ನಿರುದ್ಯೋಗ ಯುವಕರಿಗೆ ಸರಕು ಸಾಗಾಣಿಕೆಗಾಗಿ ದ್ವಿಚಕ್ರ ವಾಹನ ಖರೀದಿಗೆ 50 ಸಾವಿರ ರೂಪಾಯಿ ಸಹಾಯಧನ ನೀಡಲು ಅರ್ಹ ಫಲಾನುಭವಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
2922-23ನೇ ಸಾಲಿನ ಪರಿಶಿಷ್ಟ ಜಾತಿಯ ಜನರ ಆರ್ಥಿಕ ಅಭಿವೃದ್ಧಿಗಾಗಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಉದ್ಯಮಶೀಲತಾ ಅಭಿವೃದ್ಧಿ ಯೋಜನೆ-3 (ದ್ವಿಚಕ್ರ, ತ್ರಿಚಕ್ರ ಸರಕು ಸಾಗಾಣಿಕೆ ವಾಹನ) ಖರೀದಿಗೆ ಸಹಾಯಧನ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಯಸುವ ಅರ್ಜಿದಾರರು ಸೇವಾಸಿಂಧು ಪೋರ್ಟಲ್ ಈ
https://sevasindhu.karnataka.gov.in
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ನಿಮ್ಮ ಆಧಾರ್ ನಂಬರ್ ಹಾಗೂ ಅಲ್ಲಿ ಕಾಣುವ ಟೆಕ್ಸ್ಟ್ ನಮೂದಿಸಿ ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಆನ್ಲನ್ ಮೂಲಕ ಅರ್ಜಿ ಸಲ್ಲಿಸಬೇಕು. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಸದುಪಯೋಗಪಡೆದುಕೊಳ್ಳಲು ಈ ಮೂಲಕ ಕೋರಲಾಗಿದೆ.
ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಲು 31-12-2022 ಕೊನೆಯ ದಿನವಾಗಿದೆ. ಕೊನೆಯ ದಿನಾಂಕದವರೆಗೆ ಕಾಯದೆ ಅರ್ಜಿಗಳನ್ನು ಬೇಗನೆ ಅಂದರೆ ಡಿಸೆಂಬರ್ 31 ರೊಳಗಾಗಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಇರಬೇಕಾದರ ಸಾಮಾನ್ಯ ಅರ್ಹತೆಗಳು ಹಾಗೂ ಷರತ್ತುಗಳು
ಅರ್ಜಿದಾರರು ಪರಿಶಿಷ್ಟ ಜಾತಿಯ ಲಂಬಾಣಿ ಜಾತಿಗೆ ಸೇರಿದವರಾಗಿರಬೇಕು ಹಾಗೂ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿ 1 ಲಕ್ಷ 50 ಸಾವಿರ ರೂಪಾಯಿ ಹಾಗೂ ನಗರ ಪ್ರದೇಶದಲ್ಲಿ 2 ಲಕ್ಷ ರೂಪಾಯಿಗಳ ಮಿತಿಯಲ್ಲಿರಬೇಕು.
ಇದನ್ನೂ ಓದಿ : ನಿಮ್ಮ ಹೆಸರಿನಲ್ಲಿರುವ ಪಹಣಿ ಎಷ್ಟು ವರ್ಷಗಳ ಹಳೆಯದ್ದು? ಮೊಬೈಲ್ ನಲ್ಲೇ ಚೆಕ್ ಮಾಡಿ
ಅರ್ಜಿದಾರರ ವಯಸ್ಸು ಕನಿಷ್ಟ 21 ವರ್ಷಗಳಿಂದ ಗರಿಷ್ಟ 50 ವರ್ಷದೊಳಗಿರಬೇಕು. ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು ಮತ್ತು ಸರ್ಕಾರಿ ಅರೆ ಸರ್ಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು.
ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ದ್ವಿಚಕ್ರ, ತ್ತಿಚಕ್ರ ಸರಕುಸಾಗಾಣಿಕೆ ವಾಹನ ಉದ್ದೇಶಗಳಿಗೆ ಘಟಕ ವೆಚ್ಚದಲ್ಲಿ 50 ಸಾವಿರ ರೂಪಾಯಿ ಸಹಾಯಧನ ಹಾಗೂ 20 ಸಾವಿರ ರೂಪಾಯಿ ಸಾಲ ಮುಂಜೂರು ಮಾಡಿ ಒಟ್ಟು 70 ಸಾವಿರ ರೂಪಾಯಿ ಘಟಕ ವೆಚ್ಚದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಘಟಕ ವೆಚ್ಚ ಮೀರಿದಲ್ಲಿ ಸದರಿ ವ್ಯತ್ಯಾಸದ ಮೊತ್ತವನ್ನು ಅರ್ಜಿದಾರರ ಸೇವಾ ವ್ಯಾಪ್ತಿಯ ಬ್ಯಾಂಕುಗಳಿಂದ ಮುಂಜಾರಾತಿ ಪಡೆಯುವ ಷರತ್ತಿಗೆ ಒಳಪಟ್ಟು ಸಹಾಯಧನ ಮತ್ತು ಸಾಲ ಮಂಜೂರಾತಿ ಮಾಡಲಾಗುವುದು.
ಅರ್ಜಿದಾರರು ಈ ದಾಖಲೆ ಹೊಂದಿರಬೇಕು
ಅರ್ಜಿದಾದರು ಆಧಾರ್ ಕಾರ್ಡ್ ಹೊಂದಿರಬೇಕು. ಇತ್ತೀಚಿನ ಪಾಸ್ ಪೋರ್ಟ್ ಸೈಜಿನ ಫೋಟೋ ಇರಬೇಕು. ಬ್ಯಾಂಕ್ ಪಾಸ್ ಬುಕ್ ಇರಬೇಕು. ಆರ್. ಡಿ. ಸಂಖ್ಯೆ ಹೊಂದಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇರಬೇಕು. ಡ್ರೈವಿಂಗ್ ಲೈಸೆನ್ ಇರಬೇಕು.
ಅರ್ಜಿಗಳನ್ನು ಆನ್ಲೈನ್ ನಲ್ಲಿ ಸಲ್ಲಿಸಬೇಕು. ಡಿಸೆಂಬರ್ 31 ರೊಳಗಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ನಂತರ ಎರಡು ಝರಾಕ್ಸ್ ಪ್ರತಿ ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲೆಯಲ್ಲಿರುವ ತಾಂಡಾ ಅಭಿವೃದ್ಧಿ ನಿಮಗ ಕಚೇರಿಗೆ ಭೇಟಿ ನೀಡಬಹುದು.
ಷರತ್ತುಗಳು
ಅರ್ಜಿದಾರರು ಆಯ್ಕೆ ಸಮಿತಿಯಲ್ಲಿ ಆಯ್ಕೆಯಾಗಿರಬೇಕು. ಮಂಜೂರಾತಿ ಪಡೆದ ಫಲಾನುಭವಿಗಳು ಅನರ್ಹರು ಎಂದು ತಿಳಿದುಬಂದ ಸಂದರ್ಭದಲ್ಲಿ ಮಂಜೂರಾತಿಯನ್ನು ರದ್ದುಪಡಿಸಲಾಗುವುದು. ಅರ್ಜಿದಾರರು ಅಥವಾ ಕುಟುಂಬದ ಅವಲಂಬಿತ ಯಾವುದೇ ಸದಸ್ಯರು ಈ ಹಿಂದೆ ನಿಗಮದಿಂದ 1 ಲಕ್ಷ ಮೇಲ್ಪಟ್ಟು ಸೌಲಭ್ಯ ಪಡೆದಿದ್ದಲ್ಲಿ ಅಂತಹ ಫಲಾನುಭವಿಗಳು ಈ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ.