2022-23 ನೇ ಸಾಲಿನ ಆಯವ್ಯಯದಲ್ಲಿ ಎಸ್.ಸಿ ಎಸ್ಟಿ‌ ರೈತರಿಗೆ ನೀಡುವ ಶೇ. 90 ರಷ್ಟು ಸಾಮಾನ್ಯ ವರ್ಗದ ರೈತರಿಗೆ ಶೇ. 75 ರಷ್ಟು ಸಹಾಯಧನ ವಿಸ್ತರಿಸಲಾಗಿದೆ.
ಹೌದು, ಹನಿ ನೀರಾವರಿ ಯೋಜನೆಯನ್ನು ಸಮಗ್ರವಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಎಸ್ ಸಿ ಎಸ್ ಟಿ ರೈತರಿಗೆ ಮೊದಲ 2 ಹೆಕ್ಟೇರ್‌ಗೆ ಶೇ.90ರಷ್ಟು ಸಬ್ಸಿಡಿ ಭಾಗ್ಯ ನೀಡಲಾಗುತ್ತಿದೆ. ಸಾಮಾನ್ಯ ವರ್ಗದ ರೈತರಿಗೆ ಶೇ. 75 ರಷ್ಟು ಸಹಾಯಧನ ಹೆಚ್ಚಿಸಲಾಗಿದೆ.
ರೈತರ ಜಮೀನಿನಲ್ಲಿ ನೀರು ಪೋಲಾಗುವುದನ್ನು ತಡೆದು ನೀರಿನ ಸಮರ್ಥ ಬಳಕೆಯನ್ನು ಉತ್ತೇಜಿಸುವುದಕ್ಕಾಗಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿಯಲ್ಲಿ ರೈತರಿಗೆ ತುಂತುರು ನೀರಾವರಿ ಘಟಕ ಹಾಗೂ ಹನಿ ನೀರಾವರಿ ಘಟಕಗಳಿಗೆ ಶೇ. 90 ರಷ್ಟು ಸಹಾಯಧನ ನೀಡಲಾಗುವುದು.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಕೇಂದ್ರದಿಂದ ಶೇ. 60 ರಾಜ್ಯದಿಂದ ಶೇ. 40 ರ ಅನುಪಾತದಲ್ಲಿ ಯೋಜನೆ ವೆಚ್ಚವನ್ನು ಭರಿಸಲಾಗುವುದು. ಸಮತಟ್ಟಾದ ಪ್ರದೇಶದ ಪ್ರತಿ ಹೆಕ್ಟೇರ ಜಲಾನಯನ ಉಪಚಾರಕ್ಕೆ 22 ಸಾವಿರ ರೂಪಾಯಿ ಗುಡ್ಡಗಾಡು ಪ್ರದೇಶದ ಉಪಚಾರಕ್ಕೆ28 ಸಾವಿರ ರೂಪಾಯಿಯವರೆಗೆ ಅನುದಾನ ನೀಡಲಾಗುವುದು.

ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸುವ ರೈತರಿಗೆ ಆಯಾ ಬೆಳೆಗಳು ಮತ್ತು ಬೆಳೆಗಳ ಅಂತರಕ್ಕೆ ಅನುಗುಣವಾಗಿ ಮಾರ್ಗಸೂಚಿಯಂತೆ, ಶೇ.90 ಸಹಾಯಧನ ಹಾಗೂ ನಂತರದ 3 ಹೆಕ್ಟೇರ್‌ಗೆ ಶೇ.45 ಸಹಾಯಧನವನ್ನು ತೋಟಗಾರಿಕೆ ಇಲಾಖೆ ನೀಡುತ್ತದೆ.

ಬಾವಿ, ಕೊಳವೆಬಾವಿ, ಕುಂಟೆ, ಕೃಷಿ ಹೊಂಡ ಸೇರಿದಂತೆ ನೀರಿನ ಮೂಲ ಹೊಂದಿರುವವರಿಗೆ ಈ ಯೋಜನೆ ಸಹಕಾರಿಯಾಗಲಿದೆ.

