ಹನಿ ನೀರಾವರಿ ಹಾಗೂ ತುಂತುರು ನೀರಾವರಿಗೆ ಶೇ. 90 ರಷ್ಟು ಸಹಾಯಧನ ನೀಡಲು ಅರ್ಜಿ ಆಹ್ವಾನ

Written by Ramlinganna

Updated on:

ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ರೈತರಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿಗೆ  ಶೇ. 90 ರಷ್ಟು ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಹೌದು, 2023-24ನೇ ಸಾಲಿಗೆ ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಮುಖ ಯೋಜನೆಗಳಾದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ಯೋಜನೆ, ಮಹಾತ್ಮಗಾಂಧಿು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯೋಜನೆ  ಹಾಗೂ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದ್ದು, ಹಾಸನ ಜಿಲ್ಲೆಯ  ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಂಗಾಂಶ ಕೃಷಿ ಆಲೂಗಡ್ಡೆ ಸಸಿಗಳ ತಾಂತ್ರಿಕತೆ ಕಾರ್ಯಕ್ರಮದಡಿ ಅಂಗಾಂಶ ಕೃಷಿ ಆಲೂಗಡ್ಡೆ ಸಸಿಗಳ ಬಿತ್ತನೆಗೆ ಒಂದು ಎಕರೆ ಪ್ರದೇಶ ವಿಸ್ತರಣೆಗೆ ರೂಪಾಯಿ 30000 ಗಳ ಸಹಾಯಧನ ಲಭ್ಯವಿದೆ. ಅಂಗಾಂಶ ಸಸಿಗಳನ್ನು ಉತ್ಪಾದಿಸುವ ನರ್ಸರಿಗಳು ಹಾಗೂ ಎಆರ್.ಸಿಯಲ್ಲಿ ಉತ್ಪಾದಿಸಿದ ಆಲೂಗಡ್ಡೆ ಬಿತ್ತನೆ ಬೀಜವನ್ನು ಶೀತಲ ಗೃಹದಲ್ಲಿ ಶೇಖರಣೆ ಮಾಡಲು ಸಹಾಯಧನ ಲಭ್ಯವಿದೆ.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಳ್ಳುವ ಪ್ರತಿ ಫಲಾನುಭವಿಗೆ ಗರಿಷ್ಠ 5 ಹೆಕ್ಟೇರ್ ಗಳಿಗೆ, ತರಕಾರಿ ಹಾಗೂ ವಾಣಿಜ್ಯ ಬೆಳೆಗಳಿಗೆ ಗರಿಷ್ಠ 2 ಹೆಕ್ಟೇರ್ ಪ್ರದೇಶದವರಿಗೆ ಸಹಾಯಧನ ನೀಡಲು ಅವಕಾಶವಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೇ. 90 ರಷ್ಟು ಹಾಗೂ ಇತರೆ ರೈತರಿಗೆ ಶೇ. 75 ರಷ್ಟು ಸಹಾಯಧನ ನೀಡಲಾಗುವುದು.

ಇದನ್ನೂ ಓದಿ ಬೆಳೆ ವಿಮೆ ಪರಿಹಾರ ಬಿಡುಗಡೆ: ನಿಮಗೂ ಜಮೆಯಾಗಿದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ

ಅರ್ಜಿ ಸಲ್ಲಿಸಲು ಅಕ್ಟೋಬರ್ 19 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ತೋಟಗಾರಿಕೆ ಅಧಿಕಾರಿ ಕಸಬಾಹಾಗೂ ಸಾಲಗಾಮೆ ಹೋಬಳಿ 9481364989, ಸಹಾಯಕ ತೋಟಗಾರಿಕೆ ಅಧಿಕಾರಿದುದ್ದ 9844340103, ಸಹಾಯಕ ತೋಟಗಾರಿಕೆ ಅಧಿಕಾರಿ,ಶಾಂತ್ರಿ ಗ್ರಾಮ 7019816492, ಸಹಾಯಕ ತೋಟಗಾರಿಕೆ ಅಧಿಕಾರಿಕ ಕಟ್ಟಾಯ 9449908205 ಗೆ ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹನಿ ನೀರಾವರಿ ಸಹಾಯಧನಕ್ಕೆ ಅರ್ಜಿ ಆಹ್ವಾನ

