ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸಬ್ಸಿಡಿ

Written by By: janajagran

Updated on:

Subsidy up to 90 percentages ತೋಟಗಾರಿಕೆ ಇಲಾಖೆಯ ವತಿಯಿಂದ 2021-22ನೇ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಸೂಕ್ಷ್ಮ ನೀರಾವರಿ (ಪ್ರತಿ ಹನಿಗೆ ಅಧಿಕ ಬೆಳೆ) ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದ್ದು, ವಿವಿಧ ಸೌಲಭ್ಯ ಪಡೆಯಲು ಮೈಸೂರು ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

Subsidy up to 90 percentages ಯಾವ ವರ್ಗದವರಿಗೆ ಎಷ್ಟು ಸಬ್ಸಿಡಿ ನೀಡಲಾಗುವುದು?

ಹನಿ ನೀರಾವರಿ ಮತ್ತು ತುಂತುರು ನೀರಾವರಿ ಅಳವಡಿಸಿದ ಸಣ್ಣ ಮತ್ತು ಅತೀಸಣ್ಣ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವರ್ಗದ ರೈತರಿಗೆ ಗರಿಷ್ಠ 90 ರಷ್ಟು ಸಹಾಯಧನ ನೀಡಲಾಗುವುದು.

ರೈತರು ಕಂದಾಯ ಇಲಾಖೆಯಿಂದ ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ ಪಡೆಯುವುದು, ಆರ್.ಡಿ ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ.ಸಣ್ಣ ಮತ್ತು ಅತೀಸಣ್ಣ ರೈತರನ್ನು ಹೊರತು ಪಡಿಸಿ ಎಲ್ಲಾ ರೈತರಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನ್ವಯ ಗರಿಷ್ಠ 5 ಹೆಕ್ಟೇರ್ ಪ್ರದೇಶದವರೆಗೆ ಶೇ. 45 ರಷ್ಟು ಸಹಾಯಧನ ನೀಡಲಾಗುವುದು. ಎಲ್ಲಾ ವರ್ಗದ ರೈತ ಫಲಾನುಭವಿಗಳು ಸಹಾಯಧನ ಪಡೆಯಲು ಅರ್ಹರು. ಸಣ್ಣ, ಅತೀ ಸಣ್ಣ ಮಹಿಳಾ ರೈತರಿಗೆ ನಿಯಮಾನುಸಾರ ಆದ್ಯತೆ ನೀಡಲಾಗುವುದು.

ತರಕಾರಿ ಹಾಗೂ ವಾಣಿಜ್ಯ ಹೂ ಬೆಳೆಗಳಿಗೆ ಗರಿಷ್ಠ 2 ಹೆಕ್ಟೇರ್ ಪ್ರದೇಶದವರೆಗೆ ಹಾಗೂ ಕಾಫಿ, ಟೀ, ಹಾಗೂ ರಬ್ಬರ್ ಹೊರತುಪಡಿಸಿ ಎಲ್ಲಾ ತೋಟಗಾರಿಕೆ ಬೆಳೆಗಳಿಗೆ ಸಹಾಯಧನ ಒದಗಿಸಲಾಗುವುದು. ಅಡಿಕೆ, ತೆಂಗು ತೋಟಗಳಲ್ಲಿ ಮಿಶ್ರ ಬೆಳೆಗಳಳನ್ನು ಬೆಳೆದು ಮಿಶ್ರ ಬೆಳೆಗೆ ಹನಿ ನೀರಾವರಿ ಅಳವಡಿಸಿದ್ದಲ್ಲಿ ಅಂತಹ ರೈತರಿಗೆ ಆದ್ಯತೆ ನೀಡಲಾಗುವುದು. ಫಲಾನುಭವಿಗಳು ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಆಸಕ್ತಿ ಹೊಂದಿರಬೇಕು. ಸೂಕ್ಷ್ಮ ನೀರಾವರಿ ಅಳವಡಿಸಿದ ನಂತರ ತೋಟಗಾರಿಕೆ ಬೆಳೆಗಳನ್ನೇ ಬೆಳೆಯಬೇಕು. ಫಲಾನುಭವಿಗಳು ನೀರಾವರಿ ಮೂಲವನ್ನು ಹೊಂದಿರಬೇಕು. (ತನ್ನ ಸ್ವಂತ ನೀರಾವರಿ ಮೂಲ ಇಲ್ಲದಿದ್ದಲ್ಲಿ ಬೇರೆ ರೈತರನ್ನು ಈ ಸಂಬಂಧ ಒಪ್ಪಿಗೆ ಪತ್ರ ಪಡೆದು ಸಲ್ಲಿಸಬೇಕು) ಹಾಗೂ ಸೂಕ್ಷ್ಮ ನೀರಾವರಿಗೆ ಯೋಗ್ಯವಿರುವ ನೀರನ್ನು ಹೊಂದಿರಬೇಕು. ಅವಶ್ಯವಿರುವ ವಿದ್ಯುಚ್ಛಕ್ತಿ ಅಥವಾ ಇತರೆ ಶಕ್ತಿ ಮೂಲವನ್ನು ಹೊಂದಿರಬೇಕು. ದರಪಟ್ಟಿಯನ್ನು ಹನಿ, ತುಂತುರು ನೀರಾವರಿ ಘಟಕ ಅಳವಡಿಸಿದ ಇಳಾಖಾ ಆನುಮೋದನೆ ಕಂಪನಿ ಅಥವಾ ಸಂಸ್ಥೆಯವರಿಂದ ಮಾತ್ರ ಪಡೆಯಬೇಕು.

