ಹೆಚ್ಚು ಹಾಲು ಕೊಡುವ, ಗಂಡು ಕರು ನೀಡುವ ತಳಿಗಳ ಮಾಹಿತಿ ಇಲ್ಲಿದೆ

Written by By: janajagran

Updated on:

Which breed is best for dairy farming ಹೈನುಗಾರಿಕೆ ಮಾಡಲಿಚ್ಚಿಸುವ ರೈತರು ಹೈನುಗಾರಿಕೆ ಮಾಡುವುದಕ್ಕಿಂತ ಮುಂಚಿತವಾಗಿ ಹೈನುಗಾರಿಕೆಗೆ ಯಾವ ತಳಿಗಳ ಮುಖ್ಯ ಎಂಬುದನ್ನು ತಿಳಿದುಕೊಳ್ಳಬೇಕು. ಕೆಲವು ತಳಿಗಳು ಹೆಚ್ಚು ಹಾಲು ಕೊಡುತ್ತವೆ. ಆದರೆ ಆ  ತಳಿಗಳ ಗಂಡು ಕರುಗಳು  ಉಳುಮೆಗೆ ಯೋಗ್ಯವಾಗಿರುವುದಿಲ್ಲ. ಇನ್ನೂ ಕೆಲವು ತಳಿಗಳ ಗಂಡುಕರುಗಳು ದಷ್ಟಪುಷ್ಟವಾಗಿರುತ್ತವೆ. ಆದರೆ ಹಾಲು ಉತ್ಪಾದನೆ ಕಡಿಮೆ ಇರುತ್ತದೆ. ಹಾಗಾಗಿ ಯಾವ ಉದ್ದೇಶಕ್ಕಾಗಿ ಹೈನುಗಾರಿಕೆ ಮಾಡಬೇಕೆಂದುಕೊಂಡಿದ್ದಾರೋ ಅದರ ಬಗ್ಗೆ ಮಾಹಿತಿ ಇರುವುದು ಉತ್ತಮ. ರೈತರಿಗೆ ಅನುಕೂಲವಾಗಲೆಂದು ಇಲ್ಲಿ ಕೆಲವು ತಳಿಗಳ ಮಾಹಿತಿ ನೀಡಲಾಗಿದೆ.

Which breed is best for dairy farming ಪ್ರಮುಖ ಹೈನು ತಳಿಗಳು

ಸಾಹಿವಾಲ್, ಸಿಂಧಿ, ಗಿರ್, ಧಾರಪಾರಕರ್,  ಉಭಯ ತಳಿಗಳೆಂದರೆದೇವಣಿ, ಓಂಗೋಲ, ಹರಿಯಾಣ, ಕಾಂಕ್ರೇಚ್

ಮಿಶ್ರ ತಳಿಗಳೆಂದರೆ ಎರಡು ಅಥವಾ ಹೆಚ್ಚು ಶುದ್ಧ ತಳಿಗಳ ಸಂಕರಣದಿಂದ ಹುಟ್ಟಿದ ಪೀಳಿಗೆಗೆ ಮಿಶ್ರ ತಳಿ ಎನ್ನುವರು.

ಸಾಹಿವಾಲ್ ತಳಿ:

ಈ ತಳಿಗೆ ಲೋಲಾ, ಮೊಂಟಗೋಮೆರಿ ಮತ್ತು ಮುಲ್ತಾನಿ ಎಂದು ಕರೆಯುವರು. ಈ  ತಳಿಯು ಪಂಜಾಬಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಸಾಮಾನ್ಯವಾಗಿ ಕೆಂಪು, ನಸುಕೆಂಪು, ಅಥವಾ ದಟ್ಟ ಕಂದು ಬಣ್ಣದ ಚರ್ಮವಿದ್ದು, ದೇಹದ ಮೇಲಿನ ಚರ್ಮ ಸಡಿಲವಾಗಿರುತ್ತದೆ.ದೇಹ ದೊಡ್ಡದು, ಕೋಡುಗಳು ಚಿಕ್ಕದಾಗಿದ್ದು, ದಪ್ಪವಾಗಿರುತ್ತವೆ. ಗಂಗೆದೋಗಲು ದೊಡ್ಡದಾಗಿದ್ದು, ಜೋತಾಡುತ್ತಿರುತ್ತದೆ.ಹೋರಿಯ ತೂಕ 500 ಕಿ.ಗ್ರಾಂ ಇದ್ದರೆ ಆಕಳ ತೂಕ 250 ಗ್ರಾವರೆಗೆ ಇರುತ್ತದೆ.

