Dishank app : ರೈತರು ಯಾವುದೇ ಜಮೀನಿನಲ್ಲಿ ನಿಂತುಕೊಳ್ಳಲಿ ಅದು ಯಾರ ಹೆಸರಿನಲ್ಲಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ಈಗ ತಂತ್ರಜ್ಞಾನ ಎಷ್ಟರಮಟ್ಟಿಗೆ ಬೆಳೆದಿದೆಯೋಂದರೆ ನಾವು ನಿಂತಿರುವ ಜಮೀನು ಯಾರ ಹೆಸರಿನಲ್ಲಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಇದಕ್ಕಾಗಿ ಯಾರ ಸಹಾಯವೂ ಬೇಕಿಲ್ಲ. ಸ್ಮಾರ್ಟ್ ಫೋನ್ ಇದ್ದರೆ ಸಾಕು, ಕ್ಷಣಾರ್ಧದಲ್ಲಿ ನಾವು ನಿಂತಿರುವ ಜಮೀನು ಯಾರ ಹೆಸರಿನಲ್ಲಿದೆ ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಮಾಹಿತಿ.
ನೀವು ಜಮೀನು ಖರೀದು ಮಾಡುವಾಗ ಅಥವಾ ಪ್ಲಾಟ್ ಖರೀದು ಮಾಡುವಾಗ ಆ ಜಮೀನು ಯಾರ ಹೆಸರಿನಲ್ಲಿದೆ ಎಂಬುದನ್ನು ಈ ದಿಶಾಂಕ್ ಆ್ಯಪ್ ಸಹಾಯದಿಂದ ಸುಲಭವಾಗಿ ತಿಳಿದುಕೊಳ್ಳಬಹುದು. ಈ ದಿಶಾಂಕ್ ಆ್ಯಪನ್ನು ರಾಜ್ಯ ಸರ್ಕಾರವು ಸಾಮಾನ್ಯ ಜನರಿಗೆ ಉಪಯುಕ್ತ ಮಾಹಿತಿ ನೀಡಲೆಂದು ಅಭಿವೃದ್ಧಿಪಡಿಸಿದೆ. ಆ ಜಾಗ ಸರ್ಕಾರಕ್ಕೆ ಸೇರಿದೆಯೋ, ಗೋಮಾಳವೋ ಅಥವಾ ಒತ್ತುವರಿ ಜಾಗವೋ ಎಂಬ ವಿವರಗಳನ್ನು ತಿಳಿದುಕೊಳ್ಳಬಹುದು.
ಈ ಆ್ಯಪ್ ದಿಂದಾಗಿ ನಾವು ನಿಂತಿರುವ ಸ್ಥಳದ ಭೂನಕ್ಷೆ ನೋಡಬಹುದು. ಈ ಆ್ಯಪ್ ಸಹಾಯದಿಂದಾಗಿ ಪ್ಲಾಟ್ ಅಥವಾ ಜಮೀನಿನ ನಿಖರ ಸರ್ವೆ ನಂಬರ್ ಸಹ ತಿಳಿದುಕೊಳ್ಫಬಹುದು. ನಿಂತಿರುವ ಸ್ಥಳದ ಸುತ್ತಲಿನ ಪ್ರದೇಶ, ಕೆರೆಕುಂಟೆ, ಅಕ್ಕಪಕ್ಕದ ವಿವರ ಸಹ ನೀಡುತ್ತದೆ. ನೀವು ಒಂದು ಸೈಟ್ ಖರೀದಿ ಮಾಡಲು ಹೋಗುವಾಗ ಅಥಾ ನೀವು ನಿಮ್ಮಜಮೀನಿನ ಜಾಗದಲ್ಲಿ ನಿಂತರು ಈ ದಿಶಾಂಕ್ ಆ್ಯಪ್ ಆನ್ ಮಾಡಿದರೆ ಸಾಕು, ಆ ಸ್ಥಳದ ಸಂಪೂರ್ಣ ಮಾಹಿತಿ ನೀಡುತ್ತದೆ.
Dishank app: ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?
ರೈತರು ದಿಶಾಂಕ್ ಆ್ಯಪನ್ನು ಮೊಬೈಲನಲ್ಲಿ ಇನ್ಸಟಾಲ್ ಮಾಡಿಕೊಳ್ಳಬೇಕಾದರೆ ಈ
https://play.google.com/store/apps/details?id=com.ksrsac.sslr&hl=en_IN
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ದಿಶಾಂಕ್ ಆ್ಯಪ್ ಓಪನ್ ಆಗುತ್ತದೆ. ಆಗ ರೈತರು ಇನ್ಸಟಾಲ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಲ್ಲಿ ಆ್ಯಪ್ ಇನ್ಸಟಾಲ್ ಆಗಲು ಆರಂಭವಾಗುತ್ತದೆ. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಓಪನ್ ಮೇಲೆ ಕ್ಲಿಕ್ ಮಾಡಿದ ನಂತರ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಕರ್ನಾಟಕ ಸರ್ಕಾರ ದಿಶಾಂಕ್ ಗೆ ಸ್ವಾಗತ ಎಂಬ ಮೆಸೇಜ್ ಕಾಣುತ್ತದೆ. ಆಮೇಲೆ ಅಲೋ ದಿಶಾಂಕ್ ಟು ಆಕ್ಸೆಸ್ ದಿಸ್ ಡಿವೈಸ್ ಮೆಸೆಜ್ ಕಾಣುತ್ತದೆ.
ಅಲ್ಲಿ ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಿ ಭಾಷೆ ಆಯ್ಕೆ ಮಾಡಿಕೊಳ್ಳಬೇಕು.ನಂತರ ಜಿಪಿಎಸ್ ಆನ್ ಮಾಡಿಕೊಳ್ಳಬೇಕು. ಆಗ ನಿಮಗೆ ನೀವು ನಿಂತಿರುವ ಸ್ಥಳ ಪೈಂಟ್ ಆಗಿರುತ್ತದೆ. ಅಂದರೆ ಯಾವ ಸ್ಥಳದಲ್ಲಿ ನಿಂತಿರುತ್ತೀರೋ ಆ ಸರ್ವೆ ನಂಬರ್ ಕಾಣುತ್ತದೆ. ಪೈಂಟ್ ಮೇಲೆ ಕ್ಲಿಕ್ ಮಾಡಿದ ನಂತರ ಯಾವ ಸರ್ವೆ ನಂಬರ್ ನಲ್ಲಿ ನೀವಿದ್ದೀರೋ ಅದು ಕಾಣುತ್ತದೆ.
ಇದನ್ನೂ ಓದಿ : ಜಮೀನಿನ ಮೊಟೇಷನ್ ಮೊಬೈಲ್ ನಲ್ಲೇ ನೋಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಹೆಚ್ಚಿನ ವಿವರಗಳ ಮೇಲೆ ಕ್ಲಿಕ್ ಮಾಡಿದಾಗ ಮತ್ತೊಂದು ಪೆಜ್ ತೆರೆದುಕೊಳ್ಥುತ್ದದೆ. ಆಗ ನೀವು ಮಾಲಿಕರ ವಿವರಗಳು ಮೇಲೆ ಕ್ಲಿಕ್ಮಾಡಿ ಸರ್ವೋಕ್ ಸಂಖ್ಯೆ, ಹಿಸ್ಸಾನಂಬರ್ ಆಯ್ಕೆ ಮಾಡಿ ಮಾಲೀಕರು ಮೇಲೆ ಕ್ಲಿಕ್ ಮಾಡಿದಾಗ ನೀವು ನಿಂತಿರುವ ಜಮೀನು ಯಾರ ಹೆಸರಿನಲ್ಲಿದೆ ಜಮೀನಿನ ವಿಸ್ತೀರ್ಣ ಎಷ್ಟಿದೆ ಹಾಗೂ ನೆರೆಹೊರೆಯ ಜಮೀನಿನ ಮಾಲಿಕರ ಮಾಹಿತಿ ಸಹ ಕಾಣುತ್ತದೆ.
ಇಲ್ಲಿ ಕಾಣುವ ನಕಾಶೆಯು ಸಾಂಕೇತಿಕವಾದದ್ದು. ಪ್ರತಿ ಸರ್ವೆ ನಂಬರನ ಗಡಿರೇಖೆಗಳನ್ನು ತೋರಿಸುತ್ತದೆ. ಆ ಜಾಗದಲ್ಲಿ ರಸ್ತೆ ಇದೆಯೋ ಇಲ್ಲವೋ ಎಂಬುದನ್ನು ಸಹ ತಿಳಿದುಕೊಳ್ಳಬಹುದು.