ತೋಟಗಾರಿಕೆ ಇಲಾಖೆಯಿಂದ ಶೇ. 50 ರಷ್ಟು ಸಬ್ಸಿಡಿ

Written by Ramlinganna

Updated on:

horticulture equipment subsidy ತೋಟಗಾರಿಕೆ ಇಲಾಖೆಯ ವತಿಯಿಂದ ವಿವಿಧ ಯೋಜನೆಗಳಡಿಯಲ್ಲಿ ರೈತರಿಗೆ ಶೇ. 50 ರಷ್ಟು ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಹೌದು, 2022-23ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ ಮಾವು, ಸೀಬೆ, ಸಪೋಟ, ಇತ್ಯಾದಿ ಹಣ್ಣಿನ ಹಾಗೂ ತರಕಾರಿ ಬೆಳೆಗಳಲ್ಲಿ ಕೊಯ್ಲೋತ್ತರ ನಷ್ಟವನ್ನು ತಡೆಗಡಟ್ಟಲು ಪ್ಲಾಸ್ಟಿಕ್ ಕ್ರೇಟ್ಸ್ ಗಳಿಗೆ ಶೇ. 50 ರಷ್ಟು ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಪ್ರತಿ ಹೆಕ್ಟೇರಿಗೆ 8750 ರೂಪಾಯಿ ಸಹಾಯಧನ ನೀಡಲಾಗುವುದು.  ಗರಿಷ್ಠ 2 ಹೆಕ್ಟೇರ ಮೀರದಂತೆ ಜನವರಿ 13 ರೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸೌಲಭ್ಯ ಪಡೆಯಬಹುದು.

ಜಾಮರಾಜನಗರ ಜಿಲ್ಲೆಯ ರೈತರು ಅರ್ಜಿ ಸಲ್ಲಿಸಬಹುದು. ಜನವರಿ 13 ರೊಳಗೆ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಯಲ್ಲಿ ಸಂಪರ್ಕಿಸಿ ಅರ್ಜಿ ಪಡೆದು ಸಲ್ಲಿಸಬಹುದು. ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಸಿಕೊಂಡಿರಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಬಹುದು.

ತೋಟಗಾರಿಕೆ ಇಲಾಖೆ ಅನುಮೋದಿತ ಕಂಪನಿ, ಸಂಸ್ಥೆಗಳಿಂದ ಕ್ರೇಟ್ಸ್ ಖರೀದಿಸಿ ಸಹಾಯಧನವನ್ನು ಸದುಪಯೋಗಪಡೆದುಕೊಳ್ಳಬೇಕೆಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

horticulture equipment subsidy ಸೋಲಾರ ಪಂಪ್ ಸೆಟ್ ಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

ಚಾಮರಾಜನಗರ ತೋಟಗಾರಿಕೆ ಇಲಾಖೆಯಿಂದ 2022-23ನೇ ಸಾಲಿನ ರಾಷ್ಟ್ರೀಯ ಕೃಷಿ ವಿಸಾಕಸ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ ಗುಣಮಟ್ಟದ ಉತ್ಪಾದನೆಗೆ ವಿಶೇಷ ಉತ್ತೇಜನ ಕಾರ್ಯಕ್ರಮದಲ್ಲಿ ರೈತರಿಗೆ ಸೌರಶಕ್ತಿ ಆಧಾರಿತ ಕೃಷಿ ಪಂಪ್ ಸೆಟ್ ಅಳವಡಿಸಿಕೊಳ್ಳಲು ಎಲ್ಲಾ ವರ್ಗದ ರೈತರಿಗೂ ಶೇ. 50 ರಷ್ಟು   ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓಧಿ : ನಿಮ್ಮ ಜಮೀನಿನ ಅಕ್ಕಪಕ್ಕದ ಜಮೀನು ಯಾರ ಹೆಸರಿಗೆ ಎಷ್ಟು ಎಕರೆಯಿದೆ? ಮೊಬೈಲ್ ನಲ್ಲೆ ಚೆಕ್ ಮಾಡಿ

