ನಿಮ್ಮ ಜಮೀನಿನ ಮೇಲೆ ಸಾಲವೆಷ್ಟಿದೆ? ಇಲ್ಲೇ ಚೆಕ್ ಮಾಡಿ

Written by Ramlinganna

Published on:

Check your land loan : ರೈತರು ತಮ್ಮ  ಯಾವ ಜಮೀನಿನ ಮೇಲೆ ಎಷ್ಟು ಸಾಲವಿದೆ ಎಂಬುದನ್ನು ಕೇವಲ ಒಂದೇ ನಿಮಿಷದಲ್ಲಿ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ರೈತರು ತಮ್ಮ ಜಮೀನುಗಳ ಮೇಲೆ ಯಾವ ಬ್ಯಾಂಕಿನಲ್ಲಿ ಎಷ್ಟೆಷ್ಟು ಸಾಲ ಪಡೆಯಲಾಗಿದೆ? ಸಾಲ ಪಾವತಿಸಿದ್ದರೂ ಜಮೀನಿನ ಮೇಲೆ ಸಾಲ ತೋರಿಸುತ್ತಿದೆಯೇ? ಪಹಣಿಯಲ್ಲಿ ಸಾಲ ತೋರಿಸುತ್ತಿದ್ದರೆ ಯಾರಿಗೆ ಸಂಪರ್ಕಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ರೈತರು ತಮ್ಮ ಜಮೀನುಗಳ ದಾಖಲೆಗಳನ್ನು ಪಡೆಯುವುದಷ್ಟೇ ಅಲ್ಲ, ಜಮೀನಿನ ದಾಖಲೆಗಳ ಮೇಲಾಗುವ ಬದಲಾವಣೆಗಳನ್ನು ಪರಿಶೀಲಿಸಲು ಕಚೇರಿಗೆ ಅಲೆದಾಡಬೇಕಿಲ್ಲ. ಮನೆಯಲ್ಲಿಯೇ ಕುಳಿತು ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.

Check your land loan ನಿಮ್ಮ ಜಮೀನುಗಳ ಮೇಲೆ ಸಾಲವೆಷ್ಟಿದೆ? ಹೀಗೆ ಚೆಕ್ ಮಾಡಿ

ರೈತರು ತಮ್ಮ ಜಮೀನುಗಳ ಮೇಲೆ  ಎಲ್ಲೆಲ್ಲಿ ಯಾವ ಯಾವ ಬ್ಯಾಂಕುಗಳಲ್ಲಿ ಸಾಲ ಪಡೆಯಲಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://landrecords.karnataka.gov.in/Service2/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ಆನ್ಲೈನ್ ಲ್ಯಾಂಡ್ ರಿಕಾರ್ಡ್ಸ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಸರ್ವೆ ನಂಬರ್ ನಮೂದಿಸಿ ಗೋ ಮೇಲೆ ಕ್ಲಿಕ್ ಮಾಡಬೇಕು. ಸರ್ನೋಕ್ ನಲ್ಲಿ ಸ್ಟಾರ್ ಹಾಗೂ ಹಿಸ್ಸಾ ನಂಬರ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಪಿರಿಯಡ್ ನಲ್ಲಿ 2023-2024  ಇಯರ್ ನಲ್ಲಿ 2023-2024 ಆಯ್ಕೆ ಮಾಡಿಕೊಳ್ಳಬೇಕು. Fetch details ಮೇಲೆ ಕ್ಲಿಕ್ ಮಾಡಬೇಕು. ನಂತರ ಯುವರ್ ಲ್ಯಾಂಡ್ ಐಡಿ ಕೆಳಗಡೆ ಜಮೀನಿನ ಮಾಲಿಕರ ವಿವರ ಕಾಣಿಸುತ್ತದೆ.

