Top ten mini tractors ಗಳ ಮಾಹಿತಿ ಇಲ್ಲಿದೆ

Written by By: janajagran

Updated on:

Top ten mini tractors : ರೈತರ ಜಮೀನು ಉಳುಮೆಗೆ ಕಡಿಮೆ ದರದಲ್ಲಿ ಸಿಗುವ ಟಾಪ್ ಟೆನ್ ಟ್ರ್ಯಾಕ್ಟರ್ ಗಳ ಮಾಹಿತಿ ಇಲ್ಲಿದೆ.

ರೈತರು ಹಿಂದೆ ಕೃಷಿ ಚಟುವಟಿಕೆಗಳಿಗಾಗಿ ಹೆಚ್ಚು ಎತ್ತುಗಳನ್ನೇ ಅವಲಂಬಿಸಿದ್ದರು. ಆದರೆ ಈಗ ತಂತ್ರಜ್ಞಾನ ಬೆಳೆದಂತೆ ಕೃಷಿ ಉಪಕರಣಗಳಿಗೆ ಮೊರೆ ಹೋಗುತ್ತಿದ್ದಾರೆ. ವಿಶೇಷವಾಗಿ ಎತ್ತುಗಳ ಬದಲಾಗಿ ಟ್ರ್ಯಾಕ್ಟರ್ ನಂತಹ ಉಪಕರಣಗಳ ನೆರವನ್ನು ಪಡೆಯುತ್ತಿದ್ದಾರೆ. ಈಗ ಟ್ರ್ಯಾಕ್ಟರ್ ರೈತರ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಡಿಸಿದೆ.

ಉಳುಮೆಯಿಂದ ಹಿಡಿದು ಕಣ ಮಾಡುವವರೆಗೂ ಟ್ರ್ಯಾಕ್ಟರ್ ಗಳ ಬಳಕೆ ಹೆಚ್ಚಾಗಿದೆ. ಈಗಂತು ಟ್ರ್ಯಾಕ್ಟರ್ ಗಳಿಲ್ಲದ ಊರಿಲ್ಲವೆಂದೇ ಹೇಳುವಷ್ಟು ಟ್ರ್ಯಾಕ್ಟರ್ ಪ್ರಸಿದ್ಧಿ ಪಡೆದಿದೆ. ಅದರಲ್ಲಿ  ಕಡಿಮೆ ದರದಲ್ಲಿ ಸಿಗುವ ಹೆಚ್ಚು ಬಾಳಿಕೆ ಬರುವ ಟ್ರ್ಯಾಕ್ಟರ್ ಗಳ ಬೇಡಿಕೆ ಹೆಚ್ಚಾಗುತ್ತಿದೆ. ದೊಡ್ಡ ರೈತರಷ್ಟೇ ಅಲ್ಲ, ಸಣ್ಣ ರೈತರು ಟ್ರ್ಯಾಕ್ಟರ್ ಖರೀದಿಸುವಷ್ಟರ ಮಟ್ಟಿಗೆ ಟ್ರ್ಯಾಕ್ಟರ್ ಗಳು ಈಗ ಸಿಗುತ್ತಿವೆ. ಕೃಷಿಯಲ್ಲಿ ರೈತರು ಹೆಚ್ಚಾಗಿ ಉಪಯೋಗಿಸುವ ವಾಹನಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿ ಟ್ರ್ಯಾಕ್ಟರ್ ಇದೆ.

Top ten mini tractors ಕಡಿಮೆ ದರದಲ್ಲಿ ಸಿಗುವ ಟಾಪ್ ಟೆನ್ ಟ್ರ್ಯಾಕ್ಟರ್ ಗಳು

1, ಮಹೀಂದ್ರ ಯುವರಾಜ 215 NXT ಇದರ ಬೆಲೆ 2,50 ಲಕ್ಷ ದಿಂದ ಆರಂಭವಾಗುತ್ತದೆ.

  1. ಸೋನಾಲಿಕಾ DI 35 RX ಇಧರ ಬೆಲೆ 5 ಲಕ್ಷದಿಂದ ಆರಂಭವಾಗುತ್ತದೆ.
  2. ಪ್ರೀತ್ 3549 ಇದರ ಬೆಲೆಯೂ ಸಹ 5 ಲಕ್ಷದಿಂದ ಆರಂಭವಾಗುತ್ತದೆ.
  3. ಕುಬೋಟಾ ನ್ಯೂಸ್ಟಾರ್ B2741ಇದರ ಬೆಲೆ 5.45 ಲಕ್ಷದಿಂದ ಆರಂಭವಾಗುತ್ತದೆ.
  4. ಜಾನ್ ಡೀರ್ 5105 ಇದರ ಆರಂಭಿಕ ಬೆಲೆ 5.55 ಲಕ್ಷದಿಂದ ಆರಂಭವಾಗುತ್ತದೆ.
  5. ಐಚರ್ 380 SUPER DI ಇದರ ಬೆಲೆ 5.60 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ.

ಜಗತ್ತಿನಲ್ಲಿ ಅತೀ ಹೆಚ್ಚು ಮಹೀಂದ್ರಾ & ಮಹೀಂದ್ರಾ ಟ್ರ್ಯಾಕ್ಟರ್ ಕಂಪನಿಯ ಟ್ರ್ಯಾಕ್ಟರ್ ಗಳು ಮಾರಾಟವಾಗುತ್ತದೆ. ನಂತರ ಜಾನ್  ಕಂಪನಿಯ ಟ್ರ್ಯಾಕ್ಟರ್ ಗಳು ಸಹ ಹೆಚ್ಚು ಮಾರಾಟವಾಗುತ್ತವೆ. ವಿಶೇಷವಾಗಿ ಕೃಷಿಯಲ್ಲಿ ಹೆಚ್ಚು ಬಳಕೆಯಾಗುವ ಟ್ರ್ಯಾಕ್ಟರ್ ಗಳು ಸಹ ಇವಾಗಿವೆ.

ಕೃಷಿಯಲ್ಲಿ ಹೆಚ್ಚು ಬಳಕೆಯಾಗುವ ಟ್ರ್ಯಾಕ್ಟರ್ ಗಳು

ಮಹೀಂದ್ರಾ ಮತ್ತು ಮಹೀಂದ್ರಾ, ಸೋನಾಲಿಕಾ, ಎಸ್ಕಾರ್ಟ್ಸ್,  ಜಾನ್ ಡೀರ್,  ನ್ಯೂ ಹಾಲೆಂಡ್, ಸ್ವರಾಜ್, ಯುವರಾಜ್,  ಕುಬೋಟಾ ಮತ್ತು ವಿಎಸ್.ಟಿ ಸೇರಿದಂತೆ ಇನ್ನಿತರ ಟ್ರ್ಯಾಕ್ಟರ್ ಗಳು ಹೆಚ್ಚು ಕೃಷಿಯಲ್ಲಿ ಬಳಕೆಯಾಗುತ್ತವೆ. ರೈತರು ಸುಲಭವಾಗಿ ಖರೀದಿಸುವ ಅಗ್ಗದ ಟ್ರ್ಯಾಕ್ಟರ್ ಗಳನ್ನು ಪರಿಚಯಿಸುತ್ತಿವೆ. ಅದರಲ್ಲಿ ಮಹಿಂದ್ರಾ ಮತ್ತು ಮಹೀಂದ್ರ ಟ್ರ್ಯಾಕ್ಟರ್ ಕಂಪನಿಯು ರೈತರಿಗೆ ಕಡಿಮೆ ದರದಲ್ಲಿ ಟ್ರ್ಯಾಕ್ಟರ್ ನೀಡಲು ಮುಂಚೂಣಿಯಲ್ಲಿದೆ.  ಇದರೊಂದಿಗೆ ಇತರ ಟ್ರ್ಯಾಕ್ಟರ್ ಕಂಪನಿಗಳು ಸಹ ತಾವೇನು ಕಡಿಮೆಯಿಲ್ಲವೆಂಬಂತೆ ಮುಂದೆ ಬರುತ್ತಿವೆ.

ಇದನ್ನೂ ಓದಿ : ಕೃಷಿ ಇಲಾಖೆಯ ಸೌಲಭ್ಯ ಪಡೆಯಲು ರೈತರಿಗೆ ಫ್ರೂಟ್ಸ್ ಐಡಿ (ಸ್ವಾಭಿಮಾನ ರೈತ ಕಾರ್ಡ್) ಏಕೆ ಬೇಕು.? ಮೊಬೈಲ್ ನಲ್ಲಿಯೇ ಪಡೆಯಬಹುದು ಸ್ವಾಭಿಮಾನ ರೈತ ಕಾರ್ಡ್.. ಇಲ್ಲಿದೆ ಮಾಹಿತಿ

ರೈತರಿಗೆ ಕಡಿಮೆ ದರದಲ್ಲಿ ಹೆಚ್ಚು ಬಾಳಿಕೆ ಬರುವ ಟ್ರ್ಯಾಕ್ಟರ್ ಗಳನ್ನು ತಯಾರಿಸುವಲ್ಲಿಯೂ ಸಹ ಕಂಪನಿಗಳು ತಾವೇ ಮುಂದೆ ಎಂಬಂತೆ ಹೊಸ ಹೊಸ ಮಾದರಿಯ ಟ್ರ್ಯಾಕ್ಟರ್ ಗಳನ್ನು ತಯಾರಿಸುತ್ತಿವೆ.

Top ten mini tractors ಕಡಿಮೆ ಬೆಲೆಗೆ ಸಿಗುವ ಹೆಚ್ಚು ಪ್ರಸಿದ್ಧಿ ಪಡೆದಿರುವ ಟಾಪ್ ಮಿನಿ ಟ್ರ್ಯಾಕ್ಟರ್ ಗಳು

ಮಾಡಲ್                        ಬೆಲೆ (in Lakhs)

Mahindra Yuvraj 215 NXT– Starting From 2.50 Lakhs

Swaraj 717- Starting From 2.60 Lakhs

Eicher 188- Starting From 2.90 Lakhs

Captain 120 DI 4WD- Starting From 3.12 Lakhs

Mahindra JIVO 245 DI- Starting From 3.90 Lakhs

Swaraj 724 XM Orchard- Starting From 3.95 Lakhs

VST Shakti MT 270 Viraat 4WD Plus- Starting From 4.05 Lakhs

Kubota NeoStar A211N 4WD– Starting From 4.15 Lakhs

Sonalika GT 26 RX– Starting From 4.40 Lakhs

Force Orchard Deluxe- Starting From 4.50 Lakhs

Leave a Comment