car purchase subsidy 3 ಲಕ್ಷ ರೂಪಾಯಿ ನೀಡಲು ಅರ್ಜಿ ಆಹ್ವಾನ

Written by Ramlinganna

Updated on:

ನಿರುದ್ಯೋಗಿ ಚಾಲಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸ್ವಾವಲಂಬಿ ಸಾರಥಿ ಯೋಜನೆಯಡಿ car purchase subsidy 3 ಲಕ್ಷ ರೂಪಾಯಿಯವರೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಹೌದು, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವತಿಯಿಂದ car purchase subsidy ನಾಲ್ಕು ಚಕ್ರ ವಾಹನ (ಹಳದಿ ಬೋರ್ಡ್) ಖರೀದಿಗೆ ಪಡೆಯುವ ಸಾಲಕ್ಕೆ ಶೇ. 50 ರಷ್ಟು ಸಾಲ ಅಥವಾ ಗರಿಷ್ಠ 3 ಲಕ್ಷ ರೂಪಾಯಿಯವರೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ವೀರಶೈವ- ಲಿಂಗಾಯತ ಜಾತಿ ಹಾಗೂ ಉಪಜಾತಿಗೆ ಸೇರಿದ ಸಮುದಾಯದ ಜನರ (ಪ್ರವರ್ಗ –III ಬಿ) ಅಭಿವೃದ್ಧಿಗಾಗಿ 2023-24ನೇ ಸಾಲಿನಲ್ಲಿ ಅನುಷ್ಠಾನ ಗೊಳಿಸುತ್ತಿರುವ ಈ ಕೆಳಕಂಡ ಯೋಜನೆಗಳಲ್ಲಿ ಸೌಲಭ್ಯ ಪಡೆಯಬಯಸುವವರಿಂದ ಆನ್ಲೈನ್ ನಲ್ಲಿ ಅರ್ಜಿಗಳನ್ನುಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 30-10-2023 ಕೊನೆಯ ದಿನಾಂಕವಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು

ಅರ್ಜಿದಾರರು ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿರಬೇಕು. ಹಾಗೂ ಸಂಬಂಧಪಟ್ಟ ಪ್ರಾಧಿಕಾರದಿಂದ ಜಾತಿ ಪ್ರಮಾಣ ಪತ್ರ ಪಡೆದಿರಬೇಕು ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದವರಿಗೆ 98 ಸಾವಿರ ರೂಪಾಯಿ  ಪಟ್ಟಣ ಪ್ರದೇಶದವರಿಗೆ 1.20 ಲಕ್ಷ ರೂಪಾಯಿಗಳ ಮಿತಿಯಲ್ಲಿರಬೇಕು. ಅರ್ಜಿದಾರರು ವಯಸ್ಸು 18 ವರ್ಷ ಮೇಲ್ಪಟ್ಟು 55 ವರ್ಷ ಒಳಗಿರಬೇಕು. ಒಂದು ಕುಟುಂಬದಲ್ಲಿ ಒಬ್ಬ ಅಭ್ಯರ್ಥಿಗೆ ಮಾತ್ರ ಅವಕಾಶವಿರುತ್ತದೆ. ನಾಲ್ಕು ಚಕ್ರ ವಾಹನದ ಚಾಲನಾ ಪ್ರಮಾಣ ಪತ್ರ ಪಡೆದಿರಬೇಕು.

ಇದನ್ನೂ ಓದಿ :   ನಿಮ್ಮ ಜಮೀನಿನ ಮೇಲೆ ಸಾಲವೆಷ್ಟಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಅರ್ಜಿದಾರರು ತಮ್ಮ ಆಧಾರ್ ಕಾರ್ಡ್ ಸಂಖ್ಯೆಗೆ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡಿರಬೇಕು. ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಸೀಡ್ ಮಾಡಿರಬೇಕು. ನಿಗಮವು ಅನುಷ್ಠಾನಗೊಳಿಸುವ ಈ ಮೇಲ್ಕಂಡ ಯೋಜನೆಗಳಲ್ಲಿ ಸರ್ಕಾರದ ವಿವೇಚನಾಕೋಟಾ ಮತ್ತು ನಿಗಮದ ಅಧ್ಯಕ್ಷರು / ನಿರ್ದೇಶಕರ ಮಂಡಳಿಯ ವಿವೇಚನಾ ಕೋಡಾದಡಿ ಸೌಲಭ್ಯ ಪಡೆಯಬಯಸುವವರೂ ಸಹ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.

ಅರ್ಹ ಫಲಾಫೇಕ್ಷಿಗಳು ಗ್ರಾಮ ಒನ್ / ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರಗಳಲ್ಲಿ ದಾಖಲೆಗಳೊಂದಿಗೆ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ.

ಕಳೆದ ಮೂರು ವರ್ಷದಿಂದ ಸರ್ಕಾರದ ಯಾವುದೇ ನಿಗಮ / ಇಲಾಖೆಗಳಲ್ಲಿ ಯೋಜನೆಯ ಪ್ರಯೋಜನ ಪಡೆಯದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ನಿಗಮದ ಜಾಲತಾಣ

https://kvldcl.karnataka.gov.in/

ಅಥವಾ ನಿಗಮದ ದೂರವಾಣಿ ಸಂಖ್ಯೆ 080 22865522  ಅಥವಾ 9900012351 ಅನ್ನು ಸಂಪರ್ಕಿಸಬಹುದು. ಅಥಾ ಜಿಲ್ಲಾ ವ್ಯವಸ್ಥಾಪಕರು, ಡಿ. ದೇವರಾಜ ಅರಸು, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಸ್ವಾವಲಂಬಿ ಸಾರಥಿ ಯೋಜನೆಯಡಿ car purchase subsidy ಪಡೆಯಲು ಅರ್ಜಿ ಎಲ್ಲಿ ಸಲ್ಲಿಸಬೇಕು?

ಸ್ವಾವಲಂಬಿ ಸಾರಥಿ ಯೋಜನೆಯಡಿಯಲ್ಲಿ ನಾಲ್ಕು ಚಕ್ರ ವಾಹನ ಖರೀದಿಗೆ ಅರ್ಜಿ ಸಲ್ಲಿಸಲು ಈ ಸೇವಾಸಿಂಧು ಪೋರ್ಟಲ್ ಮೂಲಕ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಬೇಕಾಗುತ್ತದೆ.  ಆಫ್ ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಆಸಕ್ತರ ರೈತರು ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ವತಿಯಿಂದಲೇ ಅರ್ಜಿ ಸಲ್ಲಿಸಬೇಕು. ಆಯಾ ನಿಗಮದಲ್ಲಿ ಬರುವವರು ಅರ್ಜಿ ಸಲ್ಲಿಸಬೇಕು. ಇತರ ಜನಾಂಗದವರಿಗೆ ಇಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅವರಿಗೆ ಪ್ರತ್ಯೇಕವಾಗಿ ಅರ್ಜಿ ಕರೆಯಲಾಗುವದು ಆಗ ಆಯಾ ನಿಗಮದ ವತಿಯಿಂದಲೇ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು.

Leave a Comment