ರೈತರ ಪಹಣಿಯಲ್ಲಿ ಜಮೀನು ಎಷ್ಟು ಎಕರೆ ಮತ್ತು ಗುಂಟೆಯಿದೆ ಎಂಬ ಮಾಹಿತಿ ನೀಡಲಾಗಿರುತ್ತದೆ. ಆದರೆ ನಿಜವಾಗಲೂ ಪಹಣಿಯಲ್ಲಿ ತೋರಿಸಿದಂತೆ ಜಮೀನಿನ ಅಳತೆಯಿದೆಯೇ ಎಂಬುದನ್ನು ರೈತರು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ರೈತರ ಜಮೀನು ಅಳತೆ ಮಾಡಲು ಈಗ ಯಾವ ಹಗ್ಗವೂ ಬೇಕಾಗಿಲ್ಲ, ಚೈನ್ ಸಹ ಬೇಕಾಗಿಲ್ಲ.ರೈತರ ಬಳಿ ಸ್ಮಾರ್ಟ್ ಫೋನ್ ಒಂದಿದ್ದರೆ ಸಾಕು, ಯಾರ ಸಹಾಯವೂ ಇಲ್ಲದೆ ತಾವಿದ್ದ ಸರ್ವೆ ನಂಬರ್ ಎಷ್ಟು ಎಕರೆ ಮತ್ತು ಗುಂಟೆಯಲ್ಲಿದೆ ಎಂಬುದನ್ನು ಚೆಕ್ ಮಾಡಬಹುದು. ಯಾವ ಆ್ಯಪ್ ಸಹಾಯದಿಂದ ಜಮೀನಿನ ಅಳತೆ ಮಾಡಬೇಕೆಂದುಕೊಂಡಿದ್ದೀರಾ? ಇಲ್ಲಿದೆ ಮಾಹಿತಿ.
ಜಮೀನು ಅಳತೆ ಮಾಡಲು ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು ಹೇಗೆ?
ರೈತರು ತಮ್ಮ ಜಮೀನಿನ ಅಳತೆ ಮೊಬೈಲ್ ನಲ್ಲೇ ಮಾಡಿಕೊಳ್ಳಲು ಜಿಪಿಎಸ್ ಫೀಲ್ಡ್ ಏರಿಯಾ ಮೀಸರಮೆಂಟ್ ಆ್ಯಪನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ರೈತರು ತಮ್ಮ ಮೊಬೈಲ್ ನ ಪ್ಲೇ ಸ್ಟೋರ್ ನಲ್ಲಿ GPS Fields Area Measure ಎಂದು ಟೈಪ್ ಮಾಡಬೇಕು.ಆಗ ನಿಮಗೆ ಜಿಪಿಎಸ್ ಫೀಲ್ಡ್ ಏರಿಯಾ ಮೀಸರ್ ಆ್ಯಪ್ ಕಾಣುತ್ತದೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಲ್ಲಿಇನ್ಸಟಾಲ್ ಮಾಡಿಕೊಳ್ಳಬಹುದು. ಅಥವಾ ಈ
https://play.google.com/store/apps/details?id=lt.noframe.fieldsareameasure
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನಸ್ಟಾಲ್ ಮೇಲೆ ಕ್ಲಿಕ್ ಮಾಡಿ ಓಪನ್ ಮೇಲೆ ಕ್ಲಿಕ್ ಮಾಡಬೇಕು. ಆಗ ವೈಲ್ ಯೂಸಿಂಗ್ ದ ಆ್ಯಪ್ ಮೇಲೆ ಕ್ಲಿಕ್ ಮಾಡಬೇಕು. ಮೈ ಲೊಕೇಶನ್ ಮೇಲೆ ಕ್ಲಿಕ್ ಮಾಡಬೇಕು.ಆಗ ನೀವು ಯಾವ ಸ್ಥಳದಲ್ಲಿದ್ದೀರೋ ಅದು ಗೂಗಲ್ ಪೈಂಟ್ ಮಾಡಿರುತ್ತದೆ. ಮೇಲ್ಗಡೆ ಕಾಣವ ಎಡಬದಿಯಲ್ಲಿ ಮೂರು ಲೈನ್ ಇರುವ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಸೆಟಿಂಗ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
