ಕೃಷಿ ಇಲಾಖೆಯ ಸೌಲಭ್ಯ ಪಡೆಯಲು ರೈತರಿಗೆ ಫ್ರೂಟ್ಸ್ ಐಡಿ ಬೇಕು

Written by By: janajagran

Updated on:

Do you know why important FRUITS Id to farmers ರೈತರು ಇನ್ನೂ ಮುಂದೆ ಕೃಷಿ ಇಲಾಖೆಯ ಯಾವುದೇ ಸೌಲಭ್ಯ ಪಡೆಯಬೇಕಾದರೆ ಫ್ರೂಟ್ಸ್ ಐಡಿ ಅತೀ ಮಹತ್ವ ಪಡೆದಿದೆ. ಫ್ರೂಟ್ಸ್ ಐಡಿ ಇಲ್ಲದಿದ್ದರೆ ರೈತರಿಗೆ ಯಾವುದೇ ಸೌಲಭ್ಯ ಸಿಗುವುದಿಲ್ಲ. ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ ಇಲಾಖೆ, ಮೀನುಗಾರಿಕೆ ಹಾಗೂ ಕೃಷಿ ಇಲಾಖೆ ಹೀಗೆ ಸರ್ಕಾರದ ಯಾವುದೇ ಸೌಲಭ್ಯಕ್ಕೆ ಫ್ರೂಟ್ಸ್ ಐಡಿ ಮಹತ್ವ ಪಡೆದಿದೆ.

ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಪಡೆಯುವ ಕೃಷಿ ಯಂತ್ರೋಪಕರಣಗಳಾಗಲಿ, ಬಿತ್ತನೆ ಬೀಜವಾಗಲಿ, ಕೃಷಿ ಉಪಕರಣಗಳಾಗಲಿ ಹೀಗೆ ಯಾವುದೇ ಉಪಕರಣಗಳು ಸಬ್ಸಿಡಿಯಲ್ಲಿ ಪಡೆಯಬೇಕಾದರೆ ರೈತರಿಗೆ ಫ್ರೂಟ್ಸ್ ಐಡಿ ಕೇಳುತ್ತಾರೆ. ರೈತರು ಕೃಷಿ ಇಲಾಖೆಯ ಸಬ್ಸಿಡಿ ಪಡೆಯಲು ಈಗ ಫ್ರೂಟ್ಸ್ ಐಡಿ ಕಡ್ಡಾಯಗೊಳಿಸಲಾಗಿದೆ. ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನ ಮಾರಾಟ ಮಾಡಲು ಹಾಗೂ ರೈತರ ಮಕ್ಕಳು ರೈತವಿದ್ಯಾನಿಧಿ ಯೋಜನೆಯಡಿ ಶಿಷ್ಯವೇತನ ಪಡೆಯಲು ಸಹ ಫ್ರೂಟ್ಸ್ ಐಡಿ ಮಹತ್ವದ್ದಾಗಿದೆ.

ಈ ಫ್ರೂಟ್ಸ್ ಐಡಿಯನ್ನುಯನ್ನು ಸ್ವಾಭಿಮಾನ ರೈತ ಕಾರ್ಡ್ ಎಂದು ಸಹ ಕರೆಯುತ್ತಾರೆ. ಈ ಕಾರ್ಡ್ ನ್ನು ರೈತರು ಮೊಬೈಲ್ ನಲ್ಲಿಯೇ ನೋಂದಣಿ ಮಾಡಿಕೊಂಡು ಪಡೆಯಬಹುದು ಅದು ಹೇಗೆ ಅಂದು ಕೊಂಡಿದ್ದೀರಾ… ಇಲ್ಲಿದೆ ಸ್ಟೆಪ್ ಬೈ ಸ್ಟೆಪ್ ಮಾಹಿತಿ.

Do you know why important FRUITS Id to farmers ಫ್ರೂಟ್ಸ್ ಐಡಿ ಗೆ ಬೇಕಾಗುವ ದಾಖಲೆಗಳು

ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನಿಮ್ಮ ಫೋಟೋ ಬೇಕಾಗುತ್ತದೆ.

ರೈತರು ಮೊಬೈಲ್ ನಲ್ಲಿಯೇ ಫ್ರೂಟ್ಸ್ ಐಡಿ (ಸ್ವಾಭಿಮಾನ ರೈತ ಕಾರ್ಡ್) ಮಾಡಲು  ಈ https://fruits.karnataka.gov.in/OnlineUserLogin.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಆಗ ಫ್ರೂಟ್ಸ್ ಐಡಿ ಕ್ರಿಯೇಟ್ ಮಾಡಲು ಸರ್ಕಾರದ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು Citizen Registration ಮೇಲೆ ಕ್ಲಿಕ್ ಮಾಡಬೇಕು. ಆಗ ಫ್ರೂಟ್ಸ್ ಐಡಿಯ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಹೆಸರನ್ನು ಆಧಾರ್ ಕಾರ್ಡ್ ನಲ್ಲಿರುವಂತೆ ನಮೂದಿಸಿ ಆಧಾರ್ ನಂಬರ್ ಹಾಕಬೇಕು. ನಂತರ  ಐ ಆಗ್ರಿ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಮೊಬೈಲ್ ನಂಬರ್ ನಮೂದಿಸಬೇಕು. ಒಂದು ವೇಳೆ ನೀವು ಈ ಮೇಲ್ ಐಡಿ ಇದ್ದರೆ ಎಸ್ ಆಯ್ಕೆಮಾಡಬೇಕು. ಇಲ್ಲದಿದ್ದರೆ ನೋ ಆಯ್ಕೆ ಮಾಡಿಕೊಳ್ಳಬೇಕು. ನಂತರ ಪ್ರೊಸೀಡ್ ಮೇಲೆ ಕ್ಲಿಕ್ ಮಾಡಬೇಕು.  ಆಗ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲಿಗೆ ಒಂದು ಓಟಿಪಿ ಬರುತ್ತದೆ. ಆ ಓಟಿಪಿ ನಂಬರ್ ನಮೂದಿಸಿ ಸಬ್ಮೀಟ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ  ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನೆಲ್ಲಾ ಭರ್ತಿ ಮಾಡಬೇಕು.

ಇದನ್ನೂ ಓದಿ : ಯಾವ ಬ್ಯಾಂಕಿನಲ್ಲಿ ಎಷ್ಟು ಮತ್ತು ಎಲ್ಲೆಲ್ಲಿ ಸಾಲ ಪಡೆದಿದ್ದೀರೆಂಬುದನ್ನು ಮೊಬೈಲ್ ನಲ್ಲಿಯೇ ಉಚಿತವಾಗಿ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಒಂದು ವೇಳೆ ಫ್ರೂಟ್ಸ್ ತಂತ್ರಾಂಶದಲ್ಲಿ  ನಿಮ್ಮ ಹೆಸರು ನೋಂದಾಯಿಸಲು ನಿಮಗೆ ಸಮಸ್ಯೆಯಾಗುತ್ತಿದ್ದರೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು. ಅಲ್ಲಿ ನೀವು ನಿಮ್ಮ ಜಮೀನಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಝರಾಕ್ಸ್ , ಆರ್. ಡಿ ಸಂಖ್ಯೆಯಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಇತ್ತೀಚಿನ ಫೋಟೋ ತೆಗೆದುಕೊಂಡು ನಿಮ್ಮ ಹೆಸರಿನ ಮೇಲೆ ಸ್ವಾಭಿಮಾನ ರೈತ ಕಾರ್ಡ್ ಮಾಡಿಸಿಕೊಳ್ಳಬಹುದು.

Leave a Comment