ಭಗತ್ ಸಿಂಗ್ ರನ್ನು 1 ದಿನ ಮೊದಲೇಕೆ ಗಲ್ಲಿಗೇರಿಸಲಾಯಿತು?

Written by By: janajagran

Updated on:

hang Bhagat Singh one day earlier? ಬ್ರಿಟೀಷರ ಕಪಿಮುಷ್ಟಿಯಿಂದ ಭಾರತ ದೇಶವನ್ನು ಮುಕ್ತಗೊಳಿಸಬೇಕೆಂದು ಪಣತೊಟ್ಟು ಬ್ರಿಟೀಷರನ್ನು ಎದೆ ನಡುಗಿಸಿದ ಕ್ರಾಂತಿಕಾರಿ, ಮಹಾನ್ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜಗುರು ಸುಖದೇವ ನೇಣುಗೇರಿಸಿದ ದಿನ ಮಾರ್ಚ್ 23. ಮಹಾನ್ ದೇಶಭಕ್ತರ ತ್ಯಾಗ ಬಲಿದಾನದ ಸ್ಮರಣೆಗೆ ಮಾರ್ಚ್ 23 ರಂದು ಭಾರತದಲ್ಲಿ ಬಲಿದಾನ ದಿವಸ್ ಎಂದು ಆಚರಿಸಲಾಗುತ್ತದೆ. 

hang Bhagat Singh one day earlier? ಒಂದು ದಿನ ಮೊದಲೇಕೆ  ಗಲ್ಲಿಗೇರಿಸಲಾಯಿತು? 

1931 ರ ಮಾರ್ಚ್ 24 ರಂದು ಅವರನ್ನು ನೇಣುಗೇರಿಸಬೇಕೆಂದು ತೀರ್ಮಾನಿಸಲಾಗಿತ್ತು. ಆದರೆ ಈ ಮೂವರಿಗೆ ವಿಧಿಸಿರುವ ಶಿಕ್ಷೆಯನ್ನು ರದ್ದು ಮಾಡಬೇಕೆಂದು ಲಾಹೋರ್ ಸೆಂಟ್ರಲ್ ಜೈಲಿನ ಎದುರು ಸುಮಾರು 25 ಸಾವಿರಕ್ಕೂ ಹೆಚ್ಚು ಜನ ಪ್ರತಿಭಟನೆ ಹಮ್ಮಿಕೊಂಡಿದನ್ನು ಅರಿತ ಬ್ರಿಟೀಷರು ಅದನ್ನು 11 ಗಂಟೆ ಹಿಂದೂಡಿ 1931ರ ಮಾರ್ಚ್ 23 ರಂದೇ ಸಾಯಂಕಾಲ 7.30ಕ್ಕೆ ಗಲ್ಲಿಗೇರಿಸಿದರು. ನಿಗದಿಪಡಿಸಿದ ವೇಳೆಗಿಂತ 11 ಗಂಟೆ ಮೊದಲೇ ಭಗತ್ ಈ ಮೂವರನ್ನು ಗಲ್ಲಿಗೇರಿಸಿ ಸತ್ಲೇಜ್ ನದಿಯ ದಡದಲ್ಲಿ ಜೈಲು ಅಧಿಕಾರಿಗಳೇ ರಹಸ್ಯವಾಗಿ ಅಂತ್ಯಕ್ರಿಯೆ ನೆರವೇರಿಸಿದರು.

ಈ ಮೂವರು ಒಟ್ಟೊಟ್ಟಿಗೆ ಇದ್ದು ಬ್ರಿಟೀಷರನ್ನು ಚಳ್ಳೆಹಣ್ಣು ತಿನಿಸುತ್ತಿದರು. ಬ್ರಿಟೀಷರ ವಿರುದ್ಧ ಹೋರಾಡುವುದೆಂದರೆ ದೊಡ್ಡ ಹುಚ್ಚು. ಜೀವದ ಎಳ್ಳಷ್ಟು ಭಯವಿಲ್ಲದೆ ಸ್ವಾತಂತ್ರ್ಯವೇ ತಮ್ಮ ಉಸಿರಾಗಿಸಿಕೊಂಡ ನಗುನಗುತ್ತಲೇ ನೇಣುಗಂಬವನ್ನು ಏರಿದರು.

