with using Aadhar number ಸಾಲಮನ್ನಾ ಸ್ಟೇಟಸ್ ಚೆಕ್ ಮಾಡಿ

Written by Ramlinganna

Updated on:

with using Aadhar number ರೈತರು ಕಮಗೆಷ್ಟು ಬೆಳೆ ಸಾಲ ಮನ್ನಾ ಆಗಿದೆ ಎಂಬ ಸ್ಟೇಟಸ್ ನ್ನು ಮೊಬೈಲ್ ನಲ್ಲಿ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.

ಹೌದು, ರೈತರ ಬಳಿ ಇರುವ ಫೋನ್ ನಲ್ಲಿ ಯಾರ ಸಹಾಯವೂ ಇಲ್ಲದೇ ರೈತರು ಅತೀ ಸುಲಭವಾಗಿ ಮೊಬೈಲ್ ನಲ್ಲಿ ಸ್ಟೇಟಸ್ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ಮಾಹಿತಿ.

with using Aadhar number ಸಾಲಮನ್ನಾ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ರೈತರು ಆಧಾರ್ ನಂಬರ್ ಹಾಕಿ ಸಾಲಮನ್ನಾ ಸ್ಟೇಟಸ್ ಚೆಕ್ ಮಾಡಲು ಈ

https://clws.karnataka.gov.in/clws/pacs/citizenreport/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಎರಡು ಆಯ್ಕೆಗಳು ಕಾಣಿಸುತ್ತವೆ. ಹೌದು, ಆಧಾರ್ ನಂಬರ್ ಹಾಗೂ ರೇಶನ್ ಕಾರ್ಡ್ ನಂಬರ್ ಕಾಣಿಸುತ್ತವೆ. ಅದರಲ್ಲಿ ನೀವು ಆಧಾರ್ ಕಾರ್ಡ್  ನಂಬರ್ ಆಯ್ಕೆ ಮಾಡಿಕೊಂಡು ಅಲ್ಲಿ ಆಧಾರ್ ಕಾರ್ಡ್ ನಮೂದಿಸಬೇಕು.  ನಂತರ Fetch Report ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಬ್ಯಾಂಕಿನ ಹೆಸರು, ಬ್ರ್ಯಾಂಚ್ ಸ್ಥಳ, ನಿಮ್ಮ ಹೆಸರು ಕಾಣಿಸುತ್ತದೆ. ನಿಮ್ಮ ಬ್ಯಾಂಕ್ ಅಕೌಂಟ್ ಯಾವ ಪ್ರಕಾರದ್ದಾಗಿದೆ. ಹಾಗೂ ನೀವು 2017 ರ ಮೊದಲು ಎಷ್ಟು ಸಾವಲವಿತ್ತು ಎಂಬುದು ಕಾಣಿಸುತ್ತದೆ. ಅದರ ಕೆಳಗಡೆ ನಿಮಗೆ ಎಷ್ಟು ಬೆಳೆ ಸಾಲ ಮನ್ನಾ ಆಗಿದೆ. ಹಾಗೂ ಪೇಮೆಂಟ್ ಸ್ಟೇಟಸ್ ಮತ್ತು ಯಾವ ದಿನಾಂಕದಂದು ಬೆಳೆ ಸಾಲಮನ್ನಾ ಹಣ ಜಮೆಯಾಗಿದೆ ಎಂಬುದು ಕಾಣಿಸುತ್ತದೆ.

ಬೆಳೆ ಸಾಲಮನ್ನಾಮಾಡಲು ಒತ್ತಾಯ

ಕಳೆಡ ಎರಡು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಆರ್.ಅಶೋಕ್ ರವರು 2 ಲಕ್ಷ ರೂಪಾಯಿಯವರೆಗೆ ರೈತರ ಬೆಳೆ ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸಿದ್ದರು. ಈ ಕುರಿತು ರೈತರು ಸಹ ಬೆಳೆ ಸಾಲಮನ್ನಾ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ. ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಮುಂಗಾರು ಕೈಕೊಟ್ಟಿದ್ದರಿಂದ ರೈತರ ಅಪಾರ ಬೆಳೆ ಹಾನಿಯಾಗಿ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ರೈತರ ಬೆಳೆ ಸಾಲ ಮನ್ನಾ ಮಾಡಿ ಆರ್ಥಿಕ ಸಹಾಯ ಮಾಡಬೇಕೆಂಬ ಒತ್ತಾಯವಿದೆ.

