Bike purchase subsidy get : ಬೈಕ್ ಖರೀದಿ, ತ್ರಿಚಕ್ರ ವಾಹನ ಖರೀದಿಗೆ ಶೇ. 60 ರಷ್ಟು ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಮೀನುಗಾರಿಕೆ ಇಲಾಖೆಯ 2026-27ನೇ ಸಾಲಿಗೆ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಮತ್ಸ್ ಸಂಪದ ಯೋಜನೆಯಡಿ ಸಿಹಿ ನೀರಿನ ಬಯೋಫ್ಲಾಕ್ ಕೊಳ ನಿರ್ಮಾಣ, ಮಧ್ಯಮ ಆರ್.ಎ.ಎಸ್.ಎ ಘಟಕ ಸ್ಥಾಪನೆ, ಐಸಿ ಬಾಕ್ಸ್ ನೊಂದಿಗೆ ಮೋಟಾರ್ ಸೈಕಲ್, ಮೀನು ಮಾರಾಟಕ್ಕಾಗಿ ಇ ರಿಕ್ಷಾ ಒಳಗೊಂಡಂತೆ ಐಸ್ ಬಾಕ್ಸ್ ಹೊಂದಿರುವ ತ್ರಿಚಕ್ರ ವಾಹನ ಘಟಕಗಳ ಅನುಷ್ಠಾನಕ್ಕೆ ಆಸಕ್ತಿ ಹೊಂದಿರುವ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
Bike purchase subsidy get ಯಾರಿಗೆ ಎಷ್ಟು ಸಬ್ಸಿಡಿ ಸಿಗುವುದು ?
ಸದರಿ ಯೋಜನೆಗಳಡಿ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಘಟಕ ವೆಚ್ಚದ ಶೇ. 40 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳಾ ವರ್ಗದ ಫಲಾನುಭವಿಗಳಿಗೆ ಘಟಕ ವೆಚ್ಚದ ಶೇ. 60 ರಷ್ಟು ಸಹಾಯಧನ ನೀಡಲಾಗುವುದು.
ಆಸಕ್ತರು ಜೂನ್ 19 ರ ಒಳಗೆ ತಾಲೂಕು ಮಟ್ಟದ ಮೀನುಗಾರಿಕೆ ಸಹಾಯಕ ನಿರ್ದೇಶಕ ಕಚೇರಿಗಳಿಂದ ಅರ್ಜಿ ನಮೂನೆಯನ್ನು ಪಡೆದು ಎಲ್ಲಾ ಅಗತ್ಯ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ತಾಲೂಕು ಮಟ್ಟದ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದಾಗಿದೆ.
ಹಿಂದಿನ ಸಾಲಿನಲ್ಲಿ ಮೇಲ್ಕಂಡ ಘಟಕಗಳಿಗೆ ಈಗಾಗಲೇ ಇಲಾಖೆಗೆ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ಆಸಕ್ತಿ ಇದ್ದಲ್ಲಿ ಪುನಃ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ಮೈಸೂರು ಮೊಬೈಲ್ ನಂಬರ್ 94482 73093, ಟಿ. ನರಸಿಪುರ 91645 62927, ನಂಜನಗೂಡು 81237 47334, ಹಣಕಾಸು ಪಿರಿಯಾಪಟ್ಟಣ 63622 38792, ಕೆ.ಆರ್. ನಗರ, ಹೆಚ್.ಡಿ. ಕೋಟೆ 78290 28415 ಹಾಗೂ ಮೀನುಗಾರಿಕೆ ಜಿಲ್ಲಾ ಉಪ ನಿರ್ದೇಶಕ 84484 25462 ಸಂಪರ್ಕಿಸಬಹುದು.
