ಕೇಂದ್ರ ಸರ್ಕಾರದ ಪಿಎಂ ಕುಸುಮ್ ಯೋಜನೆಯಡಿ ಜಾಲಮುಕ್ತ ಸೌರಚಾಲಿತ ಕೃಷಿ ಪಂಪ್ಸೆಟ್ ಗಳಿಗಾಗಿ ಆನ್ಲೈನ್ ಮೂಲಕ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪಿಎಂ ಕುಸುಮ್ ಯೋಜನೆಯಡಿ ಮೊದಲ ಹಂತದಲ್ಲಿ ಸುಮಾರು 4400 ಜಾಲಮುಕ್ತ ಸೌರಶಕ್ತಿ ಚಾಲಿತ ಪಂಪಸೆಟ್ ಗಳನ್ನು ಅಳವಡಿಸುವ ಯೋಜನೆಯನ್ನು ಕೆ.ಆರ್.ಇ.ಡಿಎಲ್ ಮೂಲಕ ರಾಜ್ಯ ವ್ಯಾಪ್ತಿಯ ವಿದ್ಯುತ್ ಸರಬರಾಜು ಕಂಪನಿಗಳ ಸಹಯೋಗದೊಂದಿಗೆ ಕೈಗೊಳ್ಳಲು ರಾಜ್ಯ ಸರ್ಕಾರವು ನಿರ್ಧರಿಸಿದೆ.
ಯಾವ ವರ್ಗಕ್ಕೆ ಎಷ್ಟು ಸಹಾಯಧನ ನೀಡಲಾಗುವುದು?
ಪಿಎಂ ಕುಸುಮ್ ಯೋಜನೆಯಡಿಯಲ್ಲಿ ಪ್ರತಿ ಸೌರ ಪಂಪ್ಸೆಟ್ ಗೆ ಶೇ. 30 ರಷ್ಟು ಕೇಂದ್ರ ಸರ್ಕಾರದ ಸಹಾಯಧನ, ಹಾಗೂ ರಾಜ್ಯ ಸರ್ಕಾರದಿಂದ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ. 30 ರಷ್ಟು ಸಹಾಯಧನ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಫಲಾನುಭವಿಗಳಿಗೆಶೇ. 50 ರಷ್ಟು ಸಹಾಯಧನ ನೀಡಲಾಗುವುದು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಾಯಧನ ಸೇರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. 80 ರಷ್ಟು ಸಹಾಯಧನ ಹಾಗೂ ಇತರೆ ವರ್ಗಗಳರೈತರಿಗೆ ಶೇ. 60 ರಷ್ಟು ಸಹಾಯಧನ ನೀಡಲಾಗುವುದು.
ಆನ್ಸನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ
https://kredl.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕುಸುಮ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಕಾಣುವ Click here to Register online for off Grid Solar pumps PM KUSUM Component B ಮೇಲೆ ಕ್ಲಿಕ್ ಮಾಡಬೇಕು. ನಂತರ ಆನ್ಲೈನ್ ಅರ್ಜಿ ಓಪನ್ ಆಗುತ್ತದೆ. ಅಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.
ರೈತರು ಅರ್ಜಿ ಸಲ್ಲಿಸುವ ಮುನ್ನ ಈ ಅಂಶಗಳು ನೆನಪಿಡಸಬೇಕು
ರೈತರ ಜಮೀನಿನಲ್ಲಿ ಕೊಳವೆಬಾವಿ ಕೊರೆಸಲು ಸಿದ್ದವಿರಬೇಕು. ಹೊಸ ಕೃಷಿ ಪಂಪ್ ಸೆಟ್ ಗಳಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ. (ಹಾಲಿ ವಿದ್ಯುತ್ ಸಂಪರ್ಕವನ್ನು ಹೊಂದಿರುವ ಪಂಪ್ ಸೆಟ್ಗಳಿಗೆ ಅರ್ಹವಿರುವುದಿಲ್ಲ)
ಎಂಎನ್ಆರ್.ಇ ಮಾನದಂಡಗಳ ಪ್ರಕಾರ ಪಂಪುಗಳ ನೀರೆತ್ತುವ ಆಳ ಮೀಟರಗಳಲ್ಲಿ 3ಹೆಚ್.ಪಿಗೆ 20 ಮೀಟರ್, 5 ಹೆಚ್.ಪಿಗೆ 70 ಮೀಟರ್, 7.5 ಹೆಚ್ ಪಿಗೆ 100 ಮೀಟರ್ ಇರಬೇಕು.
ಈಗಾಗಲೇ ಗಂಗಾಕಲ್ಯಾಣ ಯೋಜನೆಯಡಿ ಲಾಭ ಪಡೆದಿರುವ ಹಾಗೂ ಪಡೆಯಲು ಪ್ರಕ್ರಿಯೆಯಲ್ಲಿರುವ ಫಲಾನುಭವಿಗಳು ಸದರಿ ಯೋಜನೆಯ ಲಾಭ ಪಡೆಯಲು ಅರ್ಹರಿರುವುದಿಲ್ಲ.
