ಹಿಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ ಮಾಡಿಸಲು ಅರ್ಜಿ ಆಹ್ವಾನ

Written by Ramlinganna

Updated on:

Applications invited for rabi crop ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ 2022-23ನೇ ಸಾಲಿನ ಹಿಂಗಾರು  ಹಾಗೂ ಬೇಸಿಗೆ ಹಂಗಾಮಿನ ಬೆಳೆ ವಿಮೆ ನೋಂದಾಯಿಸಲು ಅರ್ಜಿ ಆಹ್ವಾನಿಸಲಾಗಿದೆ.

ಹೌದು, ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗೆ ರೈತರು ಬೆಳೆಗಳಿಗೆ ವಿಮೆ ಮಾಡಿಸಿ ಮುಂದಾಗುವ ಬೆಳೆ ನಷ್ಟ ಪರಿಹಾರ ಪಡೆಯಬಹುದು. ಬೆಳೆ ವಿಮೆ ನೋಂದಾಯಿಸಲು ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ತಮ್ಮ ಬೆಳೆಗಳಿಗೆ ಬ್ಯಾಂಕುಗಳಲ್ಲಿ ವಿಮೆ ಮಾಡಿಸಬಹುದು.

ಹಿಂಗಾರು ಹಂಗಾಮಿಗೆ ಜೋಳ (ನೀರಾವರಿ), ಕಡಲೆ (ನೀರಾವರಿ, ಮಳೆ ಆಶ್ರಿತ) ಹಾಗೂ ಬೇಸಿಗೆ ಹಂಗಾಮಿನ ನೆಲಗಡಲೆ (ಶೇಂಗಾ) ನೀರಾವರಿ, ಭತ್ತ (ನೀರಾವರಿ), ಮುಸುಕಿನ ಜೋಳ (ನೀರಾವರಿ), ಜೋಳ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ಸೂರ್ಯಕಾಂತಿ (ನೀರಾವರಿ ಮಳೆ ಆಶ್ರಿತ), ಕುಸುಮೆ (ಮಳೆ ಆಶ್ರಿತ), ಈರುಳ್ಳಿ (ನೀರಾವರಿ), ಈರುಳ್ಳಿ (ನೀರಾವರಿ), ಗೋಧಿ,ಬೆಳೆಗಳಿಗೆ ವಿಮೆ ಮಾಡಿಸಲು ಅರ್ಜಿ ಆಹ್ವಾನಿಸಲಾಗಿದೆ.

Applications invited for rabi crop ಬೆಳೆ ವಿಮೆಗೆ ಕೊನೆಯ ದಿನಾಂಕ ಚೆಕ್ ಮಾಡುವುದು ಹೇಗೆ?

ರೈತರು ಬೆಳೆ ವಿಮೆ ಮಾಡಸಲು ಯಾವ ಬೆಳೆಗೆ ಕೊನೆಯ ದಿನಾಂಕ ಯಾವುದು ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ರೈತರು ಈ ಲಿಂಕ್ ಮೇಲೆ

https://www.samrakshane.karnataka.gov.in/PublicView/FindCutOff.aspx

ಕ್ಲಿಕ್ ಮಾಡಬೇಕು, ಆಗ ರೈತರು ಯಾವ ಜಿಲ್ಲೆಗೆ ಸಂಬಂಧಿಸಿದ್ದಾರೋ ಆ ಜಿಲ್ಲೆ ಆಯ್ಕೆ ಮಾಡಿಕೊಂಡರೆ ಸಾಕು, ಅಲ್ಲಿ ಹಿಂಗಾರು ಬೆಳೆಗಳ ಲಿಸ್ಟ್ ಓಪನ್ ಆಗುತ್ತದೆ. ಅದರ ಮುಂದುಗಡೆ ಬೆಳೆ ವಿಮೆ ಮಾಡಿಸಲು ಕೊನೆಯ ದಿನಾಂಕ ಯಾವುದು? ಹಾಗೂ ಬೆಳೆ ವಿಮೆ ಮಾಡಿಸಲು ಇನ್ನೂ ಎಷ್ಟು ದಿನ ಬಾಕಿಯಿದೆ ಎಂಬುದನ್ನು ಚೆಕ್ ಮಾಡಬಹುದು.