ಗದಗ ಜಿಲ್ಲೆಯ ನೀರಾವರಿ ಸೌಲಭ್ಯವುಳ್ಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಗೂ ಸಾಮಾನ್ಯ ವರ್ಗದ ತೋಟಗಾರಿಕೆ ಬೆಳೆ ಬೆಳೆಯುವ ಹಾಗೂ ಆಸಕ್ತಿಯಿರುವ ರೈತರ ಜಮೀನಿಗೆ ಹನಿ ನೀರಾವರಿ ಅಳವಡಿಕೆಗೆ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದವರಿಗೆ ಮೊದಲ ಎರಡು ಹೆಕ್ಟೇರ್ ಪ್ರದೇಶದವರಿಗೆ ಶೇ. 90 ರಷ್ಟು, ಎರಡು ಹೆಕ್ಟೇರ್ ಮೇಲ್ಪಟ್ಟು ಮೂರು ಹೆಕ್ಟೇರ್ ವರೆಗೆ ಶೇ.45 ರಷ್ಟು ಸಾಮಾನ್ಯ ರೈತರಿಗೆ ಮೊದಲ  ಎರಡು ಹೆಕ್ಟೇರ್ ಪ್ರದೇಶದವರಿಗೆ ಶೇ. 75 ರಷ್ಟು ಹೆಕ್ಟೇರ್ ಮೇಲ್ಪಟ್ಟು ಮೂರು ಹೆಕ್ಟೇರ್ ವರೆಗೆ ಶೇ. 45 ರಷ್ಟು ಸಹಾಯಧನಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟತಾಲೂಕು ತೋಟಗಾರಿಕೆ ಅಧಿಕಾರಿಗಳನ್ನು ಹಾಗೂ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ತೋಟಗಾರಿಕೆ ಇಲಾಖೆಯ ವತಿಯಿಂದ ವಿವಿಧ ಯೋಜನೆಗಳಾದ ಮಹಾತ್ಮ ಗಾಂಧಿ ರಾಷ್ಟ್ರೀಯ  ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಕೃಷಿ ಸಿಂಚಾಯಿ ಯೋಜನೆ, ಹನಿ ನೀರಾವರಿ ಯೋಜನೆ, ರಾಷ್ಟ್ರೀಯ ತೋಟಗಾರಿಕೆ ಮಿಷನ್, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕೆ.ಎಂ. ರಮೇಶ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಹೊಸಪೇಟೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರಮೇಶ ಕೆ.ಎಂ. ಅವರ ಮೊಬೈಲ್ ಸಂಖ್ಯೆ 83102291867, ಹೋಬಳಿ ಮಟ್ಟದ ಅಧಿಕಾರಿಗಳಾದ ಹೊಸಪೇಟೆ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ದುರುಗೇಶ ಎ. ಅವರ ಮೊಬೈಲ್ ಸಂಖ್ಯೆ 9611227478, ಕಮಲಾಪುರದ ರೈತ ಸಂಪರ್ಕ ಕೇಂದ್ರದ ಸಹಾಯ ತೋಟಗಾರಿಕೆ ಅಧಿಕಾರಿ ವೀರೇಶ ಎಸ್.ಎಂ. ಅವರ ಮೊಬೈಲ್ ಸಂಖ್ಯೆ 8123465548, ಮರಿಯಮ್ಮನ ಹಳ್ಳಿಯ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ರಾಹೀಲ್ ಕೆ. ಅವರ ಮೊಬೈಲ್ ಸಂಖ್ಯೆ 8073719905 ಗೆ ಸಂಪರ್ಕಿಸಬಹುದು.

1 thought on “ಹನಿ ನೀರಾವರಿ ಹಾಗೂ ತುಂತುರು ನೀರಾವರಿಗೆ ಶೇ. 90 ರಷ್ಟು ಸಹಾಯಧನ ನೀಡಲು ಅರ್ಜಿ ಆಹ್ವಾನ”

Leave a comment