ಇದನ್ನೂ ಓದಿನಿಮ್ಮ ಜಮೀನಿಗೆ ಹೋಗಲು ಕಾಲುದಾರಿ, ಬಂಡಿದಾರಿ ಇದೆಯೋ ಇಲ್ಲವೋ? ಮೊಬೈಲ್ ನಲ್ಲೇ ಚೆಕ್ ಮಾಡಿ

ನೀವು ನಮೂದಿಸಿ ಸರ್ವೆ ನಂಬರ್ ನಲ್ಲಿ ಯಾವ ಯಾವ ಜಮೀನುಗಳ ಮಾಲಿಕರು ಬರುತ್ತಾರೆ. ಆ ಜಮೀನಿನ ಮಾಲಿಕರ ಹೆಸರು, ತಂದೆಯ ಹೆಸರು ಹಾಗೂ ಖಾತಾ ನಂಬರ್ ಕಾಣಿಸುತ್ತದೆ.  Details ಕೆಳಗಡೆ ಕಾಣುವ View ಮೇಲೆ ಕ್ಲಿಕ್ ಮಾಡಬೇಕು.ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ಅಲ್ಲಿ ಸರ್ವೆ ನಂಬರ್ ಕಾಣಿಸುತ್ತದೆ. ಅದರ ಮುಂದುಗಡೆ ನೀವು ನಮೂದಿಸಿದ ಸರ್ವೆ ನಂಬರ್ ನಲ್ಲಿ ಎಕರೆ ಹಾಗೂ ಗುಂಟೆ ಕಾಣಿಸುತ್ತದೆ.  ಅಂದರ ಮುಂದೆ ಜಮೀನುಗಳ ಮಾಲಿಕರಹೆಸರು ಅವರ ಹೆಸರಿಗೆ ಎಷ್ಟೆಷ್ಟುಎಕರೆ ಜಮೀನಿದೆ? ಯಾವ ರೈತರು ಯಾವ ಬ್ಯಾಂಕಿನಲ್ಲಿ ಎಷ್ಟು ಸಾಲ ಪಡೆದಿದ್ದಾರೆ ಎಂಬುದನ್ನು ಚೆಕ್ ಮಾಡಬಹುದು. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಯಾವ ಯಾವ ಬೆಳೆಗಳನ್ನು ಬಿತ್ತಲಾಗಿದೆ ಎಂಬ ಮಾಹಿತಿಯೂ ಕಾಣಿಸುತ್ತದೆ. ರೈತರಿಗೆ ಉಪಯುಕ್ತವಾದ ಮಾಹಿತಿ ನೀಡಬೇಕೆಂಬ ಉದ್ದೇಶದಿಂದ ಇಂತಹ ಸುದ್ದಿಗಳ ಮೇಲೆ ಮೆಲಕು ಹಾಕಲಾಗುತ್ತಿದೆ.

ರೈತರು ತಮ್ಮ ಬಳಿಯಿರುವ ಫೋನ್ ನಲ್ಲಿ ಮೇಲೆ ತಿಳಿಸಿದ ಪ್ರಕಾರ ಚೆಕ್ ಮಾಡಬಹುದು. ಹೌದು, ತಮ್ಮ ಬಳಿ ಸ್ಮಾರ್ಟ್ ಫೋನ್ ಇಲ್ಲದಿದ್ದರೆ ನಿಮ್ಮ ಕುಟುಂಬದ ಸದಸ್ಯರ ಬಳಿ ಇರುವ ಸ್ಮಾರ್ಟ್ ಫೋನ್ ನಿಂದಲೇ ಚೆಕ್ ಮಾಡಬಹುದು. ಇದಕ್ಕಾಗಿ ನೀವು ನಿಮ್ಮ ಜಮೀನಿನ ಸರ್ವೆ ನಂಬರ್ ನಮೂದಿಸಿದರೆ ಸಾಕು, ಎಲ್ಲ ಮಾಹಿತಿ ಮೊಬೈಲ್ ನಲ್ಲೇ ಪಡೆದುಕೊಳ್ಳಬಹುದು. ಬ್ಯಾಂಕಿಗೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.

Leave a Comment