ಸಾಲಮನ್ನಾ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಇಲ್ಲೇ ಚೆಕ್ ಮಾಡಿ

Written by Ramlinganna

Updated on:

check croploan waiver list ಬೆಳೆ ಸಾಲ ಮನ್ನಾ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಚೆಕ್ ಮಾಡಬಹುದು.  ಹೌದು,  ರೈತರು ಯಾರ ಸಹಾಯವೂ ಇಲ್ಲದೆ, ಬ್ಯಾಂಕಿಗೂ ಹೋಗದೆ ಮೊಬೈಲ್ ನಲ್ಲೇ ಚೆಕ್ ಮಾಡಬುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದಾಗ 2018 ರಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು 1 ಲಕ್ಷದವರೆಗೆ ಸಾಲಮನ್ನಾ ಯೋಜನೆ ಘೋಷಿಸಿದ್ದರು. ಆದರೆ ಈ ಸಾಲಮನ್ನಾ ಯೋಜನೆಯಿಂದ ಬಹಳಷ್ಟು ರೈತರಿಗೆ ಸಾಲಮನ್ನಾ ಭಾಗ್ಯ ಸಿಕ್ಕಿಲ್ಲ. ಸರ್ಕಾರದ ವಿಧಿಸಿದ್ದ ಷರತ್ತುಗಳಿಂದಾಗಿ ಕೆಲವು ರೈತರ ಸಾಲಮನ್ನಾ ಆಗಿದ್ದಿಲ್ಲ. ನಂತರ ಹಂತಹಂತವಾಗಿ ಷರತ್ತುಗಳನ್ನು ಸಡಿಲಗೊಳಿಸಿದರಿಂದ ರೈತರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸಾಲಮನ್ನಾ  ಪಡೆದಿದ್ದರು.

ಕೆಲವು ರೈತರು ಎರಡೆರಡು ಸಹಕಾರ ಬ್ಯಾಂಕುಗಳಿಂದ ಸಾಲ ಪಡೆದಿದ್ದಾರೆಂದು ಅವರ ಹೆಸರನ್ನು ಸಾಲಮನ್ನಾ ಪಟ್ಟಿಯಿಂದ ತಿರಸ್ಕಾರಗೊಳಿಸಲಾಗಿತ್ತು. ಒಂದು ಆಧಾರ್ ಸಂಖ್ಯೆಯಿಂದ ಬೇರೆ ಬೇರೆ ಬ್ಯಾಂಕುಗಳಲ್ಲಿಯೂ ಕೆಲವು ರೈತರು ಸಾಲಪಡೆದಿದ್ದಾರೆಂದು ಹಾಗೂ 2018 ರ ಜುಲೈ 10 ರೊಳಗೆ ಸಾಲಮನ್ನಾ ಮಾಡುವುದಾಗಿ ಸರ್ಕಾರ ಘೋಷಿಸಿದ್ದರಿಂದ ಆ ದಿನಾಂಕಕ್ಕೆ ಒಂದೆರಡು ದಿನಗಳ ಹಿಂದೆ ಏಕವ್ಯಕ್ತಿಯ ಪಡಿತರ ಚೀಟಿಗಳನ್ನು  ಪಡೆದವರ ಹೆಸರನ್ನು ಸಹ ಸಾಲಮನ್ನಾ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.  ಹೀಗಾಗಿ ಕೆಲವು ರೈತರನ್ನು ಸಾಲಮನ್ನಾ ಪಟ್ಟಿಯಿಂದ ಅನರ್ಹಗೊಳಿಸಲಾಗಿತ್ತು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದನಂತರ ಹಂತಹಂತವಾಗಿ ತಿರಸ್ಕಾರಗೊಂಡ ರೈತರ ಹೆಸರನ್ನು ಪರಿಶೀಲಿಸಿ ಸಾಲಮನ್ನಾ ಮಾಡಲಾಗಿತ್ತು. ಬ್ಯಾಂಕುಗಳು ಸಾಲಮನ್ನಾ ಆದ ರೈತರ ಹೆಸರಿರುವ ಪಟ್ಟಿ.ಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಚೆಕ್ ಮಾಡಲು ಬ್ಯಾಂಕಿಗೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು  ಸಾಲಮನ್ನಾ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ…. ಇಲ್ಲಿದೆ ಮಾಹಿತಿ.

 check croploan waiver list ಸಾಲಮನ್ನಾ ಪಟ್ಟಿಯಲ್ಲಿ ಹೆಸರು ಇರುವುದನ್ನು ಚೆಕ್ ಮಾಡುವುದು ಹೇಗೆ?

