Gold Purity ಇನ್ನೇನು ಮದುವೆಗಳ ಸೀಸನ್ ಬಂದೇ ಬಿಡ್ತು. ಬೆಳ್ಳಿ ಬಂಗಾರ ಖರೀದಿ ಮಾರ್ಚ್ ತಿಂಗಳಿಂದ ಜೋರಾಗಿರುತ್ತದೆ. ಆದರೆ ಬಂಗಾರ ಖರೀದಿ ಮಾಡುವ ಮುನ್ನ ಬಂಗಾರದ ಪ್ಯುರಿಟಿ ಬಗ್ಗೆ ತಿಳಿದುಕೊಳ್ಳಲೇಬೇಕು. ಬಂಗಾರದ ಪ್ಯೂರಿಟಿ ಎಂದರೇನು, ಬಂಗಾರ ಎಷ್ಟು ಕ್ಯಾರೇಟ್ ಇರಬೇಕು ಹಾಗೂ ಬಂಗಾರದ ಮೇಲೆ ಯಾವ ಚಿಹ್ನೆ ಇರಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
916 ಮಾರ್ಕ್ ಎಂದ ಮಾತ್ರಕ್ಕೆ ಅದು ಶುದ್ಧ ಬಂಗಾರವಾಗಿರುವುದಿಲ್ಲ. ಕಡಿಮೆ ಶುದ್ಧತೆಯ ಬಂಗಾರದ ಮೇಲೆ 916 ಚಿಹ್ನೆಯನ್ನು ಯಾರೂ ಬೇಕಾದರೂ ಸೀಲ್ ಮಾಡಬಹುದು. ಆದರೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಸ್ (ಬಿಐಎಸ್) ನವರು ಪರೀಕ್ಷೆ ಮಾಡಿ ಒತ್ತಿದ ತ್ರಿಕೋನ ಚಿಹ್ನೆಯನ್ನು ಗಮನಿಸಬೇಕು. ಅದರ ಪಕ್ಕದಲ್ಲೇ 916 ಮಾರ್ಕ್ ಇರುತ್ತದೆ.
Gold Purity ಏನಿದು 916 ಬಂಗಾರ?
24 ಕ್ಯಾರೇಟ್ ಬಂಗಾರವು ಶೇ. 99.9 ರಷ್ಟು ಶುದ್ಧತೆ ಹೊಂದಿರುತ್ತದೆ. ಆದರೆ 24 ಕ್ಯಾರೆಟ್ ಬಂಗಾರದಲ್ಲಿ ಚಿನ್ನಾಭರಣ ಮಾಡುವುದಕ್ಕಾಗುವುದಿಲ್ಲ. ಹಾಗಾಗಿ 22 ಕ್ಯಾರೇಟ್ ನಿಂದ ಚಿನ್ನಾಭರಣಗಳನ್ನು ಮಾಡಿರುತ್ತಾರೆ. ಅದು 916 ಮಾರ್ಕ್ ಹೊಂದಿರುತ್ತದೆ. ಅಂದರೆ 91.6 ರಷ್ಟು ಪ್ಯೂರಿಟಿ ಇರುತ್ತದೆ. ಉಳಿದ 8.4 ರಷ್ಟು ಬೆಳ್ಳಿ ಅಥವಾ ತಾಮ್ರ ಮಿಶ್ರಣ ಮಾಡಿರುತ್ತಾರೆ. 22 ಕ್ಯಾರೇಟ್ ಬಂಗಾರದ ಚಿನ್ನವನ್ನು ಕರಗಿಸಿದಾಗ ಅದರಲ್ಲಿ ಶೇ. 91.6 ರಷ್ಟು ಶುದ್ಧತೆ ಇರುತ್ತದೆ. ಹಾಗಾಗಿ ಬಂಗಾರ ಖರೀದಿ ಮಾಡುವ ಮುನ್ನ ಎಷ್ಟು ಕ್ಯಾರೇಟ್ ಹೊಂದಿದೆ ಎಂಬುದನ್ನು ಚಿನ್ನದ ಅಂಗಡಿಯವರಿಂದ ಕೇಳಬೇಕು. 916 ಮಾರ್ಕ್ ಹಾಗೂ ಹಾಲ್ ಮಾರ್ಕ್ ಇದೆಯೇ ಎಂಬುದನ್ನು ಪರಿಶೀಲಿಸಬೇಕು.
