ಪಿಎಂ ಕಿಸಾನ್ ನೋಂದಣಿ ಸಂಖ್ಯೆ ಮೊಬೈಲ್ ನಲ್ಲಿ ಚೆಕ್ ಮಾಡಿ

Written by Ramlinganna

Updated on:

Do you know pmkisan Registration number ಪಿಎಂಕಿಸಾನ್ ಯೋಜನೆಯ ನೋಂದಣಿ ಸಂಖ್ಯೆಯನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ರೈತರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು ಮನೆಯಲ್ಲಿಯೇ ಕುಳಿತು ಚೆಕ್ ಮಾಡಬಹುದು

ಸಣ್ಣ ಮತ್ತು ಅತೀಸಣ್ಣ  ರೈತರ ಆದಾಯ ವೃದ್ಧಿಸಲು ಜಾರಿಗೆ ತರಲಾದ  ಪಿಎಂ ಕಿಸಾನ್ ಯೋಜನೆ ಕೇಂದ್ರ ಸರ್ಕಾರ ಜಾರಿಗೆ ತಂದ ಎಲ್ಲಾ ಯೋಜನೆಗಳಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿದೆ. ಏಕೆಂದರೆ ಈ ಯೋಜನೆ ಜಾರಿಗೆ ಬಂದ ನಂತರ ರೈತರ ಖಾತೆಗೆ ಪ್ರತಿ ವರ್ಷ ಮೂರು ಕಂತುಗಳಲ್ಲಿ 6 ಸಾವಿರ ರೂಪಾಯಿು ಜಮೆ ಮಾಡುತ್ತಿದೆ. ಹಾಗಾಗಿ ಈ ಯೋಜನೆ ಹೆಸರುವಾಸಿಯಾಗಿದೆ.

ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ನೋಂದಣಿ ಮಾಡಿಸಿಕೊಂಡ ಬಹುತೇಕ ರೈತರಿಗೆ ತಮ್ಮ ನೋಂದಣಿ ಸಂಖ್ಯೆ ಗೊತ್ತಿರಲಿಕಿಲ್ಲ. ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್, ಫ್ರೂಟ್ಸ್ ಐಡಿನಂಬರ್ ನಂತೆ ಪಿಎಂ ಕಿಸಾನ್ ಯೋಜನೆಯ ನೋಂದಣಿಯ ನಂಬರ್ ಸಹ ರೈತರಿಗೆ ಮಹತ್ವದ್ದಾಗಿದೆ.  ಪಿಎಂ ಕಿಸಾನ್ ಯೋಜನೆಯ ನೋಂದಣಿ ಸಂಖ್ಯೆಯನ್ನು ರೈತರೀಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

Do you know pmkisan Registration number ಪಿಎಂ ಕಿಸಾನ್ ಯೋಜನೆಯ ನೋಂದಣಿ ನಂಬರ್ ಚೆಕ್ ಮಾಡುವುದು ಹೇಗೆ?

ಪಿಎಂ ಕಿಸಾನ್ ಯೋಜನೆಯ ನೋಂದಣಿ ಸಂಖ್ಯೆ ಚೆಕ್ ಮಾಡಲು ರೈತರು ಈ

https://pmkisan.gov.in/BeneficiaryStatus.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ know your Registration No ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಕ್ಯಾಪ್ಚ್ಯಾ ಕೋಡ್ ನಮೂದಿಸಬೇಕು. ನಂತರ ಗೆಟ್ ಮೊಬೈಲ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಂಬರಿಗೆ ಒಂದು ಓಟಿಪಿ ಬರುತ್ತದೆ. ನಿಮ್ಮ ಮೊಬೈಲಿಗೆ ಬಂದ ಓಟಿಪಿಯನ್ನು ನಮೂದಿಸಿ ಗೆಟ್ ಡಿಟೇಲ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ರೆಜಿಸ್ಟ್ರೇಶನ್ ನಂಬರ್ ಹಾಗೂ ನಿಮ್ಮ ಹೆಸರು ಕಾಣುತ್ತದೆ.  ಈ ರೆಜಿಸ್ಟ್ರೇಶನ್ ನಂಬರ್ ನ್ನು ನೀವು ಬರೆದಿಟ್ಟುಕೊಳ್ಳಬೇಕು. ಮುಂದೆ ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿ ಮಾಹಿತಿಗಾಗಿ ಅವಶ್ಯಕತೆ ಬರುತ್ತದೆ.

