ಬೆಳೆ ವಿಮೆ ಪರಿಹಾರ ಬಿಡುಗಡೆ: ಮೊಬೈಲ್ ನಲ್ಲೇ ಚೆಕ್ ಮಾಡಿ

Written by Ramlinganna

Updated on:

Crop insurance amount release :  2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದ ರೈತರಿಗೆ ಬೆಳೆವಿಮೆ ಮಧ್ಯಂತರ ಪರಿಹಾರ ಬಿಡುಗಡೆ ಮಾಡಲಾಗಿದೆ.

ಹೌದು, 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆ ಉಂಟಾಗಿರುವ ಹಿನ್ನಲೆಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ಸೇರಿದಂತೆ ಹಾವೇರಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಶೇ. 25 ರಷ್ಟು ಬೆಳೆ ವಿಮೆ ಮಧ್ಯಂತರ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಶ್ರೀನಿವಾರ ಮಾನೆ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಳೆಯ ತೀವ್ರ ಕೊರತೆಯಿಂದ ಹಾನಗಲ್ ತಾಲೂಕಿನ ಪ್ರಮುಖ ಬೆಳೆ ಮಳೆ ಆಶ್ರಿತ ಗೋವಿನ ಜೋಳ ಸಂಪೂರ್ಣವಾಗಿ ನಾಶವಾಗಿದೆ. ಎರಡು, ಮೂರು ಬಾರಿ ಬಿತ್ತನೆ ಮಾಡಿದರೂ ಸಹ ಮಳೆ ಬಾರದೆ ಬೆಳೆ ನಾಶವಾಗಿ ರೈತ ಸಮೂಹ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ನಿರ್ವಹಣೆಗೆ ಸಾಕಷ್ಟು ಹಣ ವ್ಯಯ ಮಾಡಿ ತೀವ್ರ ತೊಂದರೆಗೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಬೆಳೆ ನಷ್ಟದ ಆಧಾರದ ಮೇಲೆ ಶೇ. 25 ರಷ್ಟು ಮಧ್ಯಂತರ ಪರಿಹರ ಬಿಡುಗಡೆ ಆದೇಶಿಸಿ ಸರ್ಕಾರ ರೈತರ ನೆರವಿಗೆ ಧಾವಿಸಿದೆ ಎಂದು ಶ್ರೀನಿವಾಸ ಮಾನೆ ತಿಳಿಸಿದ್ದಾರೆ.

ಹಾವೇರಿ ಜಿಲ್ಲೆಯ ಒಟ್ಟು 3 ಲಕ್ಷ 20 ಸಾವಿರ ರೈತರಿಗೆ ಅಂದಾಜು 150 ರಿಂದ 160 ಕೋಟಿ ಮಧ್ಯಂತರ ವಿಮೆ ಪರಿಹಾರ ಲಭಿಸಲಿದ್ದು, ಹಾನಗಲ್ ತಾಲೂಕಿಗೆ ಹೆಚ್ಚಿನ ಪ್ರಮಾಣದಲ್ಲಿ ಮಧ್ಯಂತರ ವಿಮೆ ಪರಿಹಾರ ದೊರಕುವ ವಿಶ್ವಾಸವಿದೆ ಎಂದು ಶ್ರೀನಿವಾಸ ಮಾನೆ ಅಭಿಪ್ರಾಯಪಟ್ಟಿದ್ದಾರೆ.

Crop insurance amount release  ನಿಮಗೂ ಜಮೆಯಾಗಿದೆಯೇ?  ಇಲ್ಲೇ ಚೆಕ್ ಮಾಡಿ

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರು ತಮಗೂ ಜಮೆಯಾಗಿದೆಯೋ ಇಲ್ಲವೋ ಇದರೊಂದಿಗೆ ನಿಮ್ಮ ಅರ್ಜಿಯ ಸ್ಟೇಟಸ್ ನ್ನು ಮೊಬೈಲ್ ನಲ್ಲೇಚೆಕ್ ಮಾಡಬಹುದು. ಹೌದು,  ಬೆಳೆ ವಿಮೆಯ ಅರ್ಜಿಯ ಸ್ಟೇಟಸ್ ಚೆಕ್ ಮಾಡಲು ಈ

https://samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಸಂರಕ್ಷಣೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಮುಂದೆ /Go ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಫಾರ್ಮರ್ಸ್ ಕೆಳಗಡೆ ಕೆಲವು ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ಕಾಣುವ check status ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ.

ಅಲ್ಲಿ ನೀವು ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ನಂತರ  ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ಇದನ್ನೂ ಓದಿ ನಿಮ್ಮ ಜಮೀನಿನ ಭೂ ಮಾಲಿಕರ ವಿವರ ಮೊಬೈಲ್ ನಲ್ಲೇ ಚೆಕ್ ಮಾಡಿ

ಅಲ್ಲಿ ಪ್ರೊಪೋಸಲ ಸಂಖ್ಯೆಸಂಖ್ಯೆ, ನಿಮ್ಮ ಮೊಬೈಲ್ ಸಂಖ್ಯೆಯ ಕೊನೆಯ ಮೂರು ಅಂಕಿಗಳು, ನಿಮ್ಮ ಹೆಸರು ಕಾಣಿಸುತ್ತದೆ. ಇದರೊಂದಿಗೆ ನಿಮ್ಮ ಅರ್ಜಿಯ ಸ್ಟೇಟಸ್ ಏನಿದೆ? ನಿಮ್ಮ ಅರ್ಜಿ ವಿಮಾ ಕಂಪನಿಯಿಂದ ಸ್ವೀಕೃತವಾಗಿದೆಯೋ ಇಲ್ಲವೋ ಎಂಬುದು ಕಾಣಿಸುತ್ತದೆ.  ನಂತರ ಅಲ್ಲಿ ಕಾಣುವ ಸೆಲೆಕ್ಟ್ ಮೇಲೆ ಕ್ಲಿಕ್ಮಾಡಬೇಕು.

ಆಗ ನಿಮ್ಮ ಅರ್ಜಿ ಯಾವಾಗ ವಿಮಾ ಕಂಪನಿಯಿಂದ ಸ್ವೀಕೃತವಾಗಿದೆ ಎಂಬುದು ಕಾಣಿಸುತ್ತದೆ.  ಅಲ್ಲಿ ನೀವು  View Details ಮೇಲೆ ಕ್ಲಿಕ್ ಮಾಡಿದರೆ ಯಾವ ಬೆಳೆಗೆ ವಿಮೆ ಮಾಡಿಸಿದ್ದೀರಿ? ನೀವು ಬೆಳೆ ವಿಮೆ ಹಣ ಎಷ್ಟು ಪಾವತಿಸಿದ್ದೀರಿ? ನಿಮಗೆ ಬೆಳೆ ವಿಮೆ ಹಣ ಎಷ್ಟು ಜಮೆಯಾಗಬಹುದು ಸೇರಿದಂತೆ ಇತರ ಮಾಹಿತಿಗಳು ಸಿಗುತ್ತವೆ.

Leave a Comment