ಹೆಚ್ಚಿನ ಮಾಹಿತಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ (ಜಿಪಂ) ಮೈಸೂರು ದೂರವಾಣಿ ಸಂಖ್ಯೆ 0821 2430450, ಎಚ್.ಡಿ. ಕೋಟೆ ದೂ. 08228 255261, ಹುಣಸೂರು ದೂ. 0822 252447, ಕೆ.ಆರ್. ನಗರ ದೂ. 08223 262791, ನಂಜನಗೂಡು ದೂ. 08221 226201,  ಪಿರಿಯಾಪಟ್ಟಣ ದೂ. 08223 273535, ಟಿ. ನರಸಿಪುರ ದೂ. 08227 26086 ಗೆ ಸಂಪರ್ಕಿಸಬಹುದು ಎಂದು ತೋಟಾಗರಿಕೆ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರ್ಜಿಯನ್ನು ಬೇಗನೆ ಸಲ್ಲಿಸಬೇಕು. ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ನೀಡಲಾಗುವುದು.

ಇದನ್ನೂ ಓದಿ:2020-21ನೇ ಸಾಲಿನ ಬೆಳೆ ವಿಮೆ ಹಣ ಜಮೆಯ ಸ್ಟೇಟಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ಹನಿ ನೀರಾವರಿ ಅಳವಡಿಸಿಕೊಳ್ಳುವಾಗ ಸಾಧ್ಯವಾದಷ್ಟು ಗುಣಮಟ್ಟದ ಪೈಪ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೆಲವು ಪೈಪ್ ಗಳು ಒಂದೆರಡು ವರ್ಷಗಳಲ್ಲಿ ಬಿಸಿಲಿಗೆ ಹಾಳಾಗುತ್ತವೆ.  ಉತ್ಪನ್ನಗಳನ್ನು ಎಷ್ಟು ವರ್ಷಗಳವರೆಗೆ ವಾರಂಟಿ ಇದೆ ಎಂಬುದನ್ನು ತಿಳಿದುಕೊಳ್ಳಬೇಕು.

ಹನಿ ನೀರಾವರಿ ಬೆಳಗಳಿಗೆ ಉತ್ತಮವಾಗಿದ್ದು, ಎಷ್ಟು ನೀರು ಬೇಕೋ ಅಷ್ಟನ್ನೇ ಕೊಡುವುದರಿಂದ ಅದರ ಆರೋಗ್ಯ ಉತ್ತಮವಾಗಿರುತ್ತದೆ. ಯಾವುದೇ ಕಾರಣಕ್ಕೂ ಅಗತ್ಯಕ್ಕಿಂತ ಹೆಚ್ಚಿನ ನೀರನ್ನು ಹನಿ ನೀರಾವರಿಯ ಮೂಲಕ ಕೊಡಬಾರದು. ಇದರಿಂದ ಪೋಷಕಾಂಶಗಳು ಬೇರು ವಲಯಕ್ಕಿಂತ ಕೆಳಗಡೆ ಹೋಗುತ್ತದೆ.

Leave a Comment