2018 ರ ಡಿಸೆಂಬರ್ 1 ರಿಂದ ಆರಂಭವಾದ ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ನೋಂದಣಿಯಾದ ರೈತರಿಗೆ ಇಲ್ಲಿಯವರೆಗೆ 11 ಕಂತುಗಳನ್ನು ಪ್ರತಿ ವರ್ಷ ಮೂರು ಕಂತುಗಳಲ್ಲಿ ಬಿಡುಗಡೆ ಮಾಡಿದೆ. ಈಗಾಗಲೇ 11 ಕಂತುಗಳು ರೈತರ ಖಾತೆಗೆ ಜಮೆಯಾಗಿದೆ. ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ  12ನೇ ಕಂತಿನ ಹಣ ಬಿಡುಗಡೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ :  ಭಾಗ್ಯಲಕ್ಷ್ಮೀ ಬಾಂಡ್ ಯೋಜನೆಯಡಿ ನಿಮ್ಮ ಮಗುವಿನ ಹೆಸರಿಗೆ ಎಷ್ಟು ಹಣ ಜಮೆಯಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಪಿಎಂ ಕಿಸಾನ್ ಯೋಜನೆಯಡಿಯಲ್ಲಿ 2 ಹೆಕ್ಟೇರ್ ಗಿಂತ ಕಡಿಮೆ ಭೂಮಿ ಹೊಂದಿರುವ ಪ್ರತಿ ರೈತ ಕುಟುಂಬಕ್ಕೆ ಒಂದು ವರ್ಷಕ್ಕೆ 6ಸಾವಿರ ರೂಪಾಯಿಯನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಒಟ್ಟು ಮೂರು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು.

ಯಾವ ಯಾವ ತಿಂಗಳಲ್ಲಿ ಪಿಎಂ ಕಿಸಾನ್ ಹಣ ಬಿಡುಗಡೆ ಮಾಡಲಾಗುವುದು?

ಪಿಎಂ ಕಿಸಾನ್ ಯೋಜನೆಯಡಿ ನೋಂದಣಿಯಾದ ರೈತರಿಗೆ ಪ್ರತಿ ವರ್ಷ ಏಪ್ರೀಲ್ – ಜುಲೈ ತಿಂಗಳಲ್ಲಿ ಮೊದಲ ಕಂತು, ಆಗಸ್ಟ್ –ನವೆಂಬರ್ ತಿಂಗಳಲ್ಲಿ ಎರಡನೇ ಕಂತು ಹಾಗೂ ಡಿಸೆಂಬರ್  – ಮಾರ್ಚ್ ತಿಂಗಳಲ್ಲಿ ಮೂರನೇ ಕಂತು ಬಿಡುಗಡೆ ಮಾಡಲಾಗುವುದು.

ಇಕೆವೈಸಿ ಮಾಡಿಸಲು ಜುಲೈ 31 ಕೊನೆಯ ದಿನ

ಪಿಎಂ ಕಿಸಾನ್ ಯೋಜನೆಯಡಿ ನೋಂದಣಿಯಾದ ರೈತರು ಇಕೆವೈಸಿ ಮಾಡಿಸದಿದ್ದರೆ ಜುಲೈ 31 ರೊಳಗೆ ಇಕೆವೈಸಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ 12ನೇ ಕಂತಿನ ಹಣ ತಡೆಹಿಡಿಯುವ ಸಾಧ್ಯತೆಯಿರುತ್ತದೆ. ಹಾಗಾಗಿ ರೈತರು ಜುಲೈ 31 ರೊಳಗೆ ಹತ್ತಿರದ ಸಿಎಸ್.ಸಿ ಕೇಂದ್ರಗಳಲ್ಲಿ ಆಧಾರ್ ಕಾರ್ಡ್, ಜಮೀನಿನ ಪಹಣಿ ಹಾಗೂ ಬ್ಯಾಂಕ್ ಪಾಸ್ ಬುಕ್ ನೊಂದಿಗೆ ಇಕೆವೈಸಿ ಮಾಡಿಸಿಕೊಳ್ಳಬಹುದು.

Leave a Comment