ಚಂದ್ರಶೇಖರ್ ಆಜಾದ್ ರವರ ಜೀವನ ಚರಿತ್ರೆ

Written by Ramlinganna

Updated on:

Chandrashekar azad ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಚಂದ್ರಶೇಖರ್ ಆಜಾದ್ (Chandrashekar azad) ಕೂಡ ಒಬ್ಬರಾಗಿದ್ದಾರೆ. ಸೂರ್ಯ ಮುಳುಗದ ಸಾಮ್ರಾಜ್ಯ ಎಂದೇ ಹೆಸರಾದ ಬ್ರಿಟೀಷರಿಗೆ ಸಿಂಹಸ್ವಪ್ನರಾಗಿ ಕಾಡಿದ್ದರು. ಪಂಡಿತ್ ಜಿ ಎಂದು ಕರೆಯಲ್ಪಡುತ್ತಿದ್ದ ಆಜಾದ್ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ನಾಯಕರಾಗಿದ್ದರು.

ಚಂದ್ರಶೇಖರ ಅಜಾದ್ ಎಂದತಕ್ಷಣ ಮೈ ರೋಮಾಂಚನಗೊಳ್ಳುವ ವ್ಯಕ್ತಿತ್ವ ಅವರದ್ದು, ಕಿರಿಯ ವಯಸ್ಸಿನಲ್ಲಿಯೇ ಬ್ರಿಟೀಷ್ ಸಾಮ್ರಾಜ್ಯಕ್ಕೆ ನಡುಕ ಹುಟ್ಟಿಸಿದ್ದ ಚಂದ್ರಶೇಖರ ಆಜಾದ್ ರವರ ಪ್ರಾಣಪಕ್ಷಿ ಹಾರಿದ್ದರೂ ಸಹ ಮೃತ ಶರೀರದ ಹತ್ತಿರ ಹೋಗಲು ಬ್ರಿಟೀಷ್ ಸಿಪಾಯಿಗಳಿಗೆ ನಡುಕ ಉಂಟಾಗಿತ್ಎತು. ಎಲ್ಲಿ ಎದ್ದುಬಂದು ನಮ್ಮನ್ನು ಸಾಯಿಸುತ್ತಾನೋ ಎಂಬ ಭಯ ಅವರಲ್ಲಿ ಕಾಡಿತ್ತು. ಕೈಯಲ್ಲಿ ಪಿಸ್ತೂಲ್, ಹಿಡಿದುಕೊಂಡು ಬೇಟೆಯಾಡುವ ಹುಲಿಯಂತೆ ಪ್ರಾಣಬಿಟ್ಟಿದ್ದರು. ಬ್ರಿಟೀಷರ ಕೈಯಲ್ಲಿ ಸಾಯುವುದಿಲ್ಲ ಎಂದು ಹೇಳಿಕೊಳ್ಳುತ್ತಿದ್ದ ಅಜಾದ್  ಕೊನೆಗೆ ತನ್ನನ್ನು ಬ್ಟಿಟೀಷರು ಸುತ್ತವರೆದಾಗಿ ತನ್ನ ಪಿಸ್ತೂಲ್ ನಲ್ಲಿ ಒಂದೇ ಒಂದು ಗುಂಡು ಉಳಿದಿದ್ದರಿಂದ ತನ್ನನ್ನು ತಾನೇ ಗುಂಡುಹಾರಿಸಿಕೊಂಡು ಪ್ರಾಣ ಕಳೆದುಕೊಂಡರು.

Chandrashekar azad ಸಿಂಹಮರಿಯ ಅಲ್ಪ ಪರಿಚಯ ಇಲ್ಲಿದೆ 

ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಭಾವರಾ ಎಂಬ ಸ್ಥಳದಲ್ಲಿ  23 ಜುಲೈ 1906ರಲ್ಲಿ ಪಂಡಿತ ಸೀತಾರಾಮ್ ತಿವಾರಿ ಮತ್ತು ಜಗರಾಣಿ ದೇವಿಯವರ ಎರಡನೇ ಮಗನಾಗಿ ಜನಿಸಿದ ಚಂದ್ರಶೇಖರ ಆಜಾದ್ ರವರು ಭಾವರಾ ಮತ್ತು ವಾರಣಾಸಿಯ ಸಂಸ್ಕೃತ ಪಾಠಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡಿದರು.