ಇದನ್ನೂ ಓದಿ: ಯಾವ ಬ್ಯಾಂಕಿನಲ್ಲಿ ಎಷ್ಟು ಮತ್ತು ಎಲ್ಲೆಲ್ಲಿ ಸಾಲ ಪಡೆದಿದ್ದೀರೆಂಬುದನ್ನು ಮೊಬೈಲ್ ನಲ್ಲಿಯೇ ಉಚಿತವಾಗಿ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಈ ಆಕಳುಗಳು ಒಂದು ಸೂಲದಲ್ಲಿ ಸರಾಸರಿ 2150 ಕಿ.ಗ್ರಾಮ ಹಾಲು ಕೊಡುತ್ತದೆ. ಸುಧಾರಿತ ಡೇರಿಗಳಲ್ಲಿ ಒಂದು ಸೂಲದಲ್ಲಿ 4000 ಕಿ.ಗ್ರಾಂ ಹಾಲು ಉತ್ಪಾದನೆಯ ದಾಖಲೆಗಳೂ ಉಂಟು. ಸಹವಾಲ್ ತಳಿ ನಮ್ಮ ದೇಶದ ಶ್ರೇಷ್ಠ ತಳಿಯಾಗಿದೆ.

ಸಿಂಧಿ:

ಸಿಂಧಿ ತಳಿಗೆ ರೆಡ್ ಸಿಂಧಿ ಹಾಗೂ ಕೆಂಪು ಕರಾಚಿ ಎಂದು ಕರೆಯುತ್ತಾರೆ. ಈ  ತಳಿ ಸಿಂಧ್ ಪ್ರಾಂತ್ಯ, ಪಂಜಾಬ ಹಾಗೂ ಹರಿಯಾಣಗಳಲ್ಲಿ ಕಂಡುಬರುತ್ತದೆ.ಈ ತಳಿ ಮಧ್ಯಮ ಗಾತ್ರ ಹೊಂದಿರುತ್ತದೆ.ಕೋಡುಗಳು ದಪ್ಪವಾಗಿದ್ದು, ತುದಿ ಮೊಡವಾಗಿರುತ್ತದೆ. ಚರ್ಮದ ಬಣ್ಣ ಸಾಮಾನ್ಯವಾಗಿ ದಟ್ಟ ಕೆಂಪು. ಆಕಳು ಕೆಚ್ಚಲು ದೊಡ್ಡದಾಗಿದ್ದು, ಹೆಚ್ಚು ಹಾಲು ಕೊಡು ದನಗಳಲ್ಲಿ ಜೋತಾಡುತ್ತಿರುತ್ತದೆ. ಸಿಂಧಿ ಜಾತಿಯ ಆಕಳುಗಳನ್ನು ಭಾರತದ ಕರ್ನಾಲ್, ಅಲಹಾಬಾದ್, ಹೊಸೂರು, ಬೆಂಗಳೂರು ಮುಂತಾದ ಕಡೆಯ ಫಾರ್ಮಗಳಲ್ಲಿ ನೋಡಬಹುದು.

 ಗಿರ್:

ಕಾಠಿಯಾವಾಡಿ, ಸುರ್ತಿ, ಡೆಕನ್ ಇವು ಗಿರ್ ತಳಿ ಆಕಳುಗಳ ಬೇರೆ ಬೇರೆ ಹೆಸರುಗಳು. ಗುಜರಾತದ ಗಿರ್ ಪರ್ವತಾವಳಿ, ಜುನಾಗಢ ದಕ್ಷಿಣ ಕಾಠಿಯಾವಾಡ ಈ ತಳಿಯ ಉಗಮ ಸ್ಥಾನ. ಈ ತಳಿಯು ಸೌಮ್ಯ ಸ್ವಭಾವದ್ದಾಗಿದೆ. ಕಿವಿಗಳು ತೀರ ಉದ್ದವಾಗಿದ್ದು, ಜೋತಾಡುತ್ತಿರುತ್ತದೆ. ಮುಖದಲ್ಲಿ ಹಣೆ ದಬ್ಬಗಿದ್ದು, ಹೊರಚಾಚಿರುತ್ತದೆ.ಈ ತಳಿಯ ವೈಶಿಷ್ಟವೆಂದರೆ ವಿವಿಧ ಬಣ್ಣಗಳ ಚುಕ್ಕೆಗಳು ಮೈ ತುಂಬಾ ಹರಡಿರುತ್ತದೆ.ಒಂದು ಸೂಲಿನ ಸರಾಸರಿ ಹಾಲಿನ ಉತ್ಪನ್ನ 1750 ಕಿ.ಗ್ರಾಂ ಇರುತ್ತದೆ.ಎತ್ತುಗಳಉ ಶಕ್ತಿಯುತವಾಗಿದ್ದು, ಮಧ್ಯಮ ವೇಗ ಹೊಂದಿರುತ್ತದೆ. ಹೊಲದ ಕೆಲಸಕ್ಕೆ ಉಪಯುಕ್ತವಾಗಿವೆ. ಇವು ಗುಜರಾತ, ಮುಂಬೈ, ಪುಣೆ ಮತ್ತಿತರ ಕಡೆ ಹೆಚ್ಚ ಸಿಗುತ್ತವೆ.

