ಬರಗಾಲ, ಬೆಳೆಹಾನಿಯ ಜಮೆ ಸ್ಟೇಟಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ

Written by By: janajagran

Updated on:

ಭೂಮಿ ಆನ್ಲೈನ್ ಪರಿಹಾರ ತಂತ್ರಾಂಶವು ರೈತರಿಗೆ ತುಂಬಾ ಸಹಕಾರಿಯಾಗಿದೆ. ರೈತರು ಮನೆಯಲ್ಲಿಯೇ ಕುಳಿತು ಬೆಳೆಹಾನಿಯಾದಾಗ ಪರಿಹಾರ ಹಣ ಜಮೆಯಾಗಿದೆಯೋ ಇಲ್ಲವೋ ಎಂಬ ಮಾಹಿತಿಯನ್ನು ಮೊಬೈಲ್ ನಲ್ಲಿಯೇ ನೋಡುವ ಸೌಲಭ್ಯ ಒದಗಿಸಿದೆ.

ಅಷ್ಟೇ ಅಲ್ಲ, ಬರಗಾಲದಿಂದಾಗಿ ಬೆಳೆಹಾನಿಯಾದಾಗ ಪರಿಹಾರ ಜಮೆ ಸ್ಟೇಟಸ್ನೋಡಬಹುದು. ಆಲಿಕಲ್ಲು ಮಳೆಯಿಂದಾಗಿ ಬೆಳೆಹಾನಿಯಾದಗ ಪರಿಹಾರಹಣ ಜಮೆ ಸ್ಟೇಟಸ್ ನ್ನು ಸಹ ನೋಡಬಹುದು. ಭೂಕುಸಿತ ಉಂಟಾಗಿ ಬೆಳೆಹಾನಿಯಿದರೂ ಸರ್ಕಾರ ಪರಿಹಾರ ನೀಡುತ್ತದೆ. ಇವೆಲ್ಲಾ ಮಾಹಿತಿಯನ್ನು parihara Payment Report ರೈತರಿಗೆ ಒದಗಿಸಲಿದೆ.

ಹೌದು, ಒಂದೇ ವೇದಿಕೆಯಲ್ಲಿ ರೈತರಿಗೆ ಸಮಸ್ಯೆಯಾಗದಂತೆ ಬೆಳೆಹಾನಿ, ಬರಗಾಲ, ಆಲಿಕಲ್ಲು ಮಳೆ, ಭೂ ಕುಸಿತದಿಂದಾಗಿ ಬೆಳೆ ಹಾನಿಯಾದಾಗ ಸರ್ಕಾರ ರೈತರ ಖಾತೆಗೆ ಜಮೆಮಾಡಿದ ಪರಿಹಾರ ಹಣದ ಸ್ಟೇಟಸ್ ನೋಡಲು ಯಾವ ಬ್ಯಾಂಕಿಗೂ ಹೋಗಬೇಕಿಲ್ಲ.  ಮನೆಯಲ್ಲಿಯೇ ಎಲ್ಲಾ ಮಾಹಿತಿ ನೋಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ಮಾಹಿತಿ.

ಬೆಳೆಹಾನಿ, ಬರಗಾಲ, ಆಲಿಕಲ್ಲು ಮಳೆ, ಭೂಕುಸಿತದಿಂದಾಗಿ ಬೆಳೆಹಾನಿಯ ಪರಿಹಾರ ಜಮೆ ಸ್ಟೇಟಸ್ ನೋಡಲು ರೈತರು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ  ಪರಿಹಾರ ಹಣ ಸಂದಾಯ ವರದಿ ಅಂದರೆ Parihara Payment Report ನೋಡುವ ಪೇಜ್ ಓಪನ್ ಆಗುತ್ತದೆ. ಅಲ್ಲಿ  Select Calamity Type ನಲ್ಲಿ Drought(ಬರಗಾಲ) Flood (ಪ್ರವಾಹ), Pest (ಕೀಟಗಳ ಹಾವಳಿ), Desilting (ಹೂಳು ತುಂಬುವುದು), landslide (ಭೂ ಕುಸಿತ), Hailstorm (ಆಲಿಕಲ್ಲು ಮಳೆ) ಹೀಗೆ ಆಯ್ಕೆಗಳಿರುತ್ತವೆ. ನೀವು ಯಾವುದರ ಸ್ಟೇಟಸ್ ನೋಡಬೇಕೆಂದುಕೊಂಡಿದ್ದೀರೋ ಅದನ್ನುಆಯ್ಕೆ ಮಾಡಿಕೊಳ್ಳಬೇಕು.

