ನಿಮ್ಮ ಅಕ್ಕಪಕ್ಕದ ಜಮೀನು ಯಾರ ಹೆಸರಿಗೆ ಎಷ್ಟು ಎಕರೆಯಿದೆ?

Written by Ramlinganna

Updated on:

your land transfer details ರೈತರು ತಮ್ಮ ಜಮೀನಿನೊಂದಿಗೆ  ಅಕ್ಕಪಕ್ಕದಲ್ಲಿರುವ ಜಮೀನು ಯಾರ ಹೆಸರಿಗೆ  ಎಷ್ಟು ಎಕರೆಯಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ರೈತರಿಗೆ ತಮ್ಮ ಜಮೀನಿನ ನೆರೆಹೊರೆಯವರಿಗೆ ಎಷ್ಟು ಎಕರೆಯಿದೆ ಹಾಗೂ ಆ ಜಮೀನು ಜಂಟಿಯಾಗಿದೆಯೋ ಅಥವಾ ಅವರ ಹೆಸರಿನಲ್ಲಿದೆಯೋ ಎಂಬುದನ್ನು ಸಹ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಅಕ್ಕಪಕ್ಕದ ಜಮೀನು ಯಾರ ಹೆಸರಿಗೆ  ಎಷ್ಟು ಎಕರೆ ಜಮೀನಿದೆ? ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ

ರೈತರು ನೆರೆಹೊರೆಯವರ ಹೆಸರಿಗೆ ಎ ಷ್ಟು ಎಕರೆ ಜಮೀನಿದೆ ಎಂಬುದನ್ನ ಚೆಕ್ ಮಾಡಲು ಈ

https://landrecords.karnataka.gov.in/service40/PendcySurveyNoWiseRpt

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ರಿಪೋರ್ಟ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಇದಾದಮೇಲೆ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಸೆಲೆಕ್ಟ್ ಮಾಡಿಕೊಂಡ ನಂತರ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸರ್ವೆ ನಂಬರ್ ನಮೂದಿಸಿ Get Report ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ನೀವು ನಮೂದಿಸಿ ಸರ್ವೆ ನಂಬರಿನಲ್ಲಿ ಬರುವ ಹಿಸ್ಸಾ ನಂಬರ್ ನಲ್ಲಿ ಜಮೀನು ಹೇಗೆ ವರ್ಗಾವಣೆಯಾಗಿದೆ? ಯಾವಾಗ ವರ್ಗಾವಣೆಯಾಗಿದೆ ಎಂಬ ಮಾಹಿತಿ ಇರುತ್ತದೆ.

ನೀವು ನಮೂದಿಸಿದ ಸರ್ವೆ ನಂಬರ್ ಅಕ್ಕಪಕ್ಕದ ಸರ್ವೆ ನಂಬರ್ ಹಾಗೂ ಮಾಲೀಕರ ಮಾಹಿತಿ

ರೈತರು ನಮೂದಿಸಿದ ಸರ್ವೆ ನಂಬರ್ ಅಕ್ಕಪಕ್ಕದ ಸರ್ವೆ ನಂಬರ್ ಹಾಗೂ ಯಾರ ಹೆಸರಿಗೆ ಎಷ್ಟು ಎಕರೆ ಜಮೀನಿದೆ? ಜಮೀನು ಜಂಟಿಯಾಗಿದ್ದರೆ ಯಾರ ಯಾರ ಹೆಸರು ಜಂಟಿಯಾಗಿದೆ? ಎಷ್ಟು ಎಕರೆ ಜಮೀನು ಜಂಟಿಯಾಗಿದೆ ಎಂಬ ಮಾಹಿತಿ ಇರುತ್ತದೆ. ಒಂದು ವೇಳೆ ರೈತರು ಸಾಲ ಪಡೆದಿದ್ದರೆ ಯಾವ ಬ್ಯಾಂಕಿನಿಂದ ಸಾಲಪಡೆಯಲಾಗಿದೆ ಎಂಬ ಮಾಹಿತಿಯೂ ಇರುತ್ತದೆ.

