ಟ್ರ್ಯಾಕ್ಟರ್ ಖರೀದಿಗಾಗಿ ಸಹಾಯಧನ ನೀಡಲು ಅರ್ಜಿ ಆಹ್ವಾನ

Written by Ramlinganna

Published on:

Tractor purchase get subsidy : ತೋಟಗಾರಿಕೆಯಲ್ಲಿ ಯಾಂತ್ರಿಕರಣಕ್ಕಾಗಿ 20 ಹೆಚ್.ಪಿ ಸಾಮರ್ಥ್ಯದ ಒಳಗಿನ ಟ್ರ್ಯಾಕ್ಟರ್ ಖರೀದಿಗಾಗಿ ಸಹಾಯಧನ ನೀಡಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೌದು, ಬೆಳಗಾವಿ ಜಿಲ್ಲೆಯ ಅಥಣಿ ಹಾಗೂ ಹುಕ್ಕೇರಿ ತಾಲೂಕಿನಿಂದ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಜೇನು ಕೃಷಿ ಕಾರ್ಯಕ್ರಮದಡಿ ಜೇನು ಪೆಟ್ಟಿಗೆ ಹಾಗೂ ಜೇನು ಕುಟುಂಬ ಖರೀದಿಸಲು ಶೇ. 40 ರಷ್ಟು ಸಹಾಯಧನ ನೀಡಲಾಗುವುದು. ಆಸಕ್ತ ಎಲ್ಲಾ ವರ್ಗದ ರೈತರು ತಾಲೂಕಿನ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ತೋಟಗಾರಿಕೆ ಬೆಳೆಗಳಿಗೆ ಸಹಾಯ ಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಬಾಳೆ, ದ್ರಾಕ್ಷಿ, ದಾಳಿಂಬೆ, ಮಾವು, ಡ್ರ್ಯಾಗನ್ ಹಣ್ಣು, ಪೇರಲ, ಹೈಬ್ರಿಡ್ ತರಕಾರಿ ಬೆಳೆಗಳನ್ನು ಬೆಳೆಯಲು ಬೆಳೆಗಳ ಅನುಗುಣವಾಗಿ ಕನಿಷ್ಠ ಅರ್ಧ ಎಕರೆಯಿಂದ ಗರಿಷ್ಠ 2 ಹೆಕ್ಟೇರ್ ವರೆಗೆ ಶೇ. 40 ರಂತೆ ಸಹಾಯಧನವನ್ ಹಾಗೂ ನೀರಾವರಿ ವ್ಯವಸ್ಥೆಗಾಗಿ, ನೀರು ಸಂಗ್ರಹಣೆ ಮಾಡಲು 2250 ಘ.ಮೀ ಸಾಮರ್ಥ್ಯದ ವೈಯಕ್ತಿಕ ಕೃಷಿ ಹೊಂಡಕ್ಕೆ ಸಹಾಯಧನ ನೀಡಲಾಗುವುದು.

ಇದನ್ನೂ ಓದಿ ಬೈಕ್ ಖರೀದಿಗೆ ಶೇ. 60 ರಷ್ಟು ಸಹಾಯಧನ ನೀಡಲು ಅರ್ಜಿ ಆಹ್ವಾನ

ಸಂರಕ್ಷಿತ ಬೇಸಾಯ ಪದ್ಧತಿ ಅಳವಡಿಸಲು ಪಾಲಿಮನೆ ನಿರ್ಮಿಸಿಕೊಳ್ಳಲು ಪ್ಲಾಸ್ಟಿಕ್ ಹೊದಿಕೆಗಾಗಿ ಕಳೆ ಚಾಪೆ, ಪಕ್ಷಿ ಕೀಟ ನಿರೋಧಕ ಬಲೆ ಅಳವಡಿಸಿಕೊಳ್ಳಲು ಶೇ. 50 ರಂತೆ ಸಹಾಯಧನ ನೀಡಲಾಗುವುದು.

ತಾಳೆ ಬೆಳೆ ಯೋಜನೆಯಡಿ ಪ್ರದೇಶ ವಿಸ್ತರಣೆ ಕಾರ್ಯಕ್ರಮ, ನಿರ್ವಹಣೆ ಮತ್ತು ಅಂತರ ಬೆಳೆ ಕಾರ್ಯಕ್ರಮಗಳಿಗೆ ಸಹಾಯಧನ ಮತ್ತು ಕೇಂದ್ರ ಪುರಸ್ಕೃತ ಪ್ರಧಾನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಹನಿ ನೀರಾವರಿ ಘಟಕ್ಕೆ ಎಲ್ಲಾ ವರ್ಗದ ರೈತರಿಗೆ ಶೇ. 90 ರಷ್ಟು ಸಹಾಯಧನ ನೀಡಲಾಗುವುದು.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಲಘು ಪೋಷಕಾಂಶಗಳ ಮಿಶ್ರಣ ಜೈವಿಕ ಗೊಬ್ಬರ ಹಾಗೂ ನಿಯಂತ್ರಣಗಳು ಹಾಗೂ ಇತರೆ ಘಟಕಗಳಿಗೆ ಸಹಾಯಧನ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಕೃಷಿ ಯಾಂತ್ರೀಕರಣ ಉಪ ಅಭಿಯಾನ ಯೋಜನೆಯಡಿ ಅನುಮೋದಿತ ಸಂಸ್ಥೆಗಳಿಂದ ಖರೀದಿ ಮಾಡಿದ ಉಪಕರಣಗಳಿಗೆ ಸಹಾಯಧನ ಪಡೆಯಲು ಅವಕಾಶ ಒದಗಿಸಲಾಗಿದೆ.

