿನಲ್ಲಿ ಎಷ್ಟು ಎಕರೆ ಜಮೀನಿದೆ. ಮಣ್ಣಿನ ಪ್ರಕಾರ ಸಹ ಕಾಣುತ್ತದೆ.
ಇದನ್ನೂ ಓದಿ : ನೀವು ನಿಂತಿರುವ ಜಮೀನು ಯಾರ ಹೆಸರಿನಲ್ಲಿದೆ? ಚೆಕ್ ಮಾಡಬೇಕೇ? ಇಲ್ಲಿದೆ ಸಂಪೂರ್ಣ ಮಾಹಿತಿ
ನೀವು ಸೂಚಿಸಿದ ಸರ್ವೆ ನಂಬರಿನಲ್ಲಿ ಯಾರು ಯಾರು ಮಾಲೀಕರು ಇದ್ದಾರೆ. ಜಂಟಿ ಮಾಲಿಕರು ಅಥವಾ ಮಾಲಿಕರೊಬ್ಬರೋ, ವಿಸ್ತಾರ ಎಷ್ಟಿದೆ. ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಹಾಗೂ ಖಾತಾ ಸಂಖ್ಯೆ ಸಹ ಕಾಣುತ್ತದೆ.
ಇದರಿಂದಾಗಿ ರೈತರು ತಮ್ಮ ಜಮೀನಿನ ಸರ್ವೆ ನಂಬರಿನಲ್ಲಿ ಎಷ್ಟು ಜನರಿದ್ದಾರೆ. ಅವರು ಯಾರು ಯಾರು ಎಂಬುದನ್ನು ನೋಡಬಹುದು. ಅಕಪಕ್ಕದ ಜಮೀನಿನ ಮಾಲಿಕರು ಗೊತ್ತಿರುತ್ತಾರೆ. ಆದರೆ ಅವರೆಲ್ಲಾ ಒಂದೇ ಸರ್ವೆ ನಂಬರಿನಲ್ಲಿದ್ದಾರೋ ಅಥವಾ ಇನ್ನೊಂದು ಸರ್ವೆ ನಂಬರಿನೊಳಗೆ ಬರುತ್ತಾರೋ ಎಂಬುದು ಮಾಹಿತಿ ಕಣಜದ ಈ ಮಾಹಿತಿಯಿಂದ ತಿಳಿದುಕೊಳ್ಳಬಹುದು.
ಮಾಹಿತಿ ಕಣಜದ ಸಹಾಯದಿಂದ ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ ಈ ಮಾಹಿತಿಯನ್ನು ವೀಕ್ಷಿಸಬಹುದು. ಇದಕ್ಕಾಗಿ ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಕೈಯಲ್ಲಿ ಮೊಬೈಲ್ ಒಂದಿದ್ದರೆ ಸಾಕು, ರೈತರು ಮನೆಯಲ್ಲಿಯೇ ಕುಳಿತು ನಿಮ್ಮ ಸರ್ವೆ ನಂಬರ್ ನ ಅಕ್ಕಪಕ್ಕದ ಜಮೀನು ಮಾಲಿಕರ ಹೆಸರನ್ನು ನೋಡಬಹುದು. ಕೆವಲ ಹೆಸರಷ್ಟೇ ಅಲ್ಲ, ಯಾರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಸಹ ಮೊಬೈಲ್ ನಲ್ಲೇ ನೋಡಬಹುದು.
ಸರ್ಕಾರವು ಜಮೀನಿನ ಮಾಹಿತಿಯನ್ನು ರೈತರಿಗೆ ಸುಲಭವಾಗಿ ಒದಗಿಸಲು ಈ ವ್ಯವಸ್ಥೆ ಮಾಡಿದೆ. ಇದರಿಂದಾಗಿ ರೈತರು ಜಮೀನಿಗೆ ಸಂಬಂಧಿಸಿದ ಮಾಹಿತಿಯನ್ನು ಮೊಬೈಲ್ ನಲ್ಲೇ ಪಡೆಯಬಹುದು.
Its very good think