2022-23ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಸೇರಿದಂತೆ ವಿವಿಧ ಯೋಜನೆಯಡಿ ತೋಟಗಾರಿಕೆ ಬೆಳೆಗಾರರಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಬಾಳೆ, ದ್ರಾಕ್ಷಿ, ಡ್ರ್ಯಾಗನ್ ಫ್ರೂಟ್, ದಾಳಿಂಬೆ, ನೇರಳೆ, ಹುಣಸೆ, ಹೈಬ್ರೀಡ್ ತರಕಾರಿ ಪ್ರದೇಶ ವಿಸ್ತರಣೆಗೆ ಸಹಾಯಧನ ನೀಡಲಾಗುವುದು. ಹೂವಿನ ಬೆಳೆಗಳಾದ (ಸುಗಂಧರಾಜ, ಚಂಡುಹೂವು, ಸೇವಂತಿಗೆ) ಪ್ರದೇಶ ವಿಸ್ತರಣೆಗೆ ಸಹಾಯಧನ ನೀಡಲಾಗುವುದು. ಜೇನು ಸಾಕಾಣಿಕೆ, ವೈಯಕ್ತಿಕ ನೀರು ಸಂಗ್ರಹಣ ಘಟಕ, ಸಮುದಾಯ ಕೆರೆ ನಿರ್ಮಾಣ, ಕೋಯ್ಲೋತ್ತರ ನಿರ್ವಹಣೆ ಯೋಜನೆಯಡಿ ಪ್ಯಾಕ್ ಹೌಸ್ ಘಟಕ, ಈರುಳ್ಳಿ ಶೇಖರಣ ಘಟಕಕ್ಕೆ ಸಹಾಯಧನ ನೀಡಲಾಗುವುದು.
ತೋಟಗಾರಿಕೆ ಯಾಂತ್ರೀಕರಣ ಘಟಕದಡಿಯಲ್ಲಿ 20 ಹೆಚ್.ಪಿ ಸಾಮರ್ಥ್ಯಕ್ಕಿಂತ ಕಡಿಮೆ ಟ್ರ್ಯಾಕ್ಟರ್ ಖರೀದಿಗೂ ಸಹಾಯಧನ ಒದಗಿಸಲಾಗುವುದು. ತೋಟಗಾರಿಕೆ ಉತ್ಪನ್ನಗಳ ಮಾರಾಟಕ್ಕಾಗಿ ತಳ್ಳುವ ಗಾಡಿಗಳಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ತಾಳೆ ಬೆಳೆ ಪ್ರದೇಶ ವಿಸ್ತರಣೆ, ಅಂತರ ಬೆಳೆ ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬಹುವಾರ್ಷಿಕ ಹಣ್ಣಿನ ಬೆಳೆಗಳ ಪ್ರದೇಶ ವಿಸ್ತರಣೆಗೂ ಸಹಾಯಧನ ನೀಡಲಾಗುವುದು.
ಮಾವು, ಚಿಕ್ಕು, ಲಿಂಬೆ, ಪಪ್ಪಾಯ, ಬಾಳೆ, ದಾಳಿಂಬೆ, ಪೇರಲ, ಗೋಡಂಬಿ, ಬದುಗಳ ಸುತ್ತಲೂ ತೆಂಗು ವಿಸ್ತರಣೆಗೆ ಸಹಾಯಧನ ನೀಡಲಾಗುವುದು. ಇದರೊಂದಿಗೆ ಕೊಳವೆಬಾವಿ ಮರುಪೂರ್ಣ ಘಟಕ, ಈರುಳ್ಳಿ ಶೇಖರಣಾ ಘಟಕಗಳಿಗೆ ಕೂಲಿ ಕೂಲಿಯೇತರ ಮೊತ್ತ ಪಾವತಿಯ ಸೌಲಭ್ಯವಿದೆ. ನೀರಾವರಿ ಸೌಲಭ್ಯವುಳ್ಳ ಕೆಂಪು ಮಣ್ಣು (ಮಸಾರಿ) ಜಮೀನು ಹೊಂದಿರುವ ರೈತರಿಗೆ ಉಚಿತವಾಗಿ ಗೋಡಂಬಿ ಸಸಿಗಳನ್ನು ವಿತರಿಸಲಾಗುವುದು.