ಯಾವ ಬೆಳೆಗೆ ಎಷ್ಟು ಸಬ್ಸಿಡಿ?

ಹಣ್ಣಿನ ಬೆಳೆಗಳಿಗೆ 3 ಹೆಕ್ಟೇರ್‌ನಲ್ಲಿ 7.5 ಎಕರೆಯಷ್ಟು ಹಣ್ಣಿನ ಬೆಳೆಗಳನ್ನು ಇಟ್ಟರೆ, ಅಂತಹ ರೈತರಿಗೆ ಶೇ.45 ಸಬ್ಸಿಡಿ ನೀಡಲಾಗುತ್ತಿದ್ದು, ತರಕಾರಿ ಮತ್ತು ವಾಣಿಜ್ಯ ಬೆಳೆಗಳಿಗೆ ಎಲ್ಲಾ ವರ್ಗದ ರೈತರಿಗೆ 2 ಹೆಕ್ಟೇರ್‌ಗೆ ಶೇ.90 ಸಹಾಯ ಧನ ನೀಡಲಾಗುತ್ತಿದೆ.

ಕೃಷಿ ಸಿಂಚಾಯಿ ಯೋಜನೆಯ ಲಾಭ ಪಡೆಯಲು ಬೇಕಾಗುವ ದಾಖಲೆಗಳು

ರೈತರು ಆಧಾರ್ ಕಾರ್ಡ್ ಹೊಂದಿರಬೇಕು. ಜಮೀನಿನ ಜಮಾಬಂಧಿ ಹೊಂದಿರಬೇಕು. ಬ್ಯಾಂಕ್ ಪಾಸ್ ಬುಕ್ ಇರಬೇಕು. ಇತ್ತೀಚಿನ ಪಾಸ್ಪೋರ್ಟ್ ಸೈಜಿನ ಎರಡು ಫೋಟೋಗಳನ್ನು ಹೊಂದಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಆರ್.ಡಿ ನಂಬರ್ ಇರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು.
ಆಸಕ್ತ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನೀರಾವರಿಗಾಗಿ ಸ್ಲ್ರಿಂಕ್ಲರ್ ಪಡೆಯಬಹುದು. ಲಭ್ಯತೆಯ ಆಧಾರದ ಮೇಲೆ ರೈತರಿಗೆ ಕೃಷಿ ಚಟುವಟಿಕೆಗಾಗಿ ಸ್ಪ್ರಿಂಕ್ಲರ್ ಘಟಕ ಸ್ಥಾಪಿಸಲು ಸಹಾಯಧನ ನೀಡಲಾಗುವುದು.

ರೈತರಿಗೆ 63 ಎಂಎಂ ಪೈಪ್ ಗಳಿಗೆ 1932 ರೂಪಾಯಿ ಹಾಗೂ 75 ಎಂಎಂ ಪೈಪ್ ಗಳಿಗೆ 2070 ರೂಪಾಯಿ ವಂತಿಗೆ ಭರಿಸಬೇಕು. ಎಸ್.ಸಿ ಎಸ್ ಟಿ ರೈತರಿಗೆ ಶೇ, 90 ರಷ್ಟು ಅಂದರೆ 26690 ರೂಪಾಯಿಯವರೆಗೆ ಸಹಾಯಧನ ನೀಡಲಾಗುವುದು. ರೈತರು ತಮ್ಮ ವಂತಿಗೆಯ ಹಣವನ್ನು ಆರ್.ಟಿ.ಜಿ.ಎಸ್ ಮೂಲಕ ಪಾವತಿಸಿದ ನಂತರ ಸೌಲಭ್ಯ ನೀಡಲಾಗುವುದು

Leave a Reply

Your email address will not be published. Required fields are marked *