ಕಿರು ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಪಂ ವತಿಯಿಂದ ಪಿಎಂ ಸ್ವ ನಿಧಿ ಯೋಜನೆಯ ಲೋಕ ಕಲ್ಯಾಣ ಮೇಳದಡಿ ಬೀದಿಬದಿ ವ್ಯಾಪಾರಿಗಳಿಗೆ ಕಿರು ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ : ರೈತರಿಗೆ ಗುಡ್ ನ್ಯೂಸ್ ನಿಮ್ಮ ಜಮೀನಿನ ಇ ಸ್ಕೇಚ್ ಮೊಬೈಲ್ ನಲ್ಲಿ ಹೀಗೆ ಪಡೆಯಿರಿ
ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆಯಡಿ ನಗರದ ಬೀದಿ ಬದಿ ವ್ಯಾಪಾರಿಗಳಿಗೆ ಕಿರು ಸಾಲ ಸೌಲಭ್ಯ ಹಾಗೂ ಹಾಗೂ ಸಾಮಾಜಿಕ ಭದ್ರತೆಗಳ ಯೋಜನೆಗಳನ್ನು ಕಲ್ಪಿಸುವುದಕ್ಕಾಗಿ ನಗರ ಮಟ್ಟದಲ್ಲಿ ಬ್ಯಾಂಕುಗಳ ಸಂಯೋಗದೊಂದಿಗೆ ಜೂನ್ 1 ರಿಂದ ಜೂನ್ 30 ರವರೆಗೆ ಲೋಕ ಕಲ್ಯಾಣ ಮೇಳಗಳನ್ನು ಆಯೋಜಿಸಲಾಗಿದೆ.
ಯಲಬುರ್ಗಾ ಪಟ್ಟಣದ ಬೀದಿ ಬದಿ ವ್ಯಾಪಾರಿಗಳಉ ಯಲಬುರ್ಗಾ ಪಪಂ ಕಾರ್ಯಾಲಯಕ್ಕೆ ಭೇಟಿ ನೀಡಿ ಪಿಎಂ ಸ್ವ ನಿಧಿ ಯೋಜನೆಯಡಿ 15 ಸಾವಿರ ರೂಪಾಯಿ, 25 ಸಾವಿರ ರೂಪಾಯಿ ಹಾಗೂ 50 ಸಾವಿರ ರೂಪಾಯಿ ಕಿರು ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ನಗರ ಸ್ಥಳೀಯ ಸಂಸ್ಥೆಯ ಡೇ ನಲ್ಮ್ ವಿಭಾಗ ಸಂಪರ್ಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಯಲಬುರ್ಗಾ ಪಪಂ ಡೇ ನಲ್ಮ್ ವಿಭಾಗದ ಸಿಬ್ಬಂದಿಯನ್ನು ಕಚೇರಿ ಅವಧಿಯಲ್ಲಿ ಸಂಪರ್ಕಿಸುವಂತೆ ಯಲಬುರ್ಗಾ ಪಪಂ ಮುಖ್ಯಾಧಿಕಾರಿ ನಾಗೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ವಾಹನ ಚಾಲನೆ ತರಬೇತಿಗೆ ನೋಂದಣಿ ಮಾಡಿ
ಎಸ್.ಸಿ, ಎಸ್.ಪಿ, ಟಿ.ಎಸ್ಪಿ ಯೋಜನೆಯಡಿ ಎಸ್ಸಿ ಎಸ್ಟಿ ಪಂಗಡ ಅರ್ಹ ನಿರುದ್ಯೋಗ ಯುವಕ ಯುವತಿಯರಿಗೆ ಉಚಿತ ವಸತಿ ಸಹಿತ 30 ದಿನಗಳ ಲಘು ಭಾರಿ ವಾಹನ ಚಾಲನೆ ತರಬೇತಿ ನೀಡಿ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಕಲಿಕಾ, ಖಾಯಂ ಚಾಲನಾ ಪರವಾನಗಿ ಪತ್ರ ಸಹ ನೀಡಲಾಗುತ್ತದೆ.
ಭಾರಿ ವಾಹನ ತರಬೇತಿಗೆ ಕನಿಷ್ಟ 20 ವರ್ಷ ಹಾಗೂ 40 ವರ್ಷ ಮೀರಿರಬಾರದು. ಜನ್ಮ ದಿನಾಂಕ ಹೊಂದಿದ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಝರಾಕ್ಸ್ ಪ್ರತಿ, ಲಘು ವಾಹನ ಚಾಲನಾ ಪರವಾನಗಿ ಪಡೆದು ಕನಿಷ್ಠ 1 ವರ್ಷ ಪೂರೈಸಿರಬೇಕು.ಆಧಾರ್ ಕಾರ್ಡ್ ಝರಕ್ಸ್ ಪ್ರತಿ, 5 ಪಾಸ್ಪೋರ್ಟ್ ಅಳತೆಯೆ ಫೋಟೋ ಹಾಗೂ ಜಾತಿ ಪ್ರಮಾಣ ಪ್ರತಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮ. 944925367 ಅಥವಾ 9663653500 ಗೆ ಸಂಪರ್ಕಿಸಲು ಕೋರಲಾಗಿದೆ.





