ಮನೆ ನಿರ್ಮಾಣಕ್ಕೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ

Written by Ramlinganna

Updated on:

Subsidy for home construction 2021-22ನೇ ಸಾಲಿನ ಎಸ್.ಎಫ್.ಸಿ ಮುಕ್ತ ನಿಧಿ ಅಡಿಯಲ್ಲಿ  ಪಕ್ಕಾ ಮನೆ ನಿರ್ಮಾಣಕ್ಕಾಗಿ ಸಹಾಯಧನ ಸೇರಿದಂತೆ ಇತರ ಯೋಜನೆಗಳಡಿ ಸಬ್ಸಿಡಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ (ಎಂ.ಜಿ.ನ.ವಿ.ವೈ) ಅನುಮೋದಿತ ಕ್ರಿಯಾ ಯೋಜನೆ ಹಾಗೂ ಎಸ್.ಎಫ್.ಸಿ ಮುಕ್ತ ನಿಧಿ ಯೋಜನೆಯಡಿ ನಿಗದಿಪಡಿಸಿದ ವಿವಿಧ ಯೋಜನೆಗಳಿಗೆ ಪರಿಶಿಷ್ಟ  ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಕಲ್ಯಾಣ ಕಾರ್ಯಕ್ರಮಗಳಡಿ 2023-24 ನೇ ಸಾಲಿಗೆ ಸೌಲಭ್ಯ ಪಡೆಯಲು ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

Subsidy for home construction ಮನೆ ನಿರ್ಮಾಣಕ್ಕೆ ಸಬ್ಸಿಡಿ

ಪರಿಶಿಷ್ಟ ಪಂಗಡದ ಜನರಿಗೆ ವೈಯಕ್ತಿಕಕಲ್ಯಾಣ ಕಾರ್ಯಕ್ರಮಗಳು (ಶೇ.40) ಎಸ್.ಟಿಪಿ (ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ) 2019-20ನೇ ಸಾಲಿನಿಂದ2023-24ನೇ ಸಾಲಿನವರೆಗೆ ಎಂ.ಜಿ.ಎನ್.ವಿ.ವೈ) ಪರಿಶಿಷ್ಟ ಪಂಗಡಕ್ಕೆ ಸೇರಿದ ಎಂಬಿಬಿಎಸ್, ಬಿಇ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಡೆಸ್ಕ್ ಟಾಪ್ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಖರೀದಿಗಾಗಿ ಸಹಾಯಧನ ನೀಡಲಾಗುವುದು. ಪರಿಶಿಷ್ಟ ಪಂಗಡದ ಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಎಲೆಕ್ಟ್ರಿಕಲ್ ಆಟೋ ಖರೀದಿಗಾಗಿ ಸಹಾಯಧನ ನೀಡಲಾಗುವುದು. ಅದೇ ರೀತಿ ಪರಿಶಿಷ್ಟ ಪಂಗಡದ ಜನರಿಗೆ ಸಣ್ಣ ಉದ್ದಿಮೆಗಾಗಿ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬಹುದು.

ಇದನ್ನು ಓದಿ ಆಧಾರ್ ನಂಬರ್ ಹಾಕಿ ಮೊಬೈಲ್ ನಲ್ಲಿ ಸಾಲಮನ್ನಾ ಸ್ಟೇಟಸ್ ಚೆಕ್ ಮಾಡಿ

ಪರಿಶಿಷ್ಟ ಜಾತಿಯ ಜನರಿಗೆ ವೈಯಕ್ತಿಕ ಕಲ್ಯಾಣ ಕಾರ್ಯಕ್ರಮಗಳು (ಶೇ. 40) (ಎಸ್.ಸಿಪಿ ಆ್ಯಂಡ್ ಎಸ್.ಟಿಪಿ) ಮುಕ್ತ ನಿಧಿ ಹಾಗೂ ಎಸ್.ಎಫ್.ಸಿ ಪರಿಷ್ಕೃತ ಕ್ರಿಯಾ ಯೋಜನೆ)  2019-20ನೇ ಪರಿಷ್ಕೃತ ಹಾಗೂ 2022-23ನೇ ಸಾಲಿನ ಎಸ್.ಎಪ್.ಸಿ ಮುಕ್ತ ನಿಧಿಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ವೈಯಕ್ತಿಕ ಅಭ್ಯಾಸ ಪ್ರಾರಂಭಿಸಿರುವ ವೈದ್ಯರಿಗೆ ಸಲಕರಣೆ ಖರೀದಿಗಾಗಿ ಸಬ್ಸಿಡಿ ನೀಡಲಾಗುವುದು.

2021-22ನೇ ಸಾಲಿನ ಎಸ್.ಎಫ್.ಸಿ ಮುಕ್ತ ನಿಧಿ ಪಕ್ಕಾ ಮನೆ ನಿರ್ಮಾಣಕ್ಕಾಗಿ ಸಹಾಯಧನ ಹಾಗೂ 2020-21ನೇ ಸಾಲಿನ ಎಸ್.ಎಫ್.ಸಿ ಮುಕ್ತ ನಿಧಿ ಅಂಗವಿಕಲರಿಗೆ / ರೋಗಕ್ಕೆ ಒಳಪಟ್ಟವರಿಗೆ ಕೃತಕ ಪಾದ ಇತರೆ ಭೇದಿತ ಆವಯವಗಳ ಜೋಡಣೆಗೆ ತಗಲುವ ವಾಸ್ತವಿಕ ಮೊತ್ತದ ಸಹಾಯಧನ ನೀಡಲಾಗುತ್ತದೆ. ಈ ಮೊದಲು ಮಹಾನಗರ ಪಾಲಿಕೆಯ ಅಥವಾ ಸರ್ಕಾರದ ವಿವಿಧ ಯೋಜನೆಯ ಸಹಾಯಧನ ಪಡೆದವರು ಪುನಃ ಸಹಾಯಧನಕ್ಕೆ ಅರ್ಜಿ ಸಲ್ಲಿಸುವಂತಿಲ್ಲ.

ಅರ್ಹ ಫಲಾನುಭವಿಗಳು ನಿಗದಿತ ಅರ್ಜಿ ನಮೂನೆಯನ್ನು ಕಲಬುರಗಿ ಮಹಾನಗರ ಪಾಲಿಕೆಯ ಶೇ. 24.10 ರ ಶಾಖೆಯಿಂದ 2024ರ ಜನವರಿ 25 ರ ಸಂಜೆ 5.30 ಗಂಟೆಯೊಳಗಾಗಿ ಪಡೆಯಬೇಕು. ಭರ್ತಿ ಮಾಡಿದ ಅರ್ಜಿಯನ್ನು ಜನವರಿ 30 ರ ಸಂಜೆಯ 4.30 ಗಂಟೆಯೊಳಗಾಗಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಪಾಲಿಕೆಯ ಕಚೇರಿಯ ಶೇ. 24.10 ಶಾಖೆಯನ್ನು ಹಾಗೂ

www.kalburagicity.gov.in

ವೆಬ್ಸೈಟ್ ನ್ನು ಸಂಪರ್ಕಿಸಲು ಕೋರಲಾಗಿದೆ.

Leave a Comment