ಉದಾಹರಣೆಗೆ ನೀವು ಬೆಳೆಹಾನಿ ಪರಿಹಾರ ಸ್ಟೇಟಸ್ ನೋಡಬೇಕೆಂದುಕೊಂಡಿದ್ದರೆ Flood ಆಯ್ಕೆ ಮಾಡಿಕೊಳ್ಳಬೇಕು. ವರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಆಧಾರ್ ಕಾರ್ಡ್ ನಮೂದಿಸಿ ಕ್ಯಾಪ್ಚ್ಯಾ ಕೋಡ್ ನಮೂದಿಸಿ ವಿವರಗಳನ್ನು ಪಡೆಯಲು (Fetch Details) ಮೇಲೆ ಕ್ಲಿಕ್ ಮಾಡಬೇಕು. ಆಗ 2021-22ನೇ ಸಾಲಿನಲ್ಲಿ ಜಮೆಯಾದ ಪರಿಹಾರ ಹಣದ ಸ್ಟೇಟಸ್ ನೋಡಬಹುದು. ಅದೇ ರೀತಿ 2019,20, 2020-21ನೇ ಸಾಲಿನ ಸ್ಟೇಟಸ್ ಸಹ ನೋಡಬಹುದು.

ಇದನ್ನೂ ಓದಿರೈತರ ಖಾತೆಗೆ ಜಮೆಯಾಯಿತು ಪರಿಹಾರದ ಹೆಚ್ಚುವರಿ ಹಣಃ ಸ್ಟೇಟಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ಉದಾಹರಣೆಗೆ ನೀವು ಬರಗಾಲದಿಂದಾಗಿ ಬೆಳೆ ಹಾನಿಯಾಗಿದ್ದರೆ Drought ಆಯ್ಕೆ ಮಾಡಿಕೊಳ್ಳಬೇಕು. ಯಾವ ವರ್ಷದ ಸ್ಟೇಟಸ್ ನೋಡಬೇಕೆಂದುಕೊಂಡಿದ್ದೀರೋ ಆ ವರ್ಷ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಂತರ ಆಧಾರ್ ಕಾರ್ಡ್ ನಮೂದಿಸಬೇಕು. ಕ್ಯಾಪ್ಚ್ಯಾ ಕೋಡ್ ನಲ್ಲಿ ಅಲ್ಲಿಕಾಣುವ ಕ್ಯಾಪ್ಚ್ಯಾಕೋಡ್ ನಮೂದಿಸಿ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಬೇಕು.ಆಗ ಬರಗಾಲದ ಪರಿಹಾರ ಹಣ ಯಾವ ಬ್ಯಾಂಕಿಗೆ ಜಮೆಯಾಗಿದೆ ಎಂಬ ಮಾಹಿತಿ ಕಾಣುತ್ತದೆ. ಇದರೊಂದಿಗೆ ಯಾವ ವರ್ಷ ಹಾಗೂ ಯಾವ ಬ್ಯಾಂಕಿಗೆ ಜಮೆಯಾಗಿದೆ ಎಂಬ ಮಾಹಿತಿ ಕಾಣುತ್ತದೆ.

ಇದೇ ರೀತಿಯಾಗಿದೆ ರೈತರು ಆಲಿಕಲ್ಲು ಮಳೆಯಿಂದಾಗಿ ಹಾಗೂ ಭೂ ಕುಸಿತದಿಂದಾಗಿ ಬೆಳೆ ಹಾನಿಯಾಗಿದ್ದರೆ ಸರ್ಕಾರ ಘೋಷಣೆ ಮಾಡಿದ ಪರಿಹಾರದ ಸ್ಟೇಟಸ್ ಸಹ ಆಧಾರ್  ಕಾರ್ಡ್ ಹಾಗೂ ಕ್ಯಾಪ್ಚ್ಯಾಕೋಡ್ ನಮೂದಿಸಿ  ಸ್ಟೇಟಸ್ ನೋಡಬಹುದು. ಹೀಗೆ ರೈತರು ಮನೆಯಲ್ಲಿಯೇ ಕುಳಿತು ಪರಿಹಾರ ಜಮೆ ಸ್ಟೇಟಸ್ ನ್ನು ಮೊಬೈಲ್ ನಲ್ಲಿಯೇ ನೋಡಿಕೊಳ್ಳಬಹುದು.

Leave a Comment