ಈ ಬೆಳೆಗಳಿಗೆ ನವೆಂಬರ್ 30 ರೊಳಗೆ ವಿಮೆ ಮಾಡಿಸಿ

Written by Ramlinganna

Updated on:

Before 30th November insure crop ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕೆಲವು ಹಿಂಗಾರು ಬೆಳೆಗಳಿಗೆ ವಿಮೆ ಮಾಡಿಸಲು ಅರ್ಜಿ ಆಹ್ವಾನಿಸಲಾಗಿದೆ.

ಹೌದು ರೈತರು ಸಂಕಷ್ಟದಲ್ಲಿ ಸಿಲುಕಿದಾಗ ಅವರಿಗೆ ರಕ್ಷಣೆ ನೀಡಿ ಆರ್ಥಿಕ ಸಹಾಯ ನೀಡಲು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರಸಕ್ತ ವರ್ಷ ಅಂದರೆ 2022-23ನೇ ಸಾಲಿಗೆ ಬೆಳೆ ವಿಮೆ ಮಾಡಿಸಲು ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ಸರ್ಕಾರವು ಅತೀವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ, ಮುಂತಾದ ಪ್ರಕೃತಿ ವಿಕೋಪಗಳು ಸೇರಿದಂತೆ ಹಲವಾರು ಕಾರಣಗಳಿಂದ ಬೆಳೆ ನಷ್ಟ ಉಂಟಾದಾಗ ರೈತರ ನೆರವಿಗೆ ಬರಲು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಜಾರಿಗೆ ತರಲು ಪ್ರತಿವರ್ಷದಂತೆ ಈ ವರ್ಷವೂ ಅಂದರೆ 2022-23ನೇ ಸಾಲಿನಲ್ಲಿ ಜಾರಿಗೆ ತರಲು ಉದ್ದೇಶಿಸಲಾಗಿದೆ.

ಈ ಯೋಜನೆಗೆ ಒಳಪಡುವ ವಿವಿಧ ಬೆಳೆಗಳಿಗೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ಬ್ಯಾಂಕುಗಳಿಗೆ ಘೋಷಣೆಗಳನ್ನು ಸಲ್ಲಿಸಲು ಅಂತಿಮ ದಿನಾಂಕ ನವೆಂಬರ್ 30 ಕೊನೆಯ ದಿನವಾಗಿದೆ.

ನಿಮ್ಮ ಜಿಲ್ಲೆಯಲ್ಲಿ ಯಾವ ಬೆಳೆಗೆ ವಿಮೆ ಮಾಡಿಸಲು ಕೊನೆಯ ದಿನ ಯಾವುದು ಎಂಬುದನ್ನು ತಿಳಿಯಲು ಈ

https://www.samrakshane.karnataka.gov.in/PublicView/FindCutOff.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಅಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಂಡರೆ ಸಾಕು, ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು. ಹಾಗೂ ಕೊನೆಯ ದಿನ ಯಾವುದೆಂಬುದನ್ನು ತಿಳಿದುಕೊಳ್ಳಬಹುದು.

Before 30th November insure crop ಯಾವ ಯಾವ ಬೆಳೆಗೆ ವಿಮೆ ಮಾಡಿಸಲು ನವೆಂಬರ್ 30 ಕೊನೆಯ ದಿನದಾಗಿದೆ?

ಜೋಳ (ಮಳೆ ಆಶ್ರಿತ), ಜೋಳ (ನೀರಾವರಿ) ಬೆಳೆಗಳಿಗೆ ವಿಮೆ ಮಾಡಿಸಲು ನವೆಂಬರ್ 30 ಕೊನೆ ದಿನವಾಗಿದೆ. ಜೋಳ ಮಳೆಯಾಶ್ರಿತ ಬೆಳೆಗೆ ರೈತರು ಹೆಕ್ಟೇರಿಗೆ 510 ರೂಪಾಯಿ ಪಾವತಿಸಬೇಕು. ಬೆಳೆ ಹಾನಿಯಾದರೆ ರೈತರಿಗೆ 34 ಸಾವಿರ ರೂಪಾಯಿಯವರೆಗೆ ವಿಮೆ ದೊರೆಯುತ್ತದೆ. ಅದೇ ರೀತಿ ಜೋಳ ನೀರಾವರಿ ಬೆಳೆಗೆ ರೈತರು ಹೆಕ್ಟೇರಿಗೆ 600 ರೂಪಾಯಿ ಪಾವತಿಸಬೇಕು. ಬೆಳೆ ಹಾನಿಯಾದರೆ 600 ರೂಪಾಯಿ ವಿಮೆ ಮೊತ್ತ ಪಾವತಿಸಲಾಗುವುದು.

ಕಡಲೆ ಮಳೆಯಾಶ್ರಿತ, ಸೂರ್ಯಕಾಂತಿ (ಮಳೆಯಾಶ್ರಿತ), ಸೂರ್ಯಕಾಂತಿ (ನೀರಾವರಿ)  ಬೆಳೆಗಳಿಗೆ ವಿಮೆ ಮಾಡಿಸಲು ನವೆಂಬರ್ 30  ಕೊನೆಯ ದಿನವಾಗಿದೆ. ಕಡಲೆ (ಮಳೆಯಾಶ್ರಿತ) ಬೆಳೆಗ ರೈತರು ಪ್ರತಿ ಹೆಕ್ಟೇರಿಗೆ 435 ರೂಪಾಯಿ ಪಾವತಿಸಬೇಕು. ಒಂದು ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಯಾದರೆ ರೈತರಿಗೆ 29 ಸಾವಿರ ರೂಪಾಯಿ ವಿಮಾ ಮೊತ್ತ ಪರಿಹಾರ ನೀಡಲಾಗುವುದು.

ಅದೇ ರೀತಿ ಸೂರ್ಯಕಾಂತಿ ಬೆಳೆಗೆ ಪ್ರತಿ ಹೆಕ್ಟೇರಿಗೆ ರೈತರು 525 ರೂಪಾಯಿ ಪಾವತಿಸಬೇಕು. ಬೆಳೆ ಹಾನಿಯಾದಾಗ ರೈತರಿಗೆ 35 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು. ಇದರೊಂದಿಗೆ ಸೂರ್ಯಕಾಂತಿ (ನೀರಾವರಿ) ಬೆಳೆಗೆ ಪ್ರತಿ ಹೆಕ್ಟೇರಿಗೆ ರೈತರು 630 ರೂಪಾಯಿ ಪಾವತಿಸಬೇಕು. ಬೆಳೆ ಹಾನಿಯಾದಾಗ ರೈತರಿಗೆ 42 ಸಾವಿರ ರೂಪಾಯಿ ವಿಮಾ ಮೊತ್ತ ಪರಿಹಾರ ನೀಡಲಾಗುವುದು.

ಈ ಬೆಳೆಗಳಿಗೆ ವಿಮೆ ಮಾಡಿಸಲು ಡಿಸೆಂಬರ್ 31 ಕೊನೆಯ ದಿನ

ಗೋಧಿ (ಮಳೆಯಾಶ್ರಿತ) ಗೋಧಿ (ನೀರಾವರಿ) ಬೆಳೆಗಳಿಗೆ ವಿಮೆ ಮಾಡಿಸಲು ಡಿಸೆಂಬರ್ 31 ಕೊನೆಯ ದಿನವಾಗಿದೆ.  ಗೋಧಿ ಮಳೆಯಾಶ್ರಿತ ಬೆಳೆಗೆ ರೈತರು ಪ್ರತಿ ಹೆಕ್ಟೇರಿಗೆ 435 ರೂಪಾಯಿ ವಿಮೆ ಪಾವತಿಸಬೇಕಾಗುತ್ತದೆ. ಬೆಳೆ ಹಾಳಾದಾಗ ರೈತರಿಗೆ ಪ್ರತಿ ಹೆಕ್ಟೇರಿಗೆ 29 ಸಾವಿರ ರೂಪಾಯಿ ಬೆಳೆ ವಿಮೆ ಮೊತ್ತ ಪಾವತಿಸಲಾಗುವುದು.

ಇದನ್ನೂ ಓದಿ ಮೊಬೈಲ್ ನಲ್ಲೇ ನಿಮ್ಮ ಜಮೀನಿನ ಮುಟೇಶನ್ ಇತಿಹಾಸ ಚೆಕ್ ಮಾಡಿ

ಅದೇ ರೀತಿ ಗೋಧಿ ನೀರಾವರಿ ಬೆಳೆಗೆ 600 ರೂಪಾಯಿ ರೈತರು ಪಾವತಿಸಿದರೆ 40 ಸಾವಿರ ರೂಪಾಯಿ ವಿಮಾ ಮೊತ್ತ ನೀಡಲಾಗುವುದು. ಭತ್ತ ಬೆಳೆಗೆ ಪ್ರತಿ ಹೆಕ್ಟೇರಿಗೆ 1290 ರೂಪಾಯಿ ಹಣ ಪಾವತಿಸಬೇಕು. ಬೆಳೆ ಹಾನಿಯಾದಾಗ ರೈತರಿಗೆ ಪ್ರತಿ ಹೆಕ್ಟೇರಿಗೆ 86 ಸಾವಿರ ರೂಪಾಯಿಯವರೆಗೆ ವಿಮಾ ಮೊತ್ತ ನೀಡಲಾಗುವುದು.

ವಿಮೆ ಮಾಡಿಸಲು ಯಾವ ಯಾವ ದಾಖಲೆ ಬೇಕು?

ಬೆಳೆ ವಿಮೆ ಮಾಡಿಸುವಾಗ ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಆಧಾರ್ ಕಾರ್ಡ್ ಸಂಖ್ಯೆ ಜೋಡಿಸಿದ ಬ್ಯಾಂಕ್ ಖಾತೆ ಪಾಸ್ ಬುಕ್, ಆಧಾರ್ ಕಾರ್ಡ್  ರಸೀದಿಯನ್ನು ನೀಡಬೇಕು.

Leave a Comment