ನಿಮ್ಮ ಜಮೀನಿನ ಮುಟೇಶನ್ ಇತಿಹಾಸ ಚೆಕ್ ಮಾಡಿ

Written by Ramlinganna

Updated on:

Check mutation history of your land ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಸರ್ವೆ ನಂಬರ್ ನಮೂದಿಸಿ ಜಮೀನಿನ ಮುಟೇಶನ್ ಇತಿಹಾಸವನ್ನು ತಿಳಿಯಬಹುದು. ಹೌದು, ರೈತರು ಕೇವಲ್ ಸರ್ವೆ ನಂಬರ್ ನಮೂಸಿದರೆ ಸಾಕು, ರೈತರ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ ಎಂಬುದನ್ನು ಚೆಕ್ ಮಾಡಬಹುದು.

ಇದು ಕೇವಲ ಒಂದು ಸರ್ವೆ ನಂಬರ್ ಅಲ್ಲ, ನೀವು ನಮೂದಿಸಿದ ಸರ್ವೆ ನಂಬರ್ ಅಕ್ಕಪಕ್ಕದಲ್ಲಿರುವ ಜಮೀನು ಸಹ ಯಾರ ಹೆಸರಿನಿಂದ ಯಾರ ಹೆಸರಿಗೆ ವರ್ಗಾವಣೆಯಾಗಿದೆ? ಹೆಸರು ವರ್ಗಾವಣೆಯ ನಂತರ ಜಮೀನು ಜಂಟಿಯಾಗಿದೆಯೋ ಅಥವಾ ಪ್ರತ್ಯೇಕವಾಗಿದೆಯೋ ಅಂದರ ಮಾಲಿಕರ ಹೆಸರಿಗೆ ಇದೆಯೋ ಎಂಬುದನ್ನು ಚೆಕ್ ಮಾಡಬಹುದು.

Check mutation history of your land ಮೊಬೈಲ್ ನಲ್ಲಿ ಜಮೀನಿನ ಮುಟೇಶನ್ ಇತಿಹಾಸ ತಿಳಿಯುವುದು ಹೇಗೆ?

ರೈತರು ಜಮೀನಿನ ಮುಟೇಶನ್ ಇತಿಹಾಸವನ್ನು ಮೊಬೈಲ್ ನಲ್ಲೇ ಚೆಕ್ ಮಾಡಲು ಈ

https://landrecords.karnataka.gov.in/service40/PendcySurveyNoWiseRpt

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಆರ್.ಟಿ.ಸಿ ಮುಟೇಶನ್ ಇತಿಹಾಸ ತಿಳಿಯುವ ಪೇಜ್ ಓಪನ್ ಆಗುತ್ತದೆ.

ಅಲ್ಲಿ ರೈತರು ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.

ಇದಾದ ಮೇಲೆ ಹೋಬಳಿ ಆಯ್ಕೆ ಮಾಡಿಕೊಳ್ಳಪೇಕು.

ಗ್ರಾಮ ಆಯ್ಕೆ ಮಾಡಿಕೊಂಡ ನಂತರ ನೀವು ಯಾವ ಸರ್ವೆ ನಂಬರ್ ಮುಟೇಶನ್ ಇತಿಹಾಸ ನೋಡಬೇಕೆಂದುಕೊಂಡಿದ್ದೀರೋ ಆ ಸರ್ವೆ ನಂಬರ್ ನಮೂದಿಸಬೇಕು.

ಇದಾದ ಮೇಲೆ Get Report ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ನೀವು ನಮೂದಿಸಿ ಸರ್ವೆ ನಂಬರ್ ಹಾಗೂ ಹಿಸ್ಸಾ ನಂಬರ್ ನಂಬರ್ ನಲ್ಲಿ ಯಾವ ಯಾವ ವರ್ಷ ದಲ್ಲಿ ಹಕ್ಕು ಬದಲಾವಣೆಯಾಗಿದೆ ಎಂಬ ಮಾಹಿತಿ ಕಾಣುತ್ತದೆ. ಈ ಪೇಜ್ ನಲ್ಲಿ ಜಮೀನು ಒಟ್ಟುಗೂಡಿಸಲಾಗಿದೆಯೋ ಅಥವಾ ಮಾರಾಟ ಮಾಡಲಾಗಿದೆಯೋ ಎಂಬ ಮಾಹಿತಿಯೂ ಇರುತ್ತದೆ.

ನೀವು ನಮೂದಿಸಿ ಸರ್ವೆ ನಂಬರ್ ನಲ್ಲಿ ಯಾರು ಯಾರು ಸ್ವಾಧೀನದಾರರು ಇದ್ದಾರೆ ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ?  ಹೆಸರು ಮತ್ತು ತಂದೆಯ ಹೆಸರು ಅವರ ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ.  ಜಮೀನು ಜಂಟಿಯಾಗಿದ್ದರೆ ಯಾರ ಯಾರ ಹೆಸರಿನಲ್ಲಿಜಮೀನು ಜಂಟಿಯಿದೆ ಎಂಬ ಮಾಹಿತಿ ಇರುತ್ತದೆ.

ರೈತರು ತಮ್ಮ ಸರ್ವೆ ನಂಬರ್ ಅಕ್ಕಪಕ್ಕದಲ್ಲಿರುವ ಸರ್ವೆ ನಂಬರ್ ಗಳು ಯಾರ ಹೆಸರಿಂದ ಯಾರ ಹೆಸರಿಗೆ ವರ್ಗಾವಣೆಯಾಗಿದೆ ಅಂದರೆ ಹಕ್ಕು ಬದಲಾವಣೆ ಮಾಡಿದವರು ಹಾಗೂ ಯಾರ ಹೆಸರಿಗೆ ವರ್ಗಾವಣೆ ಮಾಡಲಾಗಿದೆ? ಎಷ್ಟು ಎಕರೆ ಹಕ್ಕು ಬದಲಾವಣೆಯಾಗಿದೆ  ಎಂಬ ಮಾಹಿತಿ ಇರುತ್ತದೆ.

ಇದನ್ನೂ ಓದಿ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಚೆಕ್ ಮಾಡಿ

ಜಮೀನು ವರ್ಗಾವಣೆಯಲ್ಲಿ ಯಾರು ಯಾರ ಯಾರ ಹೆಸರಿಗೆ ವರ್ಗಾವಣೆ ಮಾಡಲಾಗಿದೆ? ಎಷ್ಟು ಎಕರೆ ಜಮೀನು ವರ್ಗಾವಣೆ ಮಾಡಲಾಗಿದೆ. ಸರ್ವೆ ನಂಬರ್ ಹಾಗೂ ಹಿಸ್ಸಾ ನಂಬರ್ ಸಮೇತ ಮಾಹಿತಿ ನೀಡಲಾಗಿದೆ.

ಇದು ರೈತರಿಗೆ ತುಂಬಾ ಉಪಯೋಗಕಾರಿ ಮಾಹಿತಿ ನೀಡುತ್ತದೆ. ಜಮೀನು ಮಾರಾಟ ಅಥವಾ ವರ್ಗಾವಣೆಯಾದ ಮೇಲೆ  ಅವರ ಹೆಸರಿಗೆ ವರ್ಗಾವಣೆಯಾಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.  ಜಮೀನು ವರ್ಗಾವಣೆ ಕ್ರಮಬದ್ಧವಾಗಿ ಅಂದರೆ ಯಾವ ವರ್ಷಗಳಿಂದ ಹಕ್ಕು ಬದಲಾವಣೆಗಳಾಗಿವೆ ಎಂಬುದನ್ನು ಸಹ ನಮೂದಿಸಲಾಗಿರುತ್ತದೆ.

ರಾಜ್ಯ ಸರ್ಕಾರವು ರೈತರಿಗೆ ಜಮೀನುಗಳಿಗೆ ಸಂಬಂಧಿಸಿದ ಮಾಹಿತಿಗಳು ಸುಲಭವಾಗಿ ಲಭ್ಯವಾಗಲು ಈ ವ್ಯವಸ್ಥೆ ಮಾಡಿದೆ. ರೈತರು ಆರ್.ಟಿ.ಸಿ ಅಂದರೆ ಪಹಣಿಯನ್ನು ಡೌನ್ಲೋಡ್ ಮಾಡಿಕೊಳ್ಳುವುದಷ್ಟೇ ಅಲ್ಲ, ಮೋಜಿನಿ ಸ್ಟೇಟಸ್ ಸಹ ಚೆಕ್ ಮಾಡಬಹುದು. ಜಮೀನಿನ ನಕಾಶೆ, ಅಟ್ಲಾಸ್, ಪೋಡಿ ಸೇರಿದಂತೆ ಇನ್ನಿತರ ದಾಖಲೆಗಳಿಗಾಗಿ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಸಹ ಮಾಡಿದೆ.

Leave a Comment