ಈ ಎಲ್ಲಾ ಮಹಿಳೆಯರಿಗೆ Gruhalakshmi ಹಣ ಜಮೆ

Written by Ramlinganna

Updated on:

Gruhalakshmi Scheme ಯೋಜನೆಗೆ ನೋಂದಣಿ ಮಾಡಿಸಿದ ಎಲ್ಲಾ ಮಹಿಳೆಯರಿಗೆ ಇನ್ನೂ ಮುಂದೆ ಹಿಂದಿನ ಕಂತಿನ ಹಣದೊಂದಿಗೆ ಮುಂದಿನ ಕಂತಿನ ಹಣ ಮಹಿಳೆಯರಿಗೆ women will get gruhalakshmiimoney ಜಮೆಯಾಗಲಿದೆ.

ಹೌದು, ಗೃಹಲಕ್ಷ್ಮೀ ಯೋಜನೆಯ ತಾಂತ್ರಿಕ ಕಾರಣದಿಂದಾಗಿ ರಾಜ್ಯದ ಸಹಸ್ರಾರು ಮಹಿಳೆಯರು ಮಾಸಿಕ ತಲಾ 2 ಸಾವಿರ ರೂಪಾಯಿ ಪಡೆಯುವುದರಿಂದ ವಂಚಿತರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ (ಇಡಿಸಿಎಸ್) ನಿರ್ದೇಶನಾಲಯದೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸಲು ಮುಂದಾಗಿದೆ.

ಗೃಹಲಕ್ಷ್ಮೀ ಯೋಜನೆಗೆ ನೋಂದಣಿಯಾಗಿದ್ದು, ವಾಸ್ತವವಾಗಿ ತೆರಿಗೆ ಪಾವತಿಸದಿದ್ದರೂ ಐಟಿ (ಆದಾಯ ತೆರಿಗೆ) ಅಥವಾ ಜಿ.ಎಸ್.ಟಿ (ಸರಕು ಮತ್ತು ಸೇವಾ ತೆರಿಗೆ) ತೆರಿಗೆದಾರರೆಂದು ಡಿಬಿಟಿ ಪೋರ್ಟಲ್ ನಲ್ಲಿ ತೋರಿಸುತ್ತಿತ್ತು. ಇದರಿಂದಾಗಿ ಯೋಜನೆಗೆ ಫಲಾನುಭವಿಗಳಾಗಲು ನೋಂದಣಿ ಮಾಡಿಸಿ ಆರು ತಿಂಗಳಾಗಿದ್ದರೂ ಬಹಳಷ್ಟು ಮಹಿಳೆಯರು ಸರ್ಕಾರದಿಂದ ಹಣ ಪಡೆಯಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ (ಇಡಿಸಿಎಸ್) ನಿರ್ದೇಶನಾಲಯದೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯೋನ್ಮುಖವಾಗಿದೆ.

ಇದನ್ನೂ ಓದಿನೀವು ನಿಂತಿರುವ ಜಮೀನು ಯಾರ ಹೆಸರಿನಲ್ಲಿದೆ? ಇಲ್ಲೇ ಚೆಕ್ ಮಾಡಿ

ಆ ಪ್ರಕಾರ ಯೋಜನೆಗೆ ಅರ್ಹರಾಗಿರುವವರು ಸಂಬಂಧಪಟ್ಟ ಐಟಿ/ಜಿಎಸ್.ಟಿ ಪ್ರಾಧಿಕಾರಗಳಿಂದ ತಾವು ತೆರಿಗೆ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ದೃಢೀಕರಣ ಪತ್ರ ಪಡೆದು ಆಯಾ ತಾಲೂಕು ಶಿಶು ಅಭಿವೃದ್ಧಿ ಯೋಜನಾ ಕಚೇರಿ (ಸಿಡಿಪಿಒ)ಗೆ ಸಲ್ಲಿಸಬೇಕು. ಈ ಕಚೇರಿಯವರು ತಮ್ಮ ತಾಲೂಕಿಗೆ ಸಂಬಂಧಪಟ್ಟ ಅರ್ಹರ ದಾಖಲೆಗಳನ್ನು ಜಿಲ್ಲಾಉಪ ನಿರ್ದೇಶಕರ ಕಚೇರಿಗೆ ತಲುಪಿಸಬೇಕಿದೆ.