ಅಲ್ಲಿ ಯೂನಿಟ್ ಕೆಳಕಡೆ ಕಾಣುವ ಮೀಸರಮೆಂಟ್ ಸಿಸ್ಟಮ್ ಮೇಲೆ ಕ್ಲಿಕ್ ಮಾಡಿ ಮಾಡಿ ಇಂಪಿರಿಯಲ್ ಆಯ್ಕೆ ಮಾಡಿಕೊಳ್ಳಬೇಕು. ಏರಿಯಾ ಯೂನಿಟ್ ನಲ್ಲಿ ಫೀಟ್ ಎಕರ್ ಆಯ್ಕೆ ಮಾಡಿಕೊಂಡು ಡನ್ ಮೇಲೆ ಕ್ಲಿಕ್ ಮಾಡಬೇಕು. ಡಿಸ್ಟಂಟ್ ಯೂನಿಟ್ ನಲ್ಲಿ ಫೀಟ್ ಆಯ್ಕೆ ಮಾಡಿ ಡನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಕೆಳಗಡೆ ಕಾಣುವ ಪ್ಲಸ್ ಸಿಂಬಲ್ ಮೇಲೆ ಕ್ಲಿಕ್ ಮಾಡಿ ಏರಿಯಾ ಮೇಲೆ ಕ್ಲಿಕ್ ಮಾಡಿನಂತರ ಮ್ಯಾನುವಲ್ ಮೀಸರಿಂಗ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ಯಾವುದನ್ನು ಅಳತೆ ಮಾಡಬೇಕೆಂದುಕೊಂಡಿದ್ದೀರೋ ಅಲ್ಲಿ ಕಾಣುವ ಬೌಂಡರಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಬೌಂಡರಿ ಮೇಲೆ ಕ್ಲಿಕ್ ಮಾಡಿ ಹೀಗೆ ನಾಲ್ಕು ಬೌಂಡರಿ ಮೇಲೆ ಕ್ಲಿಕ್ ಮಾಡಿ ಕರೆಕ್ಟ್ ಆಗಿ ಅಡಜೆಸ್ಟ್ ಮಾಡಬೇಕು. ಆಗ ನಿಮಗೆ ಮೇಲ್ಗಡೆ ಎಕರೆಮತ್ತುಗುಂಟೆ ಕಾಣಿಸುತ್ತದೆ.
ಇದನ್ನೂ ಓದಿ : ರೈತರು ತಮ್ಮ ಜಮೀನಿನ ಮ್ಯಾಪ್ ಮೊಬೈಲ್ ನಲ್ಲೇ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
ರೈತರು ಅಳತೆ ಮಾಡುವಾಗ ಝೂಮ್ ಮಾಡಬೇಕು. ಆಗ ನಿಮಗೆ ಕರೆಕ್ಟ್ ಆಗಿ ಮಾರ್ಕ್ ಮಾಡಲು ಸಹಾಯವಾಗುತ್ತದೆ. ಝೂಮ್ ಮಾಡಿದ ನಂತರ ಅಳತೆ ಮಾಡಲು ಸರಳವಾಗುತ್ತದೆ. ನೀವು ಅಳತೆ ಮಾಡುವ ಜಮೀನು ಚೌಕಾಕಾರವಲ್ಲದಿದ್ದರೂ ಅಳತೆ ಮಾಡಬಹುದು. ಅಲ್ಲಿ ಕಾಣುವ ಮೆಸರಮೆಂಚ್ ಪ್ಲಸ್ ಆಕಾರದ ಸಹಾಯದಿಂದ ಸರಿಯಾಗಿ ಪೈಂಟ್ ಮಾಡಿ ಅಳತೆ ಮಾಡಬಹುದು.
ಜಮೀನಿನ ಅಳತೆ ಮಾಡುವಾಗ ಆ ಸ್ಥಳದಲ್ಲಿ ನಿಂತುಕೊಂಡರೆ ನೀವು ಯಾವ ಸ್ಥಳದಲ್ಲಿದ್ದೀರಿ ಎಂಬುದು ಜಿಪಿಎಸ್ ಸಹಾಯದಿಂದ ಕಾಣುತ್ತದೆ. ಇದು ಕೇವಲ ಜಮೀನಿನ ಸರ್ವೆ ನಂಬರ್ ಅಷ್ಟೇ ಅಲ್ಲ ಮನೆಯ ಸೈಟ್ ಅಳತೆಯನ್ನು ಸಹ ಮಾಡಬಹುದು.