ಗೋಧನ್ ನ್ಯಾಯ ಯೋಜನೆಯಡಿಯಲ್ಲಿ ಕೆಜಿಗೆ 2 ರೂಪಾಯಿಯಂತೆ ಸೆಗಣಿ ಖರೀದಿ

Written by By: janajagran

Updated on:

ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಭರವಸೆಯೊಂದಿಗೆ ಛತ್ತೀಸ್ ಗಢದ ಸರ್ಕಾರವು ಗೋಧನ್ ನ್ಯಾಯ ಯೋಜನೆ (godan nyaya yojana) ಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿಯಲ್ಲಿ  ರಾಜ್ಯ ಸರ್ಕಾರವು ಪಶುಪಾಲಕರಿಂದ ಸೆಗಣಿಯನ್ನು ಪ್ರತಿ ಕೆಜಿಗೆ 2 ರೂಪಾಯಿಯಂತೆ ಖರೀದಿಸುತ್ತದೆ.

ಹೌದು, ದೇಶದ ಮೊದಲ ಗೋಧನ್ ನ್ಯಾಯ ಯೋಜನೆಯನ್ನು ಛತ್ತೀಸಗಢದಲ್ಲಿ ಕಳೆದ ವರ್ಷ ಆರಂಭವಾಗಿದೆ. ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸಾಂಕೇತಿಕವಾಗಿ 2020ರ ಜುಲೈ 20 ರಂದು ಸಗಣಿಖರೀದಿಸುವ ಮೂಲಕ ಗೋಧನ್ ನ್ಯಾಯ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಈ ಯೋಜನೆಯಡಿ ಸರ್ಕಾರ ಜಾನುವಾರು ಸಾಕಣೆದಾರರಿಂದ ಸೆಗಣಿಯನ್ನು ಪ್ರತಿ ಕೆ.ಜಿ.ಗೆ 2 ರೂ.ಗಳಂತೆ ಖರೀದಿಸಿ ನಂತರ ಸಾವಯವ ಗೊಬ್ಬರವನ್ನಾಗಿ ಮಾಡುತ್ತದೆ.

ಇದು ಸಾವಯವ ಕೃಷಿ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಉತ್ತೇಜಿಸುವುದಷ್ಟೇ ಅಲ್ಲ, ಗೋಸಾಕಣೆ ಮತ್ತು ಗೋಸಂರಕ್ಷಣೆಯನ್ನು ಉತ್ತೇಜಿಸುವದಕ್ಕಾಗಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.

ಈ ಯೋಜನೆಯಲ್ಲಿ ಉತ್ಪಾದಿಸಲಾದ ವರ್ಮಿ ಕಾಂಪೋಸ್ಟ್ ಅನ್ನು (ಸಾವಯವ ಗೊಬ್ಬರವನ್ನು) ರೈತರಿಗೆ ಆದ್ಯತೆಯ ಆಧಾರದ ಮೇಲೆ ಸಹಕಾರಿ ಸಂಘಗಳ ಮೂಲಕ ಕಡಿಮೆ ದರದಲ್ಲಿ ನೀಡಲಿದೆ.

ಛತ್ತೀಸಗಢ ರಾಜ್ಯದಂತೆ ದೇಶದ ವಿವಿಧ ರಾಜ್ಯಗಳಲ್ಲಿಯೂ ಗೋಧನ ನ್ಯಾಯ ಯೋಜನೆ ಆರಂಭಿಸಿದರೆ ಪಶುಪಾಲಕರಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯ ಕೇಳಿಬರುತ್ತಿದೆ.

800 ಕೆಜಿ ಸೆಗಣಿ ಕಳವು

ಛತ್ತೀಸಗಢದಲ್ಲಿ ಸೆಗಣಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದರಿಂದಲೇ ಇತ್ತೀಚೆಗೆ 800 ಕೆಜಿ ಸೆಗಣಿ ಕಳವು ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಕಳೆದ ವಾರ ಸುಮಾರು 800 ಕೆಜಿಯಷ್ಟು ಸೆಗಣಿ ಕಳವು ಮಾಡಿದ ವಿಲಕ್ಷಣ ಘಟನೆಯೊಂದು ನಡೆದಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಬಹುದು.  ಛತ್ತೀಸಗಢ ರಾಜ್ಯದ ಕೊರ್ಬಾ ಜಿಲ್ಲೆಯ ಹಳ್ಳಿಯೊಂದರಿಂದ 800 ಕೆಜಿ ಸಗಣಿ ಕಳ್ಳತನವಾದ ಘಟನೆ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಸೆಗಣಿಯ ಒಟ್ಟು ಮೌಲ್ಯ 1600 ರೂಪಾಯಿಯಿದೆ.

ದೀಪ್ಕಾ ಠಾಣೆ ವ್ಯಾಪ್ತಿಯ ಧುರೇನಾ ಗ್ರಾಮದಲ್ಲಿ ಜೂನ್ 8 ಮತ್ತು 9 ರ ನಡುವೆ ರಾತ್ರಿ 1600 ರೂಪಾಯಿ ಮೌಲ್ಯದ ಸೆಗಣಿ ಕಳುವಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಸೆಗಣಿಯನ್ನು ಗೋದಾನ್ ನ್ಯಾಯ ಯೋಜನೆಯಡಿಯಲ್ಲಿ ಮಾರಾಟ ಮಾಡಿ ದುಡ್ಡು ಮಾಡಿಕೊಳ್ಳಬೇಕೆಂದು ರೈತರ ಹಸುವಿನ ಸೆಗಣಿ ಕಳವು ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Leave a comment