ಹಿಂಗಾರು ಬೆಳೆಗಳಿಗೆ ಯಾವ ಬೆಳೆಗೆ  ವಿಮೆ ಎಷ್ಟು ಕಟ್ಟಬೇಕು? ಮೊಬೈಲ್ ನಲ್ಲೇ ಚೆಕ್ ಮಾಡಿ

ಹಿಂಗಾರು ಬೆಳೆಗಳಿಗೆ ಯಾವ ಬೆಳೆಗೆ ಎಷ್ಟು ವಿಮೆ ಹಣ ಕಟ್ಟಬೇಕೆಂಬುದನ್ನು ಚೆಕ್ ಮಾಡಲು ರೈತರು ಈ

https://www.samrakshane.karnataka.gov.in/Premium/Premium_Chart.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ  ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು, ಹೋಬಳಿ ಗ್ರಾಮ ಆಯ್ಕೆ ಮಾಡಿಕೊಂಡನಂತರ  Crop ಮುಂದುಗಡೆನೀವು ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬ ಲಿಸ್ಟ್ ಇರುತ್ತದೆ. ಅದರಲ್ಲಿ ಯಾವ ಬೆಳೆಗೆ ವಿಮೆ ಮಾಡಿಸಬೇಕೆಂದುಕೊಂಡಿದ್ದೀರೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು.  ಎಕರೆ ನಮೂದಿಸಬೇಕು. ಇದಾದರ ಮೇಲೆ ಗುಂಟೆಯಲ್ಲಿ ಜಮೀನಿದ್ದರೆ ಗುಂಟೆ ನಮೂದಿಸಿದ ನಂತರ Show Premium ಮೇಲೆ ಕ್ಲಿಕ್ ಮಾಡಬೇಕು.  ಆಗ ನಿಮಗೆ ಎಷ್ಟು ಬೆಳೆ ವಿಮೆ ಹಣ ಜಮೆಯಾಗುತ್ತದೆ. ಒಟ್ಟು ಪ್ರಿಮಿಯಂ ಎಷ್ಟು ಕಟ್ಟಬೇಕು. ರೈತರೆಷ್ಟು ಬೆಳೆ ವಿಮೆ ಹಣ ಪಾವತಿಸಬೇಕು ಎಂಬ ಪಟ್ಟಿ ಕಾಣುತ್ತದೆ.

ಉದಾಹರಣಗೆ  ಕಡಲೆ  ಬೆಳೆ ಒಂದು ಎಕರೆಗೆ ರೈತರು ಕೇವಲ 176 ರೂಪಾಯಿ ಪಾತವಿಸಬೇಕು. ಕೇಂದ್ರ ಸರ್ಕಾರವು 718 ರೂಪಾಯಿ, ರಾಜ್ಯ ಸರ್ಕಾರವು 718 ರೂಪಾಯಿ ಪಾವತಿಸುತ್ತದೆ. ಒಟ್ಟು 1613 ರೂಪಾಯಿ ಕಡಲೆ ಬೆಳೆ ವಿಮೆ ಪಾವತಿಸಬೇಕು. ಮುಂದೆ ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾಳಾದರೆ ರೈತರಿಗೆ ಸುಮಾರು 11700 ರೂಪಾಯಿಯವರೆಗೆ ಬೆಳೆ ವಿಮೆ ಪರಿಹಾರ ಹಣ ಜಮೆಯಾಗುತ್ತದೆ.

ಬೆಳೆ ವಿಮೆ ಎಲ್ಲಿ ಪಾವತಿಸಬೇಕು?

ರೈತರು ಬೆಳೆ ವಿಮೆಯ ಹಣವನ್ನು ಯಾವ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದಾರೋ ಆ ಬ್ಯಾಂಕಿನಲ್ಲಿ ಪಾವತಿಸಬಹುದು. ಅಥವಾ ಹತ್ತಿರದ ಸಿ.ಎಸ್.ಸಿ ಕೇಂದ್ರಗಳಲ್ಲಿ ಪಾವತಿಸಬಹುದು. ಅಥವಾ ಗ್ರಾಮ ಒನ್, ಕೇಂದ್ರಗಳಲ್ಲಿಯೂ ಪಾವತಿಸಬಹುದು.

ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು.

Leave a Comment