ವಿದ್ಯಾರ್ಥಿ ದೆಸೆಯಲ್ಲಿಯೇ ಮಹಾತ್ಮಾ ಗಾಂಧಿಯವರ ಪ್ರಭಾವಕ್ಕೆ ಒಳಗಾಗಿದ್ದರು. ಬಳಿಕ ಕಾಂಗ್ರೆಸ್ ಪಕ್ಷದ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ ಕಾರಣದಿಂದಾಗಿ ಅವರು  14 ರ ವಯಸ್ಸಿನಲ್ಲಿಯೇ ಛಡಿ ಏಟಿನ ಕ್ರೂರ ಶಿಕ್ಷೆಗೆ ಒಳಗಾಗಿದ್ದರು.  ನಂತರ ದಿನಗಳಲ್ಲಿ ಗಾಂಧೀಜಿಯವರ ನಿರ್ಣಯಗಳಿಂದ ಬೇಸತ್ತು ಕ್ರಾಂತಿಮಾರ್ಗ ಹಿಡಿದರು. ನಂತರ ತಮಗೆ ಆಝಾದ್ (ಸ್ವಾತಂತ್ರ್ಯ) ಎನ್ನುವ ಹೆಸರನ್ನು ಸೇರಿಸಿಕೊಂಡರು.

ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿದ್ದರಿಂದ ಆಜಾದರನ್ನು ಪೊಲೀಸರು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ನಿಲ್ಲಿಸಿ ಹಾಜರುಪಡಿಸಿದರು. ಆಗ ಅವರು ಕೊಟ್ಟ ಉತ್ತರಕ್ಕೆ ಮ್ಯಾಜಿಸ್ಟ್ರೇಟ್ ಕಕ್ಕಾಬಿಕ್ಕಿಯಾಗಿದ್ದರು. ಬಾಲಕನ ಒಂದೊಂದು ಉತ್ತರವೂ ಗುಂಡಿನ ಶಬ್ದದಂತೆ ಇದ್ದವು. ಚಂದ್ರಶೇಖರನಿಗೆ ಮ್ಯಾಜಿಸ್ಟೇಟ್ ಹೆಸರು ಕೇಳಿದಾಗ ಆಜಾದ್  ಎಂದು ಉತ್ತರ ನೀಡುತ್ತಾರೆ. ಇದರಿಂದಾಗಿ ಮ್ಯಾಜಿಸ್ಟ್ರೇಟ್ ಗೆ ಪಿತ್ತ ನೆತ್ತಿಗೇರುತ್ತದೆ. ನಿನ್ನ ನಿಜ ಹೆಸರು ಹೇಳು ಎಂದು ಕೇಳಿದಾಗ ಅದೇ ಉತ್ತರ,,,, ಅದೇ ಧೈರ್ಯ, ಆಗ 14 ಛಡಿ ಏಟು ಬಿದ್ದರೂ ಸಹ ಸ್ವಲ್ಪವೂ ಅಳುಕದೆ  ಪ್ರತಿಯೊಂದು ಹೊಡೆತಕ್ಕೂ ಭಾರತ್ ಮಾತಾ ಕಿ ಜೈ, ಎನ್ನುವ ಘೋಷಣೆ ಕೂಗಿದರು  ಚಂದ್ರಶೇಖರ್ ಆಜಾದ್ .ಅಂದಿನಿಂದ ಅವರು ಆಜಾದ್ ಎಂದೇ ಹೆಸರಾದರು.

ದುಷ್ಮನೋಂಕೆ ಗೊಲಿಯೂಂ ಸೇ ಮೈ ಸಾಮನಾ ಕರೂಂಗಾ ಅಝಾದ್ ಹೂಂ ಮೈ ಅಝಾದ್ ಹೀ ರಹೂಂಗಾ”… ಹೀಗಂತ ನ್ಯಾಯಾಲಯದಲ್ಲಿ ಏರುಧ್ವನಿಯಲ್ಲಿ ಹೇಳಿದ್ದ ಚಂದ್ರಶೇಖರ ಆಜಾದ್  ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಹೀಗಾಗಿ ಬ್ರಿಟಿಷರು ಆಜಾದ್ರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು.

