ಉಚಿತ ಶೌಚಾಲಯ ಫಲಾನುಭವಿಗಳ ಹೆಸರು ಚೆಕ್ ಮಾಡಿ

Written by Ramlinganna

Updated on:

Swatch bharat beneficiary list ಸ್ವಚ್ಛ ಭಾರತ್ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಯಾರ ಯಾರ ಹೆಸರು ಸೇರಿಸಲಾಗಿದೆ ಎಂಬುದನ್ನು ಸಾರ್ವಜನಿಕರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಇದಕ್ಕಾಗಿ ಸಾರ್ವಜನಿಕರು ಗ್ರಾಮ ಪಂಚಾಯತ ಕಚೇರಿಗೆ ತೆರಳಬೇಕಿಲ್ಲ. ಗಂಟೆಗಟ್ಟಲೇ ಅಲ್ಲಿ ಕಾಯುವುದು ಬೇಕಿಲ್ಲ. ಮನೆಯಲ್ಲಿಯೇ ಕುಳಿತು ಸ್ವಚ್ಛ ಭಾರತ್ ಫಲಾನುಭವಿಗಳಪಟ್ಟಿಯಲ್ಲಿ ಸ್ಟೇಟಸ್ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

Swatch bharat beneficiary list ಸ್ವಚ್ಛ ಭಾರತ್ ಫಲಾನುಭವಿಗಳ ಪಟ್ಟಿ ಚೆಕ್ ಮಾಡುವುದು ಹೇಗೆ?

ಸಾರ್ವಜನಿಕರು ಮನೆಯಲ್ಲಿಯೇ ಕುಳಿತು ಸ್ವಚ್ಛ ಭಾರತ್ ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ? ಅಥವಾ ಅರ್ಜಿ ತಿರಸ್ಕಾರಗೊಂಡಿದೆಯೋ ಶೌಚಾಲಯ ನಿರ್ಮಾಣಕ್ಕೆ ಹಣ ಪಾವತಿಸಲಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://mahitikanaja.karnataka.gov.in/PTBank/PTSwachhBharatScheme?DepartmentID=1015&type=Swatch%20Bharat&ServiceID=1026

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮಾಹಿತಿ ಕಣಜದ ಸಾರ್ವಜನಿಕ ಮಾಹಿತಿ ವ್ಯವಸ್ಥೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಸ್ವಚ್ಛ ಭಾರತ್ ಫಲಾನುಭವಿಗಳ ಪಟ್ಟಿ ಕೆಳಗಡೆ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಗ್ರಾಮ ಪಂಚಾಯತಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗ್ರಾಮ ಆಯ್ಕೆ ಮಾಡಿಕೊಂಡು ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು.  ಆಗ ಆ ಗ್ರಾಮದಲ್ಲಿ ಯಾರ ಯಾರ ಹೆಸರುಗಳನ್ನು ಸ್ವಚ್ಛ ಭಾರತ್ ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂಬ ಪಟ್ಟಿ ಕಾಣುತ್ತದೆ.

ಸ್ವಚ್ಛ ಭಾರತ್ ಫಲಾನುಭವಿಗಳ ಪಟ್ಟಿಯಲ್ಲಿ ಏನೇನು ಮಾಹಿತಿ ಇರುತ್ತದೆ?

ಅಲ್ಲಿ ಅರ್ಜಿ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳು, ಫಲಾನುಭವಿಯ ಹೆಸರು ತಂದೆಯ ಹೆಸರು ಕಾಣುತ್ತದೆ. ಅರ್ಜಿಯ ಪ್ರಸ್ತುತ ಸ್ಟೇಟಸ್ ಏನಿದೆ. ಅರ್ಜಿ ತಿರಸ್ಕಾರವಾಗಿದೆಯೋ  ಅಂತಿಮ ಹಂತದ ಪರಿಶೀಲನೆ ಪ್ರಗತಿಯಲ್ಲಿದೆಯೋ ಅಥವಾ ಬ್ಯಾಂಕ್ ಪಾವತಿ ಪ್ರಕ್ರಿಯೆ ಪೂರ್ಣಗೊಂಡಿದೆಯೋ ಎಂಬುದ ಮಾಹಿತಿ ಇರುತ್ತದೆ. ಇಲ್ಲಿ ಗ್ರಾಮದಲ್ಲಿರುವ ಯಾರ ಯಾರ ಹೆಸರಿದೆ ಎಂಬ ಪಟ್ಟಿ ಇರುವುದರಿಂದ ಹೆಚ್ಚು ಹೆಸರಿರುತ್ತವೆ.

