ರೈತರಿಗೆ ಸಹಾಯಧನದಲ್ಲಿ ಮೋಹಕ ಕೀಟ ಬಲೆಗಳು, ಜಿಗೋಟಾದ ಬಲೆಗಳು ಸೇರಿದಂತೆ ಇನ್ನಿತರ ಬಲೆಗಳು ಹಾಗೂ ಹನಿ ನೀರಾವರಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ವಿವಿಧ ಬಲೆಗಳ ವಿತರಣೆಗೆ ಹಾಗೂ ಗದಗ ಜಿಲ್ಲೆಯ ರೈತರಿಗೆ ಹನಿ ನೀರಾವರಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ತೋಟಗಾರಿಕೆ ಇಲಾಖೆಯ ಯೋಜನೆಯಡಿ ಮೋಹಕ ಕೀಟ ಬಲೆಗಳು, ಜೀಗೊಟಾದ ಬಲೆಗಳು, ಸೌರಶಕ್ತಿ ಆಧಾರಿತ ಕೃತಕ ಬುದ್ಧಿಯ ಕೀಟ ನಿಯಂತ್ರಕ ಬಲೆಗಳು, ಪ್ಲಾಸ್ಟಿಕ್ ಕ್ರೇಟ್ಸ್, ಪುನೇಟ್ ಬಾಕ್ಸ್, ಕೋರ್ ಗೇಟೆಡ್ ಬಾಕ್ಸ್, ಬೆಳೆ, ಹಣ್ಣು, ಹೂ ಹೊದಿಕೆ, ಮೇಲಾವರಣ ನಿರ್ಮಾಣ ಕಾರ್ಯಕ್ರಮದಡಿ ಸಹಾಯಧನಕ್ಕಾಗಿ ಅರ್ಜಿಗಳನ್ನು ಕರೆಯಲಾಗಿದೆ.
ಅರ್ಜಿಗಳನ್ನು ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಹೋಬಳಿ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಾದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಲ್ಲಾ ಪಂಚಾಯತ್) ಗುಡಿಬಂಡೆ ಮೊಬೈಲ್ ನಂಬರ್ 8147464177, ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಲ್ಲಾ ಪಂಚಾಯತ್) ಗುಡಿಬಂಡೆ ಮೊಬೈಲ್ ನಂಬರ್ 9844864957 ಗೆ ಸಂಪರ್ಕಿಸಲು ಕೋರಲಾಗಿದೆ.
ಅರ್ಹತೆಗಳೊಂದಿಗೆ ಯಾವ ಯಾವ ದಾಖಲೆ ಸಲ್ಲಿಸಬೇಕು?
ರೈತರ ಹೆಸರಿಗೆ ಜಮೀನು ಇರುಬೇಕು. ಜಮೀನಿನಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಜಾತಿ ಮತ್ತು ಆದಾಯ ಪ್ರಮಾಣ ಹೊಂದಿರಬೇಕು. ಪಹಣಿ ಪತ್ರಿಕೆ ಇರಬೇಕು. ಆಧಾರ್ ಕಾರ್ಡ್ ಇರಬೇಕು. ಬ್ಯಾಂಕ್ ಪಾಸ್ ಬುಕ್ ಪ್ರತಿ ಇರಬೇಕು.
ಹನಿ ನೀರಾವರಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಗದಗ ಜಿಲ್ಲೆಯ ನೀರಾವರಿ ಸೌಲಭ್ಯವುಳ್ಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ ತೋಟಗಾರಿಕೆ ಬೆಳೆ ಬೆಳೆಯುವ ಹಾಗೂ ಆಸಕ್ತಿಯಿರುವ ರೈತರ ಜಮೀನಿಗೆ ಹನಿ ನೀರಾವರಿ ಅಳವಡಿಕೆಗೆ ಇಲಾಖೆ ವತಿಯಿಂದ ಸಹಾಯಧನ ಸೌಲಭ್ಯ ಇರುತ್ತದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದವರಿಗೆ ಮೊದಲ 2 ಹೆಕ್ಟೇರ್ ಪ್ರದೇಶದವರೆಗೆ ಶೇ. 90 ರಷ್ಟು ಹಾಗೂ 2 ಹೆಕ್ಟೇರ್ ಮೇಲ್ಪಟ್ಟು 3 ಹೆಕ್ಟೇರ್ ವರೆಗೆ ಶೇ. 45 ರಷ್ಟು ಸಹಾಯಧನ ಸೌಲಭ್ಯವಿರುತ್ತದೆ.
ಇದನ್ನು ಓದಿ : ಈ ಬೆಳೆಗಳಿಗೆ ನವೆಂಬರ್ 30 ರೊಳಗೆ ವಿಮೆ ಮಾಡಿಸಿ 30 ರಿಂದ 40 ಸಾವಿರ ರೂಪಾಯಿಯವರೆಗೆ ವಿಮೆ ಪರಿಹಾರ ಪಡೆಯಿರಿ
ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತೋಟಗಾರಿಕೆ ತಾಲೂಕು ಅಧಿಕಾರಿಗಳನ್ನು ಹಾಗೂ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹನಿ ನೀರಾವರಿಗೆ ಸಹಾಯಧನ ಪಡೆಯಲು ಯಾವ ದಾಖಲೆ ಸಲ್ಲಿಸಬೇಕು?
ಹನಿ ನೀರಾವರಿ ಸೌಲಭ್ಯ ಪಡೆಯಲಿಚ್ಚಿಸುವ ರೈತರು ನೀರಾವರಿ ಸೌಲಭ್ಯ ಹೊಂದಿರಬೇಕು. ರೈತರ ಜಮೀನು ಹೊಂದಿರುವ ಕುರಿತು ಪಹಣಿ, ಎಸ್.ಸಿ, ಎಸ್.ಟಿ ಸಮುದಾಯದ ರೈತರು ಆರ್.ಡಿ. ಸಂಖ್ಯೆ ಹೊಂದಿರುವ ಜಾತಿ ಮತ್ತು ಆದಾಯ ಪ್ರಮಾಣ ಸಲ್ಲಿಸಬೇಕು.
ರೈತರು ಎಲ್ಲಿ ಸಂಪರ್ಕಿಸಬೇಕು?
ಹನಿ ನೀರಾವರಿಗೆ ಗದಗ ಜಿಲ್ಲೆಯೊಂದಿಗೆ ಇತರ ಜಿಲ್ಲೆಯ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ವಿಚಾರಿಸಬಹುದು. ಅಥವಾ ತಮ್ಮ ತಾಲೂಕಿನ ತೋಟಗಾರಿಕೆ ಇಲಾಖೆಯಲ್ಲಿ ವಿಚಾರಿಸಬೇಕು. ಲಭ್ಯತೆಯ ಆಧಾರದ ಮೇಲೆ ರೈತರಿಗೆ ಸೌಲಭ್ಯ ನೀಡಲಾಗುವುದು. ಹಾಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಲಭ್ಯತೆಯಿದ್ದರೆ ಹನಿ ನೀರಾವರಿಗೆ ಅರ್ಜಿ ಸಲ್ಲಿಸಬಹುದು.