ಕೆಲವು ಚಿನ್ನದ ಅಂಗಡಿಗಳಲ್ಲಿ ಬಂಗಾರದ ಪ್ಯೂರಿಟಿ ಚೆಕ್ ಮಾಡಲು ಬಂಗಾರದ ಪ್ಯೂರಿಟಿ ಚೆಕ್ ಮಾಡುವ ಯಂತ್ರ ಇಟ್ಟಿರುತ್ತಾರೆ. ಅದರಲ್ಲಿ 916 ಪ್ಯೂರಿಟಿ ಚೆಕ್ ಮಾಡಲಾಗುತ್ತದೆ. ನಿಮ್ಮ ಬಂಗಾರದ ಚಿನ್ನಾಭರಣಗಳನ್ನು ಬಂಗಾರ ಶುದ್ಧತೆಯ ಪರೀಕ್ಷೆ ಮಾಡಿಸಿಟ್ಟುಕೊಳ್ಳಬಹುದು.
18 ಕ್ಯಾರೇಟ್ ಪ್ಯೂರಿಟಿನಲ್ಲಿಯೂ ಚಿನ್ನಾಭರಣಗಳನ್ನು ತಯಾರಿಸುತ್ತಾರೆ. ಇದರಲ್ಲಿ ಶೇ. 75 ರಷ್ಟು ಪ್ಯೂರಿಟಿ ಬಂಗಾರವಿರುತ್ತದೆ. ಇದಕ್ಕೆ 750 ಹಾಲ್ಮಾರ್ಕ್ ಗುರುತು ಇರುತ್ತದೆ. ಅದೇ ರೀತಿ 14 ಕ್ಯಾರೇಟ್ ಬಂಗಾರದಲ್ಲಿ 58.5 ಬಂಗಾರದ ಪ್ಯೂರಿಟಿ ಇರುತ್ತದೆ. ಇದರೊಂದಿಗೆ 585 ಹಾಲ್ಮಾರ್ಕ್ ಇರುತ್ತದೆ. ಬಂಗಾರ ಖರೀದಿ ಮಾಡುವ ಮುನ್ನ ಇದನ್ನೆಲ್ಲಾ ಪರಿಶೀಲಿಸುವುದು ಅತೀ ಮಹತ್ವದ್ದಾಗಿರುತ್ತದೆ.
ಇದನ್ನೂ ಓದಿ: ಮೊಬೈಲ್ ನಲ್ಲೇ ಖಾತಾ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ
ಯಾವುದೇ ಚಿನ್ನಾಭರಣಗಳಲ್ಲಿ ಬಿಐಎಸ್ ಮಾರ್ಕ್, ಎಷ್ಟು ಕ್ಯಾರೆಟ್ ಅಂದರೆ ಪ್ಯೂರಿಟಿ, ಹಾಲ್ಮಾರ್ಕ್ ಗುರುತು, ಬಂಗಾರ ಅಂಗಡಿಯ ಹೆಸರು ಹಾಗೂ ಯಾವ ವರ್ಷ ಬಂಗಾರ ತಯಾರಿಸಲಾಗಿದೆ ಎಂಬ ಮಾಹಿತಿಯನ್ನೊಳಗೊಂಡಿರುತ್ತದೆ. ಗ್ರಾಹಕರು ಚಿನ್ನ ಖರೀದಿ ಮಾಡುವಾಗ ಹಾಲ್ ಮಾರ್ಕ್ ಚಿಹ್ನೆಯನ್ನು ಸರಿಯಾಗಿ ಗಮನಿಸಿ ಖರೀದಿ ಮಾಡುವುದನ್ನು