ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ

Written by By: janajagran

Updated on:

Grama vastavya “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಅಭಿಯಾನವನ್ನು ತಾತ್ಕಾಲಿಕವಾಗಿ ಕೋವಿಡ-19 ರ ಸಾಂಕ್ರಾಮಿಕ ರೋಗ ಹರಡುವಿಕೆಯಿಂದಾಗಿ ಸ್ಥಗಿತಗೊಂಡಿರುವುದನ್ನು ಪ್ರಸ್ತುತ ದಿನಾಂಕ:16.10.2021 ರಿಂದ ಪುನರಾರಂಭಿಸಲು ತೀರ್ಮಾನಿಸಲಾಗಿದೆ, ಆದರಿಂದ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಇತರೆ ಅಧಿಕಾರಿಗಳಾದ ಭೂದಾಖಲೆಗಳ ಉಪನಿರ್ದೇಶಕರು,ಭೂದಾಖಲೆಗಳ ಸಹಾಯಕ ನಿರ್ದೇಶಕರು, ಉಪವಿಭಾಗದ ಸಹಾಯಕ ಆಯುಕ್ತರು, ಸಂಬಂಧಪಟ್ಟ ತಾಲೂಕಿನ ತಹಸೀಲ್ದಾರರು,ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಕಡ್ಡಾಯವಾಗಿ ನಿಗದಿಪಡಿಸಿಕೊಂಡಿರುವ ಗ್ರಾಮ/ಹಳ್ಳಿಗಳಲ್ಲಿ ದಿನಾಂಕ:16.10.2021 ರಂದು ವಾಸ್ತವ್ಯ ಹೂಡಿ ಗ್ರಾಮಸ್ಥರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲು ಸೂಚಿಸಿರುತ್ತಾರೆ.

Grama vastavya ಸದರಿ ಗ್ರಾಮವಾಸ್ತವ್ಯದಲ್ಲಿ ಕೈಗೊಳ್ಳಲಾಗುವ ಕ್ರಮಗಳು ಈ ಕೆಳಗಿನಂತಿರುತ್ತವೆ.

ಇದನ್ನೂ ಓದಿ ನಿಮ್ಮ ಜಮೀನಿನ ಮ್ಯಾಪ್ mobileನಲ್ಲಿ ಡೌನ್ಲೋಡ್ ಮಾಡಿ

1.ಭೇಟಿ ನೀಡಿದ ಗ್ರಾಮದಲ್ಲಿನ ಎಲ್ಲಾ ಪಹಣಿಯಲ್ಲಿನ ಲೋಪದೋಷಗಳು, ಪಹಣಿ ಕಾಲಂ 3 ಮತ್ತು ಆಕಾರಬಂದ್ ತಾಳೆಹೊಂದಿರುವ ಬಗ್ಗೆ ಖಚಿತಪಡಿಸಿಗೊಳ್ಳುವುದು.ಎಲ್ಲಾ ಪಹಣಿಗಳಲ್ಲಿಯೂ ಕೂಡ ಕಾಲಂ ನಂ.3 ಮತ್ತು ಕಾಲಂ ನಂ.9 ತಾಳೆ ಹೊಂದುವಂತೆ ಸೂಕ್ತ ಆದೇಶಗಳನ್ನು ಹೊರಡಿಸುವುದು.

