2006-07ನೇ ಸಾಲಿನಲ್ಲಿ ಜಾರಿಗೆ ತಂದ ಭಾಗ್ಯಲಕ್ಷ್ಮೀ ಯೋಜನೆಯ ಬಾಂಡ್ ಸ್ಟೇಟಸ್ ನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ಈ ಸ್ಟೇಟಸ್ ಸಹಾಯದಿಂದಾಗಿ ಬಾಂಡ್ ವಿತರಿಸಲಾಗಿದೆಯೋ ಇಲ್ಲವೋ? ಬಾಂಡ್ ಹೆಸರಿನಲ್ಲಿ ಎಷ್ಟು ಹಣ ಜಮೆ ಮಾಡಲಾಗಿದೆ? ಬಾಂಡ್ ಎಲ್ಐಸಿಯಿಂದ ಪ್ರಿಂಟ್ ಆಗಿದೆಯೋ ಇಲ್ಲವೋ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಮೊಬೈಲ್ ನಲ್ಲೇ ನೋಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಏನಿದು ಭಾಗ್ಯಲಕ್ಮೀ ಯೋಜನೆ?
ಭಾಗ್ಯಲಕ್ಮೀ ಯೋಜನೆಯನ್ನು ಆಗಸ್ಟ್ 2008 ರಲ್ಲಿ ಮಾರ್ಪಡಿಸಲಾಗಿದೆ. ಮಾರ್ಪಡಿಸಿದ ದಿನಾಂಕ 1-8-2008 ರ ನಂತರ ಭಾಗ್ಯಲಕ್ಷ್ಮೀ ಯೋಜನೆಯಡಿ ನೋಂದಣಿಯಾದ ಕುಟುಂಬದ ಮೊದಲ ಮಗುವಿನ ಹೆಸರಿನಲ್ಲಿ 19300 ರೂಪಾಯಿ ಹಾಗೂ ಎರಡನೇ ಮಗುವಿನ ಹೆಸರಿನಲ್ಲಿ 18350 ರೂಪಾಯಿ ಮೊತ್ತವನ್ನು ಠೇವಣಿಮಾಡಲಾಗಿರುತ್ತದೆ. 18 ವರ್ಷ ಪೂರ್ಣಗೊಂಡು ನಿಬಂದನೆಗಳನ್ನು ಪೂರೈಸಿದ ಕುಟುಂಬದ ಮೊದಲನೇ ಫಲಾನುಭವಿಗೆ 100097 ರೂಪಾಯಿ ಹಾಗೂ ಎರಡನೇ ಫಲಾನುಭವಿಗೆ 100052 ರೂಪಾಯಿ ದೊರೆಯುತ್ತದೆ.
ಫಲಾನುಭವಿಗೆ 15 ವರ್ಷ ತಲುಪಿದ ನಂತರ 10ನೇ ತರಗತಿಯಲ್ಲಿ ಉತ್ತೀರ್ಣಳಾಗಿ ಮುಂದಿನ ವಿಧ್ಯಾಭ್ಯಾಸ ಕೈಗೊಳ್ಳಲು ಆಸಕ್ತಿಯಿದ್ದಲ್ಲಿ ಬಾಂಡ್ ಅಂಗೀಕೃತ ಬ್ಯಾಂಕುಗಳಲ್ಲಿ ಅಡಮಾನವಿರಿಸಿ 50 ಸಾವಿರ ರೂಪಾಯಿಯವರೆಗೆ ಸಾಲ ಪಡೆಯಬಹುದು.
ಭಾಗ್ಯಲಕ್ಷ್ಮೀ ಬಾಂಡ್ ಸ್ಟೇಟಸ್ ಮೊಬೈಲ್ ನಲ್ಲಿ ನೋಡುವುದು ಹೇಗೆ?
ಭಾಗ್ಯಲಕ್ಷ್ಮೀ ಬಾಂಡ್ ಸ್ಟೇಟಸ್ ಮೊಬೈಲ್ ನಲ್ಲೇ ನೋಡಲು ಈ
http://blakshmi.kar.nic.in:8080/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭಾಗ್ಯಲಕ್ಷ್ಮೀ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಭಾಗ್ಯಲಕ್ಷ್ಮೀ ಯೋಜನೆಯ ಕುರಿತಂತೆ ಮಾಹಿತಿ ಇರುತ್ತದೆ. ಯೋಜನೆ ಆರಂಭಾವಾದಾಗ ಯೋನೆ ಹಾಗು ಭಾಗ್ಯಲಕ್ಷ್ಮೀ ಯೋಜನೆಯಡಿ ನಿಬಂಧನೆಗಳ ಮಾಹಿತಿ ಇರುತ್ತದೆ. ಸ್ಟೇಟಸ್ ಚೆಕ್ ಮಾಡಲು ಮೇಲ್ಗಡೆ Home ಪಕ್ಕದಲ್ಲಿರುವ query/search ಕೆಳಗಡೆ ಕಾಣುವ Multi Search ಮೇಲೆ ಕ್ಲಿಕ್ ಮಾಡಬೇಕು.
ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ District ನಲ್ಲಿ ನಿಮ್ಮ ಜಿಲ್ಲೆ, Project ನಲ್ಲಿ ತಾಲೂಕು, cercle ನಲ್ಲಿ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಮಗುವಿನ ಹೆಸರು ನಮೂದಿಸಬೇಕು. ಹುಟ್ಟಿದ ದಿನಾಂಕ ನಮೂದಿಸಿ ಅಲ್ಲಿ ಕಾಣುವ ಕೋಡ್ ನಂಬರ್ ನ್ನು ಕೆಳಗಡೆ ಇಮೇಜ್ ಕೋಡ್ ಬಾಕ್ಸ್ ನಲ್ಲಿ ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು.
ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ Child Id ಕೆಳಗಡೆ ಕಾಣುವ ನಂಬರ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮತ್ತೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಭಾಗ್ಯಲಕ್ಷ್ಮೀ ಬಾಂಡ್ ಸ್ಟೇಟಸ್ ಮಾಹಿತಿ ಕಾಣುತ್ತದೆ.
ಸ್ಟೇಟಸ್ ನಲ್ಲಿ ಬಾಂಡ್ ವಿತರಿಸಲಾಗಿದೆಯೋ ಇಲ್ಲವೋ? ಎಲ್ಐಸಿಯಿಂದ ಪ್ರಿಂಟ್ ಆಗಿದೆಯೋ ಇಲ್ಲವೋ? ಜಿಲ್ಲೆ, ತಾಲೂಕು, ಗ್ರಾಮ, ಮಗುವಿನ ಹೆಸರು, ತಂದೆ ತಾಯಿಯ ಹೆಸರು, ಯಾವ ವರ್ಗಕ್ಕೆ ಮಗು ಸೇರಿದೆ? ಭಾಗ್ಯಲಕ್ಷ್ಮೀ ಪಾಲಿಸಿ ಮಾಡಿಸುವಾಗ ತಂದೆ ತಾಯಿಯ ವಯಸೆಷ್ಟಿತ್ತು.ಮಗುವಿನ ಹೆಸರಿಗೆ ಎಷ್ಟು ಹಣ ಜಮೆ ಮಾಡಲಾಗಿದೆ ಹಾಗೂ ಚೆಕ್ ನಂಬರ್ ಸೆರಿದಂತೆ ಇನ್ನಿತರ ಮಾಹಿತಿ ಇರುತ್ತದೆ.
ಇದನ್ನೂ ಓದಿ : ಪಿಎಂ ಕಿಸಾನ್ ಸ್ಟೇಟಸ್ ನಲ್ಲಿ ಬದಲಾವಣೆ- ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ ಪಿಎಂ ಕಿಸಾನ್ ಸ್ಟೇಟಸ್
ಭಾಗ್ಯಲಕ್ಷ್ಮೀ ಯೋಜನೆ ಪರಿಷ್ಕೃತ
ಭಾಗ್ಯಲಕ್ಷ್ಮೀ ಯೋಜನೆ 31-3-2006 ರಲ್ಲಿ ಆರಂಭವಾದ ಈ ಯೋಜನೆ 31-07-2008 ರವರೆಗೆ ಜನಿಸಿದ ಮಗುವಿನ ಹೆಸರಿಗೆ 10 ಸಾವಿರ ರೂಪಾಯಿ ಠೇವಣಿ ಇಡಲಾಗುತ್ತಿತ್ತು. 18 ವರ್ಷಗಳು ಪೂರ್ಣಗೊಂಡ ನಂತರ ಮೊದಲ ಮಗುವಿಗೆ 34751 ರೂಪಾಯಿ ಎರಡನೇ ಮಗುವಿಗೆ 40918 ರೂಪಾಯಿ ನೀಡಲಾಗುತ್ತಿತ್ತು. ಆದರೆ ಇದನ್ನು 2008 ರ ನಂತರ ಪರಿಷ್ಕರಿಸಲಾಗಿದೆ.