ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಇನ್ನು ಮುಂದೆ ಯೋಜನೆಯ ಲಾಭ ಪಡೆಯಬೇಕಾದರೆ ಇ-ಕೆವೈಸಿ ಮಾಡಿಸುವುದು ಕಡ್ಡಾಯಗೊಳಿಸಿರುವುದು ಎಲ್ಲರಿಗೂ ಗೊತ್ತಿದ ಸಂಗತಿ. 10ನೇ ಕಂತಿನ ಹಣ ಎಷ್ಟೋ ರೈತರಿಗೆ ಜಮೆಯಾಗಿಲ್ಲ. ಇದಕ್ಕೆ ಕಾರಣ ಇಕೆವೈಸಿ ಎನ್ನಲಾಗುತ್ತಿದೆ. ಮುಂದಿನ ಕಂತು ಪಡೆಯಬೇಕಾದರೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದರಿಂದ ರೈತರು ಈಗಾಗಲೇ ಮೊಬೈಲ್ ನಲ್ಲಿ ಹಾಗೂ ಸಿಎಸ್.ಸಿ ಸೆಂಟರ್ ಗಳಲ್ಲಿ ಇಕೆವೈಸಿ ಮಾಡಿಸಿದ್ದಾರೆ. ಕಳೆದ 10 ದಿನಗಳಿಂದ ಮೊಬೈಲ್ ನಲ್ಲಿ ಇಕೆವೈಸಿ ಮಾಡಿಸಲು ಹೋದ ರೈತರಿಗೆ ಪಿಎಂ ಕಿಸಾನ್ ಯೋಜನೆಯ ವೆಬ್ ಪೇಜ್ ನಲ್ಲಿ ಕಮಿಂಗ್ ಸೂನ್ ಎಂಬ ಮೆಸೇಜ್ ಬರುತ್ತಿತ್ತು. ಇದರಿಂದಾಗಿ ಕೆಲವು ರೈತರು ಇಕೆವೈಸಿ ಮಾಡಿಸಿರಲಿಲ್ಲ. ಇನ್ನೂ ಕೆಲವು ರೈತರು ಸಿಎಸ್.ಸಿ ಸೆಂಟರ್ ನಲ್ಲಿ ಇಕೆವೈಸಿ ಮಾಡಿಸಿದ್ದಾರೆ. ಆದರೆ ಪಿಎಂ ಕಿಸಾನ್ ಯೋಜನೆಗೆ ರೈತರ ಆಧಾರ್ ಕಾರ್ಡ್ ಇಕೆವೈಸಿ ಆಗಿದೆಯೋ ಇಲ್ಲವೋ ಎಂಬ ಸಂಶಯವಿರುತ್ತದೆ. ಅಂತಹ ರೈತರು ಮೊಬೈಲ್ ನಲ್ಲಿಯೇ ಇಕೆವೈಸಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.
ಮೊಬೈಲ್ ನಲ್ಲಿಯೇ ಇ-ಕೆವೈಸಿ ಸ್ಟೇಟಸ್ ಚೆಕ್ ಮಾಡಿ
ರೈತರು https://pmkisan.gov.in/aadharekyc.aspx ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯ ಇಕೆವೈಸಿ ಮಾಡುವ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರು ಆಧಾರ್ ಕಾರ್ಡ್ ನಮೂದಿಸಬೇಕು. ನಂತರ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಓಟಿಪಿ ನಮೂದಿಸಿದ ನಂತರ Submit for Auth ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ EKYC is Already done ಎಂಬ ಮೆಸೇಜ್ ಕಾಣುತ್ತದೆ. ಅಂದರೆ ನಿಮ್ಮ ಇಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದೆಯಂದರ್ಥ.
ಏನಿದು ಪಿಎಂ ಕಿಸಾನ್ ಇ-ಕೆವೈಸಿ (what is E-kYC)
ಆಧಾರ್ ಆಧಾರಿತ ದೃಢೀಕರಣದ ಮೂಲಕ ನಿಮ್ಮ ಗುರುತನ್ನು ವಿದ್ಯುನ್ಮಾನವಾಗಿ ಪರಿಶೀಲಿಸುವುದನ್ನು ಇಕೆವೈಸಿ ಎಂದು ಕರೆಯಲಾಗುವುದು. ಆಧಾರ್ ಆಧಾರಿತ ಇಕೆವೈಸಿ ನಿಮ್ಮ ಗುರುತು ಮತ್ತು ವಿಳಾಸದ ಪುರಾವೆಯನ್ನು ಸೇವಾ ಪೂರೈಕೆದಾರರಿಗೆ ತಕ್ಷಣವೇ ಒದಗಿಸುತ್ತದೆ. EKYC means Electronic Know your Client ಅಂದರೆ ಬ್ಯಾಂಕುಗಳಂತಹ ಸಂಸ್ಥೆಗಳು ಬಳಸುವ ನಿವಾಸಿ ದೃಢೀಕರಣದ ಮಾರ್ಗವಾಗಿದೆ.
ಇ-ಕೆವೈಸಿ ಮಾಡಿಸುವುದು ಹೇಗೆ? How to do E-KYC?
ಮೊಬೈಲ್ ನಲ್ಲಿ ರೈತರು ಇ-ಕೆವೈಸಿ ಮಾಡಬೇಕಾದರೆ ಈ https://pmkisan.gov.in/aadharekyc.aspx ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ಅಲ್ಲಿ ಆಧಾರ್ ನಂಬರ್ ನಮೂದಿಸಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ಮೊಬೈಲ್ ನಂಬರ್ ನಮೂದಿಸಿ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಅದನ್ನು ಅಲ್ಲಿ ನಮೂದಿಸಿದ ನಂತರ EKYC Successfully submitted ಎಂಬ ಸಂದೇಶ ಕಾಣುತ್ತದೆ. ಆಗ ನಿಮ್ಮಪಿಎಂ ಕಿಸಾನ್ ಯೋಜನೆಯ ಇಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಒಂದು ವೇಳೆ ಇ-ಕೆವೈಸಿ Invalid ಅಂತ ಕಂಡರೆ ನೀವು ಹತ್ತಿರದ CSC ಸೆಂಟರ್ ಗೆ ಹೋಗಿ ಸರಿಪಡಿಸಬಹುದು.