ನಿಮ್ಮ ಮನೆ ತೆರಿಗೆ ಬಾಕಿ ಎಷ್ಟಿದೆ? ಮೊಬೈಲ್ ನಲ್ಲೇ ಚೆಕ್ ಮಾಡಬೇಕೇ? ಇಲ್ಲಿದೆ ಮಾಹಿತಿ

Written by By: janajagran

Updated on:

ಆಧುನಿಕ ತಾಂತ್ರಿಕತೆ ಎಷ್ಟರಮಟ್ಟಿಗೆ ಬೆಳೆದಿದೆಯೆಂದರೆ ಸ್ಮಾರ್ಟ್ ಫೋನ್ ಒಂದಿದ್ದರೆ ಸಾಕು,  ಮನೆಯಲ್ಲಿಯೇ ಕುಳಿತು ಎಲ್ಲಾ ಮಾಹಿತಿ ಪಡೆಯಬಹುದು. ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯುವುದಕ್ಕಾಗಲಿ, ಬ್ಯಾಂಕ್ ವ್ಯವಹಾರವಾಗಲಿ, ಇನ್ನಿತರ ಖರೀದಿ ಮಾಡುವ ವ್ಯವಹಾರವಾಗಲಿ,  ಫೋನ್ ರಿಚಾರ್ಜ್ ಮಾಡುವಾದಾಗಲಿ ಅಥವಾ ಮನೆಯ ತೆರಿಗೆಯ ಮಾಹಿತಿ ನೋಡುವುದಾಗಲಿ ಎಲ್ಲವನ್ನೂ ಮನೆಯಲ್ಲಿ ಕುಳಿತು ಮೊಬೈಲ್ ನಲ್ಲೇ ನೋಡಬಹುದು.

ಹೌದು, ಸರ್ಕಾರವು ರೈತರಿಗೆ, ಸಾಮಾನ್ಯ ಜನರಿಗೆ ಮದ್ಯವರ್ತಿಗಳಿಂದ ತಪ್ಪಿಸಲು ಹಲವಾರು ರೀತಿಯಲ್ಲಿ ಸರಳವಾಗಿ ಮಾಹಿತಿ ಲಭ್ಯವಾಗುವಂತೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ ಹಾಗೂ ಕೆಲವು ಸರ್ಕಾರದ ತಂತ್ರಾಂಶದ ಮೂಲಕ  ಮಾಹಿತಿಯನ್ನು ಸಹ ಒದಗಿಸುತ್ತಿದೆ. ಈ ಪಟ್ಟಿಯಲ್ಲಿ ಮಾಹಿತಿ ಕಣಜವೂ ಒಂದಾಗಿದೆ.

ಮಾಹಿತಿ ಕಣಜ ಎಂಬ ವೆಬ್ ಪೇಜ್ ನಲ್ಲಿ ಹಲವಾರು ರೀತಿಯ ಸೌಲಭ್ಯವನ್ನು ಒದಗಿಸಲಾಗಿದೆ.  ಹಳ್ಳಿಯ ಜನರು ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿಈ ವರ್ಷದ ತೆರಿಗೆ ಕಟ್ಟುವ ಬಾಕಿ ಎಷ್ಟಿದೆ ಎಂಬುದನ್ನು ನೋಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಮಾಹಿತಿ.

ಮನೆಯ ತೆರಿಗೆ ಸಂಗ್ರಹ ಹಾಗೂ ಬಾಕಿ ಮೊತ್ತವನ್ನುನೋಡಬೇಕಾದರೆ ಈ

https://mahitikanaja.karnataka.gov.in/PTBank/PTDemandCollectionAndBalance?ServiceId=23&Type=TABLE&DepartmentId=2065

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮಾಹಿತಿ ಕಣಜ ಸಾರ್ವಜನಿಕ ಮಾಹಿತಿ ವ್ಯವಸ್ಥೆ ಪೇಜ್ ಓಪನ್ ಆಗುತ್ತದೆ.  ಅಲ್ಲಿ ಜಿಲ್ಲೆಯನ್ನುಆಯ್ಕೆ ಮಾಡಿಕೊಳ್ಳಬೇಕು. ತಾಲೂಕು ಆಯ್ಕೆ ಮಾಡಿಕೊಂಡು ಗ್ರಾಮ ಪಂಚಾಯತಿ ಆಯ್ಕೆ ಮಾಡಿಕೊಳ್ಳಬೇಕು.