ಮರೆಯಬಾರದು. ಬಹಳಷ್ಟು ಜನರು ಚಿನ್ನ ಖರೀದಿ ಮಾಡುವಾಗ ಬಂಗಾರ ಅಂಗಡಿಯ ಮಾಲಿಕ ಹೇಳಿದನ್ನೇಲ್ಲಾ ನಂಬಿ ಖರೀದಿ ಮಾಡುತ್ತಾರೆ. ಆದರೆ ವಿಶ್ವಾಸದ ಮೇಲೆ ಪರಿಶೀಲನೆ ಮಾಡುವುದಿಲ್ಲ. ಅದೇ ಬಂಗಾರವನ್ನು ಮಾರಾಟ ಮಾಡುವಾಗ ಬಂಗಾರದ ಪ್ಯೂರಿಟಿ ಚೆಕ್ ಮಾಡಿ ಅಂಗಡಿಯವರು ಖರೀದಿಸುತ್ತಾರೆ. ಆದರೆ ನಾವು ಖರೀದಿಸುವಾಗಿ ಇದನ್ನೆಲ್ಲಾ ಪರಿಶೀಲಿಸುವುದಿಲ್ಲ. ಬಂಗಾರದ ತೂಕ, ಹಾಲ್ ಮಾರ್ಕ್, ಪ್ಯೂರಿಟಿ ಬಗ್ಗೆ ತಪ್ಪದೆ ಪರಿಶೀಲಿಸಿ ಖರೀದಿ ಮಾಡುವುದು ಒಳ್ಳೆಯದು.
Gold Purity ಏನಿದು ಹಾಲ್ ಮಾರ್ಕ್?
ಚಿನ್ನಾಭರಣಗಳ ಸುರಕ್ಷತೆ ಹಾಗೂ ಶುದ್ಧತೆಯನ್ನು ಹೇಳುವುದು ಹಾಲ್ ಮಾರ್ಕ್. ಇದು ಗುಣಮಟ್ಟದ ತಿಳಿವಳಿಕೆ, ಯಾವ ವರ್ಷದಲ್ಲಿ ಆಭರಣ ತಯಾರಾಗಿದೆ. ಆಭರಣ ತಯಾರಕರ ಮುದ್ರೆ, ತ್ರಿಕೋನಾಕಾರದ ಬಿಐಎಸ್ ಲೋಗೋ ಇರುತ್ತದೆ.
ರಸೀದಿ ಪಡೆದುಕೊಳ್ಳಿ
ಚಿನ್ನ ಖರೀದಿ ಮಾಡಿದ ನಂತರ ರಶೀದಿ ಪಡೆದುಕೊಳ್ಳುವುದನ್ನು ಮರೆಯಬೇಡಿ. ಬಿಲ್ ನಲ್ಲಿ ಎಷ್ಟು ಕ್ಯಾರೇಟ್ ಬಂಗಾರವಿದೆ ಎಂಬುದನ್ನು ಬರೆಯಿಸಿಕೊಳ್ಳಿ. ಅಷ್ಟೇ ಅಲ್ಲ, ಆ ಬಿಲ್ ನ್ನು ಜೋಪಾನವಾಗಿ ಇಟ್ಟುಕೊಳ್ಳುವುದನ್ನು ಮರೆಯಬೇಡಿ. ಒಂದು ವೇಳೆ ನೀವು ಬಂಗಾರ ಮಾರಲು ಹೋದರೆ ರಸೀದಿ ಮುಖ್ಯವಾಗಿರುತ್ತದೆ. ಖರೀದಿ ಮಾಡಿದಾಗ ಎಷ್ಟು ತೂಕ ಹಾಗೂ ಪ್ಯೂರಿಟಿ ಇತ್ತು ಎಂಬ ಮಾಹಿತಿ ನಿಮಗೆ ಸಿಗುತ್ತದೆ.