ಭಗತ್ ಸಿಂಗ್, ರಾಜಗುರು, ಸುಖದೇವರಿಗೆ ಗಲ್ಲು ಶಿಕ್ಷೆ ಏಕಾಯಿತು ಗೊತ್ತೇ 

1928 ರಲ್ಲಿ ಸೈಮನ್ ಕಮಿಷನ್ ಭಾರತಕ್ಕೆ ಆಗಮಿಸಿತು. ಭಾರತದಾದ್ಯಂತ ತೀವ್ರ ವಿರೋಧ ವ್ಯಕ್ತವಾಯಿತು. ಲಾಲಾ ಲಜಪತ ರಾಯ್ ನೇತೃತ್ವದಲ್ಲಿ ಜನರು ‘ಸೈಮನ್ ಗೋ ಬ್ಯಾಕ್’ (ಸೈಮನ್ ಹಿಂದಿರುಗು) ಎಂದು ಪ್ರತಿಭಟನೆ ಮಾಡಿ ಬೀದಿಗಿಳಿದರು! ಪರಿಸ್ಥಿತಿಯನ್ನು ನಿಯಂತ್ರಿಸಲು ಆಂಗ್ಲ ಅಧಿಕಾರಿಗಳು ನೆರೆದವರ ಮೇಲೆ ಅಮಾನುಷ ಲಾಠಿ ಪ್ರಹಾರ ಮಾಡಿಸಿದರು. ಇದರಲ್ಲಿ ಲಾಲಾ ಲಜಪತ ರಾಯ್ ತಲೆಗೆ  ಲಾಠಿ ಏಟು ನೀಡಿದ್ದರಿಂದ ಲಾಲ್ ಲಜಪತರಾಯ ಅಸುನೀಗಿದರು. ಇದನ್ನು ಸಹಿಸದ ಕ್ರಾಂತಿಕಾರಿಗಳು, ಲಾಲಾಜಿ ಸಾವಿಗೆ ಕಾರಣನಾದ ಆಂಗ್ಲ ಅಧಿಕಾರಿ ಸ್ಕಾಟ್ ನನ್ನು ಕೊಲ್ಲುವ ನಿರ್ಧಾರ ಮಾಡಿದರು. ಅದರಂತೆ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಸೇರಿ ಸ್ಕಾಟ್ ನಿವಾಸದ ಹೊರಗೆ ಹೊಂಚು ಹಾಕಿದರು. ಆದರೆ ಸ್ಕಾಟ್ ಬದಲು ಸೌಂಡರ್ಸ್ ಎಂಬ ಇನ್ನೋರ್ವ  ಅಧಿಕಾರಿಯು ಭಗತ್ ಸಿಂಗ್ ಹಾರಿಸಿದ ಗುಂಡಿಗೆ ಬಲಿಯಾದನು. ಆಂಗ್ಲ ಅಧಿಕಾರಿಯನ್ನು ಕೊಂದ ಈ ಮೂವರನ್ನು ಹಿಡಿಯಲು ಬ್ರಿಟಿಷ್ ಸರಕಾರ ಶತಪ್ರಯತ್ನ ಮಾಡಿತು.  ಆರಕ್ಷಕರ ಕಣ್ಣು ತಪ್ಪಿಸಿ ಇವರೆಲ್ಲರೂ ಭೂಗತರಾಗುತ್ತಿದ್ದರು. ಈ ಮೂವರು ಬ್ರಿಟೀಷರಿಗೆ ದೊಡ್ಡ ತಲೆನೋವಾಗಿ ಕಾಡಿದರು.

ಇದನ್ನೂ ಓದಿ: 14ನೇ ವಯಸ್ಸಿಗೆ ಛಡಿಯೇಟು ತಿಂದ ಚಂದ್ರಶೇಖರ್ ಆಜಾದ್ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ

ಕೊನೆಗೆ ಈ ಮೂವರು ತಾವೇ ದೆಹಲಿಯ ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಎಸೆದು ಬ್ರಿಟಿಷ್ ಪೊಲೀಸರಿಗೆ ಶರಣಾದರು. ಆದರೆ ಬಾಂಬ್ ಎಸೆತದಿಂದ ಯಾವುದೇ ಸಾವುನೋವು ಆಗಿರಲಿಲ್ಲ. ಬ್ರಿಟಿಷರ ಗಮನ ಸೆಳೆದು ಸತ್ಯ ಹುಡುಗುವುದೇ ಇವರ ಉದ್ದೇಶವಾಗಿತ್ತು. ಹೀಗಾಗಿ ರಿವಾಲ್ವರ್ ಎಸೆದು, ತಪ್ಪಿಸಿಕೊಳ್ಳುವ ಪ್ರಯತ್ನ ಕೂಡ ಮಾಡದೆ ಇನ್ಕಿಲಾಬ್ ಜಿಂದಾಬಾದ್ ಎಂದು ಕೂಗುತ್ತಲೇ ಸಂತೋಷವಾಗಿ ಸೆರೆಯಾದರು. ನಂತರ ಅಸೆಂಬ್ಲಿಯಲ್ಲಿಯೇ ಇನ್ಕಿಲಾಬ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿ ಸಂತೋಷದಿಂದ ಸೆರೆಯಾದರು. ಇನ್ಕಿಲಾಬ್  ಜಿಂದಾಬಾದ್ (ಕ್ರಾಂತಿ ಚಿರಾಯುವಾಗಿಲಿ) ಎಂಬ ಘೋಷಣೆ ಹುಟ್ಟುಹಾಕಿದ್ದೇ ಭಗತ್ ಸಿಂಗ್,

ಶಾಹಿದ್ ದಿವಸ್ ಯಾವಾಗ ಆಚರಿಸುತ್ತಾರೆ. (Which day is Shahid Diwas?)

1931ರ ಮಾರ್ಚ್ 23ರಂದು ಲಾಹೋರ್ ನಲ್ಲಿ (ಪಾಕಿಸ್ತಾನ) ಭಗತ್ ಸಿಂಗ್, ಸುಖದೇವ್ ಥಾಪರ್ ಮತ್ತು  ರಾಜಗುರು ಅವರನ್ನು ಗಲ್ಲಿಗೇರಿಸಿದ ದಿನವನ್ನು ಶಹೀದ್ ದಿವಸ್ ಎಂದು ಆಚರಿಸುತ್ತಾರೆ.

Leave a Comment