ಅರ್ಜಿದಾರರು ಅವರ ವಂತಿಗೆಯನ್ನು ಡಿಡಿ ಮೂಲಕವೇ ಸಲ್ಲಿಸಬೇಕು. ಚೆಕ್ ಅಥವಾ ಇತರೆ ಆನ್ಲೈನ್ ಪೇಮೆಂಟ್ ಮೂಲಕ ಅರ್ಜಿದಾರರ ವಂತಿಗೆ ಹಣ ಸ್ವೀಕರಿಸಲಾಗುವುದಿಲ್ಲ.ಎಲ್ಲಾ ವರ್ಗದ ಅರ್ಜಿಗಳಲ್ಲಿ ವಿಶೇಷಚೇತನರಿಗೆ ಶೇ. 5 ರಷ್ಟು ಮೀಸಲಾತಿ ಇರುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ಮಾಹಿತಿಗಳು
ಅರ್ಜಿದಾರರ ಆಧಾರ್ ಕಾರ್ಡ್, ಭೂ ಮಾಲಿಕತ್ವದ ದಾಕಳೆ, ವಾಸಸ್ಥಳ ಮತ್ತು ವಿಳಾಸ, ದೂರವಾಣಿ ಸಂಖ್ಯೆ, ಭೂ ದಾಖಲೆಗಳ ವಿವಿರಗಳು ಅಂದರೆ ಆರ್.ಟಿ.ಸಿ, ಸರ್ವೆ ನಂಬರ್, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಪಂಚಾಯತ್ ಹಾಗೂ ಗ್ರಾಮ ನಮೂದಿಸುವುದು ಕಡ್ಡಾಯಾಗಿದೆ.
ಅರ್ಜಿದಾರರ ಬ್ಯಾಂಕ್ ಖಾತೆ ವಿವರ ಅಂದರೆ ಬ್ಯಾಂಕ್ ಹೆಸರು, ಶಾಖೆಯ ಹೆಸರು, ಬ್ಯಾಂಕ್ ಅಕೌಂಟ್ ನಂಬರ್, ಐಎಫ್ಎಸ್.ಸಿ ಕೋಡ್, ಇರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಆರ್.ಡಿ ಸಂಖ್ಯೆಯಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರ ಇರಬೇಕು. ರೇಷನ್ ಕಾರ್ಡ್ ಸಲ್ಲಿಸಬೇಕು. ಮೇಲೆ ತಿಳಿಸಿದ ಎಲ್ಲಾದಾಖಲೆಗಳನ್ನು ಎರಡು ಸೆಟ್ ಝರಾಕ್ಸ್ ಮಾಡಿಕೊಂಡು ವಿದ್ಯುತ್ ಸರಬರಾಜುಕಂಪನಿಯ ಕಾರ್ಯ ಮತ್ತು ಪಾಲನಾ ಉಪ ವಿಭಾಗಕಚೇರಿಗೆ ಸಲ್ಲಿಸಬೇಕು.
ಆನ್ಲೈನ್ ಮೂಲಕ ಅರ್ಜಿ ನೋಂದಾಯಿಸಿಕೊಂಡನಂತರ ಪಡೆದ ಸ್ವೀಕೃತಿ ಪ್ರತಿಯಲ್ಲಿ ಸಹಿ ಮಾಡಿ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ನಿಗಧಿತ ಸ್ಥಳದಲ್ಲಿ ಅಂಟಿಸಿ ಸಹಿ ಮಾಡಬೇಕು.ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ಐದು ದಿನದೊಳಗಾಗಿ ಸಂಬಂಧಿಸಿದ ವಿದ್ಯುತ್ ಸರಬರಾಜು ಕಂಪನಿಯ ಉಪ ವಿಭಾಗೀಯ ಕಚೇರಿಗಳಿಗೆಸಲ್ಲಿಸಿ ಸ್ವೀಕೃತಿ ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ವೇಳೆಯಲ್ಲಿ ಕೆ.ಆರ್.ಇ.ಡಿಎಲ್ ಸಂಸ್ಥೆಯ ದೂರವಾಣಿ ಸಂಖ್ಯೆ 8095132100 ಗೆ ಕರೆ ಮಾಡಿ ವಿಚಾರಿಸಬಹುದು.
ವಿಶೇಷ ಸೂಚನೆ:
ಕರ್ನಾಟಕ ನವೀಕರಿಸಬಹುದಾದ ಅಭಿವೃದ್ಧಿ ನಿಗಮ ನಿಯಮಿತದ (ಕೆ.ಆರ್.ಇ.ಡಿಎಲ್) ಅಧಿಕೃತ ಜಾಲತಾಣ https://kredl.karnataka.gov.in/
ದಲ್ಲಿ ಲಭ್ಯವಾಗುವ ಲಿಂಕ್ ಮೂಲಕ ಮಾತ್ರ PM KUSUM, Component B ಯೋಜನೆಯಡಿ ಆನ್ಲೈನ್ ಮೂಲಕ ಅರ್ಜಿ ನೋಂದಾಯಿಸಿಕೊಳ್ಳಲು ಸೂಚಿಸಿದೆ.