 1. ಗ್ರಾಮದಲ್ಲಿ ಪೌತಿ(ಮರಣ) ಹೊಂದಿದ ಖಾತೆದಾರರ ಹೆಸರನ್ನು ಪಹಣಿಯ ಕಾಲಂ 9 ರಿಂದ ತೆಗೆದು ನೈಜ  ವಾರಸುದಾರರ ಹೆಸರಿಗೆ ಖಾತೆ ಮಾಡಲು ಕ್ರಮ ವಹಿಸಲಾಗುವುದು.
 2. ಗ್ರಾಮದ ಎಲ್ಲಾ ಅರ್ಹ ವ್ಯಕ್ತಿಗಳಿಗೆ ಪಿಂಚಣಿ ಸೌಲಭ್ಯ ದೊರೆಯುತ್ತಿರುವ ಬಗ್ಗೆ ಪರಿಶೀಲಿಸಲಾಗುವುದು ಹಾಗೂ ಬಿಟ್ಟು ಹೊದಂತಹ ಅರ್ಹ ಪ್ರಕರಣಗಳ ಕುರಿತು ಪರಿಶೀಲಿಸಿ ಪರಿಹಾರ ಕಂಡುಕೊಳ್ಳುವುದು.
 3. ಗ್ರಾಮದಲ್ಲಿ ಸ್ಮಶಾನ ಭೂಮಿ ಲಭ್ಯತೆಯ ಬಗ್ಗೆ ಪರಿಶೀಲಿಸುವುದು.
 4. ಗ್ರಾಮದಲ್ಲಿ ಆಶ್ರಯ ಯೋಜನೆಗೆ ಅವಶ್ಯಕತೆ ಇದ್ದಲ್ಲಿ ಲಭ್ಯ ಜಮೀನನ್ನು ಕಾಯ್ದಿರಿಸಲು ಕ್ರಮ ವಹಿಸಲಾಗುವುದು.
 5. ಸರ್ಕಾರಿ ಜಮೀನು ಅಕ್ರಮ ಒತ್ತುವರಿ ತೆರವುಗೊಳಿಸುವುದು.
 6. ಆಧಾರ್ ಕಾರ್ಡಿನ ಅನೂಕೂಲತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು.
 7. ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಪಡೆಯಲು ಆನ್ ಲೈನ್ ಮುಖಾಂತರ ಸಂಬಂಧಪಟ್ಟ  ನಾಡಕಚೇರಿಗಳಲ್ಲಿ  ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು.
 8. ಸರ್ಕಾರದಿಂದ ಸಾರ್ವಜನಿಕರಿಗೆ ದೊರೆಯಬಹುದಾದ ವಿವಿಧ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವುದು.
 9.    ಮತದಾರರ ಪಟ್ಟಿ ಪರಿಷ್ಕರಣೆ.
 10.    ಬರ/ಪ್ರವಾಹ ಇದ್ದಲ್ಲಿ ಪರಿಹಾರ ಕುರಿತು ಕ್ರಮ ಕೈಗೊಳ್ಳುವುದು.
 11.   ಪ್ರವಾಹದ ಹಾನಿ ತಡೆಗಟ್ಟಲು ಸಲಹೆ ನೀಡುವುದು.
 12.   ಅತೀವೃಷ್ಟಿ/ಅನಾವೃಷ್ಟಿ ಎದುರಿಸಲು ಮುಂಜಾಗೃತೆ ಕ್ರಮ ಕೈಗೊಳ್ಳುವುದು.
 13.     ಜಮೀನಿನ ಹದ್ದು ಬಸ್ತು,ಪೋಡಿ, ಪೋಡಿ ಮುಕ್ತಗ್ರಾಮ,ದರಕಾಸ್ತು ಪೋಡಿ(ನಮೂನೆ-1-5 ಮತ್ತು ನಮೂನೆ 6-10 ನ್ನು ಭರ್ತಿ ಮಾಡಿ ದರಕಾಸ್ತು ಪೋಡಿ ಮಾಡುವುದು) ಕಂದಾಯ ಗ್ರಾಮಗಳ ರಚನೆ.
 14. ಗ್ರಾಮದಲ್ಲಿರುವ ಸರ್ಕಾರಿ ವಸತಿ ನಿಲಯ, ಸರ್ಕಾರಿ ಶಾಲೆ ಹಾಗೂ ಅಂಗನವಾಡಿಗಳಿಗೆ ಭೇಟಿ ನೀಡಿ ಆಹಾರ, ಕಲಿಕಾ ಕ್ರಮ ಇತ್ಯಾದಿ ಬಗ್ಗೆ ಪರಿಶೀಲಿಸುವುದು
 15. ಎಲ್ಲಾ ಅರ್ಹ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ದೊರೆತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು.
 16. ಗುಡಿಸಲು ರಹಿತ ವಾಸದ ಮನೆ ನಿರ್ಮಾಣ ಕುರಿತು ಕ್ರಮ ಕೈಗೊಳ್ಳುವುದು.
 17. ಗ್ರಾಮದಲ್ಲಿಯ ಇತರೆ ಕುಂದುಕೊರತೆಗಳನ್ನು ಸಹ ಆಲಿಸಿ ಪರಿಹಾರ ಕಂಡುಕೊಳ್ಳಲಾಗುವುದು.

