ತೋಟಗಾರಿಕೆಯ ಕೆಲವು ಬೆಳೆಗಳಿಗೆ ವಿಮೆ ಮಾಡಿಸಲು ಇನ್ನೂ ಕೇವಲ ನಾಲ್ಕು ದಿನ ಬಾಕಿ ಉಳಿದಿದೆ. ನಾಲ್ಕು ದಿನಗಳೊಳಗಾಗಿ ದಾಳಿಂಬೆ, ಪಪ್ಪಾಯ, ನಿಂಬೆ, ದ್ರಾಕ್ಷಿ, ಹಸಿ ಮೆಣಸಿನಕಾಯಿ, ಅಡಿಕೆ, ಶುಂಠಿ,, ಈರುಳ್ಳಿ, ಕರಿಮೆಣಸು ಬೆಳೆಗಳಿಗೆ ವಿಮೆ ಮಾಡಿಸಿ ವಿಮಾ ಸೌಲಭ್ಯ ಪಡೆದುಕೊಳ್ಳಬಹುದು.
ಹೌದು, ಪ್ರಸಕ್ತ 2022-23ನೇ ಸಾಲಿನ ಮುಂಗಾರು ಹಂಗಾಮಿಗಾಗಿ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿಯಲ್ಲಿ ರೈತರು ದಾಳಿಂಬೆ, ದ್ರಾಶ್ರಿ, ಪಪ್ಪಾಯ, ನಿಂಬೆ, ಅಡಿಕೆ, ಶುಂಠಿ, ಕರಿಮೆಣಸು ಹಾಗೂ ಹಸಿ ಮೆಣಸಿನಕಾಯಿ ಬೆಳೆಗಳಿಗೆ ವಿಮೆ ಮಾಡಿಸಲು ಜೂನ್ 30 ಕೊನೆಯ ದಿನಾಂಕವಾಗಿದೆ.
ರೈತರು ಹಸಿರುಮೆಣಸಿನ ಕಾಯಿ (ನೀರಾವರಿ) ಬೆಳೆಗೆ ಪ್ರತಿ ಹೆಕ್ಟೇರಿಗೆ 3550 ರೂಪಾಯಿ ಹಾಗೂ ಪಪ್ಪಾಯ ಬೆಳೆಗೆ ಪ್ರತಿ ಹೆಕ್ಟೇರಿಗೆ 6700 ರೂಪಾಯಿ ವಿಮಾ ಕಂತಿನ ಮೊತ್ತವನ್ನು ಪಾವತಿಸಬೇಕು.ಸಾಲ ಪಡೆದ ಮತ್ತು ಸಾಲ ಪಡೆಯದ ರೈತರು ವಿಮಾ ಕಂತು ಪಾವತಿಗೆ ಅಂತಿಮ ದಿನಾಂಕ ಜೂನ್ 30 ಇರುತ್ತದೆ.
ಅಡಿಕೆ ಬೆಳೆಗೆ ವಿಮೆ ಮಾಡಿಸುವ ರೈತರು 1 ಎಕರೆಗೆ ರೈತರು 2590 ರೂಪಾಯಿ ವಂತಿಕೆ ಪಾವತಿಸಬೇಕು. ಬೆಳೆ ನಷ್ಟವಾದರೆ ರೈತರಿಗೆ ಒಂದು ಎಕರೆಗೆ 51801 ರೂಪಾಯಿಯವರೆಗೆ ವಿಮೆ ಪಾವತಿಸಲಾಗುವುದು.
ಶುಂಠಿ ಬೆಳೆಗೆ ವಿಮೆ ಮಾಡಿಸುವ ರೈತರು 1 ಎಕರೆಗೆ ರೈತರು 2630 ರೂಪಾಯಿ ವಂತಿಗೆ ಪಾವತಿಸಬೇಕು. ಬೆಳೆ ನಷ್ಟವಾದರೆ ರೈತರಿಗೆ ಎಕರೆಗೆ 52611 ರೂಪಾಯಿಯವರೆಗೆ ವಿಮೆ ಹಣ ಪಾವತಿಸಲಾಗುವುದು.
ಪಪ್ಪಾಯ ಬೆಳೆಗೆ ವಿಮೆ ಮಾಡಿಸುವ ರೈತರು 1 ಎಕರೆಗೆ ರೈತರು 2711 ರೂಪಾಯಿ ವಂತಿಗೆ ಪಾವತಿಸಿದರೆ. ಬೆಳೆ ನಷ್ಟವಾದರೆ ರೈತರಿಗೆ ಎಕರೆಗೆ 54229 ರೂಪಾಯಿಯವರೆಗೆ ವಿಮೆ ಹಣ ಪಾವತಿಸಲಾಗುವುದು.
ಅರಿಶಿಣ ಬೆಳೆಗೆ ವಿಮೆ ಮಾಡಿಸುವ ರೈತರು 1 ಎಕರೆಗೆ ರೈತರು 2691 ರೂಪಾಯಿ ವಂತಿಗೆ ಕಟ್ಟಬೇಕು. ಬೆಳೆ ನಷ್ಟವಾದರೆ ರೈತರಿಗೆ ಎಕರೆಗೆ 53825 ರೂಪಾಯಿಯವರೆಗೆ ವಿಮೆ ಹಣ ಪಾವತಿಸಲಾಗುವುದು.