ಥಾರಪಾರಕರ್:

ಈ ತಳಿಗೆ ಥಾರ್, ಬೂದಿ, ಸಿಂಧಿ, ಬಿಳಿ ಸಿಂಧಿ,  ಹೆಸರುಗಳಿಂದ ಕರೆಯಲಾಗುತ್ತದೆ. ಸಿಂಧ್ ಪ್ರಾಂತ್ಯ, ಪಂಜಾಬ್ ಹಾಗೂ ರಾಜಸ್ಥಾನದ ಭಾಗಗಳಲ್ಲಿ ಕಾಣುತ್ತದೆ. ಮಧ್ಯಮ ಮೈಗಟ್ಟು, ಗಿಡ್ಡ ದೇಹ ಹಾಗೂ ಸರಳ ಉದ್ದ ಕಾಲುಗಳನ್ನು ಹೊಂದಿರುತ್ತದೆ. ಅಗಲ ಹಣೆ ಮಧ್ಯಮ ಕೋಡು ಇರುತ್ತದೆ. ಉದ್ದ ಬಾಲಕ್ಕೆ ಕಪ್ಪು ಕೂದಲಿರುತ್ತವೆ. ಮಧ್ಯಮ ಗಾತ್ರದ ಕೆಚ್ಚಲಿರುತ್ತದೆ. ಒಂದು ಸೂಲಿನಲ್ಲಿ 1500 ಕಿ.ಗ್ರಾಂ ಹಾಲು ಕೊಟ್ಟರೆ ಎತ್ತುಗಳು ಉಳುಮೆಗೆ ಯೋಗ್ಯವಾಗಿವೆ.

ಉಭಯ ತಳಿಗಳು:

ಆಕಳುಗಳು ತಕ್ಕಮಟ್ಟಿಗೆ ಹಾಲು ಕೊಡುತ್ತದೆ. ಹೆಚ್ಚು ಕೆಲಸ ಮಾಡುವ ಎತ್ತುಗಳನ್ನು ಕೊಡುತ್ತವೆ. ಉದಾಹರಣೆಗೆ ದೇವಣಿ, ರೆಡ್ ಖಾಂದಾರಿ, ಓಂಗೋಲ, ಹರಿಯಾಣಾ, ಕಾಂಕ್ರೇಜ ಹಾಗೂ ಕೃಷ್ಣಾ ವ್ಯಾಲಿ ತಳಿಗಳು

ದೇವಣಿ:

ಈ ತಳಿಗೆ ಡೊಂಗರಿ, ಡೋಂಗರಪಟ್ಟಿ ಎಂದು ಕರೆಯುತ್ತಾರೆ. ಇದು ಮಹಾರಾಷ್ಟ್ರದ ಲಾತೂರ ಜಿಲ್ಲೆ, ಕಲಬುರಗಿ, ಬೀದರ್ ಹಾಗೂ ಆಂಧ್ರಪ್ರದೇಶದಲ್ಲಿ ಹೆಚ್ಚು ಕಾಣಸಿಗುತ್ತವೆ. ಗಿರ್, ಡಾಂಗಿ ಹಾಗೂ ಜವಾರಿ ದನಗಳ ಸಂಕರಣದಿಂದ ಈ ತಳೆ ಉದ್ಭವಿಸಿದೆ.  ಉಬ್ಬಿದ ಹಣೆ, ಚಿಕ್ಕ ಕೋಡು, ಇಳಿಬಿದ್ದ ಉದ್ದ ಕಿವಿಗಳು ಹೊಂದಿರುತ್ತವೆ. 1000-1200 ಕಿ.ಗ್ರಾಂವರೆಗೆ ಒಂದು ಸೂಲಿನಲ್ಲಿ ಹಾಲು ಕೊಡುತ್ತವೆ. ಈ ಎತ್ತುಗಳು ಉಳುಮೆಗೆ ಶ್ರೇಷ್ಠವಾಗಿದೆ.