ಮಾನ್ಯ ಸರ್ಕಾರದ ನಿರ್ದೇಶನದಂತೆ ಅಕ್ಟೋಬರ-2021 ತಿಂಗಳ ಮೂರನೇ ಶನಿವಾರ ಅಂದರೆ ದಿನಾಂಕ:16.10.2021 ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಇತರೆ ಕಂದಾಯ ಇಲಾಖೆಯ ಅಧಿಕಾರಿಯೂ ಈ ಕೆಳಕಂಡ ಗ್ರಾಮಗಳಲ್ಲಿ ವಾಸ್ತವ್ಯವನ್ನು ಮಾಡಲು ನಿರ್ಧರಿಸಲಾಗಿರುತ್ತದೆ.

ಕ್ರಮ ಸಂಖ್ಯೆ ಜಿಲ್ಲೆ ತಾಲೂಕ ಗ್ರಾಮ ದಿನಾಂಕ ಭೇಟಿ ನೀಡುವ ಅಧಿಕಾರಿಗಳು
01 ಕಲಬುರಗಿ ಕಾಳಗಿ ಕೊರವಿ (ರಾಮನಗರ ತಾಂಡಾ) 16.10.2021 ಮಾನ್ಯ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಕಲಬುರಗಿ, ತಹಸೀಲ್ದಾರ ಕಾಳಗಿ
02 ಕಲಬುರಗಿ ಸೇಡಂ ನೀಲಹಳ್ಳಿ 16.10.2021 ಸಹಾಯಕ ಆಯುಕ್ತರು ಸೇಡಂ ಮತ್ತು ತಹಸೀಲ್ದಾರ ಸೇಡಂ
03 ಕಲಬುರಗಿ ಚಿತ್ತಾಪೂರ ಕರದಾಳ 16.10.2021 ತಹಸೀಲ್ದಾರ ಚಿತ್ತಾಪೂರ
04 ಕಲಬುರಗಿ ಶಹಬಾದ ತರನಳ್ಳಿ 16.10.2021 ತಹಸೀಲ್ದಾರ ಶಹಬಾದ
05 ಕಲಬುರಗಿ ಚಿಂಚೋಳಿ ಚೆನ್ನೂರ 16.10.2021 ತಹಸೀಲ್ದಾರ ಚಿಂಚೋಳಿ
06 ಕಲಬುರಗಿ ಕಮಲಾಪೂರ ಯಕ್ಕಂಚಿ 16.10.2021 ತಹಸೀಲ್ದಾರ ಕಮಲಾಪೂರ
07 ಕಲಬುರಗಿ ಕಲಬುರಗಿ ಮೇಳಕುಂದಾ ಬಿ 16.10.2021 ತಹಸೀಲ್ದಾರ ಕಲಬುರಗಿ
08 ಕಲಬುರಗಿ ಆಳಂದ ಶಿರೂರ (ಜಿ) 16.10.2021 ತಹಸೀಲ್ದಾರ ಆಳಂದ
09 ಕಲಬುರಗಿ ಅಫಜಲಪೂರ ಚೌಡಾಪೂರ 16.10.2021 ತಹಸೀಲ್ದಾರ ಅಫಜಲಪೂರ
10 ಕಲಬುರಗಿ ಜೇವರ್ಗಿ ಸೊನ್ನ 16.10.2021 ತಹಸೀಲ್ದಾರ ಜೇವರ್ಗಿ
11 ಕಲಬುರಗಿ ಯಡ್ರಾಮಿ ಮುತ್ತಕೋಡ 16.10.2021 ತಹಸೀಲ್ದಾರ ಯಡ್ರಾಮಿ

ಸದರಿ ಗ್ರಾಮ ವಾಸ್ತವ್ಯದಲ್ಲಿ ಅಧಿಕಾರಿಗಳ ಭೇಟಿ ಸಮಯ ಬೆಳಿಗ್ಗೆ 10.00 ಗಂಟೆಯಿಂದ ಸಾಯಂಕಾಲ 5.00 ಗಂಟೆವರೆಗೆ ನಿಗದಿಪಡಿಸಲಾಗಿರುತ್ತದೆ. ನಂತರ ಗ್ರಾಮೀಣ ಪ್ರತಿಭೆ ಹಾಗೂ ಕಲೆಗೆ ಪ್ರೋತ್ಸಾಹಿಸುವಂತೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅದೇ ಗ್ರಾಮದಲ್ಲಿ ವಾಸ್ತವ್ಯವನ್ನು ಮಾಡಲಾಗುತ್ತಿದೆ ಪ್ರಯುಕ್ತ ಸದರಿ ಸಮಯದಲ್ಲಿ ಸಂಬಂಧಪಟ್ಟ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಿದೆ.

Leave a Comment