ಪಹಣಿ, ಆಧಾರ್ ಕಾರ್ಡ್, ವೋಟರ್ ಕಾರ್ಡ್ ನಂತೆ ಈಗ ರೈತರು ಜಮೀನಿನ ಖಾತಾ ಸಹ ಮೊಬೈಲ್ ನಲ್ಲೆ ಡೌನ್ಲೋಡ್ ಮಾಡಿಕೊಳ್ಳಬಹುದು.
ರೈತರಿಗೆ ಪಹಣಿಯ ನಂಬರ್ ಗೊತ್ತಿರುತ್ತದೆ. ಆದರೆ ಖಾತಾ ಸಂಖ್ಯೆ ಬಹುತೇಕ ರೈತರಿಗೆ ಗೊತ್ತಿರುವುದಿಲ್ಲ. ಖಾತಾ ಅಥವಾ ಪಟ್ಟಾ ಎಂದು ಕರೆಯಲ್ಪಡುವ ಖಾತೆಯ ದಾಖಲಾತಿ ಬಹಳಷ್ಟು ರೈತರಲ್ಲಿ ಇರುವುದಿಲ್ಲ. ಹಾಗಾಗಿ ರೈತರು ಈಗ ಖಾತೆಯ ಪ್ರತಿ ಪಡೆಯಲು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಖಾತಾ ಡೌನ್ಲೋಡ್ ಮಾಡಿಕೊಳ್ಳಬಹುದು. ಖಾತೆಯ ನಂಬರ್ ಸಹ ಮೊಬೈಲ್ ನಲ್ಲಿಯೇ ಪರಿಶೀಲಿಸಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ.

ಪಹಣಿಯಂತೆ ಖಾತೆಯಲ್ಲಿಯೂ ಸಹ ಸರ್ವೆ ನಂಬರ್, ರೈತರ ಹೆಸರು, ಜಮೀನಿನ ವಿಸ್ತೀರ್ಣ, ಆಕಾರ, ಕರ ಅಂದರೆ ಟ್ಯಾಕ್ಸ್ ಎಷ್ಟು ಕಟ್ಟಬೇಕೆಂಬ ಸಂಪೂರ್ಣ ಮಾಹಿತಿ ಇರುತ್ತದೆ. ನಿಮ್ಮ ಜಮೀನಿನ ಖಾತೆ ಅಥವಾ ಪಟ್ಟಾ ಪುಸ್ತಕದ ಪ್ರತಿ ನೋಡಲು ಈ https://landrecords.karnataka.gov.in/service2/RTC.aspx

ಲಿಂಕ್ ಮೇಲೆ   ಲಾಂಗ್ ಪ್ರೆಸ್ ಮಾಡಿ ಓಪನ್ ಮೇಲೆ ಕ್ಲಿಕ್ ಮಾಡಬೇಕು. ಆದ ಒಂದು ಪೇಜ್ ಓಪನ್ ಆಗುತ್ತದೆ. ಮೇಲ್ಗಡೆ Khata Extract ಮೇಲೆ ಕ್ಲಿಕ್ ಮಾಡಬೇಕು. ನಿಮಗೆ ಖಾತಾ ನಂಬರ್ ಗೊತ್ತಿದ್ದರೆ search by kahta number ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಖಾತಾ ನಂಬರ್ ಬರೆದು ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಖಾತಾ ಪ್ರತಿ ಓಪನ್ ಆಗುತ್ತದೆ. ಇಲ್ಲಿ ನಿಮ್ಮ ಹೆಸರು, ಸರ್ವೆ ನಂಬರ್, ಹಿಸ್ಸಾನ ನಂಬರ್, ಜಮೀನಿನ ವಿಸ್ತೀರ್ಣ, ಆಕಾರ, ಟ್ಯಾಕ್ಸ್ ಮಾಹಿತಿ ಕಾಣುತ್ತದೆ.
ಒಂದು ವೇಳೆ ನಿಮಗೆ ಖಾತಾ ಸಂಖ್ಯೆ ಗೊತ್ತಿಲ್ಲದಿದ್ದರೆ search by survey number ಮೇಲೆ ಕ್ಲಿಕ್ ಮಾಡಬೇಕು. ನಂತರ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ನಮೂದಿಸಿ ಗೋ ಮೇಲೆ ಕ್ಲಿಕ್ ಮಾಡಬೇಕು. ನಂತರ select sumoc ನಲ್ಲಿ * ಸೆಲೆಕ್ಟ್ ಮಾಡಿದ ನಂತರ ಹಿಸ್ಸಾ ನಂಬರ್ ಸೆಲೆಕ್ಟ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: ಬೆಳೆ ಸಾಲಮನ್ನಾ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿದಾಗ ರೈತರ ಜಮೀನಿನ ಸರ್ವೆ ನಂಬರ್, ರೈತರ ಹೆಸರು, ವಿಸ್ತೀರ್ಣ ಹಾಗೂ ಖಾತೆ ನಂಬರ್ ಕಾಣಿಸುತ್ತದೆ. ಈ ಖಾತೆ ನಂಬರ್ ನೀವು ನೆನಪಿಟ್ಟುಕೊಳ್ಳಬೇಕು. ಅಥವಾ ಬರೆದಿಟ್ಟುಕೊಂಡ ನಂತರ ಈ

https://landrecords.karnataka.gov.in/service64/

ಲಿಂಕ್ ಮೇಲೆ ಲಾಂಗ್ಕ್ ಪ್ರೆಸ್ ಅಂದರೆ ಒತ್ತಿ ಇಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಿದ ನಂತರ ಓಪನ್ ಆಗುವ ಪೇಜ್ ನಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಹಾಗೂ ಖಾತಾ ನಂಬರ್ ನಮೂದಿಸಿದ ನಂತರ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಜಮೀನಿನ ಖಾತಾ ಪ್ರತಿ ಓಪನ್ ಆಗುತ್ತದೆ. ಅಲ್ಲಿ ಪ್ರಿವಿವ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಸರ್ವೆ ನಂಬರ್, ರೈತರ ಹೆಸರು, ಒಟ್ಟು ಜಮೀನಿನ ವಿಸ್ತೀರ್ಣ, ಆಕಾರ, ಒಟ್ಟು ಕರ ಎಂಬ ಮಾಹಿತಿ ಕಾಣುತ್ತದೆ. 15 ರೂಪಾಯಿ ಪಾವತಿಸಿ ಪ್ರಿಂಟ್ ಸಹ ತೆಗೆದಕೊಳ್ಳಬಹುದು.

Leave a Reply

Your email address will not be published. Required fields are marked *