ಸಾಲಮನ್ನಾ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಲು ರೈತರು ಈ

https://clws.karnataka.gov.in/clws/bank/fsd_report/BANK_IFR.aspx/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ರೈತರಿಗೆ  ಬೆಳೆ ಸಾಲಮನ್ನಾ ಯೋಜನೆಯ ಒಂದು ಪೇಜ್ ತೆರೆದುಕೊಳ್ಳುತ್ತದೆ. ಇಲ್ಲಿ ರೈತರು ಕೆಲವು ಆಯ್ಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

ಮೊದಲು  ರೈತರು ಯಾವ ಜಿಲ್ಲೆಯ ಬ್ಯಾಂಕಿನಲ್ಲಿ ಸಾಲ ಪಡೆದಿದ್ದಾರೆಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಬ್ಯಾಂಕಿನ ಹೆಸರು, ಬ್ರ್ಯಾಂಚ್ ಆಯ್ಕೆ IFSC Code  ನಮೂದಿಸಬೇಕಾಗಿಲ್ಲ. ನಂತರ Fetch Details ಮೇಲೆ ಕ್ಲಿಕ್ ಮಾಡಬೇಕು. ಆಗ ಆ ಬ್ಯಾಂಕಿನಿಂದ ಎಷ್ಟು ಜನ ರೈತರು ಸಾಲ ಪಡೆದು ಸಾಲಮನ್ನಾ ಪಟ್ಟಿಯಲ್ಲಿದ್ದಾರೆ ಎಂಬ ಮಾಹಿತಿ ರೈತರಿಗೆ ಕಾಣಿಸುತ್ತದೆ.

 check croploan waiver list ಸಾಲಮನ್ನಾ ಪಟ್ಟಿಯಲ್ಲಿ ಏನೇನು ಮಾಹಿತಿ ಇರುತ್ತದೆ?

ಸಾಲಮನ್ನಾ ಪಟ್ಟಿಯಲ್ಲಿ ರೈತರ ಹೆಸರು, ಸಾಲದ ಕಸ್ಟಮರ್ ಐಡಿ, ಸಾಲದ ಬ್ಯಾಂಕ್ ಅಕೌಂಟ್, ಯಾವ ಪ್ರಕಾರದ ಸಾಲ, ಯಾವ ದಿನಾಂಕದಂದು ಸಾಲ ಪಡೆದಿದ್ದೀರಿ, ಎಷ್ಟು ಸಾಲ ಪಡೆದಜಿದ್ದೀರಿ ಮಾಹಿತಿ ಇರುತ್ತದೆ. ಅಷ್ಟೇ ಅಲ್ಲ, ಬ್ಯಾಂಕ್ ಮ್ಯಾನೇಜರ್ ನಿಮ್ಮ ಸಾಲಮನ್ನಾಗೆ ಅಪ್ರೋವಲ್ ಮಾಡಿದ್ದಾರೆಯೋ ಇಲ್ಲವೆ ಎಂಬ ಮಾಹಿತಿ ಇರುತ್ತದೆ. ಸಾಲಮನ್ನಾಗೆ ಬ್ಯಾಂಕ್ ಮ್ಯಾನೇಜ್ ಅಪ್ರೋವಲ್ ನೀಡಿದ್ದರೆ yes ಎಂದು ನೀಡಿಲ್ಲವೆಂದರೆ No ಎಂಬುದು ಇರುತ್ತದೆ. ಉಳಿದಂತೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ವೆರಿಫೈಡ್ ಆಗಿದೆಯೋ ಇಲ್ಲವೋ ಎಂಬ ಮಾಹಿತಿ ಇರುತ್ತದೆ. ಆ ಬ್ಯಾಂಕಿನಿಂದ ಎಷ್ಟು ರೈತರು ಸಾಲಮನ್ನಾ ಪಟ್ಟಿಯಲ್ಲಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಇರುವುದರಿಂದ ನಿಮ್ಮ ಹೆಸರನ್ನು ಚೆಕ್ ಮಾಡಬೇಕಾಗುತ್ತದೆ.

ಇದನ್ನು ಓದಿ : ಪಿಎಂ ಕಿಸಾನ್ ಯೋಜನೆ ಇ-ಕೆವೈಸಿ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಈ ಸಾಲಮನ್ನಾ ಪಟ್ಟಿಯನ್ನು ಪ್ರಿಂಟ್ ಸಹ ತೆಗೆದುಕೊಳ್ಳಬಹುದು. ಬಹಳಷ್ಟು ಹೆಸರಿರುವುದರಿಂದ ನಿಮ್ಮ ಹೆಸರು ಯಾವ ಕ್ರಮಸಂಖ್ಯೆಯಲ್ಲಿದೆಯೋ ಎಂಬುದನ್ನು ಸ್ಕ್ರೀನ್ ಶ್ಯಾಟ್ ತೆಗೆದುಕೊಳ್ಳಬಹುದು.

Leave a Comment