ಇದನ್ನೂ ಓದಿ ನಿಮ್ಮ ಮನೆ ತೆರಿಗೆ ಬಾಕಿ ಎಷ್ಟಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಹಿಂದೂಸ್ತಾನ್‌‌ ಸೋಷಲಿಸ್ಟ್‌‌ ರಿಪಬ್ಲಿಕನ್‌ ಅಸೋಸಿಯೇಷನ್‌ ಎಂಬ ಸಂಘವನ್ನು ಆರಂಭಿಸಿದ ಅಜಾದ್ ಅವರ ಜತೆಗೆ ಭಗತ್ ಸಿಂಗ್, ಸುಖ್ ದೇವ್, ಬಟುಕೇಶ್ವರ್ ದತ್, ರಾಜ್ ಗುರು ಸಾಥ್ ನೀಡಿದ್ದರು.

ಕಕೋರಿಯ ರೈಲು ದರೋಡೆ ಪ್ರಕರಣದ ಮೂಲಕ ಕ್ರಾಂತಿಕಾರಿ ಆಜಾದ್ ಹಾಗೂ ತಂಡದ ಬಗ್ಗೆ ಬ್ರಿಟಿಷರಿಗೆ ಭಯ ಹುಟ್ಟಿಕೊಂಡಿತು. ಹನುಮಾನ್ ಭಕ್ತರಾಗಿದ್ದ ಅಜಾದ್ ಅವರು ಬಿಲ್ವಿದ್ಯೆ, ಈಜು, ಕುಸ್ತಿಯಲ್ಲಿ ಪರಿಣಿತರಾಗಿದ್ದರು.

ಮಾಹಿತಿದಾರನಿಂದ ಮೊಸಕ್ಕೊಳಗಾದ ಆಜಾದ್  ಪಾರ್ಕ್ ನಲ್ಲಿದ್ದಾಗ  1931ರ ಫೆಬ್ರವರಿ 27ರಂದು ಅಲಹಾಬಾದ್ ನಗರದ ಅಲ್ ಫ್ರೆಡ್ ಪಾರ್ಕ್ ನಲ್ಲಿ ಬ್ರಿಟಿಷ್ ಸೈನ್ಯದಿಂದ ಸುತ್ತುವರಿಯಲ್ಪಟ್ಟರು. ಅಂತಿಮ ಕ್ಷಣ ಎದುರಿಸುವಾಗಲೂ ಅಜಾದ್ ಶರಣಾಗಲಿಲ್ಲ, ಸಂಪೂರ್ಣವಾಗಿ ಸುತ್ತುವರೆಯಲ್ಪಟ್ಟ ಪೋಲೀಸರ ಸಂಖ್ಯಾಬಲವು ಹೆಚ್ಚುತ್ತಿದ್ದಂತೆ, ಆಜಾದ್ ಅವರು ತಮ್ಮ ಬಳಿ ಇದ್ದ ಬಂದೂಕಿನಿಂದ ಒಂದೇ ಒಂದು ಗುಂಡು ಉಳಿದಾಗ, ತಮ್ಮ ಮೇಲೆಯೇ ಗುಂಡು ಹಾರಿಸಿಕೊಂಡು ತಮ್ಮನ್ನು ಜೀವಂತವಾಗಿ ಯಾರೂ ಸೆರೆಹಿಡಿಯಲಾರರೆಂಬ ತಮ್ಮ ಪ್ರತಿಜ್ಞೆಯನ್ನು ಕಾಪಾಡಿಕೊಂಡರು.

ಆಜಾದ್ ತ್ಯಾಗ ಬಲಿದಾನ ನಿಜಕ್ಕೂ ಸ್ಮರಣೀಯ. ಇಂತಹ ದೇಶಭಕ್ತ ಮತ್ತೆ ಹುಟ್ಟಿಬರಲಿ.

Leave a Comment