ಓಂಗೋಲ:

ಇದು ಆಂಧ್ರಪ್ರದೇಶದ ನೆಲ್ಲೂರ ಜಿಲ್ಲೆಯಲ್ಲಿ ದೊರೆಯುವ ತಳಿ. ಇದಕ್ಕೆ ನೆಲ್ಲೋರ ತಳಿ ಎಂದು ಸಹ ಕರೆಯುವರು. ಇದರ ಮೈಬಣ್ಣ ಬಿಳಿ, ತಲೆ ಕುತ್ತಿಗೆ ಹಾಗೂ ಇಳಿಯ ಮೇಲೆ ಕಪ್ಪು ಹಾಗೂ ಬೂದು ಬಣ್ಣದ ಚುಕ್ಕೆಗಳು ಇರುತ್ತವೆ.ಒಂದು ಸೂಲದಲ್ಲಿ 1000-1200 ಕಿ.ಗ್ರಾಂವರೆಗೆ ಹಾಲು ಕೊಡುತ್ತವೆ. ಎತ್ತುಗಳು ಭಾರವಾದ ಕೆಲಸಕ್ಕೆ ಯೋಗ್ಯವಾಗಿವೆ.

ಕಾಂಕ್ರೇಚ್:

ಭಾರತದಲ್ಲೇ ಹೆಚ್ಚಿನ ಮೈತೂಕವುಳ್ಳ ರಾಜಠೀವಿಯ ತಳಿ ಇದಾಗಿದೆ. ಇದರ  ನಡಿಗೆಯನ್ನು ಸವಾಯಿ ಚಾಲ ಎನ್ನುತ್ತಾರೆ. ತ್ರಿಕೋನಾಕಾರದ ಮುಖ, ಸುಂದರವಾದ ದಪ್ಪ ಕೋಡುಗಳು ಇದರ ವೈಶಿಷ್ಯ.ಎತ್ತುಗಳು ಬಲಿಷ್ಠವಾಗಿದ್ದು. ಉತ್ತಮ ಕೆಲಸ ಮಾಡುತ್ತವೆ.

ಮಿಶ್ರ ತಳಿಗಳು:

ಎರಡು ಅಥವಾ ಶುದ್ಧ ತಳಿಗಳ ಸಂಕರಣದಿಂದ ಹುಟ್ಟಿದ ಪೀಳಿಗೆಗೆ ಮಿಶ್ರ ತಳಿ ಹಸು ಎನ್ನುವರು. ನಮ್ಮ ಜವಾರಿ ಹಸುಗಳ ಹಾಲಿನ ಉತ್ಪಾದನಾ ಸಾಮರ್ಥ್ಯ ತುಂಬಾ ಕಡಿಮೆಯಿರುವುದರಿಂದ ಹೆಚ್ಚು ಹಾಲು ಉತ್ಪಾದನೆಗೆ ಹೆಸರಾದಂತ ವಿದೇಶಿ ತಳಿಗಳಾದ ಜರ್ಸಿ ಮತ್ತು ಹೋಲಸ್ಟ್ರೀನ್ ಫ್ರೀಜಿಯನ್ ತಳಿಯ ಹೋರಿಗಳ ವೀರ್ಯದಿಂದ ಕೃತಕ ಗರ್ಭಧಾರಣೆ ಮೂಲಕ ಮಿಶ್ರ ತಳಿ ಕರುಗಳನ್ನು ಪಡೆಯಲಾಗುತ್ತದೆ.

ರೈತರು ಯಾವುದೇ ತಳಿ ಖರೀದಿಸುವುದಕ್ಕಿಂತ ಮುಂಚಿತವಾಗಿ ತಳಿಯ ಬಗ್ಗೆ ಮಾಹಿತಿ ಪಡೆಯುವುದು ಮುಖ್ಯ.

Leave a Comment