ಜಿಲ್ಲಾ ಉಪ ನಿರ್ದೇಶಕರು ತಮ್ಮ ಜಿಲ್ಲಾಯ ವ್ಯಾಪ್ತಿಯ ಪ್ರಕರಣಗಳ ಮಾಹಿತಿಯನ್ನು ಪ್ರಧಾನ ಕಚೇರಿಗೆ ಸಲ್ಲಿಸಬೇಕು. ಇಲ್ಲಿಂದ ಇ ಆಡಳಿತ ಇಲಾಖೆಯ ಕುಟುಂಬ ತಂತ್ರಾಂಶದ ವಿಭಾಗಕ್ಕೆ ಮಾಹಿತಿ ರವಾನೆಯಾಗಲಿದ್ದು, ಅರ್ಜಿಗಳ ಪುನರ್ ಪರಿಶೀಲನೆ ನಡೆಯಲಿದೆ. ಬಳಿಕೆ ಅರ್ಹರಿಗೆ ಯೋಜನೆಯ ಹಣ ಪಾವತಿಯಾಗಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

women will get gruhalakshmiimoney ಜಮೆಯಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದವರು ಈಗ ತಮ್ಮ ಬಳಿಯಲ್ಲಿರುವ ಮೊಬೈಲ್ ನಲ್ಲಿಯೇ ತಮಗೆ ಹಣ ಜಮೆಯಾಗಿದೆಯೋ ಇಲ್ಲವೋ ಎಂಬ ಸ್ಟೇಟಸ್ ಚೆಕ್ ಮಾಡಬಹುದು. ಹೌದು, ಅತೀ ಸರಳವಾಗಿ ಯಾರ ಸಹಾಯವೂ ಇಲ್ಲದೆ ಮಹಿಳೆಯರೇ ತಮ್ಮ ಬಳಿಯಿರು ಮೊಬೈಲ್ ನಲ್ಲಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

ಸ್ಟೇಟಸ್ ಚೆಕ್ ಮಾಡಲು ಈ

https://mahitikanaja.karnataka.gov.in/Gruhalakshmi/GuhalakshmiStatus?ServiceId=5630&Type=SP&DepartmentId=3136

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ Gruhalakshmi  ಯೋಜನೆಯ ಸ್ಟೇಟಸ್ ಚೆಕ್ ಮಾಡುವ ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವೂ ನಿಮ್ಮ ಬಳಿಯಿರುವ ರೇಶನ್ ಕಾರ್ಡ್ ನಂಬರ್ ಹಾಕಿದರೆ ಸಾಕು,  ನಂತರ Submit ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇದಾದ ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ  ಇಲ್ಲಿಯವರೆಗೆ ಎಷ್ಟು ಕಂತುಗಳು ಜಮೆಯಾಗಿದೆ? ಯಾವ ದಿನಾಂಕದಂದು ಯಾವ ಯಾವ ತಿಂಗಳು ಎಷ್ಟು ಹಣ ಜಮೆಯಾಗಿದೆ ಎಂಬ ಸಂಪೂರ್ಣ ಮಾಹಿತಿ ಕಾಣಿಸುತ್ತದೆ.

ಗೃಹಲಕ್ಷ್ಮೀ ಯೋಜನೆಗೆ ಈಗಾಗಲೇ ನೋಂದಣಿ ಮಾಡಿಸಿದ ಮಹಿಳೆಯರು ತಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು. ಏಕೆಂದರೆ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿದ ಮಹಿಳೆಯರ ಖಾತೆಗೆ ಹಣ ಜಮೆಯಾಗದೆ ಇರುವದರಿಂದ ನಿರಾಶೆಗೊಂಡಿದ್ದರು.ಈಗ ಅವರು ನಿರಾಳರಾಗಿದ್ದಾರೆ.ಮೇಲಿನ ಮಾಹಿತಿ ಹೇಗನಿಸಿತು? ಇದು ಉಪಯುಕ್ತವಾಗಿದೆಯೇ? ಒಂದು ವೇಳೆ ನಿಮಗೆ ಉಪಯುಕ್ತವಾಗಿದ್ದರೆ ಕೂಡಲೇ ಒಂದು ಕಾಮೆಂಟ್ ಮಾಡಿ ತಿಳಿಸಬಹುದು.

Leave a Comment