ನೀವು ನಮೂದಿಸಿ ಸರ್ವೆ ನಂಬರಿನಲ್ಲಿ ಯಾರ ಯಾರ ಜಮೀನಿದೆ

ನೀವು ನಮೂದಿಸಿದ ಸರ್ವೆ ನಂಬರಿನಲ್ಲಿ ಯಾರ ಯಾರ ಹೆಸರಿಗೆ ಜಮೀನಿದೆ? ರೈತರ ಹೆಸರು ತಂದೆಯ ಹೆಸರು ಹಾಗೂ ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬ ಸಂಪೂರ್ಣ ಮಾಹಿತಿ ಇರುತ್ತದೆ.

your land transfer details ಜಮೀನು ವರ್ಗಾವಣೆ ಮಾಹಿತಿ

ನೀವು ನಮೂದಿಸಿ ಸರ್ವೆ ನಂಬರಿನ ಜಮೀನು ಯಾರ ಹೆಸರಿನಿಂದ ಯಾರ ಹೆಸರಿಗೆ ವರ್ಗಾವಣೆಯಾಗಿದೆ ಎಂಬ ಮಾಹಿತಿ ಇರುತ್ತದೆ.

ನಿಮ್ಮ ಜಮೀನು ಅಕ್ಕಪಕ್ಕದ ಜಮೀನು ಯಾರಿಂದ ಯಾರು ಖರೀದಿ ಮಾಡಿದ್ದಾರೆ?

ನೀವು ನಮೂದಿಸಿದ ಸರ್ವೆ ನಂಬರ್ ಅಕ್ಕಪಕ್ಕದಲ್ಲಿರುವ ಜಮೀನು ಯಾರ ಹೆಸರನಿಂದ ಯಾರ ಹೆಸರಿಗೆ ಹಕ್ಕು ಬದಲಾವಣೆಯಾಗಿದೆ ಎಷ್ಟು ಎಕರೆ ಜಮೀನು ವರ್ಗಾವಣೆಯಾಗಿದೆ ಎಂಬ ಮಾಹಿತಿ ಇರುತ್ತದೆ.

 ನೀವು ನಮೂದಿಸಿ ಸರ್ವೆ ನಂಬರಿನ ಪಹಣಿಯಲ್ಲಿ ಯಾರ ಯಾರ ಹೆಸರಿದೆ ಚೆಕ್ ಹೀಗೆ ಮಾಡಿ

ರೈತರು ಸರ್ವೆ ನಂಬರ್ ನಮೂದಿಸಿ ಪಹಣಿಯಲ್ಲಿ ಯಾರ ಯಾರ ಹೆಸರಿದೆ ಎಂಬುದನ್ನು ಚೆಕ್ ಮಾಡಲು ಈ

https://landrecords.karnataka.gov.in/Service2/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ತೆರೆದುಕೊಳ್ಳುವ ಪೇಜ್ ನಲ್ಲಿ ಜಿಲ್ಲೆ , ತಾಲೂಕು, ಹೋಬಳಿ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸರ್ವೆ ನಂಬರ್ ಆಯ್ಕೆ ಮಾಡಿಕೊಂಡು ಗೋ ಮೇಲೆ ಕ್ಲಿಕ್ ಮಾಡಬೇಕು. ನಂತರ ಸರ್ನೋಕ್ ನಲ್ಲಿ ಸ್ಟಾರ್ ಹಾಗೂ ಹಿಸ್ಸಾ ನಂಬರ್ ನಲ್ಲಿಯೂ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸೆಲೆಕ್ಟ್ ಪಿರಿಯಡ್ ನಲ್ಲಿ 2022-2023 ಆಯ್ಕೆ ಮಾಡಿಕೊಳ್ಳಬೇಕು.  ಸೆಲೆಕ್ಟ್ ಇಯರ್ ನಲ್ಲಿ 2022- 2023ಆಯ್ಕೆ ಮಾಡಿಕೊಂಡು Fetch details ಮೇಲೆ ಕ್ಲಿಕ್ ಮಾಡಬೇಕು ನಂತರ View ಮೇಲೆ ಕ್ಲಿಕ್ ಮಾಡಿದಾಗ ಪಹಣಿ ಪೇಜ್ ತೆರೆದುಕೊಳ್ಳುತ್ತದೆ.ಅಲ್ಲಿನೀವು ನಮೂದಿಸಿ ಸರ್ವೆ ನಂಬರಿನ ಪಹಣಿಯಲ್ಲಿ ಯಾರ ಯಾರ ಹೆಸರಿದೆ ಎಂಬುದು ಕಾಣುತ್ತದೆ.

Leave a Comment