ನಿಮ್ಮ ಜಮೀನಿಗೆ ಹೋಗಲು ಬಂಡಿದಾರಿ ಇದೆಯೇ ಇಲ್ಲೇ ಚೆಕ್ ಮಾಡಿ

Written by Ramlinganna

Updated on:

Land Way : ರೈತರು ತಮ್ಮ ಜಮೀನಿಗೆ ಹೋಗಲು ಕಾಲುದಾರಿ, ಬಂಡಿದಾರಿ ಇದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.

ಹೌದು, ರೈತರು ಈ ಮೊದಲು ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ತಹಶೀಲ್ದಾರ್ ಕಚೇರಿ, ನಾಡ ಕಚೇರಿಗಳ ಮುಂದೆ ತಾಸುಗಟ್ಟಲೇ ಕಾಯಬೇಕಾಗುತ್ತಿತ್ತು. ಆದರೂ ಸಹ ದಾಖಲೆಗಳನ್ನು ಕೆಲವು ಸಹ ಪಡೆಯಲು ಆಗುತ್ತಿರಲಿಲ್ಲ.

ಆದರೆ ಈಗ ತಂತ್ರಜ್ಞಾನ ಬದಲಾಗಿದೆ. ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ರೈತರು ಜಮೀನಿಗೆ ಸಂಬಂಧಿಸಿದ ದಾಖಲೆ ಪರಿಶೀಲಿಸಬಹುದು. ಹಾಗಾದರೆ ತಮ್ಮ ಜಮೀನಿಗೆ ಹೋಗಲು ಕಾಲುದಾರಿ ಇದ್ದು, ಈಗ ಅದು ಒತ್ತುವರಿಯಾಗಿದೆಯೇ? ಅಥವಾ ಇದ್ದರೂ ತಮಗೆ ಅಕ್ಕಪಕ್ಕದ ರೈತರು ಕಾಲುದಾರಿ ಬಿಡುತ್ತಿಲ್ಲವೇ ? ಕಾಲಾದರು ಎಲ್ಲಿಂದ ಎಲ್ಲಿಗೆ ಹಾದು ಹೋಗುತ್ತಿದೆ ಎಂಬುದನ್ನೆಲ್ಲಾ ಕೇವಲ ಒಂದೇ ನಿಮಿಷದಲ್ಲಿಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ರೈತರು ತಮ್ಮ ಜಮೀನಿಗೆ ಹೋಗಲು Land Way ಬಂಡಿದಾರಿಯಿದೆಯೇ? ಚೆಕ್ ಮಾಡುವುದು ಹೇಗೆ?

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ತಮ್ಮ ಜಮೀನುಗಳಿಗೆ ಹೋಗಲು ಕಾಲುದಾರಿ, ಬಂಡಿದಾರಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://www.landrecords.karnataka.gov.in/service3/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ Revenue Maps Online  ಕಂದಾಯ ಇಲಾಖೆಯ ವತಿಯಿಂದ ಸಿದ್ದಪಡಿಸಿದ ಮ್ಯಾಪ್ ನೋಡುವ ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದನಂರ ನಿಮ್ಮ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಆಗ ನೀವು ಆಯ್ಕೆ ಮಾಡಿಕೊಂಡ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಹೆಸರು ಕಾಣಿಸುತ್ತವೆ.

Maps Types  ನಲ್ಲಿ Cadastral Maps ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರಿನ ಮುಂದೆ ಇರುವ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಪಿಡಿಎಫ್ ಪೇಜ್ ಓಪನ್ ಆಗುತ್ತದೆ.

ಕಂದಾಯ ಇಲಾಖೆಯ ಮ್ಯಾಪ್ ನಲ್ಲಿ ಏನೇನು ಮಾಹಿತಿ ಇರುತ್ತದೆ?

ಕಂದಾಯ ಇಲಾಖೆಯ ಮ್ಯಾಪ್ ನಲ್ಲಿ ಮೊದಲು ಗ್ರಾಮದ ಗಡಿ ರೇಖೆ ಕಾಣಿಸುತ್ತದೆ.  ನಂತರ ಸರ್ವೆ ನಂಬರ್ ಗಡಿಗಳು ಕಾಣಿಸುತ್ತವೆ. ಅದರಲ್ಲಿ ಹಿಸ್ಸಾ ನಂಬರ್ ಗಳ ಗಡಿಯೂ ಇರುತ್ತದೆ. ಈ ಸರ್ವೆ ನಂಬರ್ ಗಳಲ್ಲಿ ಹಾದು ಹೋಗುವ ಕಾಲುದಾರಿ  ಎಲ್ಲಿಂದ ಎಲ್ಲಿಗೆ ಹೋರಟುಹೋಗುತ್ತಿದೆ. ಇದರೊಂದಿಗೆ ಬಂಡಿದಾರಿ ಹಾಗೂ ಡಾಂಬರು ರಸ್ತೆಗಳು ಸಹ ಎಲ್ಲಿಂದ ಎಲ್ಲಿಯವರೆಗೆ ಹಾದು ಹೋಗುತ್ತಿವೆ ಎಂಬುದನ್ನು ತೋರಿಸಲಾಗಿರುತ್ತದೆ.

ನೀವು ಕಾಲುದಾರಿ, ಬಂಡಿದಾರಿ, ಡಾಂಬಾರು ರಸ್ತೆಗಳು ಚಿಹ್ನೆಗಳನ್ನು ಮ್ಯಾಪ್ ಎಡಗಡೆ ತೋರಿಸಲಾಗಿರುತ್ತದೆ. ಆ ಆಧಾರದ ಮೇಲೆ ನೀವು ಪರಿಶೀಲಿಸಬಹುದು.

ಇದನ್ನೂ ಓದಿ ಬೆಳೆ ವಿಮೆ ಪರಿಹಾರ ಬಿಡುಗಡೆ: ನಿಮಗೂ ಜಮೆಯಾಗಿದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ

ನಿಮ್ಮ ಊರಿನ ಸುತ್ತಮುತ್ತ ಹಳ್ಳಗಳಿದ್ದರೆ ಆ ಹಳ್ಳಗಳು ಯಾವ ಮಾರ್ಗವಾಗಿ ಹಾದು ಹೋಗುತ್ತವೆ. ಬೆಟ್ಟಗಳಿದ್ದರೂ ಬೆಟ್ಟಗಳು ಯಾವ ಸರ್ವೆ ನಂಬರ್ ಅಕ್ಕಪಕ್ಕದಲ್ಲಿದೆ ಎಂಬ ಮಾಹಿತಿ ಇರುತ್ತದೆ.

ಜಮೀನಿನ ಮ್ಯಾಪ್ ನೋಡಲು ರೈತರು ಯಾವ ಅಧಿಕಾರಿಗಳ ಬಳಿಯೂ ಹೋಗಬೇಕಿಲ್ಲ. ಯಾರ ಸಹಾಯವೂ ಬೇಕಿಲ್ಲ. ತಮಗೆ ಮೊಬೈಲ್ ಬಳಕೆ ಮಾಡಲು ಗೊತ್ತಿದ್ದರೆ ಸಾಕು,  ಮೇಲೆ ತಿಳಿಸಿದ ಅತೀ ಸುಲಭದ ಮಾರ್ಗದ ಮೂಲಕ ತಿಳಿದುಕೊಳ್ಳಬಹುದು. ರೈತರ ಸ್ಮಾರ್ಟ್ ಫೋನ್ ನಲ್ಲೇ ಚೆಕ್ ಮಾಡಬಹುದು.

Leave a Comment