ನೀವು ಯಾವ ಗ್ರಾಮದವರಾಗಿದ್ದೀರೋ   ಆ ಗ್ರಾಮ ಆಯ್ಕೆ ಮಾಡಿಕೊಂಡು ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಯಾವ ಗ್ರಾಮ ಆಯ್ಕೆ ಮಾಡಿಕೊಂಡಿದ್ದೀರೋ  ಆ ಗ್ರಾಮದ ಹೆಸರು, ಮನೆ ಮಾಲೀಕರ ಹೆಸರು, ಮನೆ ಸಂಖ್ಯೆ, ಆಸ್ತಿ ಸಂಖ್ಯೆ, ಆಸ್ತಿ ಐಡಿಯ ಕೊನೆಯ ನಾಲ್ಕು ಅಂಕಿಗಳು, ಹಣಕಾಸು ವರ್ಷ ಅಂದರೆ 2021-22 ನೇ ಸಾಲಿನ ವರ್ಷ ಹಾಗೂ ತೆರಿಗೆ ಬಾಕಿ ಎಷ್ಟಿದೆ ಎಂಬ ಮಾಹಿತಿ ಕಾಣುತ್ತದೆ.

ಗ್ರಾಮದ ನಿವಾಸಿಗಳು ಮನೆಯಲ್ಲಿಯೇ ಕುಳಿತು ಮನೆ ತೆರಿಗೆ ಬಾಕಿ ಹಣ ನೋಡಿ ಕಟ್ಟಲು ಈ ಮಾಹಿತಿ ನೀಡಲಾಗಿದೆ. ಮದ್ಯವರ್ತಿಗಳಿಂದ ತಪ್ಪಿಸಲು ಸರ್ಕಾರವು ಈ ಸೌಲಭ್ಯವನ್ನು ನೀಡಲಾಗಿದೆ.  ಇದಕ್ಕಾಗಿ ಯಾರ ಸಹಾಯವೂ ಬೇಕಾಗಿಲ್ಲ. ಗ್ರಾಮದ ನಿವಾಸಿಗಳೇ ಸುಲಭವಾಗಿ ಮನೆಯಲ್ಲಿ ಕುಳಿತು ಈ ಮಾಹಿತಿಗಳನ್ನು ನೋಡಬಹುದು.

ಇದನ್ನೂ ಓದಿ : ರಗಾಲ, ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆಹಾನಿಯ ಜಮೆ ಸ್ಟೇಟಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ಈ ಮಾಹಿತಿಯ ಆಧಾರದ ಮೇಲೆ ನಿವಾಸಿಗಳು ಪ್ರಸಕ್ತ ವರ್ಷದ ತೆರಿಗೆಯನ್ನು ಕಟ್ಟಬಹುದು. ಮಾಹಿತಿ ಕಣಜ ವೆಬ್ ಪೇಜ್ ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಂದಾಯ ಇಲಾಖೆ ಭೂಮಿ ಮತ್ತು ನಕ್ಷಾ ಸೇವೆಗಳು, ಶಿಕ್ಷಣ ಇಲಾಖೆ ಶಾಲೆಯ ವಿವರಗಳು,  ಕಾರ್ಮಿಕ ಇಲಾಖೆ, ಕೃಷಿ ಇಲಾಖೆಯ ಯೋಜನೆಗಳು ಮತ್ತು ಫಲಾನುಭವಿಗಳು,  ಸೇರಿದಂತೆ ಇನ್ನಿತರ ಇಲಾಖೆಗಳ ಮಾಹಿತಿಗಳನ್ನು ನೋಡಬಹುದು.

Leave a comment