ಇದನ್ನೂ ಓದಿ: ಭಾಗ್ಯಲಕ್ಷ್ಮೀ ಬಾಂಡ್ ಯೋಜನೆಯಡಿ ನಿಮ್ಮ ಮಗುವಿನ ಹೆಸರಿಗೆ ಎಷ್ಟು ಹಣ ಜಮೆಯಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ
ಗದಗ ಜಿಲ್ಲೆಯ ರೋಣ ತಾಲೂಕಿನ ರೈತರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇದೇ ರೀತಿ ಇತರ ಜಿಲ್ಲೆಯ ರೈತರು ಆಯಾ ತಾಲೂಕಿನ ವ್ಯಾಪ್ತಿಯಲ್ಲಿರುವ ತೋಟಗಾರಿಕೆ ಇಲಾಖೆಯಲ್ಲಿ ವಿಚಾರಿಸಿ ಅರ್ಜಿ ಸಲ್ಲಿಸಬಹುದು. ರೋಣ ತಾಲೂಕಿನ ರೈತರಿಗೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ.
ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆ ಬೇಕು?
ತೋಟಗಾರಿಕೆ ಇಲಾಖೆಯ ವತಿಯಿಂದ ಸಹಾಯಧನದ ಸೌಲಭ್ಯ ಪಡೆಯಲಿಚ್ಚಿರುವ ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇರಬೇಕು. ಪಹಣಿ ಪ್ರತಿ ಇರಬೇಕು. ಇತ್ತೀಚಿನ ಫೋಟೋಗಳಿರಬೇಕು. ಅರ್ಜಿಯೊಂದಿಗೆ ಇನ್ನಿತರ ದಾಖಲೆಗಳ ಅಗತ್ಯವಿದ್ದರೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯೊಂದಿಗೆ ಕೇಳಲಾದ ದಾಖಲೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳಇಗೆ ಸಂಪರ್ಕಿಸಬಹುದು. ರೋಣ ಹೋಬಳಿಯ ರೈತರು 9964864464, ಹೊಳೆ ಆಲೂರ ಹೋಬಳಿಯ ರೈತರು 9164309540, ನರೇಗಲ್ಲ1 ಹೋಬಳಿಯ ರೈತರು 9739384476 ಹಾಗೂ ನರೇಗಲ್ಲ-2 ಹೋಬಳಿಯ ರೈತರು 9108344017, ಸಹಾಯಕ ತೋಟಗಾರಿಕೆ ನಿರ್ದೇಶಕರು,9972467330, ಹಿರಿಯ ತೋಟಗಾರಿಕೆ ನಿರ್ದೇಶಕರು 9886215054 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರತಿವರ್ಷದಂತೆ ಈ ವರ್ಷವೂ ಸಹ ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ರೈತರು ಸಹಾಯಧನದೊಂದಿಗೆ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ರೈತರಿಗೆ ಶೇ. 25 ರಿಂದ 50 ರಷ್ಟು ಸಹಾಯಧನ ನೀಡಲಾಗುವುದು. ಈ ಯೋಜನೆಯಡಿ ಹಿಂದೆ ಸೌಲಭ್ಯ ಪಡೆಯದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಲಭ್ಯತೆಯ ಆಧಾರದ ಮೇಲೆ ರೈತರಿಗೆ ಸೌಲಭ್ಯ ನೀಡಲಾಗುವುದು. ಅರ್ಜಿ ಸಲ್ಲಿಸಲು ತಡಮಾಡದೆ ಕೊನೆಯ ದಿನಾಂಕದ ಮೊದಲೇ ಅರ್ಜಿ ಸಲ್ಲಿಸಿ ತೋಟಗಾರಿಕೆ ಇಲಾಖೆಯ ವತಿಯಿಂದ ರೈತರು ಸೌಲಭ್ಯ ಪಡೆಯಬಹುದು.