3 ಹೆಚ್.ಪಿ. ಯ ಸೋಲಾರ್ ಪಂಪ್ ಸೆಟ್ ಸಾಮರ್ಥ್ಯದ ಘಟಕ ವೆಚ್ಚ 2 ಲಕ್ಷ ರೂಪಾಯಿಗಳಿಗಾದಿದ್ದು ಶೇ. 50 ರಂತೆ 1 ಲಕ್ಷ ರೂಪಾಯಿ ಸಹಾಯಧನ ನೀಡಲಾಗುವುದು. 5 ಹೆಚ್.ಪಿ ಹಾಗೂ ಮೇಲ್ಪಟ್ಟ ಸೋಲಾರ್ ಪಂಪ್ ಸೆಟ್ ಗಳಿಗೆ ಘಟಕ ವೆಚ್ಚ 3 ಲಕ್ಷ ರೂಪಾಯಿ ಗಳಿಗೆ ಶೇ. 50 ರಂತೆ 1.50 ಲಕ್ಷ ರೂಪಾಯಿ ಸಹಾಯಧನ ನೀಡಲಾಗುವುದು.

ಸೌರಶಕ್ತಿ ಆಧಾರಿತ ಕೃಷಿ ಪಂಪ್ ಸೆಟ್ ಗಳನ್ನು ತೋಟಗಳಲ್ಲಿ ನಿರ್ಮಿಸಿರುವ ನೀರು ಸಂಗ್ರಹಣಾ ಘಟಕ ಅಥವಾ ಕೊಳವೆ ಬಾವಿಗಳಿಗೆ ಅಳವಡಿಸಬಹುದಾಗಿದ್ದು, ನೀರು ಸಂಗ್ರಹಣಾ ಘಟಕಕ್ಕೆ ಅಳವಡಿಸಿದ ರೈತರಿಗೆ ಆದ್ಯತೆ ನೀಡಲಾಗುವುದು.

ರೈತರಿಗೆ ಸಹಾಯಧನ ಪಾವತಿಸುವ ಮುನ್ನ ಕರ್ನಾಟಕ ನವೀಕರಿಸಬಹುದಾದ ಇಂಧನಅ ಅಭಿವೃದ್ಧಿ ನಿಯಮಿತ ಇಲಾಖೆಯಿಂದ ಹಾಗೂ ಇಥರೆ ಇಲಾಖೆಗಳಿಂದ ಸೌರಶಕ್ತಿ ಆಧಾರಿತ ಪಂಪ್ ಸೆಟ್ಗಳಿಗೆ ಸಹಾಯಧನ ಪಡೆದಿರುವುದಿಲ್ಲ ಎಂಬ ಬಗ್ಗೆ ದೃಢೀಕರಣ ಸಲ್ಲಿಸಬೇಕು.

ಸೌರಶಕ್ತಿ ಆಧಾರಿತ ಕೃಷಿ ಪಂಪ್ ಸೆಟ್ ಗಳನನು ಸರ್ಕಾರದ ಇಂಧನ ಇಲಾಖೆ ಅಧಿಕೃತವಾಗಿ ನೋಂದಾಯಿಸಿದ ಕಂಪನಿಗಳಿಂದ ರೈತರೇ ನೇರವಾಗಿ ಖರೀದಿಸಬೇಕು. ಘಟಕ ಅನುಷ್ಠಾನ ಪೂರ್ವ ಕಾರ್ಯಾದೇಶ ಪಡೆಯುವುದು ಕಡ್ಡಾಯವಾಗಿದೆ. ಆಸಕ್ತ ರೈತರು ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

ತೋಟಗಾರಿಕೆ ಇಲಾಖೆಯಿಂದ ಸೌಲಭ್ಯ ಪಡೆಯಲು ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ಜಾತಿ ಪ್ರಮಾಣ ಪತ್ರ ಇರಬೇಕು. ಬ್ಯಾಂಕ್ ಪಾಸ್ ಬುಕ್ ಪ್ರತಿ ಇರಬೇಕು. ಜಮೀನಿನ ಪಹಣಿ ಇರಬೇಕು. ಇದರೊಂದಿಗೆ ಅಗತ್ಯ ದಾಖಲೆಗಳನ್ನು ತೋಟಾಗರಿಕೆ ಇಲಾಖೆಯಲ್ಲಿ ಸಲ್ಲಿಸಿ ಸೌಲಭ್ಯ ಪಡೆಯಬಹುದು.

Leave a Comment