ಆಸಕ್ತ ರೈತರು ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಅಥವಾ ತಾಲೂಕು ತೋಟಗಾರಿಕೆ ಕಚೇರಿಗೆ ಜೂನ್ 30 ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿ ಎಂದು ಅಥಣಿ ತಾಲೂಕು ತೋಟಗಾರಿಕೆ ಇಲಾಖೆಯ ಪ್ರಕಟಣೆ ತಿಳಿಸಿದೆ.

Tractor purchase get subsidy  ವಿವಿಧ ಯೋಜನೆಗಳಿಂದ ಅರ್ಜಿ ಆಹ್ವಾನ

ಹುಕ್ಕೇರಿ ತಾಲೂಕಿನ ತೋಟಗಾರಿಕೆ ಇಲಾಖೆಯಿಂದ 2026-27ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಿರುವ ವಿವಿಧ ಯೋಜನೆಗಳಿಗೆ ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ರಾಷ್ಟ್ರೀಯ ತೋಟಗಾರಿಕೆ ಮೀಷನ್ ಯೋಜನೆಯಡಿ ಹಣ್ಣು ಮತ್ತು ಹೈಬ್ರೀಡ್ ತರಕಾರಿ ಪ್ರದೇಶ ವಿಸ್ತರಣೆ, ಸಮಗ್ರ ಪೋಷಕಾಂಶ ನಿರ್ವಹಣೆ (ಎಸ್.ಸಿ, ಎಸ್.ಟಿ ರೈತರಿಗೆ ಮಾತ್ರ) ಸಂರಕ್ಷಿತ ಬೇಸಾಯ ಹಸಿರು ಮನೆ, ಪ್ಲಾಸ್ಟಿಕ್ ಹೊದಿಗೆ, ತರಕಾರಿ ಉತ್ಪಾದನೆ ಮತ್ತು ಎರೆಹುಳು ಗೊಬ್ಬರ ಘಟಕ ಎಸ್ಸಿ ರೈತರಿಗೆ ಮಾತ್ರ ಸಹಾಯಧನ ಪಡೆಯಲು ವಕಾಶವಿರುತ್ತದೆ.

ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ತಾಳೆ ಬೆಳೆ ಯೋಜನೆಯಡಿ ಪ್ರದೇಶ ವಿಸ್ತರಣೆ ಕಾರ್ಯಕ್ರಮಗಳಿಗೆ ಸಹಾಯಧನ ಪಡೆಯಲು ಅವಕಾಶವಿದೆ.

ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಪ್ರತಿ ಹನಿಗೆ ಅಧಿಕ ಬೆಳೆ ಯೋಜನೆಯಡಿ ಸಹಾಯಧನ ನೀಡಲು ಅವಕಾಶವಿದೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಲಘು ಪೋಷಕಾಂಶಗಳ ಮಿಶ್ರಣ, ಸೋಲಾರ್ ಪಂಪ್ ಸೆಟ್ ಸಹಾಯಧನ ಪಡೆದುಕೊಳ್ಳಲು ಅವಕಾಶ ಇರುತ್ತದೆ. ಕೃಷಿ ಯಾಂತ್ರೀಕರಣ ಉಪ ಅಭಿಯಾನ ಯೋಜನೆಯಡಿ ಅನುಮೋದಿತ ಸಂಸ್ಥೆಗಳಿಂದ ಖರೀದಿ ಮಾಡಿ ಉಪಕರಣಗಳಿಗೆ ಸಹಾಯಧನಕ್ಕೆ ಅವಕಾಶವಿದೆ.

ಆಸಕ್ತ ರೈತರು ದಾಖಲಾತಿಗಳನ್ನು ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಅಥವಾ ತಾಲೂಕು ತೋಟಗಾರಿಕೆ ಕಚೇರಿಗೆ ಭೇಟಿ ನೀಡಿ ಜೂನ್ 30 ರೊಳಗೆ ಅರ್ಜಿ ಸಲ್ಲಿಸುವಂತೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಆರ್. ಕಳ್ಳಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment