ಪಶು ಭಾಗ್ಯ ಯೋಜನೆಯಡಿ ರೈತರಿಗೆ ಶೇ. 50 ರಷ್ಟು ಸಬ್ಸಿಡಿ

Written by By: janajagran

Updated on:

Under the Pashu Bhagya scheme subsidy ಪಶು ಭಾಗ್ಯ ಯೋಜನೆಯಡಿಯಲ್ಲಿ  ವಾಣಿಜ್ಯ ಬ್ಯಾಂಕುಗಳಿಂದ ಗರಿಷ್ಠ 1.20 ಲಕ್ಷ ರೂಪಾಯಿಯವರೆಗೆ ಸಾಲ ಸಿಗಲಿದೆ. ಇದರಲ್ಲಿ ಶೇ. 50 ರಷ್ಟು ಸಹಾಯಧನ ಸಿಗಲಿದೆ. ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಹಸು, ಕುರಿ, ಮೇಕೆ, ಹಂದಿ, ಕೋಳಿ ಸಾಕಾಣಿಕೆ ಘಟಕಗಳನ್ನು ಸ್ಥಾಪಿಸಲು ಸಹಾಯಧನ ನೀಡಲಾಗುವುದು.

ಹೌದು, ಪಶುಭಾಗ್ಯ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. 50 ರಷ್ಟುಹಾಗೂ ಇತರ ಜನಾಂಗದವರಿಗೆಶೇ. 25 ರಷ್ಟು ಬ್ಯಾಕ್ ಎಂಡೆಡ್ ಸಹಾಯಧನ ಒದಗಿಸಲಾಗುವುದು. ಬೆಳೆ ಸಾಲದ ಮಾದರಿಯಲ್ಲಿ ಸಹಕಾರಿ ಬ್ಯಾಂಕುಗಳಿಂದ ಶೂನ್ಯ ಬಡಿದ್ದರಲ್ಲಿ 50 ಸಾವಿರ ರೂಪಾಯಿಯವರೆಗೆ ಪಶು ಆಹಾರ, ಇತರೆ ನಿರ್ವಹಣ ವೆಚ್ಚಕ್ಕಾಗಿ ಅಲ್ಪಾವಧಿಸಾಲ ಒದಗಿಸಲಾಗುವುದು.

ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ 5 ರಾಸುಗಳಿಗೆ ವಿಮಾ ಕಂತುಗಳನ್ನು ಪಾವತಿಸಲು ಸಹಾಯಧನ ಒದಗಿಸಲಾಗುವುದು. ಅದೇ ರೀತಿ ಕುರಿಗಾಹಿ ಸುರಕ್ಷಾ ಯೋಜನೆಯಡಿ ನೀಡುತ್ತಿರುವ 5 ಸಾವಿರ ಪರಿಹಾರ ಧನವನ್ನು ಮುಂದುವರೆಸಲಾಗಿದೆ.

ಪಶು ಭಾಗ್ಯ ಯೋಜನೆಯಡಿಯಲ್ಲಿ ರೈತರಿಗೆ ಸಹಾಯಧನ ನೀಡಲು ಈಗ ಫ್ರೂಟ್ಸ್ ಐಡಿಯನ್ನು ಬಳಸಿಕೊಂಡು ಪಶುಭಾಗ್ಯ ತಂತ್ರಾಂಶ ಹಾಗೂ ಅನುಕೂಲತೆಗಳ ಬಗ್ಗೆ ಒಳಗೊಂಡಿರುವ ಮಾರ್ಗಸೂಚಿಗಳ್ನು ತಯಾರಿಸಲಾಗಿದೆ.  ಪ್ರಸ್ತುತ ಎಲ್ಲಾ ಯೋಜನೆಗಳ ಫಲಾನುಭವಿಗಳ ಆಯ್ಕೆ, ಅನುಷ್ಠಾನ ಮತ್ತು ಅನುಪಾಲನೆಯನ್ನು ಈ ತಂತ್ರಾಂಶನವನ್ನ ಬಳಸಿಕೊಂಡೇ ಮಾಡಲಾಗುತ್ತಿದೆ.  ಫಲಾನುಭವಿಗಳಿಗೆ ಫ್ರೂಟ್ಸ್ ಐಡಿ ಇರುವುದು ಕಡ್ಡಾಯಗೊಳಿಸಲಾಗಿದೆ. ಒಂದು ಬಾರಿಇಲಾಖೆಯ ಯೋಜನೆಗಳಿಗೆ ಈ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿದಲ್ಲಿ ಪ್ರತಿ ವರ್ಶ ಸಲ್ಲಿಸುವ ಅಗತ್ಯವಿಲ್ಲ. ಫಲಾನುಭವಿಯು ಸ್ವತಃ ತಾನೇ ಅಥವಾ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಮತ್ತು ಇಲಾಖೆಯ ಯಾವುದೇ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಅಲ್ಲಿಯ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡಿ ಫ್ರೂಟ್ಸ್ ಐಡಿ ಪಡೆಯಬಹುದು.  ಒಮ್ಮೆ ಈ ರೀತಿ ಪಡೆದ ಗುರುತಿನ ಸಂಖ್ಯೆಯು ಶಾಶ್ವತ ಗುರುತಿನ ಸಂಖ್ಯೆಯಾಗಲಿದೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾಇಲಾಖೆಯು ಸೇರಿದಂತೆ ಈ ಎಲ್ಲಾ ಇಲಾಖೆಗಳ ಸೌಲಭ್ಯ ಮತ್ತು ಸೌಲತ್ತು ಪಡೆಯಲು ಈ ಫ್ರೂಟ್ಸ್ ಐಡಿಯನ್ನು ಬಳಸಬಹುದು.

ಇದನ್ನೂ ಓದಿ ಪಿಎಂ ಕಿಸಾನ್ ಜಮೆ ಸ್ಟೇಟಸ್ ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ

ಫಲಾನುಭವಿಯು ಸ್ವತಃ ತಾನೇ ಅಥವಾ ಇಲಾಖೆಗೆ ಮಾಹಿತಿ ನೀಡಿ ಪಶುಭಾಗ್ಯ ತಂತ್ರಾಂಶದಲ್ಲಿ ಅರ್ಜಿಯನ್ನು ಸಲ್ಲಿಸಿ ಸಹಾಯಧನ ಪಡೆಯಬಹುದು. ಫಲಾನಭವಿಯು ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಸ್ಟೇಟಸ್ ಸಹ ಚೆಕ್ ಮಾಡಿಕೊಳ್ಳಬಹುದು.

ಪಶುಪಾಲನಾ ಇಲಾಖೆಯಲ್ಲಿ ವಿವಿಧ ಯೋಜನೆಗಳಲ್ಲಿ ಸಹಾಯಧನ ಪಡೆದ ಕುಟುಂಬಗಳು ಮತ್ತೆ ಈ ಯೋಜನೆಯ ಸೌಲತ್ತು ಪಡೆಯಲು ಅರ್ಹರಾಗಿರುವುದಿಲ್ಲ.  ಆಯ್ಕೆಯಾದ ಫಲಾನುಭವಿಯು ಯೋಜನೆಯ ಅನುಷ್ಠಾನಕ್ಕೆ ಮೊದಲು ಮರಣ ಹೊಂದಿದಲ್ಲಿ ಅವರ ಅಧಿಕೃತ ವಾರಸುದಾರರಿಗೆ ಈ ಯೋಜನೆಯ ಸೌಲತ್ತು ನೀಡಲಾಗುವುದು.

Under the Pashu Bhagya scheme subsidy ಪಶು ಭಾಗ್ಯ ಯೋಜನೆಯ ಸೌಲಭ್ಯ ಪಡೆಯಲು ಬೇಕಾಗುವ ದಾಖಲೆಗಳು

ಸಾಲ ಮಂಜೂರಾತಿ ಪತ್ರ, ಫ್ರೂಟ್ಸ್ ಐಡಿ ದೃಢೀಕರಣ ಪತ್ರ ಇರಬೇಕು. ಫಲಾನುಭವಿಯೊಂದಿಗೆ ರಾಸುವಿನ ಭಾವಚಿತ್ರ ಇರಬೇಕು. ಜಾನುವಾರು ಆರೋಗ್ಯ ದೃಢೀಕರಣ ಪ್ರಮಾಣ ಪತ್ರ ಇರಬೇಕು.ಪಶು ಆಹಾರ ಖರೀದಿ ಬಿಲ್ ಗಳು ಸೇರಿದಂತೆ ಇನ್ನಿತರ ದಾಖಲೆಗಳು ಹೊಂದಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಅವರು ಬಳಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇರಬೇಕು.

ಹೈನುಗಾರಿಕೆ ಘಟಕ ಸ್ಥಾಪನೆಗೆ ಒಂದು ಮಿಶ್ರ ತಳಿ ಹಸು ಅಥವಾ ಸುಧಾರಿತ ಎಮ್ಮೆಗೆ 60 ಸಾವಿರ ರೂಪಾಯಿ ಅದರಲ್ಲಿ ಎಸ್.ಸಿ, ಎಸ್.ಟಿಯವರಿಗೆಶೇ. 54 ಸಾವಿರ ಸಹಾಯಧನ, ಸಾಮಾನ್ಯ ವರ್ಗದವರಿಗೆ 30 ಸಾವಿರ ರೂಪಾಯಿ ಸಹಾಯಧನ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಪಶು ಇಲಾಖೆ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಪರ್ಕಿಸಬಹುದು.

Leave a Comment