ಇದನ್ನೂ ಓದಿ : ಬರ ಪರಿಹಾರ ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯೇ? ಇಲ್ಲೇ ಚೆಕ್ ಮಾಡಿ

ರಾಜ್ಯದಲ್ಲಿ 200 ಕ್ಕೂ ಹೆಚ್ಚು ತಾಲೂಕುಗಳನ್ನುಈಗಾಗಲೇ ಘೋಷಣೆ ಮಾಡಲಾಗಿದೆ. ರಾಜ್ಯದ ರೈತರಿಗೆ 2ಸಾವಿರ ರೂಪಾಯಿ ಹಣವನ್ನು ತಾತ್ಕಾಲಿಕವಾಗಿ ಮುಂದಿನ ವಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಣೆ ಮಾಡಿದ್ದಾರೆ. ಹಾಗಾಗಿ  ಮುಂದಿನ ವಾರ ರೈತರ ಖಾತೆಗೆ 2 ಸಾವಿರ ರೂಪಾಯಿ ಹಣ ಜಮೆಯಾಗುವ ಸಾಧ್ಯತೆಯಿದೆ. ಆದರೆ 2 ಸಾವಿರ ರೂಪಾಯಿ ಹಣದಿಂದ ರೈತರಿಗೆ ಅಷ್ಟೇನು ಸಹಾಯವಾಗುವುದಿಲ್ಲ. ಹಾಗಾಗಿ 2 ಲಕ್ಷ ರೂಪಾಯಿಯವರಗೆ ರೈತರ ಬೆಳೆ ಸಾಲ ಮನ್ನಾ  ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಹೆಚ್. ಕುಮಾರಸ್ವಾಮಿಯವರು 2018 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಬೆಳೆ ಸಾಲ ಮನ್ನಾ ಮಾಡಿದ್ದರು. ಆಗ ಕೆಲವು ರೈತರಿಗೆ ಬೆಳೆ ಸಾಲಮನ್ನಾ ಆದರೆ ಇನ್ನೂ ಕೆಲವರಿಗೆ ಆಗಿರಲಿಲ್ಲ. ಏಕೆಂದರೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಸಾಲಮನ್ನಾ ಭಾಗ್ಯದಿಂದ ಬಹಳಷ್ಟು ರೈತರು ಉಳಿದುಕೊಂಡಿದ್ದರು. ಕೆಲವು ದಿನಗಳ ನಂತರ ಸುಮಾರು 58 ಸಾವಿರ ರೈತರಿಗೂ ಸಾಲಮನ್ನಾ ಭಾಗ್ಯ ಸಿಕ್ಕಿತ್ತು. ಆದರೂ ಇನ್ನೂ ಬಹಳಷ್ಟು ರೈತರಿಗೆ ರೇಶನ್ ಕಾರ್ಡ್, ಜಮೀನಿನ ದಾಖಲೆ, ಆಧಾರ್ ಕಾರ್ಡ್ ಹೀಗೆ ದಾಖಲೆಗಳು ಹೊಂದಾಣಕೆ ಆಗದೆ ಸಾಲಮನ್ನಾ ಭಾಗ್ಯ ಸಿಕ್ಕಿರಲಿಲ್ಲ.  ಈಗಲೂ ಇನ್ನೂ ಬಹಳಷ್ಟು ರೈತರಿಗೆ ತಾಂತ್ರಿಕ ಕಾರಣದಿಂದ ಸಾಲಮನ್ನಾ ಸಿಕ್ಕಿಲ್ಲ. ಆದರೂ ಒಮ್ಮೆ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.

Leave a Comment