ಇದನ್ನೂ ಓದಿ ನಿಮ್ಮ ಜಮೀನಿನೊಂದಿಗೆ ನಿಮ್ಮ ಅಕ್ಕಪಕ್ಕದ ಜಮೀನು ಯಾರ ಹೆಸರಿಗೆ ಎಷ್ಟು ಎಕರೆ ಜಂಟಿಯಾಗಿದೆ? 

ನಿಮ್ಮ ಹೆಸರು ಎಲ್ಲಿದೆ ಎಂಬುದನ್ನುಕೆಳಗಡೆ ಹುಡುಕುತ್ತಾ ಹೋಗಬೇಕು. ನಿಮ್ಮ ಹೆಸರು ಬಂದ ಮೇಲೆ  ಪ್ರಸ್ತುತ ಸ್ಥಿತಿ ಕಾಲನಂಲ್ಲಿ ಏನು ಬರೆಯಲಾಗಿದೆ ಎಂಬುದನ್ನು ಚೆಕ್ ಮಾಡಬಹುದು. ಒಂದು ವೇಳೆ ನಿಮ್ಮ ಹೆಸರಿನ ಮುಂದೆ ಬ್ಯಾಂಕ್ ಪಾವತಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂಬ ಮಾಹಿತಿ ಇದ್ದರೆ ಎಸ್ಟು ಹಣ ನಿಮಗೆ ಪಾವತಿಸಲಾಗಿದೆ ಎಂಬುದು ಸಹ ಕಾಣುತ್ತದೆ.

ಒಂದು ವೇಳೆ ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿದ್ದು ಆದೇಶ ತಯಾರಾಗಿಲ್ಲ ಎಂದು ಇದ್ದರೆ ನಿಮ್ಮಹೆಸರಿಗೆ ಸ್ವಚ್ಛ ಭಾರತ್ ಯೋಜನೆಯಡಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಆದೇಶ ತಯಾರಾಗಿಲ್ಲವೆಂದರ್ಥ. ನಿಮ್ಮ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಶೌಚಾಲಯ ನಿರ್ಮಾಣಕ್ಕೆ ಮನವಿ ಮಾಡಬಹುದು.

ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯ ನಿರ್ಮಿಸಿ ಪೂರ್ಣಗೊಳಿಸಲು ಆಯಾ ಗ್ರಾಮ ಪಂಚಾಯತ್ ನಲ್ಲಿ ಪಿಡಿಒಗಳಿಗೆ ಸೂಚಿಸಲಾಗಿರುತ್ತದೆ. ಕೆಲವು ಸಲ ಫಲಾನುಭವಿಗಳ ಆಯ್ಕೆಯಲ್ಲಿ ವಿಳಂಬವಾಗಿರುತ್ತದೆ. ನಿಮ್ಮ ಗ್ರಾಮ ಪಂಚಾಯತ್ ಸದಸ್ಯರೊಂದಿಗೆ ಚರ್ಚಿಸಿ ತಾವು ಶೌಚಾಲಯ ನಿರ್ಮಾಣದ ಆಯ್ಕೆಗೆ ಒತ್ತಾಯ ತರಬಹುದು.

ಯಾರು ಎಲ್ಲಿ ಅರ್ಜಿ ಸಲ್ಲಿಸಬೇಕು?

ಸ್ವಚ್ಛ ಭಾರತ್ ಯೋಜನೆಯಡಿಯಲ್ಲಿ ಗ್ರಾಮದ ನಿವಾಸಿಗಳೆಲ್ಲರೂ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಸಾರ್ವಜನಿಕರ ಬಳಿ ಆಧಾರ್ ಕಾರ್ಡ್ ಇರಬೇಕು. ಬ್ಯಾಂಕ್ ಪಾಸ್ ಬುಕ್ ಪ್ರತಿ ಇರಬೇಕು. ಇದರೊಂದಿಗೆ ಅರ್ಜಿಯ ಜೊತೆಗೆ ಗ್ರಾಮ ಪಂಚಾಯತ್ ನಲ್ಲಿ ಕೇಳಲಾದ ಅಗತ್ಯ ದಾಖಲೆಗಳನ್ನು ನೀಡಬಹುದು.

Leave a Comment