ದ್ರಾಕ್ಷಿ ಬೆಳೆಗೆ ವಿಮೆ ಮಾಡಿಸುವ ರೈತರು 1 ಎಕರೆಗೆ ರೈತರು 5665 ರೂಪಾಯಿ ವಂತಿಗೆ ಕಟ್ಟಬೇಕು. ಬೆಳೆ ನಷ್ಟವಾದರೆ ರೈತರಿಗೆ ಎಕರೆಗೆ 113316 ರೂಪಾಯಿಯವರೆಗೆ ವಿಮೆ ಪಾವತಿಲಾಗುವುದು.
ಕರಿಮೆಣಸು ಬೆಳೆಗೆ ವಿಮೆ ಮಾಡಿಸುವ ರೈತರು 1 ಎಕರೆಗೆ ರೈತರು 951 ರೂಪಾಯಿ ವಂತಿಗೆ ಕಟ್ಟಬೇಕು. ಬೆಳೆ ನಷ್ಟವಾದರೆ ರೈತರಿಗೆ ಎಕರೆಗೆ 19020 ರೂಪಾಯಿಯವರೆಗೆ ವಿಮೆ ಹಣ ಪಾವತಿಸಲಾಗುವುದು.
ದಾಳಿಂಬೆ ಬೆಳೆಗೆ ವಿಮೆ ಮಾಡಿಸುವ ರೈತರು 1 ಎಕರೆಗೆ ರೈತರು 2569 ರೂಬಪಾಯಿ ವಂತಿಗೆ ಕಟ್ಟಬೇಕು. ಬೆಳೆ ನಷ್ಟವಾದರೆ ರೈತರಿಗೆ ಎಕರೆಗೆ 51396 ರೂಪಾಯಿಯವರೆಗೆ ವಿಮೆ ಹಣ ಪಾವತಿಸಲಾಗುವುದು.
ರೈತರು ಬೆಳೆ ವಿಮೆ ಮಾಡಿಸುವ ಮುನ್ನ ಯಾವ ವಿಮಾ ಕಂಪನಿಗೆ ವಿಮಾ ಕಂತು ಕಟ್ಟಲಾಗಿದೆ. ನಿಮ್ಮ ತಾಲೂಕಿನ ವಿಮಾ ಕಂಪನಿಯ ಸಿಬ್ಬಂದಿ ಮೊ. ನಂಬರ್ ಇಟ್ಟುಕೊಳ್ಳಬೇಕು. ಏಕೆಂದರೆ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾದರೆ 72 ಗಂಟೆಯೊಳಗೆ ದೂರು ನೀಡಬೇಕಾಗುತ್ತದೆ. ಬೆಳೆಹಾನಿಯಾದಾಗ ಸಂಬಂಧಪಟ್ಟ ವಿಮಾ ಕಂಪನಿಗೆ ತಿಳಿಸುವುದು ಅಗತ್ಯವಾಗಿದೆ.
ಇದನ್ನೂ ಓದಿ : ಮೊಬೈಲ್ ನಲ್ಲೇ ನಿಮ್ಮ ಜಮೀನಿನ ಅಳತೆ ಮಾಡಬೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಸದುಪಯೋಗ ಪಡೆಯಲು ಬೆಳೆ ಸಾಲ ಪಡೆಯದ ರೈತರು ಹತ್ತಿರದ ಬ್ಯಾಂಕುಗಳಿಗೆ ಅಥವಾ ಸಾಮಾನ್ಯ ಸೇಾ ಕೇಂದ್ರಗಳಿಗೆ ಭೇಟಿ ನೀಡಿ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ನೊಂದಿಗೆ ಈ ಯೋಜನೆಯ ಸದುಪಯೋಗ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ರೈತರು ಸಮೀಪದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ರೈತ ಸಂಪರ್ಕ ಕೇಂದ್ರದ ಸಹಾಯಕ ಕೋಟಗಾರಿಕೆ ಅಧಿಕಾರಿಗಳು, ಹತ್ತಿರದ ಬ್ಯಾಂಕುಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ರೈತರು ಕೊನೆಯ ದಿನಾಂಕದವರೆಗೆ ಕಾಯದೆ ಕೂಡಲೇ ಬೆಳೆ ವಿಮೆ ಮಾಡಿಸಿಕೊಳ್ಳಬೇಕು. ಕೊನೆಯ ದಿನಾಂಕದ ತಾಂತ್ರಿಕ ಸಮಸ್ಯೆಯುಂಟಾಗಿ ಬೆಳೆ ವಿಮೆ ಸೌಲಭ್ಯದಿಂದ ವಂಚಿತರಾಗಬಹುದು. ದಾಳಿಂಬೆ, ಪಪ್ಪಾಯ, ನಿಂಬೆ, ದ್ರಾಕ್ಷಿ, ಹಸಿ ಮೆಣಸಿನಕಾಯಿ, ಅಡಿಕೆ, ಶುಂಠಿ,, ಈರುಳ್ಳಿ, ಕರಿಮೆಣಸು ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸಲು ಜೂನ್ 30 ಕೊನೆಯ ದಿನಾಂಕವಾಗಿದೆ.